ತಲ್ಹಾ ಇಸ್ಮಾಯಿಲ್ ಕೆ.ಪಿ
ಟ್ರಸ್ಟಿ, ಸೆಂಟರ್ ಫಾರ್ ಎಜುಕೇಶನಲ್ ರಿಸರ್ಚ್ ಆ್ಯಂಡ್ ಅನಾಲಿಸೀಸ್

ಭಾಗ-2
ಸರಕಾರಿ ಶಾಲೆಗಳ ಸಬಲೀಕರಣ ಸಮಿತಿ ವರದಿ- 2017

ಸರಕಾರಕ್ಕೆ ನೀಡಲಾದ ಎರಡನೇ ಶಿಫಾರಸ್ಸು- ಸರ್ಕಾರಿ ಕಿರಿಯ-ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ-ಪ್ರಾಥಮಿಕ ತರಗತಿಗಳನ್ನು ತಕ್ಷಣ ಪ್ರಾರಂಭಿಸಬೇಕು.
ಕೆಲವರು ರಾಜ್ಯದ ಸರಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳು ಇಲ್ಲದಿರುವುದರಿಂದ ಸರಕಾರಿ ಶಾಲೆಗಳ ಮಕ್ಕಳ ಸಂಖ್ಯೆಯು ಕುಸಿದಿದೆ ಎನ್ನುತ್ತಾರೆ. ಈ ರೀತಿಯ ಅಭಿಪ್ರಾಯಗಳು ವ್ಯಕ್ತವಾಗಲು ಕಾರಣವೇನೆಂದರೆ ಜನರು ಸರಕಾರಿ ಶಿಕ್ಷಣ ವ್ಯವಸ್ಥೆ ಮತ್ತು ಖಾಸಗಿ ಶಿಕ್ಷಣ ವ್ಯವಸ್ಥೆಯನ್ನು ಒಂದು ಪೈಪೋಟಿಯ ದೃಷ್ಟಿಯಲ್ಲಿ ನೋಡುತ್ತಾರೆ. ಹಾಗಿರುವಾಗ, ಸರಕಾರಿ ಶಾಲೆಗಳಲ್ಲಿ ದೊರೆಯುವ ಸೌಲಭ್ಯಗಳು ಹಾಗು ಖಾಸಗಿ ಶಾಲೆಗಳಲ್ಲಿ ದೊರೆಯುವ ಸೌಲಭ್ಯಗಳು ಅಲ್ಲಿನ ಶಿಕ್ಷಣ ಜನರನ್ನು ಆಕರ್ಷಿಸಿ ತುಲನೆ ಮಾಡುವಂತೆ ಪ್ರೇರೇಪಿಸುತ್ತದೆ. ಸರಕಾರಿ ಶಾಲಾ ವ್ಯವಸ್ಥೆ ಎಂದರೆ, ಅದು ಬಡವರು ಮತ್ತು ಸಮಾಜದ ದುರ್ಬಲ ವರ್ಗಕ್ಕೆ ಸಂಬಂಧಪಟ್ಟವರ ಶಿಕ್ಷಣ ವ್ಯವಸ್ಥೆ. ಅದೇ ರೀತಿ ಹಣವಂತರು ಸಮಾಜದ ಉನ್ನತ ವರ್ಗಗಳಿಂದ ಬಂದಂತಹ ಜನರು ಕಲಿಯುವ ಶಿಕ್ಷಣ ವ್ಯವಸ್ಥೆಯು ಖಾಸಗಿ ವ್ಯವಸ್ಥೆಯೇ ಆಗಿದೆ ಎಂಬುವುದು ವ್ಯಾಪಕವಾಗಿರುವ ಜನಾಭಿಪ್ರಾಯವಾಗಿದೆ. ಅದರಿಂದಾಗಿ ಸಮಾಜದಲ್ಲಿ ಆಧುನಿಕ ಅಸ್ಪøಷ್ಯತೆ ಉಂಟಾಗುತ್ತಿದೆ. ಅದೇನೇ ಇದ್ದರೂ ಇಂದು ಸರಕಾರಿ ಶಾಲೆಗಳಲ್ಲಿ ದಿನ ನಿತ್ಯ ಮಕ್ಕಳ ಸಂಖ್ಯೆ ಕುಸಿಯಲು ಹಲವಾರು ಪ್ರಮುಖ ಕಾರಣಗಳಿವೆ.

ರಾಜ್ಯಾದ್ಯಂತ ಹಬ್ಬಿರುವ ಇಂಗ್ಲಿಷ್ ಭಾಷಾ ಕಲಿಕೆಯ ಪ್ರಭಾವವು ರಾಜ್ಯದ ಮೂಲೆ-ಮೂಲೆಗಳಲ್ಲಿ ಜನರ ಮನದ ಮಾತಾಗಿ ಬಿಟ್ಟಿದೆ. ಒಂದು ಮಗು ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಕಲಿಯುತ್ತಿದೆ ಎಂದಾರೆ ಅದೊಂದು ಉತ್ತಮ ಶಿಕ್ಷಣ ಪಡೆಯುತ್ತಿದೆ. ಅದೇ ರೀತಿ ಒಂದು ಮಗು ಕನ್ನಡ ಅಥವಾ ಉರ್ದು ಮಾಧ್ಯಮ ಶಾಲೆಯಲ್ಲಿ ಕಲಿಯುತ್ತಿದೆ ಎಂದಾದರೆ ಮಗುವಿಗೆ ಸರಿಯಾದ ಶಿಕ್ಷಣ ದೊರೆಯುತ್ತಿಲ್ಲ ಎಂಬುದು ವ್ಯಾಪಕವಾಗಿರುವ ನಂಬಿಕೆಯಾಗಿದೆ. ಆದ್ದರಿಂದ ಈ ಇಂಗ್ಲಿಷ್ ಮಾಧ್ಯಮ ಕಲಿಕಾ ವ್ಯವಸ್ಥೆಗೆ ಪರ್ಯಾಯವಾಗಿ ಕನ್ನಡ ಅಥವಾ ಉರ್ದು ಕಲಿಕಾ ವ್ಯವಸ್ಥೆಯು ಅದಕ್ಕಿಂತ ಉನ್ನತವಾದ, ಆತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವಂತಹ ಶಾಲೆಗಳನ್ನು ಹೊಂದಿ ವಿದ್ಯಾರ್ಥಿಗಳನ್ನು ತನ್ನೆಡೆಗೆ ಆಕರ್ಷಿಸಬೇಕು. ಹಾಗದರೇ ಮಾತ್ರ ವಿದ್ಯಾರ್ಥಿಗಳು ಕನ್ನಡ ಅಥವಾ ಉರ್ದು ಮಾಧ್ಯಮದ ಸರಕಾರಿ ಶಿಕ್ಷಣ ವ್ಯವಸ್ಥೆಯನ್ನು ಅವಲಂಬಿಸಲು ಇಷ್ಟಪಡುತ್ತಾರೆ. ಅವರ ಹೆತ್ತವರು ಕೂಡ ತನ್ನ ಮಕ್ಕಳನ್ನು ಶಾಲೆಗೆ ಕಳುಹಿಸುವರು. ಆದರೆ ವಾಸ್ತವ ಸರಕಾರಿ ಶಾಲೆಗಳ ಕಟ್ಟಕಡೇಯ ಸ್ಥಿತಿ ತಲುಪಿದೆ. ಸರಿಯಾಗಿ ನಿರ್ವಹಣೆಯಾಗದಿರಲು ಅದನ್ನು ಜನರು ಕಡೆಗಣಿಸಿರುವುದೇ ಮುಖ್ಯ ಕಾರಣವಾಗಿದೆ. ಶಾಲೆಯಲ್ಲಿರುವ ಶಿಕ್ಷಕರ ಕೊರತೆ, ಉತ್ತಮ ಕಲಿಕಾ ವ್ಯವಸ್ಥೆ ಇಲ್ಲದ್ದರಿಂದಾಗಿಯೇ ವಿದ್ಯಾರ್ಥಿಗಳ ಸಂಖ್ಯೆ ಕುಸಿದಿದೆ ಎನ್ನುವುದು ನನ್ನ ಅಭಿಪ್ರಾಯ.

ಪೂರ್ವ ಪ್ರಾಥಮಿಕ ತರಗತಿಗಳ ಕುರಿತು ಚರ್ಚಿಸುವುದಾದರೆ,Baker(1973) ಮತ್ತು Gormley ರಂತಹ ತಜ್ಞರು ಪೂರ್ವ ಪ್ರಾಥಮಿಕ ತರಗತಿಗಳು ನಡೆಸುವುದು ಬಹಳ ಮುಖ್ಯವಾದ ವಿಷಯ. ಅದು ಮಗುವಿನ ಜೀವನದ ಮೇಲೆ ಉತ್ತಮ ಪರಿಣಾಮವನ್ನು ಬೀರುತ್ತದೆ ಹಾಗು ಮಗುವನ್ನು ಪ್ರಾಥಮಿಕ ಶಾಲೆಗೆ ಹೋಗಲು ಸಜ್ಜುಗೊಳಿಸುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ರಾಬಿನ್‍ಸನ್ ಮತ್ತು ರಾಬಿನ್‍ಸನ್(1968)ರು ಪೂರ್ವ ಪ್ರಾಥಮಿಕ ತರಗತಿಯ ಮಕ್ಕಳಿಗೆ ಅಗತ್ಯವಿರುವ ಸಂಕೀರ್ಣವಾದ ಕಾರ್ಯ ಮತ್ತು ಕೌಶಲ್ಯಗಳನ್ನು ಕಲಿಯುವಷ್ಟು ಪ್ರಬುದ್ಧತೆಯನ್ನು ಕಿರಿಯ ಮಕ್ಕಳು ಹೊಂದಿರುವುದಿಲ್ಲ. ತಾಯಿಯ ಮಡಿಲೇ ಶಾಲಾ ಕಲಿಕೆಗಿಂತ ಅವರಿಗೆ ಅತೀ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ, ಜನರ ಮಧ್ಯೆ ಪೂರ್ವ ಪ್ರಾಥಮಿಕ ತರಗತಿಗೆ ಮಕ್ಕಳನ್ನು ಕಳುಹಿಸುವ ಬಗ್ಗೆ ಗೊಂದಲಗಳಿವೆ. ರಾಜ್ಯದಲ್ಲಿ ಕೆಲವು ಹೆತ್ತವರು ತಮ್ಮ ಮಕ್ಕಳಿಗೆ ಪೂರ್ವ ಪ್ರಾಥಮಿಕ ತರಗತಿಗಳನ್ನು ಸರಕಾರಿ ಶಾಲೆಗಳಲ್ಲಿ ಪ್ರಾರಂಭಿಸಬೇಕೆಂದು ಕೇಳಿಕೊಂಡಾಗ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿರುವ ಶ್ರೀ ತನ್ವೀರ್ ಸೇಠ್‍ರವರು ಕರ್ನಾಟಕ ಎಜುಕೇಶನ್ ಆ್ಯಕ್ಟ್ ಪ್ರಕಾರ ಪೂರ್ವ ಪ್ರಾಥಮಿಕ ತರಗತಿಗೆ ಅವಕಾಶವಿಲ್ಲ. ಆದ್ದರಿಂದಾಗಿ ಅಂಗನವಾಡಿ ಕೇಂದ್ರಗಳನ್ನು ಸರಕಾರಿ ಶಾಲೆಗಳಲ್ಲಿ ನಡೆಸಲಾಗುವುದೆಂದು ಭರವಸೆ ನೀಡಿದ್ದಾರೆ. ಪೂರ್ವ ಪ್ರಾಥಮಿಕ ತರಗತಿ-1 ಐ.ಏ.ಉ, ಪೂರ್ವ ಪ್ರಾಥಮಿಕ ತರಗತಿ-2 U.ಏ.ಉ ಯನ್ನು ನಡೆಸಲು ಆ್ಯಕ್ಟ್ ಪ್ರಕಾರ ಅವಕಾಶವಿಲ್ಲ ಎನ್ನುತ್ತಾರೆ. ಅದೇ ಸಂದರ್ಭದಲ್ಲಿ ಅಂಗನವಾಡಿಗಳನ್ನು ಸರಕಾರಿ ಶಾಲೆಗಳಲ್ಲಿ ಪ್ರಾರಂಭಿಸುವುದೆಂದು ಹೇಳುತ್ತಿರುವುದು ವೈರುಧ್ಯವಾಗಿ ಕಾಣುತ್ತಿದೆ.

ಕೆಲವು ಶಾಲಾ ಶಿಕ್ಷಕಿಯರನ್ನು ಸಂದರ್ಶಿಸಿದಾಗ ಅವರು ಮಗು ಅಂಗನವಾಡಿಗೆ ಹೋಗುವುದಕ್ಕಿಂತ ಮನೆಯಲ್ಲಿ ಸಮಯ ಕಳೆಯುವುದು ಅವಶ್ಯಕವಾಗಿದೆ ಮತ್ತು ಅವರಿಗಾಗಿ ಸರಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ L.K.G, U.K.G ಗಳನ್ನು ನಿರ್ಮಿಸಿದಲ್ಲಿ ಅವರು ಮುಂದಿನ ತರಗತಿಗಳಿಗೆ ತರಬೇತುಗೊಳ್ಳಬಹುದು ಎನ್ನುತ್ತಾರೆ. ಆದ್ದರಿಂದ ನರ್ಸರಿಗಿಂತಲೂ ಪೂರ್ವ ಪ್ರಾಥಮಿಕ ಶಾಲೆಗಳನ್ನು ನಡೆಸುವುದು ಅವಶ್ಯವಾಗಿರುವುದರಿಂದ ಸರಕಾರವು ಕರ್ನಾಟಕ ಎಜುಕೇಶನ್ ಆ್ಯಕ್ಟ್‍ನಲ್ಲಿ ತಿದ್ದುಪಡಿ ತರುವ ಮುಖಾಂತರ ಸರಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸ ಬೇಕಾಗಿರುವುದು ಅಗತ್ಯ ಎನಿಸುತ್ತದೆ.

 

1 COMMENT

LEAVE A REPLY

Please enter your comment!
Please enter your name here