ಲೇಖಕರು : ಜಿಶಾನ್ ಅಖಿಲ್ ಮಾನ್ವಿ.

ಮೊಟ್ಟ ಮೊದಲು ಟಿಪ್ಪು ಸುಲ್ತಾನ್ ಅವನನ್ನು ಮುಸ್ಲಿಂ ರಾಜ ಅಂತ ಬಿಂಬಿಸುವುದೇ ತಪ್ಪು. ಆತ ಒಬ್ಬ ರಾಜ ಅಷ್ಟೇ!ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ, ವೀರ ವನಿತೆ ಓಬವ್ವಳ ಹಾಗೆ ಟಿಪ್ಪು ಕೂಡ ನಮ್ಮ ನಾಡಿನ ಸ್ವಾತಂತ್ರಕ್ಕಾಗಿ ಹೋರಾಡಿದಾತ. ಟಿಪ್ಪು ಹೆಸರಲ್ಲಿ ಕೆಟ್ಟ ರಾಜಕೀಯ ಸಲ್ಲದು.

ಸಂಗೊಳ್ಳಿ ರಾಯಣ್ಣ ಒಬ್ಬ ಹಿಂದೂ ಅದ್ಕಕ್ಕಾಗಿ ಬರೆ ಹಿಂದೂಗಳೇ ಅವನ ಜಯಂತಿಯನ್ನು ಆಚರಿಸಬೇಕು ಎನ್ನುವುದು ಎಷ್ಟು ಅಪ್ರಸ್ತುತ ಮತ್ತು ಮೂರ್ಖತನವೋ, ಟಿಪ್ಪು ಒಬ್ಬ ಮುಸ್ಲಿಂ ಅದಕ್ಕಾಗಿ ಮುಸ್ಲಿಮರು ಅವನ ಜಯಂತಿ ಮಾಡ್ತಾರೆ/ಮಾಡಬೇಕು ಎನ್ನುವುದು ಸಹ ಅಷ್ಟೇ ಮೂರ್ಖತನ.

ಕಾಂಗ್ರೆಸ್ ಸರಕಾರ ಟಿಪ್ಪು ಜಯಂತಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಚರಿಸಬೇಕಾಗಿತ್ತು ಅದನ್ನು ಬಿಟ್ಟು ಅಲ್ಪಸಂಖ್ಯಾತ ಇಲಾಖೆಯಿಂದ ಆಚರಿಸಿ ಅದನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸಿದ್ದು ತಪ್ಪು, ಅದನ್ನೇ ಬಿಜೆಪಿ “ಮುಸ್ಲಿಂ ಓಲೈಕೆ” ಅಂತ ಹೇಳುತ್ತಲೇ ದ್ವೇಷ ರಾಜಕಾರಣ ಮಾಡುತ್ತ, ಅಧಿಕಾರಕ್ಕೆ ಬಂದ ತಕ್ಷಣ ಅದನ್ನು ರದ್ದು ಪಡಿಸಿತು. ಈ ಎರೆಡು ಪಕ್ಷದ ನಿರ್ಧಾರಗಳ ನಡುವೆ ವಿವಾದಕ್ಕೆ ಸಿಲುಕ್ಕಿದ್ದು ಟಿಪ್ಪು. ಜನರ ದಾರಿ ತಪ್ಪಿಸಿದ್ದು ದ್ವೇಷ ಪೂರಿತ ಮನಸ್ಸುಗಳು, ಮೈಸೂರಿನ ಮಾಜಿ ಪತ್ರಕರ್ತರು ಹಾಗೂ ಹಾಲಿ ಸಂಸದರು ಬರದ್ರೂ ಕೊಡಗಿನ ಅರಸ ಮಡಿಕೇರಿಯಲ್ಲಿ ಓಂ ಕಾರೇಶ್ವರ ದೇವಸ್ಥಾನ ಕಟ್ಟಿಸಿದ ನಂತರ ಅದರ ಮೇಲಿರುವ ಕಳಸವನ್ನು ತೆಗೆದು ಅದನ್ನು ಗುಂಬದ್ ಮಾದರಿಯಲ್ಲಿ ನಿರ್ಮಿಸಿದ, ಯಾಕಂದ್ರೆ ಅದು ಗುಂಬದ್ ಮಾದರಿಯಲ್ಲಿದ್ರೆ ಟಿಪ್ಪು ಮಸೀದಿ ಅಂದುಕೊಂಡು ಹೊಡೆಯೋದಿಲ್ಲ. ಅಂದ್ರೆ ಟಿಪ್ಪು ಅಷ್ಟರ ಮಟ್ಟಿಗ್ಗೆ ದೇವಸ್ಥಾನಗಳನ್ನು ಧ್ವಂಸ ಮಾಡಿದ ಅಂತ.

ಸಮಸ್ಯೆ ಏನಂದ್ರೆ ನಮ್ಮ ಹಾಲಿ ಸಂಸದರು ಓದಿದ್ದು ಯಾವ ಇತಿಹಾಸದ ಪುಸ್ತಕ ಅಂತೇಳಿ ಗೊತ್ತಿಲ್ಲ, ಮಡಿಕೇರಿಯಲ್ಲಿ ಓಂ ಕಾರೇಶ್ವರ ದೇವಸ್ಥಾನ ನಿರ್ಮಾಣ ಆಗಿದ್ದು 1820 ರಲ್ಲಿ ಮತ್ತು ಟಿಪ್ಪು ಹುತಾತ್ಮನಾದದ್ದು 1799ರಲ್ಲಿ. ಈ ರೀತಿಯ ಇನ್ನು ನೂರಾರು ಸುಳ್ಳುಗಳನ್ನು ಹೇಳಿ ಟಿಪ್ಪುವಿನ ವ್ಯಕ್ತಿತ್ವವನ್ನು ಕ್ರಿಮಿನಲೈಜ್ ಮಾಡಲಾಯಿತು. ಟಿಪ್ಪು ತನ್ನ ಸಾಮ್ರಾಜ್ಯವನ್ನು ರಕ್ಷಿಸಿಕೊಳ್ಳಲು ಬ್ರಿಟಿಷರ ವಿರುದ್ಧ ಹೋರಾಡಿದ, ತನ್ನ ಅಕ್ಕ ಪಕ್ಕದಲ್ಲಿರುವ ರಾಜರುಗಳಿಗಿಂತ ದೊಡ್ಡ ಶತ್ರು ಬ್ರಿಟಿಷರು ಎಂದು ನಂಬಿ, ಎಲ್ಲಾರನ್ನು ಒಟ್ಟುಗೂಡಿಸಿಕೊಂಡು ಬ್ರಿಟಿಷರನ್ನು ಒದ್ದೋಡಿಸಬೇಕೆಂದು ಪಣತೊಟ್ಟಿದವ. ಇದೆಲ್ಲವನ್ನು ಗಾಳಿಗೆ ತೂರಿ ಟಿಪ್ಪು ಹಿಂದೂ ವಿರೋಧಿ, ಮಾತಾಂಧ ಅಂತೆಲ್ಲಾ ಹೇಳಿ, ಟಿಪ್ಪು ಜಯಂತಿಯಂದರೆ ಮುಸ್ಲಿಮರು ಆಚರಿಸುವ ಜಯಂತಿ ಎನ್ನುವ ಹಾಗೆ ಬಿಂಬಿಸಲಾಯಿತು. ಟಿಪ್ಪುವಿನ ಹೆಸರಲ್ಲಿ ಶವಗಳ ಮೇಲು ರಾಜಕೀಯದಾಟ ಆಡಲಾಯಿತು.

ಇದರೆಲ್ಲಾದರ ಆಚೆ ನಾವುಗಳು ಅರ್ಥ ಮಾಡಿಕೊಳ್ಳುವುದೇನೆಂದರೆ, ಮನಸ್ಸುಗಳನ್ನು ಒಡೆದು ರಾಜಕೀಯ ಮಾಡುವವರಿಗೆ ಟಿಪ್ಪು ಒಂದು ನೆವ ಮಾತ್ರ, ಅವರ ಮೂಲ ಉದ್ದೇಶ ಟಿಪ್ಪುವಲ್ಲ, ಟಿಪ್ಪುವಿನ ಜಾಗದಲ್ಲಿ ಇನ್ನೊಬ್ಬರು ಇದ್ರು ಅವರು ಹೀಗೆ ಮಾಡುತ್ತಿದ್ರೂ, ಅವರ ಉದ್ದೇಶ ಈ ದೇಶದ ಮೂಲ ಸಿದ್ದಾಂತವನ್ನೇ ಬುಡಮೇಲು ಮಾಡುವುದು. ಅಂತಹವರು ಈ ದೇಶದ ನೈಜ ಇತಿಹಾಸವನ್ನೇ ಒಪ್ಪಿಕೊಳ್ಳಲು ಸಿದ್ಧರಿಲ್ಲವೆನ್ನುವುದು ದುರಂತ.

LEAVE A REPLY

Please enter your comment!
Please enter your name here