ಸಿನಿಮ ವಿಮರ್ಷೆ

ಇಜಾಜ್ ಬಂಟ್ವಾಳ

ಮರಾಠರ ವೀರ ನಾಯಕ ತಾನಾಜಿ ಮಾಲುಸಾರೆಯ ಶೌರ್ಯ ಮತ್ತು ಆತನ ವೈಯಕ್ತಿಕ ಬದುಕಿನ ಮೇಲೆ ಬೆಳಕು ಚೆಲ್ಲಲಿರುವ ಈ ಸಿನಿಮದ ಟ್ರೈಲರ್ ನಲ್ಲಿಯೇ ಕೇಸರಿ ರಾಷ್ಟ್ರೀಯತೆಯ ಮುಸುಕು ಮುಚ್ಚಿದೆಯೆಂದು ಹಲವು ವಿಮರ್ಶಕರು ಹೇಳಿದ್ದರು. ಮುಸ್ಲಿಂ ರಾಜರನ್ನು ದೇಶದ್ರೋಹಿಗಳಾಗಿ ಬಿಂಬಿಸುವ ಪಾನಿಪತ್, ಪದ್ಮಾವತ್, ಕೇಸರಿ ಇಂತಹ ಹಲವು ಚಿತ್ರದ ಪಟ್ಟಿಯಲ್ಲಿ ಸೇರುತ್ತದೆ. ಇದು ಅದರ ಹೊಸ ಆವೃತ್ತಿ ಎನ್ನಬಹುದು.
ಮರಾಠರನ್ನು ಹಾಗೂ ಶಿವಾಜಿಯನ್ನು ಹೀರೋ ಮಾತ್ರವಲ್ಲದೆ ಮೊಗಲ್ ಮತ್ತು ಔರಂಗಾಝೇಬರನ್ನು ವಿಲನ್ ಹಾಗೆ ಚಿತ್ರಿಸಿದೆ. ಮೇಕಪ್ ಗಳಲ್ಲಿಯೂ ಕಾಸ್ಟ್ಯೂಮ್ ಗಳಲ್ಲಿಯೂ ವಿಕೃತ ರೂಪ ಕೊಟ್ಟು ಮೊಘಲ್ ರಾಜಂದಿರರನ್ನು ಕ್ರೂರವಾಗಿ ಬಿಂಬಿಸುವಲ್ಲಿ ಯಶಸ್ವಿಯಾಗಿದೆ. ಶಶಿತರೂರ್ ಹೇಳುತ್ತಾರೆ, “ಎರಡು ತರದ ಆಕ್ರಮಣಕಾರರು ಇದ್ದಾರೆ. ಒಂದು ಈ ದೇಶಕ್ಕೆ ಬಂದು ಈ ದೇಶದ ಸಂಪತ್ತನ್ನು ಲೂಟಿ ಮಾಡಿದವರು (ಬ್ರಿಟೀಷರು). ಎರಡು ಈ ದೇಶಕ್ಕೆ ಬಂದು ಈ ದೇಶದ ಭಾಗವಾದವರು ಮತ್ತು ಈ ದೇಶಕ್ಕೆ ಕೊಡುಗೆ ನೀಡಿದವರು (ಮೊಗಲ್).”

ಸಿನಿಮಾದಲ್ಲಿರುವ ಕೆಲವು ರಾಮುಖ ಅಂಶಗಳು

  • ಈ ಚಿತ್ರದಲ್ಲಿ “ಸ್ವರಾಜ್”, ಏನು ಸ್ವರಾಜ್ ಹಾಗೂ ಯಾರಿಂದ ಎಂದು ನೈಜ ಪ್ರಶ್ನೆ? ನಮಗೆ ಎರಡು ಸ್ವರಾಜ್ ಸಿಕ್ಕಿತೇ?
  • ಈ ಚಿತ್ರದಲ್ಲಿ ಕೆಲವು ಡೈಲಾಗ್ಗೂಳು ಉದ್ರೇಕಗೊಳಿಸುವಂತೆ ಮಾಡುತ್ತದೆ ಮತ್ತು ಅದು ಇತಿಹಾಸವನ್ನು ಅಲ್ಲಗೆಳೆಯುತ್ತದೆ.
  • ಭಕ್ತಿ ಎಂದರೆ ಭಗವ ಎಂದು ಬಿಂಭಿಸಲಾಗಿದೆ. ಭಗವ ನಮ್ಮ ಹೃದಯದಲ್ಲಿದೆ ಎಂದು “ಅಜಯ್ ದೇವಗನ್ ” ಪುನರಾವರ್ತಿಸುತ್ತಾರೆ.
  • ಔರಂಗಾಜೇಬ್ ಹಾಗೂ ಕ್ರೂರಿ ರೂಪದಲ್ಲಿ ಬಿಂಬಿಸಲಾಗಿದೆ.
  • ಈ ಸಿನಿಮಾದ ನಾಯಕನು ಒಬ್ಬ ಹಿಂದು ಪವಿತ್ರನೂ ದೇವರ ಮೇಲೆ ಅಪಾರ ಭಕ್ತಿ ಮತ್ತು ನಂಬಿಕೆ ಇರುವವನು ನಿಷ್ಠಾವಂತ ನೀತಿವಂತ ರಾಜನಾಗಿ ಬಿಂಬಿಸಲಾಗಿದೆ. ಆದರೆ, ಖಲನಾಯನಾಗಿರುವವನೂ ಸಹ ಒಬ್ಬ ಹಿಂದುವಾಗಿದ್ದರೂ ಅವನು ಕೇವಲ ನೀಚ ದುಷ್ಟ ರಾಜನ ಪ್ರತಿನಿಧಿ ಎಂಬಂತೆ ಚಿತ್ರಿಸಿ ಮುಸ್ಲಿಮ ರಾಜನ ಸಾಮ್ರಾಜ್ಯದೊಳಗೆ ಹಿಂಸೆ ಮತ್ತು ಶಿಕ್ಷೆಗೆ ಮಾತ್ರ ಅವಕಾಶವಿರುವುದೆಂದು ತೋರಿಸಲಾಗಿದೆ.
  • ಇತಿಹಾಸ ಓದದವರಿಗೆ ಈ ಚಿತ್ರ ಉದ್ರೇಕಗೊಳಿಸಲು ಉತ್ತಮ ಅಸ್ತ್ರ ಎಂದು ಹೇಳಬಹುದು

ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವು ರಾಜ್ಯದಲ್ಲಿ ‘ತಾನಾಜಿ- ದಿ ಅನ್ಸಂಗ್ ವಾರಿಯರ್’ ತೆರಿಗೆ ಮುಕ್ತ ಚಿತ್ರವೆಂದು ಘೋಷಿಸಿದೆ. ಮಹಾನ್ ಮರಾಠಾ ಯೋಧರ ಬಗ್ಗೆ ಐತಿಹಾಸಿಕ ಚಿತ್ರ ಮಾಡಲು ಸರ್ಕಾರದ ಆದೇಶ ಹೊರಡಿಸಿದ್ದು, ಈ ಚಿತ್ರವನ್ನು ರಾಜ್ಯದ ಎಸ್‌ಜಿಎಸ್‌ಟಿಯಿಂದ ವಿನಾಯಿತಿ ನೀಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿದ್ದು ವರದಿಯಾಗಿದ್ದವು. (ಸಾಮಾಜಿಕ ಕಳಕಳಿಯ ಪ್ರಕೃತಿ ಪರವಾದ ಸಂದೇಶ ನೀಡುವ ಸಿನಿಮಾಗಳನ್ನು ನಿರ್ದೇಶಿಸುವವರಿಗೆ ಈ ಓಫರ್ ಕೊಟ್ಟಿದ್ದಾರೆ ಮೆಚ್ಚಬಹುದಿತ್ತು)
ಗತಿಸಿ ಹೋದ ಮುಸ್ಲಿಂ ರಾಜಂದಿರಾರ ಬಗ್ಗೆ ಹಾಗು ಪ್ರಸಕ್ತ ಕಾಲದಲ್ಲಿ ಬದುಕುವ ಸಾಧಾರಣ ಮುಸ್ಲಿಂ ಪ್ರಜೆಗಳಲ್ಲಿ ಕೇಸರಿ ಭಯೋತ್ಪಾದನೆಯ ಚಾಟಿಯೇಟನ್ನು ಬೀಸುವಲ್ಲಿ ಈ ಸಿನಿಮಾ ಯಶಸ್ವಿಯಾಗಿರಬಹುದು, ಆದರೆ ಸಾಮಾಜಿಕ ಸಾಮರಸ್ಯವನ್ನು ಹಾಳು ಮಾಡುವ ಜನರೊಳಗೆ ಕೋಮು ಭಾವನೆಯನ್ನು ಬಿತ್ತರಿಸುವ ಇಂತಹ ಸಿನಿಮಾಗಳನ್ನು ಬಹಿಷ್ಕರಿಸಬೇಕಾಗಿದೆ. ಇತಿಹಾಸವನ್ನು ಆಧುನಿಕ ಯುಗದೊಂದಿಗೆ ಅಳೆದು ನೋಡಲು ಸಾಧ್ಯವಿಲ್ಲ. ಇತಿಹಾಸವನ್ನು ಇತಿಹಾಸದಲ್ಲಿಯೇ ನೋಡಬೇಕು ಅರ್ಥೈಸಬೇಕು . ರಾಜಕೀಯ ಲಾಭಕ್ಕಾಗಿ ಹಣಗಳಿಸುವ ಉದ್ದೇಶದಿಂದ ನಿರ್ಮಾಣಗೊಳ್ಳುತ್ತಿರುವ ಇಂತಹ ಬೆಕಾರ್ ಇತಿಹಾಸಕ್ಕೆ ವಿರುದ್ಧವಾದ ಸಿನಿಮ ಭಾರತದ ಬಹುತ್ವತೆಗೆ ಮಾರಕ ಎಂದೆನಿಸುತ್ತದೆ.

ಅಜಯ್ ದೇವಗನ್, ಸೈಫ್ ಅಲೀ ಖಾನ್, ಖಾಜೋಲ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಓಂ ರಾವೋತ್ ಸಿನಿಮಾ ನಿರ್ದೇಶಿಸಿದ್ದಾರೆ

LEAVE A REPLY

Please enter your comment!
Please enter your name here