ನಿಹಾಲ್ ಕಿಡಿಯೂರ್, ಉಡುಪಿ

“ಸ್ವತಂತ್ರ ಸಂಸ್ಥೆಗಳ ಉಳಿವಿಗೆ ಒಂದು ಕೀಲಿಯೆಂದರೆ ಖಾಸಗಿ ಮತ್ತು ಸಾರ್ವಜನಿಕ ಜೀವನದ ನಡುವಿನ ಸಂಬಂಧ, ಸಾರ್ವಜನಿಕ ವಲಯದಲ್ಲಿ  ನಾಗರಿಕರ ಭಾಗವಹಿಸುವಿಕೆ ಅಥವಾ ಭಾಗವಹಿಸದಿರುವಿಕೆ” -ರಾಬರ್ಟ್ ಎನ್. ಬೆಲ್ಲಾ.

ಪ್ರಜಾಪ್ರಭುತ್ವದ ಪ್ರದೇಶಗಳ ಕುಗ್ಗುವಿಕೆಯು ಭಾರತದಾದ್ಯಂತ ಮತ್ತು ವಿಶ್ವದಾದ್ಯಂತ ಪ್ರಜಾಪ್ರಭುತ್ವ ರಾಜ್ಯಗಳ ಮೇಲಿನ ಸೂಕ್ತ ಟೀಕೆಯಾಗಿದೆ. ಆದರೆ ಪ್ರತಿಭಟನಾ ತಾಣವಾಗಿರುವ ಅಪ್ರತಿಮ ಟೌನ್‍ಹಾಲನ್ನು ಚಿಂದಿ ಚೂರಾಗಿಸುವ ಬೆಂಗಳೂರು ಪುರಸಭೆಯ ಇತ್ತಿಚಿನ ನಿರ್ಧಾರದ ಬಗ್ಗೆ ಬೆಳಕು ಚೆಲ್ಲಲು ಈ ಅವಲೋಕನ/ ತೀರ್ಮಾನವನ್ನು ಈ ತುಣುಕಿನಲ್ಲಿ ಚಿತ್ರಿಸಲಾಗಿದೆ. ಟೌಲ್‍ಹಾಲ್ ಅನೇಕ ಅರ್ಥದಲ್ಲಿ ಬೆಂಗಳೂರಿನ ಹೃದಯ ಬಡಿತವಾಗಿದೆ. ನ್ಯಾಯಮೂರ್ತಿ ಚಂದ್ರಚೂಡ್‍ರವರು ಹೇಳುವಂತೆ, “ಭಿನ್ನಾಭಿಪ್ರಾಯವು ಪ್ರಜಾಪ್ರಭುತ್ವದ ಸುರಕ್ಷಾ ಕವಾಟವಾಗಿದೆ”. ನಾಲ್ಕು ಗೋಡೆಗಳ ಗಾಜಿನ ಬಾಗಿಲುಗಳ ಹಿಂದೆ ಏಕಾಂಗಿಯಾಗಿ ತಮ್ಮ ಕೋಪವನ್ನು ಹೊರ ಹಾಕಲು ಪ್ರತಿಭಟನೆಕಾರರಿಗೆ ಮುಚ್ಚಿದ ಗಾಜಿನ ಕೋಣೆಯನ್ನು ನೀಡುವಂತಹ ಭವಿಷ್ಯಕ್ಕೆ ದಿನ ದೂರವಿಲ್ಲ. ಈಗ ಬೆಂಗಳೂರು ಸಾರ್ವಜನಿಕರಿಗೆ ಫ್ರೀಡಂ ಪಾರ್ಕ್ ಮತ್ತು ಮೌರ್ಯರ ವೃತ್ತವನ್ನು ಪ್ರತಿಭಟನೆಯ ತಾಣವಾಗಿ ಗೊತ್ತುಪಡಿಸಲಾಗಿದೆ. ಕಾರ್ಯಕ್ರಮಗಳಿಗಾಗಿ ಪುರಭವನದ ಬುಕ್ಕಿಂಗ್‍ನಿಂದ ಅಡಚಣೆ ಮತ್ತು ಟ್ರಾಫಿಕ್ ಕಾರಣಗಳನ್ನು ಈ ನಿರ್ಧಾರದ ಹಿಂದಿನ ತಾರ್ಕಿಕತೆ ಎಂದು ಬೆಂಗಳೂರು ಪುರಸಭೆ ಉಲ್ಲೇಖಿಸಿದೆ.

ಭಾರತೀಯ ಗಣರಾಜ್ಯ ಅದು ಎಳಸಾದ ಗಣರಾಜ್ಯ ಮತ್ತು ಅದು ಅಭಿವೃದ್ಧಿ ಹೊಂದಬೇಕು ಮತ್ತು ಏಳಿಗೆಯಾಗಬೇಕು; ನಾಗರಿಕರ ಅತ್ಯುನ್ನತ  ಪೌರ ಒಡನಾಟವು  ಪ್ರಮುಖವಾಗಿದೆ. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳ ಆಧಿಕಾರಗಳಲ್ಲದೇ ನಾಲ್ಕನೇ ಸ್ಥಂಭವಾದ ಮಾಧ್ಯಮಗಳು ಪರಿಶೀಲನೆ ಮತ್ತು ಸಮತೋಲನ ಕಾರ್ಯ ನಿರ್ವಹಿಸುತ್ತದೆ ಹಾಗೂ ಬಹುಸಂಖ್ಯಾತರ ಹೆಚ್ಚಿನ ಪ್ರಚೋದನೆಗೆ ರಕ್ತದಾಹವನ್ನೇ ಪ್ರಚೋದನೆಯನ್ನಾಗಿಸಿ ಸಾರ್ವಕಾಲಿಕವೂ ಪರಿಶೀಲಿಸುತ್ತದೆ. ಶ್ರೀಮತಿ ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಯಾವ ರೀತಿ ಕಾರ್ಯವೆಸಗಿದ್ದರು ಮತ್ತು ಜನರು ಪ್ರಜಾಪ್ರಭುತ್ವದ ಉತ್ಸಾಹವನ್ನು ಎತ್ತಿಹಿಡಿಯಲು ಹೇಗೆ ಪ್ರತಿಕ್ರಿಯಿಸಿದರು ಮತ್ತು ಸರ್ವಾಧಿಕಾರಿ ಪ್ರಾಬಲ್ಯದ ಹಿಡಿತದಿಂದ ಪಾರಾಗಲೂ ಏನೆಲ್ಲಾ ಮಾಡಿದರು ಎಂಬುವುದನ್ನು ನಮಗೆ ನಿದರ್ಶನಗಳಲ್ಲಿ ನೋಡಲು ಸಿಗುತ್ತದೆ. ದುರಂತವೆಂದರೆ, ಆ ಚಳುವಳಿಯಲ್ಲಿ ರಾಜಕೀಯದ ಆಧಾರದಿಂದ  ಕೆತ್ತಲ್ಪಟ್ಟ ಹಲವು ವಿಭಾಗದ ಜನರು ಕಬ್ಬಿಣದ ಮುಷ್ಠಿಯಿಂದ ಆಳಲು ಬಯಸಿದರು. 

ನಾನು ಬೆಂಗಳೂರಿಗೆ ಕರ್ನಾಟಕದ ಉಡುಪಿ ಜಿಲ್ಲೆಯಿಂದ ಬಂದಿದ್ದೇನೆ.  ಟೌನ್‍ಹಾಲ್ ವಿಚಾರದಲ್ಲಿ ಬೆಂಗಳೂರಿನ ತೀರ್ಪಿನಂತೆಯೇ ನನಗೂ ಅನುಭವವಾಗಿದೆ. ಈ ಮೊದಲು ಪ್ರತಿಭಟನಾ ಸ್ಥಳವು ನಗರದ ಮಧ್ಯಭಾಗದಲ್ಲಿರುವ ಸರ್ವೀಸ್ ಬಸ್ ನಿಲ್ದಾಣದ ಗಡಿಯಾರ ಗೋಪುರದ ಬಳಿಯಾಗಿತ್ತು, ಇದನ್ನು ಅಜ್ಜರಕಾಡ್ ಕ್ರೀಡಾಂಗಣದಂತೆಯೇ ಮೂಳೆಗೆ ತಳ್ಳಲಾಗಿದ್ದು, ಅಲ್ಲಿ ಯಾವುದೇ ಸಾರ್ವಜನಿಕ ಅಥವಾ ವಾಹನ ಸಂಚಾರಶೀಲತೆ ಇಲ್ಲ. ಈ ಚಿಹ್ನೆಗಳು ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ. ಏಕೆಂದರೆ ಧ್ವನಿಗಳು ತಮಾಷೆಯಾಗುತ್ತಿದೆ ಮತ್ತು ಅದನ್ನು ಮೊಟಕುಗೊಳಿಸಲಾಗುತ್ತಿದೆ.  ದೊಡ್ಡ ವಿಚಾರದಲ್ಲಿ ಆರ್ ಟಿ ಐ ಕಾಯ್ದೆಯನ್ನು  ದುರ್ಬಲಗೊಳಿಸಲಾಗುತ್ತಿವೆ ಮತ್ತು ಯುಎಪಿಎ ಕಾಯ್ದೆಯ ಬಲಪಡಿಸುವಿಕೆಯನ್ನು ನೋಡಬಹುದಾಗಿದೆ. ಮಾಹಿತಿಯಿರದ ಜನರನ್ನು ಮತ್ತು ಅವರ ಹಕ್ಕುಗಳನ್ನು ಕತ್ತುಹಿಸುಕುವಲ್ಲಿ ನಿರಂತರ ಪ್ರಯತ್ನವಾಗುತ್ತಿವೆ.

ಇತ್ತೀಚೆಗೆ, ಪಕ್ಷಪಾತದಿಂದ ಕೂಡಿದ ಸಿಎಎ ಕಾಯ್ದೆಯ ಮೇಲೆ ವಿಶ್ವಸಂಸ್ಥೆಯ ಮಾನವಹಕ್ಕು ಆಯೋಗವು ಮಧ್ಯ ಪ್ರವೇಶಿಸಿದಾಗ, ರಾಜ್ಯದ ಪ್ರತಿಕ್ರಿಯೆ ಏನೆಂದರೆ ಇದು ರಾಜ್ಯದ ಸಾರ್ವಬೌಮತ್ವದ ಮೇಲೆ ಹೊಡೆತವಾಗಿದೆ ಎಂದಾಗಿತ್ತು. ಜನರ ಧ್ವನಿಯನ್ನು ವಿವಿಧ ವಿನ್ಯಾಸಗಳ ಮೂಲಕ ದುರ್ಬಲಗೊಳಿಸುವಲ್ಲಿನ ನಿರಂತರ ಪ್ರಯತ್ನಗಳು ಸಾರ್ವಭೌಮತ್ವದ ಮೇಲೆ ಯಾವುದೇ ಹೊಡೆತಗಳನ್ನು ಬೀರುವುದಿಲ್ಲ. ಇದು ವಿಭಿನ್ನ ದೃಷ್ಟಿಕೋನಗಳಿಂದ ಅಗತ್ಯವಾಗಿಯೂ ನೋಡಬೇಕಾದ  ಕ್ರಿಯಾತ್ಮಕ ಮತ್ತು  ವಿಶಾಲವಾದ ವಿಷಯವಾಗಿದೆ.

ಆದರೆ ನಾನು ಈ ಚರ್ಚೆಯನ್ನು ದೆಹಲಿಯ ಘಟನೆಗಳ ಕ್ರಮಾನುಗತಿಯನ್ನು ನೆನೆಪಿಸಿಕೊಳ್ಳುವ ಮೂಲಕ ಕೊನೆಗೊಳಿಸುತ್ತಿದ್ದೇನೆ. ಇಲ್ಲಿ   ಅಧಿಕಾರದ ಎಲ್ಲಾ ಸ್ತಂಭಗಳು ವಿಫಲವಾಗಿವೆ. ಹೀಗಾಗಿ,  ಬಹುಶಃ ಸಾವಿನ ಗಂಟೆಯೇ ದೊಡ್ಡ ಪ್ರಮಾಣದಲ್ಲಿ  ಹೆಚ್ಚಾಗಿದೆ. ನನ್ನ ವಠಾರದಲ್ಲಿ ಪ್ರಜಾಪ್ರಭುತ್ವ ಪ್ರದೇಶಗಳು ಪರಿಕಲ್ಪನಾತ್ಮಕವಾಗಿ ಮತ್ತು ಪ್ರಾದೇಶಿಕವಾಗಿ ಕುಗ್ಗುತ್ತಿದೆ ಮತ್ತು ಸಿಎಎ ವಿರೋಧಿ ಚಳುವಳಿಯು ಎಲ್ಲೋ ಒದಗಿಸಿದ ಪ್ರಜಾಪ್ರಭುತ್ವದ ಮನೋಭಾವದ ಕಿಡಿ ಹೆಚ್ಚಿಸಿ ಪುನರುಜ್ಜೀವನಗೊಳಿಸಲು ನಾಗರಿಕರ ಒಡನಾಟದ ಅಗತ್ಯವಿದೆ. ಆದರೆ ಗಂಭೀರವಾದ ಚರ್ಚೆಗಳು ಪ್ರಜಾಪ್ರಭುತ್ವದ ಸ್ಥಳವಕಾಶದ ಸುತ್ತಲೂ ಇರಬೇಕು. ನಮ್ಮ ಆಧಾರ ಸ್ತಂಭಗಳು, ಸಾರ್ವಭೌಮದ ಸವೆತಗಳು ನಾಗರಿಕರ ಕೇಂದ್ರ ಸ್ಥಾನದಲ್ಲಿರುವಾಗ ರಾಷ್ಟ್ರ ರಾಜ್ಯ ಮತ್ತು ನಾಗರಿಕನ ಸ್ಥಾನಮಾನದ ನೈಜ್ಯ ಚೌಕಟ್ಟನ್ನು ನಾವು ಚಿಂತಿಸಬೇಕಾಗಿದೆಯೇ?

LEAVE A REPLY

Please enter your comment!
Please enter your name here