• ನಸೀಬ ಗಡಿಯಾರ್

ಇಂದು ಜಗತ್ತಿನೆಲ್ಲೆಡೆ ಸುದ್ದಿಯಾಗುತ್ತಿರುವ ವಿಷಯವೇನೆಂದರೆ ಮಹಾ ಮಾರಿಯಾಗಿ ಆಗಮಿಸಿದ ಕೊರೋನ ಎಂಬ ವೈರಸ್. ಈ ಸೋಂಕಿನಿಂದ ಹಲವು ಜೀವಗಳು ಬಲಿಯಾದವು.. ಕೆಲವು ಜೀವಗಳು ಇನ್ನೂ ನರಳುತ್ತಿದೆ .. ಜನರನ್ನು ಇದರಿಂದ ಮುಕ್ತಿಗೊಳಿಸುವ ನಿಟ್ಟಿನಿಂದ ನಮ್ಮ ಜಾಗರೂಕತೆಗಾಗಿ ಸರಕಾರವು ಲಾಕ್ ಡೌನ್ ಎಂಬ ನಿಯಮವನ್ನು ಕ್ರಮಬದ್ಧವಾಗಿ ಅನುಸರಿಸಿತು. ಇದರಿಂದಲೂ ಮಾನವರು ಬಹಳ ರೀತಿಯ ಸಮಸ್ಯೆಯನ್ನು ಎದುರಿಸಬೇಕಾಯ್ತು.

ಕೆಲಸವಿಲ್ಲದೆ. ತಿನ್ನಲು ಅನ್ನವಿಲ್ಲದೆ, ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಮುಚ್ಚಿ ಹೋದ್ದರಿಂದ ಬಹಳ ತೊಂದರೆಯಾಗ ತೊಡಗಿತು. ದಾರಿ ಬದಿ ಜನರಲ್ಲಿ ಕಾಡಿ ಬೇಡಿ ಹೊಟ್ಟೆ ತುಂಬಿಸುತ್ತಿದ್ದ ಬಡವನ ಬದುಕು ಛಿದ್ರಗೊಂಡವು. ರಾಜಕಾರಣಿಗಳು ದೊಡ್ಡ ದೊಡ್ಡ ಸಮಾಜ ಸೇವಕರು ಬಂದು ಅವರಿಗೆ ನೆರವಾದರು.. ಅದನ್ನೆಲ್ಲ ಖಂಡಿತವಾಗಿಯೂ ಮೆಚ್ಚತ್ತಕ್ಕದ್ದೇ. ಆದರೆ, ತಮ್ಮ ಹೆಸರಿಗಾಗಿ ದಾನ ಮಾಡುವ ರೂಪದಲ್ಲಿ ಫೋಟೋ ತೆಗೆದು ಜಾಲತಾಣಗಳಲ್ಲಿ ಹರಿಯಲು ಬಿಟ್ಟು ಸಮಾಜ ಸೇವಕರು ಎಂದೆನಿಸಿ ಕೊಳ್ಳುವುದು ಬಹಳ ದೊಡ್ಡ ತಪ್ಪು. ಯಾರೊ ಒಬ್ಬಾಕೆ ಈ ವಿಷಯಕ್ಕೆ ಅನುಗುಣವಾಗಿ ಹೇಳಿದಳಂತೆ… ಏನಪ್ಪಾ ಈ ಜಗತ್ತು ಹೀಗಾಗಿ ಬಿಟ್ಟಿವೆ, ಬಂದು ಅನ್ನವ ಕೊಡುತ್ತಾರೆ ಫೋಟೋನು ತೆಗೀತಾರೆ… ಅದೆಲ್ಲ ಪರವಾಗಿಲ್ಲ ಆದರೆ ಆ ಅನ್ನ ನನ್ನ ಹೊಟ್ಟೆ ಸೇರುವ ಮುನ್ನ ವಾಟ್ಸಪ್, ಫೇಸ್ ಬುಕ್, ಟ್ವಿಟ್ಟರ್ ಗಳಲ್ಲಿ ಹರಿದು ಬಿಡುತ್ತವೆ”…

ನೋಡಿ ಇಂಥಹ ಸಹಾಯಗಳು ಅವರಿಗೂ ತೃಪ್ತಿಹೊಂದಿರುವುದಿಲ್ಲ.

ಸರಿ ಹಾಗದರೆ ಲಾಕ್ ಡೌನ್ ನಿಂದ ಬಡವನಿಗೆ ಸಹಾಯಕ್ಕೆ ಸಮಾಜ ಸೇವಕರೆಲ್ಲ ಮುಂದಾದರು.. ಇನ್ನೂ ಶ್ರೀಮಂತರಲ್ಲಿ ದುಡ್ಡಿದೆ ಪರವಾಗಿಲ್ಲ. ಆದರೆ ಈ ಮಧ್ಯಮ ಕುಟುಂಬ ದವರ ಗತಿ ಅದೋಗತಿ ಆಗಿದೆ . ಕಾರಣ. ಅವರನ್ನು ನೋಡಲು ಟಾರಸಿನ ಮನೆ ಮನೆಯಂಗಳದಲಿ ಒಂದು ಬೈಕ್.ಇವರನ್ನು ಯಾರು ಹಿಂದಿರುಗಿ ನೋಡುವರಿಲ್ಲ ಯಾಕೆಂದರೆ ನೋಡಲು ಮನೆ. ಮನೆ ಮುಂದೆ ಬೈಕ್ ಇದೆಯಲ್ಲವೇ…?
ಆದರೆ ಆ ಟಾರಸಿನ ಮನೆಯೊಳಗೆ ಊಟ ಮಾಡದೇ ಹಲವು ದಿನವಾಗಿರಬಹುದು .. ಒಬ್ಬನೇ ಮಗನ ನಂಬಿ ಜೀವನ ನಡೆಸುತ್ತಿದ್ದ ಕುಟುಂಬ .ಮಗನಿಗೆ ಕೆಲಸವಿಲ್ಲದೇ ತಿಂಗಳಾಗಿದೆ. ಹಾಗದರೆ ಈಗ ಹೇಗಿರ ಬಹುದು ಮನೆಯ ಪರಿಸ್ಥಿತಿ . ಎಲ್ಲರಿಗೂ ಕಾಣುವಂತಹ ಅಂಗಳದ ಆ ಬೈಕ್ನಲ್ಲಿ ಪೆಟ್ರೋಲ್ ಇಲ್ಲದೆ ತಿಂಗಳಾಯ್ತು. ಯಾರಲ್ಲಾದರು ಹೇಳಿ ಕೊಂಡರೆ ನಿಮಗೇನು ಕಮ್ಮಿ. ಟಾರಸಿನ ಮನೆ ಅಂಗಳದಲ್ಲಿ ಬೈಕ್ ಎನ್ನುವರು…ಇದು ಮಧ್ಯಮ ಕುಟುಂಬದವರ ಎಲ್ಲರ ಸಮಸ್ಯೆ ಯಾಗಿದೆ. ಹಾಗೂ ನಮ್ಮ ಸುತ್ತಮುತ್ತಲಿನಲ್ಲಿ ಇಂತಹ ಹಲವಾರು ಘಟನೆಗಳು ನಡೆಯುತ್ತಿದೆ. ದಯವಿಟ್ಟು ನಿಮ್ಮ ಸೇವೆಯು ಜಾತಿ ಮತ ನೊಡುವುದು ಬೇಡ ಬದಲಾಗಿ ಮಾನವೀಯತೆಯನ್ನು ನೋಡಲಿ ನಿಮ್ಮ ಅಕ್ಕ ಪಕ್ಕದಲ್ಲಿ ಇಂಥಹ ಸಮಸ್ಯೆಗಳಲ್ಲಿ ಒದ್ದಾಡುತ್ತಿರುವವರಿಗೆ ನೆರವಾಗಿ… ಆದಷ್ಟು ಜಾಗರೂಕರಾಗಿರಿ.ಸಮಾಜ ಸೇವೆ ಪ್ರಚಾರಕ್ಕೆ ಸೀಮಿತವಾಗದಿರಲಿ ದೇವ ಪ್ರೀತಿ, ಕೃಪೆಯನ್ನು ಬಯಸಿ ಮಾನವೀಯತೆಯಿಂದ ಕೂಡಿರಲಿ.

LEAVE A REPLY

Please enter your comment!
Please enter your name here