ಲೇಖಕರು: ಮೌ.ವಹೀದುದ್ದಿನ್ ಖಾನ್
ಅನುವಾದಕರು: ತಲ್ಹಾ.ಕೆ.ಪಿ

ಗದ್ದೆಯಲ್ಲಿ ಫಸಲಿನ ಬೀಜ ಬಿತ್ತಿದಾಗ ಅದರೊಂದಿಗೆ ನಾನಾರೀತಿಯ ಹುಲ್ಲು ಮೊಳಕೆಯೆಡಿಯುತ್ತದೆ. ಗೋದಿಯ ಪ್ರತೀ ಗಿಡದೊಂದಿಗೆ ಒಂದು ಹುಲ್ಲು ತಾನಾಗಿಯೇ ಹುಟ್ಟಿ ಬೆಳೆಯುತ್ತದೆ ಮತ್ತು ಸಾಸುವೆಯ ಎಲ್ಲಾ ಮರದೊಂದಿಗೆ ಒಂದು ನಿರುಪಯೋಗಿ ಮರವು ಬೆಳೆಯಲಾರಂಭಿಸುತ್ತದೆ. ಈ ಸ್ವತಃ ತಾನೇ ಮೊಳೆಯುವ ಹುಲ್ಲುಗಳು ಗದ್ದೆಯ ಫಸಲಿಗೆ ಬಹಳ ನಷ್ಟವನ್ನು ನೀಡುತ್ತದೆ ಗದ್ದೆಯ ನೀರು ಮತ್ತು ಗೊಬ್ಬರದಲ್ಲಿ ಭಾಗಿಯಾಗಿ ನಿಜವಾದ ಫಸಲನ್ನು ಬೆಳೆಯುವ ಅವಕಾಶವನ್ನು ನೀಡುವುದಿಲ್ಲ.

ರೈತನು ಒಂದು ವೇಳೆ ಈ ನಿರುಪಯೋಗಿ ಗಿಡಗಳನ್ನು ಬೆಳೆಯಲು ಬಿಟ್ಟರೆ ಅದು ಇಡೀ ಫಸಲನ್ನೆ ಕೆಡಿಸಿಬಿಡುತ್ತದೆ. ಗದ್ದೆಯಲ್ಲಿ ಬೀಜ ಬಿತ್ತಿದ ರೈತನ ನಿರೀಕ್ಷೆಗಳು ಎಂದೂ ಪೂರ್ಣವಾಗಲಾರವು. ಅದರಿಂದ ಆತನು ಗದ್ದೆಯಲ್ಲಿ ಕಳೆ ತೆಗೆಯುವ (weeding )ನ ಕೆಲಸವನ್ನು ನಿರ್ವಹಿಸುತ್ತಾನೆ. ಆತ ಒಂದೊಂದು ನಿರುಪಯೋಗಿ ಗಿಡಗಳನ್ನು ತೆಗೆದು ಗದ್ದೆಯಲ್ಲಿರುವ ಫಸಲಿಗೆ ಬೆಳೆಯುವ ಅವಕಾಶ ಸಿಗಲಿ ಎಂದು ಗದ್ದೆಯನ್ನು ಶುಚಿಗೊಳಿಸುತ್ತಾನೆ .

ಪ್ರತೀ ಓರ್ವ ರೈತನು ಗದ್ದೆಯಲ್ಲಿ ಬೀಜ ಬಿತ್ತಿದರೆ ಮಾತ್ರ ಸಾಲದು. ಅದರೊಂದಿಗೆ ಬೆಳೆಯುವ ಇತರ ನಿರುಪಯೋಗಿ ಗಿಡಗಳನ್ನು ಹೆಕ್ಕಿ ಹೆಕ್ಕಿ ತೆಗೆಯ ಬೇಕು ಇಲ್ಲವಾದರೆ ಗದ್ದೆಯಿಂದ ತಾನು ಭಾವಿಸಿದಷ್ಟು ಫಸಲು ದೊರೆಯಲಾರದು ಎಂಬುದನ್ನು ತಿಳಿದಿರುತ್ತಾನೆ. ಗದ್ದೆಯಲ್ಲಿ ನಡೆಸಲ್ಪಡುವ ಕಳೆ ತೆಗೆಯುವ ಕೆಲಸವೂ ಮಾನವ ಜೀವನದಲ್ಲಿಯೂ ನಡೆಸಲ್ಪಡಬೇಕು. ಅದನ್ನು ಇಸ್ಲಾಮಿ ಕಾನೂನಿನ ಪ್ರಕಾರ ಆತ್ಮಾವಲೋಕನ ಎನ್ನುತ್ತಾರೆ. ಮಾನವನ ಪರಿಸ್ಥಿತಿಯು ಇದೇ ರೀತಿ ಇದೆ ಆತನಿಗೆ ಒಂದು ಒಳ್ಳೆಯ ವಸ್ತು ಸಿಕ್ಕಿದರೆ ಅದರೊಂದಿಗೆಯು ಒಂದು ”ನಿರುಪಯೋಗಿ ಗಿಡ”ವು ಅದರೊಂದಿಗೆ ಮೊಳೆಯಿಸಲಾರಂಭಿಸುತ್ತದೆ. ಈ ನಿರುಪಯೋಗಿ ಗಿಡವನ್ನು ಕಂಡು ಹಿಡಿದು ಮತ್ತು ಅದನ್ನು ತನ್ನೊಳಗಿನಿಂದ ಹೆಕ್ಕಿ ಎಸೆಯುವುದು ಅತೀ ಅವಶ್ಯಕವಾಗಿದೆ, ಇಲ್ಲವಾದರೆ ಮಾನವನ ಸ್ಥಿತಿಯೂ ಕಳೆ ತೆಗೆಯದ ಗದ್ದೆಯಂತಾಗಿಬಿಡುತ್ತದೆ.

ಕೆಲವರಿಗೆ ಕಾರಣಗಳು ಮತ್ತು ವಾಸಿಗಳು ಕೈ ಸೇರಿದರೆ ಅವರಲ್ಲಿ ಸ್ವಯಂ ಭರವಸೆಯು ಬಹಳಷ್ಟು ಮೂಡುತ್ತದೆ. ಅಧಿಕಾರ ಸಿಕ್ಕಿದರೆ ಅಹಂಕಾರ ಉಂಟಾಗುತ್ತದೆ, ಅದೇರೀತಿ ಸಂಪತ್ತಿನೊಂದಿಗೆ ಜಿಪುಣತೆ, ಜ್ಞಾನದೊಂದಿಗೆ ಜಂಬ, ಲೋಕ ಪ್ರಿಯತೆಯೊಂದಿಗೆ ಕಾಪಟ್ಯ ಮತ್ತು ಸಾಮಾಜಿಕ ಗೌರವದೊಂದಿಗೆ ತೋರಿಕೆಯ ಮಾನಸಿಕತೆಯು ಉಂಟಾಗುತ್ತದೆ.

ಈ ಎಲ್ಲಾ ವಸ್ತುಗಳು ನಿರುಪಯೋಗಿ ಗಿಡಗಳಿದ್ದಂತೆ ಅದು ಯಾವುದೇ ವ್ಯಕ್ತಿಯನ್ನು ಒಳಿತನ್ನು ತಿಂದು ಬಿಡುತ್ತದೆ.

ಎಲ್ಲಾ ವ್ಯಕ್ತಿಗಳು ತನ್ನನ್ನೇ ತಾನು ನೋಡಿಕೊಳ್ಳಬೇಕು ಮತ್ತು ಯಾವಾಗಲಾದರೂ ತನ್ನೊಳಗೆ ”ನಿರುಪಯೋಗಿ ಗಿಡ” ಮೊಳೆಯಿಸಿರುವುದು ಕಂಡುಬಂದರೆ ಅದನ್ನು ಹೆಕ್ಕಿ ಎಸೆಯ ಬೇಕು. ಯಾರು ತನ್ನ ಮೇಲೆ ಆತ್ಮಾವಾಲೋಕನ ಕೆಲಸವನ್ನು ಮಾಡುವುದಿಲ್ಲವೋ ಆತ ಈ ಲೋಕದಲ್ಲಿ ಖಂಡಿತವಾಗಿಯೂ ನಶಿಸಿ ಹೋಗುವನು. ಆತ ಫಸಲು ಕೊಡದಂತಹಾ ಗಡ್ಡೆಯಾಗುವನು. ಆತ ಎಲ್ಲಾ ವಸಂತ ಋತುವು ಎಲೆಯುದುರುವ ಕಾಲದಲ್ಲಿ ಬದಲಾದಂತಹ ತೋಟದಂತಾಗುವನು.

LEAVE A REPLY

Please enter your comment!
Please enter your name here