• ಇರ್ಷಾದ್ ವೇಣೂರು


Netflix, Amazon Prime ನಂತಹಾ OTT(Over The Top) ಫ್ಲ್ಯಾಟ್ ಫಾರಂಗಳು ನಮ್ಮ ದೇಶದಲ್ಲಿ ಚರ್ಚೆಯಲ್ಲಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಕಾನೂನು ರೂಪಿಸುವ ಬಗ್ಗೆ ಚರ್ಚೆ ನಡೆಸುತ್ತಿದೆ. ಇದು ಎಷ್ಟು ಮಂದಿಗೆ ಗೊತ್ತಿದೆಯೋ ತಿಳಿದಿಲ್ಲ.

ನಾನು ಇತ್ತೀಚಿಗೆ Netflix ನಲ್ಲಿ ನೋಡಿದ ಉತ್ತಮ ಡಾಕ್ಯುಮೆಂಟರಿಗಳ ಪೈಕಿ The Social Dilemma ಕೂಡಾ ಒಂದು. ನಮ್ಮ ಸೋಷಿಯಲ್ ಮೀಡಿಯಾಗಳ ಬಳಕೆ ಮತ್ತು ನಮ್ಮ ಜೀವನದ ಮೇಲೆ, ಸಮಾಜದ ಮೇಲೆ ಆಗುತ್ತಿರುವ ಪ್ರಭಾವಗಳನ್ನು ಪರಿಣಾಮಕಾರಿಯಾಗಿ ನಿರೂಪಿಸಿದ್ದಾರೆ. ಟೆಕ್ನಾಲಜಿ ನಮ್ಮ ಸುಂದರವಾದ ಬದುಕನ್ನು ಸುಲಭ ಮಾಡಿದೆಯೋ ಅದೇ ರೀತಿ ಹೇಗೆ ನಾಶ ಮಾಡ್ತಾ ಇದೆ ಎಂಬುದು ನಮಗೇ ಅರಿವಿಲ್ಲದಾಗಿದೆ.

ಫೇಸ್ ಬುಕ್, ಇನ್ ಸ್ಟಾಗ್ರಾಂ, ಟ್ವಿಟರ್, ಗೂಗಲ್, YouTube ನಂತಹ ದೈತ್ಯ ಸಂಸ್ಥೆಗಳಲ್ಲಿ ವಿವಿಧ ಉನ್ನತ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿದವರಿಗೆ‌ Social Media ಖಾತೆಗಳಿಲ್ಲ ಎಂದರೆ ನಿಮಕಾರ್ಯವಿಧಾನಗಳಿಲ್ಲ ಆಗಬಹುದು. ಜೊತೆಗೆ ತಮ್ಮ ಹತ್ತಿರದವರಿಗೆ ಬಳಸದಂತೆ ತಿಳಿಸಿದ್ದಾರೆ.

ಯಾಕೆ ಅಂತ ತಿಳಿಯಬೇಕಾದರೆ ನೀವು ಈ‌ ಡಾಕ್ಯುಮೆಂಟರಿ ನೋಡಲೇಬೇಕು. ಈ ಡಾಕ್ಯುಮೆಂಟರಿ ಯಲ್ಲಿ ಮಾತನಾಡಿದವರು ಕೊನೆಗೆ ಹೇಳುವ ಒಂದು ಮಾತು “Civil War”. ಸೋಷಿಯಲ್‌ ಮೀಡಿಯಾ ಹೀಗೆ ಮುಂದುವರಿದರೆ ಸಿವಿಲ್ ವಾರ್ ಆಗುವ ಸಾಧ್ಯತೆಯನ್ನು ಅವರು ಅಲ್ಲಗಳೆದಿಲ್ಲ. ಅಲ್ಲದೇ, ಜಗತ್ತು ತುಂಬಾ ವಿಶಾಲವಾಗಿದೆ. ಈ ಸೋಷಿಯಲ್ ಮೀಡಿಯಾ ಜಗತ್ತಿನಿಂದ ಹೊರಗೆ ಬನ್ನಿ ಎಂದು ತಿಳಿಸುತ್ತಾರೆ. ರಾಜಕೀಯ ಬೆಳವಣಿಗೆಯು ಜನರ ಸಾಮಾಜಿಕ ಬದುಕನ್ನು ಹೇಗೆ ನಾಶ ಮಾಡುತ್ತಾ‌ ಇದೆ ಎಂಬುದನ್ನು ಕೂಡಾ ಚೆನ್ನಾಗಿ ವಿವರಿಸಿದ್ದಾರೆ.

ಅಂದಹಾಗೆ, ಒಟಿಟಿ ಫ್ಲಾಟ್ ಫಾರ್ಮ್ ಗಳು ಅಶ್ಲೀಲತೆಯನ್ನು ಪ್ರಚಾರ ಮಾಡುತ್ತದೆ ಹಾಗೂ ಇದನ್ನು ನಮ್ಮ ದೇಶದಲ್ಲಿ ನಿಯಂತ್ರಿಸಲು ಯಾವುದೇ ಕಾರ್ಯವಿಧಾನಗಳಿಲ್ಲ ಎಂದು ಕೇಂದ್ರ ಸರ್ಕಾರ ಕಾನೂನು ತರಲು‌ ಮುಂದಾಗಿದೆ. ನಮಗೇ ಗೊತ್ತಿಲ್ಲದ ಹಲವಾರು ವಿಷಯಗಳನ್ನು Social Dilemma ತಿಳಿಸಿದೆ. ಆದ್ದರಿಂದ ಆಸಕ್ತಿ ಇದ್ದವರು ಬಿಡುವು ಮಾಡಿಕೊಂಡು ನೋಡಿ.

LEAVE A REPLY

Please enter your comment!
Please enter your name here