ಬಿಂತಿಯಾಸೀನ್,ಹತ್ತಿಮತ್ತೂರು ಹಾವೇರಿ ಜಿಲ್ಲೆ.

ಜಗತ್ತಿನಲ್ಲಿ ಪ್ರತಿಯೊಬ್ಬರು ತಾನೋರ್ವ ಸಾಧಕನಾಗದಿದ್ದರೂ ಸಾಮಾನ್ಯರ ನಡುವೆ ನೇರ ಮಾರ್ಗದಲ್ಲಿರಬೇಕೆಂದು ಬಯಸುತ್ತಾರೆ. ಸೋಲು ಕಂಡಾಗಲೆಲ್ಲ ಹಿಂದಡಿ ಇಡುವವರೂ ಇದ್ದಾರೆ, ಅದನ್ನು ಮೆಟ್ಟಿನಿಂತು ಮುಂದೆ ತಮ್ಮ ಗೆಲುವಿನ ಗುರಿಯನ್ನು ಪಡೆಯುವವರೂ ಇದ್ದಾರೆ. ಸಾಧನೆಗೆ ವಯಸ್ಸಾಗಲಿ, ಕೌಟುಂಬಿಕ ಸ್ಥಿತಿಯಾಗಲಿ ಅಡ್ಡಿಬಾರದು. ಎದುರಾಳಿ ಎಷ್ಟೇ ಪ್ರಬಲನಾಗಿದ್ದರೂ ಆತನನ್ನು ಅರಿಯುವ ಕೆಲಸಕ್ಕೆ ಕೈಹಾಕುವುದು ಸಾಧನೆಯ ಮುಂದಿರುವ ದೊಡ್ಡ ಸವಾಲಾಗಿದೆ.

2006ರಲ್ಲಿ ತನ್ನ ಶಾಲೆಯ ವೆಬ್‍ಸೈಟ್ ನಿರ್ಮಿಸುವ ಮೂಲಕ ಕಲ್ಲಿಕೋಟೆಯಿಂದ ಇಡೀ ವಿಶ್ವಕ್ಕೆ ಚಿರಪರಿಚಿತಳಾದ ಶ್ರೀಲಕ್ಷ್ಮಿ ಸುರೇಶ್‍ಗೆ ಆಗ ಕೇವಲ 14 ವರ್ಷ ವಯಸ್ಸು. ಜಗತ್ತಿನ ಕಿರಿಯ ಸಿಇಓ ಮತ್ತು ಕಿರಿಯ ವೆಬ್ ಡಿಸೈನರ್ ಹುಡುಗಿಯಾಗಿ ಶ್ರೀಲಕ್ಷ್ಮಿ ಸುರೇಶ್‍ಗಳನ್ನು ಗುರುತಿಸಲಾಯಿತು.

ಶ್ರೀಲಕ್ಷ್ಮಿ ಹೇಳಿಕೇಳಿ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದವಳು. ಆದರೆ ನಾಲ್ಕನೇ ವಯಸ್ಸಿನಲ್ಲಿಯೇ ಕಂಪ್ಯೂಟರ್ ಜೊತೆಗಿನ ಆಟ ಮತ್ತು ಕಲಿಕೆಯನ್ನು ಆಕೆ ಮೈಗೂಡಿಸಿಕೊಂಡಿದ್ದಳು. ಕೇವಲ ಆರು ವರ್ಷದಲ್ಲಿಯೇ ಆಕೆ 20 ವೆಬ್‍ಸೈಟ್‍ಗಳ ವಿನ್ಯಾಸವನ್ನು ಮಾಡಿದ್ದಳು. ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಶ್ರೀಲಕ್ಷ್ಮಿಯನ್ನು ಅರಸಿಬಂದವು. ಅತ್ಯುತ್ತಮ ವಿನ್ಯಾಸಗಾರ್ತಿ ಎಂಬ ಪ್ರಶಸ್ತಿ ಬಂದವು. ಅತ್ಯುತ್ತಮ ವಿನ್ಯಾಸಗಾರ್ತಿ ಎಂಬ ಪ್ರಶಸ್ತಿಯು ಗ್ಲೋಬಲ್ ವೆಬ್ ಅವಾರ್ಡ್ ಲಭಿಸುವುದರೊಂದಿಗೆ ಜಗತ್ತು ಹುಬ್ಬೇರಿಸುವಂತೆ ಮಾಡಿತು. 2008ರಲ್ಲಿ ಭಾರತದಲ್ಲಿ ಮಕ್ಕಳ ಸಾಧನೆಗೆ ನೀಡಲಾಗುವ ನ್ಯಾಷನಲ್ ಚೈಲ್ಡ್ ಅವಾರ್ಡ್ ಫಾರ್ ಎಕ್ಸ್‍ಪ್ಶನಲ್ ಎಚಿವ್ಮೆಂಟ್ ಪ್ರಶಸ್ತಿಯು ಆಕೆಗೆ ಲಭಿಸಿತು. 2008ರಲ್ಲಿ “design Tehnolagies”ಎಂಬ ತನ್ನದೇ ಆದ ವೆಬ್ ಡಿಸೈನಿಂಗ್ ಕಂಪೆನಿ ಸ್ಥಾಪಿಸುವುದರೊಂದಿಗೆ ಆಕೆ CEO ಪಟ್ಟವನ್ನು ಅಲಂಕರಿಸಿಕೊಂಡಳು.

ಅಂತಹ ಕ್ಲಿಷ್ಟಕರ ಪದವಿಯನ್ನು ಆಕೆ ಹೇಗೆ ನಿರ್ವಹಿಸುತ್ತಿದ್ದಾಳೆ ಎಂದು ನಾವೆಲ್ಲರೂ ಸಾಮಾನ್ಯವಾಗಿ ಪ್ರಶ್ನಿಸಬಹುದು. “ಜೀವನದಲ್ಲಿ ಸಾಧಿಸಲು ಇದು ಕೇವಲ ಒಂದು ಪ್ರಯತ್ನ ಮಾತ್ರ” ಎಂದಾಕೆ ಹೇಳುತ್ತಾಳೆ.

“ನನ್ನ ಶಾಲೆಗೆ ಒಂದು ಅಧೀಕೃತ ವೆಬ್‍ಸೈಟ್ ಇಲ್ಲದಿರುವುದೇ ನಾನು ವೆಬ್‍ಸೈಟ್ ನಿರ್ಮಿಸುವುದನ್ನು ಸವಾಲಾಗಿ ತೆಗೆದುಕೊಳ್ಳಬೇಕಾಯಿತು’ ಎಂದು ಶ್ರೀಲಕ್ಷ್ಮಿ ತಿಳಿಸುತ್ತಾಳೆ. ಆದರೆ ಆಕೆಯ ಈ ಸಾಧನೆಯಿಂದ ಪ್ರತಿಯೊಬ್ಬರು 5 ಪಾಠಗಳನ್ನು ಕಲಿಯಬಹುದು.

1. ವಯಸ್ಸು ಸಾಧನೆಗೆ ಅಡ್ಡಿಯಲ್ಲ: ಜನರು ನೀನು ಸಣ್ಣವನು. ನಿನಗಿನ್ನು ವಯಸ್ಸಾಗಿಲ್ಲ ಇಂತಹ ಕೆಲಸಗಳಿಗೆಲ್ಲ ಕೈ ಹಾಕಬಾರದು ಎಂದು ಸಲಹೆ ನೀಡುತ್ತಾರೆ. ಪ್ರಯತ್ನ ಜಾರಿಯಲ್ಲಿದ್ದಾಗಲೇ ನಾನು ಇಂತಹ ಮಾತುಗಳ ಬದಲು ಪ್ರಶಂಸೆಗಳನ್ನು ಕೇಳಲು ಸಾಧ್ಯ.

2. ಯೋಚಿಸುವುದು ಮಾತ್ರವಲ್ಲ, ಕಾರ್ಯನಿರತರಾಗಬೇಕು: ಹಲವರು ಸಾಧಿಸಬೇಕು. ಹಾಗಾಗಬೇಕು ಹೀಗಾಗಬೇಕು ಎಂದು ಯೋಚಿಸುತ್ತಾರೆ, ಕನಸು ಕಾಣುತ್ತಾರೆ. ಆದರೆ ಆ ಸಾಧನೆಗೆ ಶ್ರಮದ ಅಗತ್ಯವಿದೆ ಎಂಬುದನ್ನು ಮರೆತು ಬಿಡುತ್ತಾರೆ. ಹಾಗಾಗಿ ಯೋಚಿಸಿದ ನಂತರ ಅದಕ್ಕನುಗುಣವಾಗಿ ತಯಾರಿಯನ್ನು ನಡೆಸಬೇಕು.

3. ಆತ್ಮ ಸಂಯಮ: ಜೀವನದಲ್ಲಿ ಶಿಸ್ತು ಇಲ್ಲದೇ ಯಾವುದನ್ನು ಸಾಧಿಸಲು ಸಾಧ್ಯವಿಲ್ಲ. ನಮ್ಮಲ್ಲಿರುವ ಕುಶಲತೆಗಳನ್ನು ಸರಿಯಾಗಿ ಉಪಯೋಗಿಸಲು ಮೊದಲು ನಮ್ಮ ಮೇಲೆ ನಮಗೆ ನಿಯಂತ್ರಣವಿರಬೇಕಾದ ಅಗತ್ಯತೆ ಇದೆ. ಪರೀಕ್ಷಾ ಸಮಯಗಳು ಹತ್ತಿರವಿದೆ ಎಂದು ತಿಳಿದಾಗಲೂ ನಮ್ಮ ಗಮನ ಆಟೋಪಚಾರಗಳೆಡೆಗೆ ಸೆಳೆಯುತ್ತಿದೆ ಎಂದಾದರೆ ನಮ್ಮ ಸಾಧನೆಗೆ ನಾವು ಆತ್ಮಸಂಯಮವನ್ನು ಬಳಸಿಲ್ಲವೆಂದಾಗುತ್ತದೆ.

4. ಸ್ವ ಪ್ರಯತ್ನ: ಶ್ರೀಲಕ್ಷ್ಮಿ ತನ್ನ ಎಳೆಯ ವಯಸ್ಸಿನಲ್ಲಿಯೇ 21ನೇ ಶತಮಾನದ ಜ್ಞಾನ ಬಂಢಾರವನ್ನು ಬಿಚ್ಚಿಟ್ಟು ನೋಡಿದ್ದಾಳೆಂದಾದರೆ ಆಕೆಯ ಸ್ವಪ್ರಯತ್ನವೇ ಆಕೆಯ ಸಾಧನೆಗೆ ಮಾರ್ಗವಾಗಿರುವುದು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕಿದೆ.

5. ಉತ್ಸಾಹ ಕಳೆದುಕೊಳ್ಳಬೇಡಿ: ನಿಮಗಿಷ್ಟವಿರುವ ಸಾಧನೆಗೆ ಕೇವಲ ಹೆದರಿ ಹಿಂದುಳಿಯಬೇಕಾದ ಅಗತ್ಯತೆ ಇಲ್ಲ. ಹೆದರಿಕೆಯನ್ನು ಮೆಟ್ಟಿನಿಂತು ಮುಂದೆ ಬರಬೇಕಾದ ಅಗತ್ಯತೆ ಇದೆ.

ಶ್ರೀಲಕ್ಷ್ಮಿ ಅಂದು ತನ್ನ ಎಳವೆಯಲ್ಲಿ ಮಾಡಿದ ಸಾಧನೆಗಳನ್ನು ಕಂಡು ಸ್ಪೆಶಲ್ ಚೈಲ್ಡ್ ಎಂದು ಹೇಳಬಹುದು. ಆದರೆ ಪ್ರತಿಯೊಬ್ಬ ತಂದೆ-ತಾಯಿಗೂ “You are a Special Child” ಎಂಬುದನ್ನು ಮರೆಯದೇ ನೀವು ಆ Special Child ಆಗಲು ಪ್ರಯತ್ನಿಸಬೇಕು. ಸಾಧನೆಗೆ ನಿಲುಕದ್ದು ಯಾವುದೂ ಇಲ್ಲ ಎಂಬುದಕ್ಕೆ ಶ್ರೀಲಕ್ಷ್ಮಿ ಕೂಡಾ ಒಬ್ಬ ಪ್ರೋತ್ಸಾಹಗಾರ್ತಿ ಮಾತ್ರ. ಇನ್ನು ಮುಂದಿನ ದಿನಗಳಲ್ಲಿಯಾದರೂ ನಾವು ಸ್ವ ಪ್ರಯತ್ನದ ಮೂಲಕ ಮೇಲೇರಲು ಪ್ರಯತ್ನಿಸಬೇಕು..

LEAVE A REPLY

Please enter your comment!
Please enter your name here