ಕವನ

  • ಶಿಕ್ರಾನ್ಶರ್ಫುದ್ದೀನ್ ಮನೆಗಾರ್
    ಪಾಂಡೇಶ್ವರ್, ಮಂಗಳೂರು

ಬದುಕು ನನ್ನ, ಪಯಣವೂ ನನ್ನ,
ವಿಜಯವೂ ನನ್ನ, ಶ್ಲಾಘನೆಯೂ ನನ್ನ,
ಎಲ್ಲವೂ ನನ್ನದೆಂದು ಕಾಣುತ್ತ ಮುಂದೆ ಸಾಗಿದೆ!

ತೊಟ್ಟಿಲು ತೊರೆದು, ಮೆಟ್ಟಿಲು ಏರಿದೆ,
ಕುರುಡು ಜಗತ್ತಿನ ಕಣ್ಮಣಿಯೂ ಆದೆ,
ರಾಜ ಘನದ ನಡಿಗೆ ನಡೆಯುತ್ತ ಮುಂದೆ ಸಾಗಿದೆ!

ತುಂಬು ಯವ್ವನದ ಕಾಮು ಕತೆಯ ನಶೆಯನು ಏರಿಸಿದೆ,
ಕೌಮಾರ್ಯದೆಯ ಕನ್ಯೆಯನು ಅಂತಃಪುರದಲ್ಲಿ ಸೇರಿಸಿದೆ,
ಬದುಕಿನ ನೈಜ ಉದ್ದೇಶ ಮರೆತು ಮರೆಸುತ್ತ ಮುಂದೆ ಸಾಗಿದೆ!

ಸಣ್ಣಪುಟ್ಟ ತಪ್ಪುಗಳಿಗೂ ಹೀನಾಯವಾಗಿ ಹಿಯ್ಯಾಳಿಸಿದೆ,
ತೋಳು ಬಲದಲ್ಲಿ ಹೆತ್ತ ತಾಯಿಯನ್ನೂಸೋಲಿಸಿದೆ,
ಬಲಿಷ್ಠ ತಾಕತ್ತು ಪ್ರದರ್ಶಿಸುತ್ತ, ಹೂಂಕರಿಸುತ್ತ ಮುಂದೆ ಸಾಗಿದೆ!

ಬಲುಸಣ್ಣ ನಷ್ಟವನ್ನೂ ತಲೆ ಬಾಗದೆ ನಿರಾಕರಿಸಿದೆ,
ತುತ್ತುಅನ್ನಕ್ಕಾಗಿ, ಮುತ್ತುಕನ್ನ ಹಾಕಿದೆ,
‘ಸಾಯುವವರೆಗೆ ಬದುಕು‘ ಎನ್ನುತ್ತ ಮುಂದೆ ಸಾಗಿದೆ!

ಮುಪ್ಪು ಮುನಿಸಿನಲ್ಲಿ ಕಳೆದೆ, ಹಾಗೆಯೇ ಹಾಸಿಗೆ ಹಿಡಿದೆ,
ನಾಲಗೆಯ ಲಗಾಮು ಬಿಗಿಯದೇ ಮಕ್ಕಳಿಗೆ ಹಗಲಿರುಳು ಕಾಡಿದೆ,
ಕಾಲಚಕ್ರದಲ್ಲಿ ಸಿಲುಕಿ ಅಂದು ನಾನು ದಿವ್ಯದೆಡೆಗೆ ಪಯಣ ಬೆಳೆಸಿದೆ!

ತೀರಿಹೋಗುವುದರಲ್ಲಿ ದಫನಗೊಳಿಸಿದರು ಕವಿದ ಕತ್ತಲ ಹೊಂಡದಲಿ,
ಕೇಳಿದರಲ್ಲಿ ಮಾಡಿದೆಯೇನು ನೀನು ಅನುಗ್ರಹಿಸಿದ ಇಹದ ಬದುಕಿನಲ್ಲಿ?
ಉತ್ತರಿಸಲಾಗದೆ ಪಶ್ಚಾತ್ತಾಪ ಪತ್ತೆ; ಮರು ಅವಕಾಶಕ್ಕಾಗಿ ಇಚ್ಚಿಸಿದೆ…

ಆದರೇನು? ಕಾಲ ಮಿಂಚಿಹೋಗಿತ್ತು…!

LEAVE A REPLY

Please enter your comment!
Please enter your name here