ಲೇಖಕರು: ಮೌ.ವಹೀದುದ್ದೀನ್ ಖಾನ್

ಅನುವಾದ: ತಲ್ಹಾ ಕೆ.ಪಿ

ಈ ಲೋಕದಲ್ಲಿ ವಸ್ತುಗಳ ಎರಡು ರೋಪವಿದೆ ಒಂದು ಅಂತರಂಗ ಮತ್ತೊಂದು ಬಹಿರಂಗ. ಅಲ್ಲಿ ಪ್ರತೀ ವ್ಯಕ್ತಿಗೂ ತನ್ನ ಅಂತರಂಗದ ಅಸ್ತಿತ್ವದಲ್ಲಿ ಕೆಡುಕಣ್ಣಿಟ್ಟುಕೊಂಡು ತನ್ನ ನಾಲಿಗೆಯಿಂದ ಸುಂದರವಾದ ಶಬ್ದಗಳ ಉಚ್ಚಾರಣೆಯಿಂದ ತನ್ನ ಉತ್ತಮ ರೊಪವನ್ನು ವ್ಯಕ್ತ ಪಡಿಸಬಹುದು. ಅಂತ್ಯದಿನವು ಅಂತರಂಗ ಮತ್ತು ಬಹಿರಂಗದ ವ್ಯತ್ಯಾಸವ ಅಳಿಸಿಹಾಕಲೆಂದೇ ಬರುತ್ತಿದ್ದೆ. ಅಂತ್ಯದಿನದ ಪಯಣವು ಕಾಣುವ ಪರದೆಗಳನ್ನು ಹರಿದು ಹಾಕಿ ಪ್ರತೀ ಮನುಷ್ಯನ ಮೇಲಿರುವ ಸಿಪ್ಪೆಯನ್ನು ತೆಗೆದು ಹಾಕಿ ಆತನ ನಿಜವಾದ ಮತ್ತು ವಾಸ್ತವಿಕ ರೊಪವನ್ನು ಮುಂದೆ ತರಲಿದೆ.

ವಾಸ್ತವಿಕತೆಗಳ ಪರದೆ ತೆಗೆದು ಹಾಕುವ ಆ ದಿನವೂ ಎಷ್ಟೋ ವಿಚಿತ್ರವಾಗಿರಬಹುದು ಎಂದು ನ್ಯಾಯದ ಕುರ್ಚಿಯಲ್ಲಿ ಕುಳಿತಿರುವ ಎಷ್ಟೋ ಜನರು ಅಂದು ಆ ರೋಪಗಳ ಸ್ಥಾನದಲ್ಲಿ ನಿಂತಿರುವುದನ್ನು ಕಾಣಬಹುದು. ಇಂದು ಮಾನ್ಯ ಸನ್ಮಾನ್ಯರೆಂದು ಗುರುತಿಸಲ್ಪಡುವ ಎಷ್ಟೋ ಮಂದಿಯು ಅಂದು ಕ್ರಿಮಿ ಕೀಟಗಳಿಗಿಂತಲೂ ಕೀಳಾಗಿ ಕಾಣುವರು. ಇಂದು ಎಲ್ಲ ಮಾತಿಗೂ ಉತ್ತಮವಾದ ಉತ್ತರವಿರುವವಳನು ಉತ್ತರವಿಲ್ಲದೆ ಮೂಕರಂತಾಗಿಬಿಡುವನು.

ಇಂದು ಒಬ್ಬನು ತನ್ನ ನೆರೆಕರೆಯವರನ್ನ ಉಪದ್ರವಿಸಿದರೂ ಆತ ಧಾರ್ಮಿಕ ಸಂಧರ್ಭದಲ್ಲಿ ಪಮುಖ ಕುರ್ಚಿಯಲ್ಲಿ ಆಸೀನನಾಗಬಹುದು. ಒಬ್ಬ ವ್ಯಕ್ತಿಯು ತನ್ನ ವ್ಯಯಿಭಾವಿಕರಣದ ತೋರಿಕೆಗಾಗಿ ಕ್ರಿಯಾತ್ಮಕನಾಗಿ ಆತನಿಗೆ ಧಾರ್ಮ ಯೋಧನ ಹೆಸರು ಸಿಕ್ಕಿರಬಹುದು. ಓರ್ವನು ತಾನು ವ್ಯವಹರಿಸುವವರೊಂದಿಗೆ ಅನ್ಯಾಯದ ಮಾರ್ಗವನ್ನು ಆಯ್ಕೆ ಮಾಡಿರಬಹುದು ಆದರೆ ಆತನಿಗೆ ಶಾಂತಿ ಮತ್ತು ನ್ಯಾಯಾದ ಮಾರ್ಗವನ್ನು ಆಯ್ಕೆ ಮಾಡಿರಬಹುದು ಆದರೆ ಆತನಿಗೆ ಶಾಂತಿ ಮತ್ತು ನ್ಯಾಯದ ಸಂಭಾರಂಭದ ಅಧ್ಯಕ್ಷತೆ ವಹಿಸಲು ಕರೆಯಲೂ ಬಹುದು. ತನ್ನ ಯೇಕಾಂಗಿತನದಲ್ಲಿ ದೇವನನ್ನು ಎಂದು ನಿನಪಿಸದ ವ್ಯಕ್ತಿಯು ಜನ ಸಾಮಾನ್ಯರ ಸಭೆ ಸಂಧರ್ಭದಲ್ಲಿ ದೇವನ ಹೆಸರಿನ ಧ್ವಜವನ್ನು ಎತ್ತುವವನೆಂದು ಅರಿಯಲ್ಪಡಬಹುದು. ಓರ್ವನಿಗೆ ಅಕ್ರಮಕೆಒಳಪಟ್ಟ ವ್ಯಕ್ತಿಯು ರಕ್ಷಣೆಯ ಭಾವನೆ ಆತನಲ್ಲಿ ಇಲ್ಲದಿದ್ದರೂ, ಆತನನ್ನು ಪತ್ರಿಕೆಗಳು ಮರ್ದಿತನ ರಕ್ಷಕನೆಂದು ಬಿಂಬಿಸಿರಬಹುದು.

ಪ್ರತೀ ವ್ಯಕ್ತಿಯ ವಾಸ್ತವದ್ ಬಗ್ಗೆ ದೇವನಿಗೆ ಅರಿವು ಇದೆ ಆದರೆ ಈ ಲೋಕದಲ್ಲಿ ದೇವಾನು ವಾಸ್ತವನ್ನು ಮುಚ್ಚಿಟ್ಟಿದ್ದಾನೆ. ಪರಲೋಕದಲ್ಲಿ ಆತ ಎಲ್ಲರ ವಾಸ್ತವವನ್ನು ತೆರೆದಿಡುವನು. ದೇವನ ತಕ್ಕಡಿಯು ನಿಂತು ಪ್ರತೀ ವ್ಯಕ್ತಿಯನ್ನು ಯಾರೂ ಏನಾಗಿದ್ದರೂ ಮತ್ತು ಯಾರೂ ಏನಾಗಿರಲಿಲ್ಲ ಎಂಬುದನ್ನು ತೂಕಮಾಡಿ ನೋಡುವ ಸಮಯವೂ ಬರಲಿದೆ. ಆ ಸಮಯದ ಆಗಮನವು ದೈವಿಚ್ಛೆಯಾಗಿದೆ. ಯಾರಿಂದಲೂ ಅದನ್ನು ತಡೆಯಲಾಗದು ಮತ್ತು ಯಾರೂ ಅವರಿಂದ ರಕ್ಷಣೆ ಹೊಂದಲಾರರು.

ಇಂದು ತನ್ನನ್ನು ದೇವರ ತಕ್ಕಡಿಯಲ್ಲಿ ನಿಲ್ಲಿಸುವವನು ಮಾತ್ರ ವಿಜಯಿಯಾಗುವನು. ಏಕೆಂದರೆ ನಾಳೆ ದೇವಾ-ತಕ್ಕಡಿಯಲ್ಲಿ ನಿಲ್ಲಿಸಲ್ಪಡುವ ವ್ಯಕ್ತಿಗೆ ವಿನಾಶವೇ ಹೊರತು ಬೇರೇನೂ ಲಭಿಸುವುದಿಲ್ಲ.

LEAVE A REPLY

Please enter your comment!
Please enter your name here