ಲೇಖಕರು: ಮೌ.ವಹಿದುದ್ದೀನ್ ಖಾನ್

ಅನುವಾದಕರು: ತಲ್ಹಾ ಕೆ.ಪಿ

ವಾಯು ಸೇನೆಯ ಮುಖಸ್ಥ, ಅಬ್ದುಲ್ ಲತೀಫ್ ಅವರು ವಿಮಾನ ಹಾರಾಟ ಮಾಡುವುದರಲ್ಲಿ ಸುಮಾರು 40 ವರ್ಷಗಳ ಅನುಭವವನ್ನು ಹೊಂದಿದ್ದಾರೆ 25/8/1981 ರಷಿಯನ್ ನಿರ್ಮಿತ ಶಬ್ದಕ್ಕಿಂತಲೂ ವೇಗವಾಗಿ ಹರಡಬಲ್ಲ ಯುದ್ಧ ವಿಮಾನ ”ಮಗ್ 25 ” ಯನ್ನು ಪರೀಕ್ಷಾರ್ಥವಾಗಿ ಹರಿಸಿ ಅರ್ಧ ಗಂಟೆಯ ಹಾರಾಟದ ನಂತರ ಕೆಳಗಿಳಿದು ತನ್ನ ಅನುಭವವನ್ನು ಈ ರೀತಿ ವಿವರಿಸಿದರು.

”the flight made even the Himalayas looks small ” ನಮ್ಮ ಹಾರಾಟದ ಎದುರು ಹಿಮಾಲಯವು ಚಿಕ್ಕದಾಗಿ ಗೋಚರಿಸುತ್ತಿತ್ತು” ಶಬ್ದಕ್ಕಿಂತಲೂ ವೇಗವಾಗಿ ಹರಡುವ ವಿಮಾನದಲ್ಲಿ ಕುಳಿತ ವ್ಯಕ್ತಿಗೆ ಹಿಮಾಲಯ ಶಿಖರವು ಕ್ಷುಲ್ಲಕವಾಗಿ ಗೋಚರಿಸುತ್ತದೆ ಮತ್ತು ತನ್ನೊಳಗೆ ಶ್ರೇಷ್ತ್ರತೆಯ ವಿಚಿತ್ರ ಭಾವನೆಯನ್ನು ಉಂಟುಮಾಡುತ್ತದೆ. ಈ ತಪ್ಪುಕಲ್ಪನೆಯು ವಿಮಾನವು ಹಿಮಾಲಯದ ಚಿಕ್ಕ ಶಿಖರಕ್ಕೆ ಡಿಕ್ಕಿ ಹೊಡೆದರೆ ಕೊನೆಗೊಳ್ಳುತ್ತದೆ. ವಿಮಾನವು ಶಿಖರಕ್ಕೆ ತಾಗಿ ದೊಡನೆ ಬೇಕಿ ಹತ್ತಿ ವಿಮಾನ ಮತ್ತು ಅದರಲ್ಲಿರುವ ಪ್ರಯಾಣಿಕ, ಇಬ್ಬರೂ ಬೂದಿಯ ರಾಶಿಯಾಗಿ ಮಾರ್ಪಟ್ಟು ಅಸ್ತಿತ್ವವೇ ಇಲ್ಲದರೀತಿಯಲ್ಲಿ ನಿರ್ನಾಮವಾಗಿಬಿಡುತ್ತಾರೆ ಈ ಲೋಕದಲ್ಲಿ ಯಾರಿಗಾದರೂ ಶ್ರೇಷ್ಟ್ರತೆ ಲಭಿಸಿದರೆ ಅವರು ಮರುಕ್ಷಣವೇ ತಪ್ಪುಕಲ್ಪನೆಗೆ ಒಳಗಾಗುತ್ತಾರೆ. ಪ್ರಪಂಚದ ಎಲ್ಲ ಔನತ್ಯವು ಹೇಗೆಂದರೆ, ಒಬ್ಬ ಯಾತ್ರಿಕನ ಶಬ್ದಕ್ಕಿಂತಲೂ ವೇಗವಾಗಿ ಹರಡುವ ವಿಮಾನದಲ್ಲಿ ಕುಳಿತು ಶಿಖರವನ್ನು ನೋಡಿದಂತೆ, ಅಂತಹಾ ಯಾತ್ರಿಕನಿಗೆ ಇದು ಒಂದು ಕಾಲ್ಪನಿಕ ವಂಚನ್ರಯಲ್ಲದೆ ಬೇರೇನೂ ಅಲ್ಲ.ಏಕೆಂದರೆ ಸಾಂಧರ್ಭಿಕವಾದ ಚಿಕ್ಕಚಿಕ್ಕ ವಸ್ತುಗಳು ಕೊಡ ಇದರ ಅಸ್ತಿತ್ವ ಎನ್ನು ಇಲ್ಲ ಎಂದು ಸಾಬೀತು ಪಡಿಸಬಹುದು. ಲೋಕದಲ್ಲಿ ಯಾವುದೇ ವಸ್ತು ದೊರೆಯಲು ಬಹಳಷ್ಟು ಅನುಕೂಲಕರ ವಾತಾವರಣದ ಅಗತ್ಯವಿದೆ. ಅವುಗಳನ್ನು ಒದಗಿಸಲು ಮಾನವನಿಂದ ಅಸಾಧ್ಯ. ಆದರೆ ದೇವಾನು ಮಾತ್ರ ಎಲ್ಲ ಅನುಕೂಲಕರ ವಾತಾವರಣವನ್ನು ಒಂದುಗೂಡಿಸಿ ಒಂದು ಸಂಭವವನ್ನು ಹೊರತರುತ್ತಾನೆ. ಆದರೆ ಈ ಎಲ್ಲ ವಾತಾವರಣಗಳ ಮೇಲೆ ಬಾಹ್ಯವಾದ ಪರದೆಯನ್ನು ಕಾಣಬಹುದು. ದೇವನ ಅಸ್ತಿತ್ವವನ್ನು ಮತ್ತು ಮಾನವನ ದಾಸ್ಯತನವನ್ನು ಒಪ್ಪಿಕೊಳ್ಳುವ ವಾಸ್ತವಿಕ ಮಾರ್ಗವನ್ನು ಕಂಡುಕೊಳ್ಳುವುದು ಮಾನವನಿಂದ ಅಪೇಕ್ಷಿಸಲಾಗಿದೆ.

ಬಾಹ್ಯವಾಗಿ ಅದನ್ನು ತನ್ನ ಪರಿಶ್ರಮದಿಂದಾಗಲಿಸಿಕೊಂಡಾಗಲೂ ದೇವನ ಅನುಗ್ರಹವೆಂದು ಭಾವಿಸಿಕೊಳ್ಳುವನು. ಅವನು ತಾನೆಷ್ಟು ಶ್ರೇಷ್ಟ್ರನಾದರೂ ತಾನು ನಿಕೃಷ್ಠನೆಂದು ಭಾವಿಸಿಕೊಳ್ಳುವನು. ತಾನೆಷ್ಟು ಔನತ್ಯದಲ್ಲಿ ಹರಡುತ್ತಿದರೂ, ತನ್ನ ನೆಲೆಯನ್ನು ಕೆಳಮಟ್ಟದಲ್ಲಿ ಕಂಡುಕೊಳ್ಳುವನು, ಇಲ್ಲಿನ ಎಲ್ಲ ಔನತ್ಯವನ್ನು ವೆತ್ಯಾಸವೆಂದು ಭಾವಿಸಿ, ಬಾಹ್ಯ ವಂಚನೆಯಿಂದ ಹೊರಬಂದು ಸತ್ಯವನ್ನು ಕಂಡುಕೊಳ್ಳುವನು. ಇದು ಮಾನವನ ನೈಜ್ಯ ಪರೀಕ್ಷೆಯಾಗಿದೆ, ಆದರೆ ಕೆಲವರು ಮಾತ್ರ ಈ ವಂಚನೆಗಳನ್ನು ತಡೆಯುವುದರಲ್ಲಿ ವಿಜಯಿಯಾಗುವರು.

LEAVE A REPLY

Please enter your comment!
Please enter your name here