ವರದಿ : ಅಸದುಲ್ಲಾ ಖಾನ್ ಜಾಕಿ
ಹಲವು ವರ್ಷಗಳ ಬೇಡಿಕೆ ಈಡೇರಿಸಲು ವಿದ್ಯಾರ್ಥಿಗಳ ಒತ್ತಾಯ
ಬೀದರ್ , ಜಿಲ್ಲೆಯ ವಿಶ್ವಗುರು ಅಣ್ಣ ಬಸವಣ್ಣನವರ ಕರ್ಮಭೂಮಿಯಲ್ಲಿ ಸರ್ಕಾರಿ ಯೂನಾನಿ ಮೇಡಿಕಲ್ ಕಾಲೇಜು ಸ್ಥಾಪನೆ ಮಾಡಬೇಕು ಎಂದು ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಜಸನ್ ಬೀದರ್ ನಗರ ಘಟಕ ಕಳೆದ 2017 ರಿಂದ ರಾಜ್ಯ ಸರ್ಕಾರಕ್ಕೆ ಬೇಡಿಕೆ ಮಂಡಿಸುತ್ತಲೇ ಬರತಿದೆ. ಆದರೂ ರಾಜ್ಯ ಸರ್ಕಾರ ಮಾತ್ರ ಕ್ಯಾರೇ ಅನ್ನುತ್ತಿಲ್ಲ. ರಾಜ್ಯ ಸರ್ಕಾರ ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಜೆಸನ್ (ಎಸ್.ಐ.ಓ.) ಬೀದರ್ ಜಿಲ್ಲಾ ಘಟಕದ ಪ್ರಮುಖ ಈ ಬೇಡಿಕೆ ಈಡೇರಿಸುವ ಮೂಲಕ ಈ ಭಾಗದ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ನಾಂದಿ ಹಾಡಬೇಕು ಎಂದು ಎಸ್.ಐ.ಓ. ಬೀದರ್ ಜಿಲ್ಲಾ ಘಟಕದ ಅಧ್ಯಕ್ಷರಾದ ಅಸದುಲ್ಲಾ ಖಾನ್ ಜಾಕಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯುನಾನಿ ಕೋರ್ಸುಗಳಲ್ಲಿ ಉರ್ದು ಭಾಷೆ ವಿಷಯ ಕಡ್ಡಾಯವಾಗಿರುತ್ತದೆ. ಹೀಗಾಗಿ ಬೀದರ್ ಜಿಲ್ಲೆಯ ಬಸವಕಲ್ಯಾಣ ಮತ್ತು ಬೀದರ ತಾಲೂಕಿನಲ್ಲಿ ಅಲ್ಪಸಂಖ್ಯಾತರ ಸಂಖ್ಯೆ ಅಧಿಕವಿದೆ. ನಿಜಾಂರ ಕಾಲದಿಂದಲೂ ಬೀದರ್ ಜಿಲ್ಲೆಯಲ್ಲಿ ಹಕೀಮ್ ಪದ್ಧತಿಯ ಚಿಕಿತ್ಸೆ ಇಂದಿಗೂ ಜಾರಿಯಲ್ಲಿದೆ. ಅಲ್ಲದೇ ಬೀದರ ಜಿಲ್ಲೆಯಲ್ಲಿ ಯುನಾನಿ ಗಿಡಮೂಲಿಕೆಗಳು ಬೆಳೆಯುವ ಉತ್ತಮ ಪರಿಸರ ಹೊಂದಿದೆ. ಆದ್ದರಿಂದ ಬೀದರ್ ಜಿಲ್ಲೆಯ ಬಸವಕಲ್ಯಾಣ ನಗರದಲ್ಲಿ ಸರ್ಕಾರಿ ಯೂನಾನಿ ಕಾಲೇಜು ಹಾಗೂ ಆಸ್ಪತ್ರೆ ಪ್ರಾರಂಭಿಸಬೇಕು ಎಂದು ಕೋರಿದ್ದಾರೆ.
ಕಲ್ಯಾಣ (ಹೈದ್ರಾಬಾದ) ಕರ್ನಾಟಕ ಪ್ರದೇಶದ ಬೀದರ್ ಜಿಲ್ಲೆಯ ಬಸವಕಲ್ಯಾಣ ನಗರದಲ್ಲಿ ಸರ್ಕಾರಿ ಯೂನಾನಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಪ್ರಾರಂಭಿಸುವಂತೆ ದಿನಾಂಕ 07-03-2017 ರಂದು ಬೆಂಗೂರಿನ ಆರ್ಯುವೇದ, ಯೋಗ ಮತ್ತು ನ್ಯಾಚುರೋಪತಿ, ಯುನಾನಿ ಸಿದ್ಧ ಮತ್ತು ಹೋಮಿಯೋಪತಿ (ಆಯುಷ್) ನಿರ್ದೇಶನಾಲಯದ ನಿರ್ದೇಶಕರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಬರೆದ ಮನವಿ ಪತ್ರದಲ್ಲಿ ಕೋರಿದ್ದರೂ ರಾಜ್ಯ ಸರ್ಕಾರ ಯಾವುದೇ ರೀತಿಯ ಪ್ರತಿಕ್ರಿಯೇ ನೀಡುತ್ತಿಲ್ಲವೇಕೆ? ಎಂದು ಪ್ರಶ್ನಿಸಿದ್ದಾರೆ.
ಪ್ರಸ್ತುತ ಬೆಂಗಳೂರಿನಲ್ಲಿ ಏಕೈಕ ಸರ್ಕಾರಿ ಯೂನಾನಿ ಸರ್ಕಾರಿ ವೈದ್ಯಕೀಯ ಕಾಲೇಜು ಕಾರ್ಯನಿರ್ವಹಿಸುತಿದ್ದು, ಈ ಕಾಲೇಜಿನಲ್ಲಿ 60 ವಿದ್ಯಾರ್ಥಿಗಳ ಪ್ರವೇಶ ಮೀತಿ ನಿಗದಿಪಡಿಸಲಾಗಿದೆ. ಕಲ್ಯಾಣ (ಹೈದ್ರಾಬಾದ) ಕರ್ನಾಟಕ ಭಾಗದ ಬೀದರ ಜಿಲ್ಲೆಯ ಬಸವಕಲ್ಯಾಣ ನಗರದಲ್ಲಿ ಯುನಾನಿ ವೈದ್ಯ ಪದ್ಧತಿ ಬೇಡಿಕೆಯು ಅಪಾರವಾಗಿದ್ದು, ಈ ಹಿಂದುಳಿದ ಕಲ್ಯಾಣ (ಹೈದ್ರಾಬಾದ) ಕರ್ನಾಟಕ ಪ್ರದೇಶದ ಬಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸರ್ಕಾರಿ ಯುನಾನಿ ವೈದ್ಯಕೀಯ ಕಾಲೇಜು ಪ್ರಾರಂಭಿಸುವಂತೆ ಕರ್ನಾಟಕ ಯುನಾನಿ ವೇಲ್ಫರ್ ಫೌಂಡೇಷನ್ ಟ್ರಸ್ಟ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದೆ ಎಂದು ಉಲ್ಲೇಖಿಸಿದ್ದಾರೆ ಎಂದು ತಿಳಿಸಿದ್ದಾರೆ.
ಹೊಸದಾಗಿ ಸರ್ಕಾರಿ ಯುನಾನಿ ವೈದ್ಯಕೀಯ ಮಹಾವಿದ್ಯಾಲಯವನ್ನು ಪ್ರಾರಂಭಿಸಲು ಸಿ.ಸಿ.ಐ.ಎಂ. ಮಾರ್ಗಸೂಚಿಗಳನ್ನು ಅನುರಸಿ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕಾಗಿರುತ್ತದೆ. ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದರೊಂದಿಗೆ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ಸಿ.ಸಿ.ಐ.ಎಂ. ನವದೆಹಲಿ ಇವರಿಂದ ಅನುಮತಿ ಸಹ ಪಡೆಯಬೇಕಾಗಿರುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಮನವಿ ಪತ್ರದಲ್ಲಿ ವಿವರಿಸಲಾಗಿದೆ ಎಂದು ತಿಳಿಸಿದ್ದಾರೆ.
ಮಹಾವಿದ್ಯಾಲಯವನ್ನು ಪ್ರಾರಂಭಿಸಲು 100 ಹಾಸಿಗೆಗಳ ಆಸ್ಪತ್ರೆಯನ್ನು ಪ್ರಾರಂಭಿಸುವುದರೊಂದಿಗೆ ಅಗತ್ಯ ಕಟ್ಟಡ ನಿರ್ಮಾಣ, ಹುದ್ದೆಗಳ ಸೃಜನೆ, ಇನ್ನಿತರೆ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕಾಗಿರುತ್ತದೆ. ಈ ಸೌಲಭ್ಯಗಳನ್ನು ಕಲ್ಪಿಸಲು ಅಂದಾಜು 20 ಕೋಟಿ ರೂಪಾಯಿಗಳು ವೆಚ್ಚವಾಗಲಿದ್ದು, ಈ ಅನುದಾನವನ್ನು ಕಲ್ಯಾಣ (ಹೈದ್ರಾಬಾದ) ಕರ್ನಾಟಕ ಅಭಿವೃದ್ಧಿಗಾಗಿ ಮೀಸಲಿಟ್ಟ ಅನುದಾನದಲ್ಲಿ ಒದಗಿಸಬಹುದಾಗಿದೆ. 2017-18 ನೇ ಸಾಲಿನಲ್ಲಿ ಈ ಯೋಜನೆಯನ್ನು ಪ್ರಾರಂಭಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದ್ದಲ್ಲಿ ವಿಸ್ತøತವಾದ ಪ್ರಸ್ತಾವನೆಯನ್ನು ತದನಂತರ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿಸಿದ್ದಾರೆ.
ಮಹಾವಿದ್ಯಾಲಯವನ್ನು ಪ್ರಾರಂಭಿಸುವ ಬಗ್ಗೆ ಬೆಂಗಳೂರಿನ ಆಯುಷ್ ನಿರ್ದೇಶನಾಲಯ, (ಯುನಾನಿ) ಉಪ ನಿರ್ದೇಶಕರು ನೀಡಿರುವ ತಾಂತ್ರಿಕ ಅಭಿಪ್ರಾಯ ಸಿ.ಸಿ.ಐ.ಎಂ. ಮಾರ್ಗಸೂಚಿಗಳ ಪ್ರತಿಯನ್ನು ಈ ಮನವಿ ಪತ್ರದೊಂದಿಗೆ ಮುಂದಿನ ಕ್ರಮಕ್ಕಾಗಿ ಮೂರು ವರ್ಷಗಳಾದರೂ ರಾಜ್ಯ ಸರ್ಕಾರ ಈ ಬಗ್ಗೆ ಗಂಭೀರ ಚಿಂತನೆ ಮಾಡಿಲ್ಲವೇಕೆ? ಎಂಬುವುದು ಕಲ್ಯಾಣ (ಹೈದ್ರಾಬಾದ) ಕರ್ನಾಟಕ ಪ್ರದೇಶದ ಜನರಿಗೆ ಯಕ್ಷಪ್ರಶ್ನೆಯಾಗಿ ಕಾಡುತಿದೆ ಎಂದು ತಿಳಿಸಿದ್ದಾರೆ.
ಹೈದ್ರಾಬಾದ ಕರ್ನಾಟಕ ಪ್ರದೇಶವನ್ನು ಕಲ್ಯಾಣ ಕರ್ನಾಟಕ ಪ್ರದೇಶವೆಂದು ನಾಮಕರಣ ಮಾಡಿದಂತೆ ರಾಜ್ಯ ಸರ್ಕಾರ ಈ ಭಾಗದ ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕ ಪ್ರದೇಶದ ಬೀದರ ಜಿಲ್ಲೆಯ ಬಸವಕಲ್ಯಾಣ ನಗರದಲ್ಲಿ ಸರ್ಕಾರಿ ಯೂನಾನಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಪ್ರಾರಂಭಿಸಬೇಕು ಎಂದು ಸ್ಟೂಡೆಂಟ್ ಇಸ್ಲಾಮಿಕ್ ಸಂಘಟನೆ (ಎಸ್.ಐ.ಓ) ಬಸವಕಲ್ಯಾಣ ಘಟಕದ ಬಹುದಿನ ಬೇಡಿಕೆಯನ್ನು ರಾಜ್ಯ ಸರ್ಕಾರ ಈಡೇರಿಸುವ ಮುಖಾಂತರ ಕಲ್ಯಾಣ ಕರ್ನಾಟಕ ಪ್ರದೇಶದ ಕಲ್ಯಾಣಕ್ಕೆ ನಾಂದಿ ಹಾಡಬೇಕು ಎಂಬವುದು ಎಸ್.ಐ.ಓ. ಬೀದರ ಘಟಕದ ಆಶಯವಾಗಿದೆ ಎಂದು ತಿಳಿಸಿದ್ದಾರೆ.
ಈ ಮನವಿಗೆ ಸ್ಪಂದಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ ಅವರು ದಿನಾಂಕ 14-03-2017 ರಂದು ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಯೋಜನಾ ಕಾರ್ಯಕ್ರಮದ ಅಧಿಕಾರಿಗಳಾದ ಶ್ರೀಮತಿ ರೇಣುಕಾ ಚಿದಂಬರ ಅವರಿಗೆ ಬರೆದ ಪತ್ರದಲ್ಲಿ ಕಲ್ಯಾಣ (ಹೈದ್ರಾಬಾದ) ಕರ್ನಾಟಕ ಪ್ರದೇಶದ ಬೀದರ ಜಿಲ್ಲೆಯ ಬಸವಕಲ್ಯಾಣ ನಗರದಲ್ಲಿ ಸರ್ಕಾರಿ ಯುನಾನಿ ವೈದ್ಯಕೀಯ ಕಾಲೇಜು ಹಾಗೂ 100 ಹಾಸಿಗೆಗಳ ಆಸ್ಪತ್ರೆ ಪ್ರಾರಂಭಿಸುವ ಪ್ರಸ್ತಾವನೆಯನ್ನು ಅನುಷ್ಠಾನಗೊಳಿಸಲು ಒದಗಿಸಿಕೊಳ್ಳಬಹುದಾದ 20 ಕೋಟಿ ರೂಪಾಯಿ ಅನುದಾನವನ್ನು ಕಲ್ಯಾಣ (ಹೈದ್ರಾಬಾದ) ಕರ್ನಾಟಕದ ಅಭಿವೃದ್ಧಿಗಾಗಿ ಮೀಸಲಿಟ್ಟ ಅನುದಾನದಲ್ಲಿ ಭರಿಸಲು 2017-18 ನೇ ಸಾಲಿನಲ್ಲಿ ಮಾನ್ಯ ಮುಖ್ಯಮಂತ್ರಿಯವರ ಆಯವ್ಯಯ ಭಾಷಣದಲ್ಲಿ ಹೊಸದಾಗಿ ಸೇರಿಸಿ, ರಾಜ್ಯ ವಲಯದ ಯೋಜನಾ ಕಾರ್ಯಕ್ರಮದಲ್ಲಿ ಅನುಷ್ಠಾನಗೊಳಿಸುವ ಬಗ್ಗೆ ತಮ್ಮ ಅಭಿಪ್ರಾಯ ನೀಡುವಂತೆ ಕೋರಿದ್ದರು ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಯೂನಾನಿ ವೈದ್ಯಕೀಯ ಕಾಲೇಜುಗಳಷ್ಟಿವೇ? ಎಂದು ದಿನಾಂಕ 23-03-2017 ರಂದು ಅಧಿವೇಶನದಲ್ಲಿ ಬೀದರ ಜಿಲ್ಲೆಯ ಬೀದರ ದಕ್ಷಿಣ ವಿಧಾನಸಭೆ ಶಾಸಕರಾದ ಅಶೋಕ ಖೇಣಿ ಅವರು ಕೇಳಿದ ಲಿಖಿತ ಪ್ರಶ್ನೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರು, ರಾಜ್ಯದಲ್ಲಿ 1 ಸರ್ಕಾರಿ, 3 ಅನುದಾನರಹಿತ ಖಾಸಗಿ ಕಾಲೇಜು ಸೇರಿ ಒಟ್ಟು 4 ಯುನಾನಿ ವೈದ್ಯಕೀಯ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ ಎಂದು ಉತ್ತರಿಸಿದ್ದಾರೆ, ಯುನಾನಿ ವೈದ್ಯಕೀಯ ಕಾಲೇಜು ಪ್ರಾರಂಭಿಸಲು ಮಾನದಂಡಗಳೇನು? ಎಂಬ ಶಾಸಕ ಪ್ರಶ್ನೆಗೆ ಸಚಿವರು, ಯುನಾನಿ ವೈದ್ಯಕೀಯ ಕಾಲೇಜುಗಳನ್ನು ಪ್ರಾರಂಭಿಸಲು ನವದೆಯಲಿಯ ಸೆಂಟ್ರೆಲ್ ಕೌನ್ಸಿಲ್ ಆಫ್ ಇಂಡಿಯನ್ ಮೆಡಿಸಿನ್ 2016ರಲ್ಲಿ ಮಾನದಂಡಗಳನ್ನು ನಿಗದಿಪಡಿಸಿದೆ ಎಂದು ಉತ್ತರಿಸಿದ್ದಾರೆ. ಬೀದರ ಜಿಲ್ಲೆಯಲ್ಲಿ ಯುನಾನಿ ವೈದ್ಯಕೀಯ ಕಾಲೇಜು ಪ್ರಾರಂಭಿಸುವ ಪ್ರಸ್ತಾವನೆಯು ಸರ್ಕಾರದ ಮುಂದಿದೆಯೇ? ಹಾಗಿದ್ದಲ್ಲಿ ಯಾವಾಗ ಪ್ರಾರಂಭಿಸಲಾಗುವುದು ಎಂಬ ಶಾಸಕರ ಪ್ರಶ್ನೆಗೆ ಸಚಿವರು, ಬೀದರ ಜಿಲ್ಲೆಯಲ್ಲಿ ಯುನಾನಿ ವೈದ್ಯಕೀಯ ಕಾಲೇಜು ಪ್ರಾರಂಭಿಸುವಂತೆ ಬೆಂಗಳೂರಿನ ಕರ್ನಾಟಕ ಯುನಾನಿ ವೇಲ್ಫರ್ ಫೌಂಡೇಷನ್‍ನವರು ಮನವಿ ಸಲ್ಲಿಸಿದ್ದು, ಸರ್ಕಾರದ ಹಂತದಲ್ಲಿ ಪರಿಶೀಲನೆಯಲ್ಲಿದೆ ಉತ್ತರಿಸಿದರು ಎಂದು ತಿಳಿಸಿದ್ದಾರೆ.
ದಿನಾಂಕ 12-02-2020 ರಂದು ಬೀದರ ಜಿಲ್ಲೆಯ ಬಸವಕಲ್ಯಾಣ ಶಾಸಕರಾಗಿದ್ದ ಬಿ. ನಾರಾಯಣರಾವ ಅವರು ವೈದ್ಯಕೀಯ ಶಿಕ್ಷಣ ಸಚಿವರಿಗೆ ಬರೆದ ಮನವಿ ಪತ್ರದ ಮೂಲಕ ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನಲ್ಲಿ ಸರ್ಕಾರಿ ಯುನಾನಿ ವೈದ್ಯಕೀಯ ಕಾಲೇಜು ಮಂಜೂರು ಮಾಡಬೇಕು ಎಂದು ವಿನಂತಿಸಿಕೊಂಡಿದ್ದರು ಎಂದು ತಿಳಿಸಿದ್ದಾರೆ.
ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕು ಕರ್ನಾಟಕ-ಮಹಾರಾಷ್ಟ್ರದ ಗಡಿ ಭಾಗದಲ್ಲಿದ್ದು, ಅತೀ ಹಿಂದುಳಿದ ತಾಲೂಕಾವಾಗಿದ್ದು, ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನಲ್ಲಿ ಯುನಾನಿ ಮೇಡಿಕಲ್ ಕಾಲೇಜು ಮಂಜೂರು ಮಾಡಬೇಕು ಎಂಬುವುದು ಬಹುವರ್ಷಗಳ ಬೇಡಿಕೆಯಾಗಿದೆ. ಬಸವಕಲ್ಯಾಣ ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಯುನಾನಿ ಕೋರ್ಸ ಓದುವ ಇಚ್ಛೆಯುವುಳ್ಳರಾಗಿದ್ದಾರೆ. ಆದ್ದರಿಂದ ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನಲ್ಲಿ ಸರ್ಕಾರಿ ಯುನಾನಿ ವೈದ್ಯಕೀಯ ಮಹಾವಿದ್ಯಾಲಯ ಮಂಜೂರು ಮಾಡುವ ಮೂಲಕ ಈ ಭಾಗದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಶಾಸಕರು ವೈದ್ಯಕೀಯ ಶಿಕ್ಷಣ ಸಚಿವರಲ್ಲಿ ವಿನಂತಿಸಿಕೊಂಡಿದ್ದರು ಎಂದು ತಿಳಿಸಿದ್ದಾರೆ.
ಬೀದರ ಜಿಲ್ಲೆಯ ಬಸವಕಲ್ಯಾಣ ನಗರದಲ್ಲಿ ಸರ್ಕಾರಿ ಯುನಾನಿ ವೈದ್ಯಕೀಯ ಮಹಾವಿದ್ಯಾಲಯ ಪ್ರಾರಂಭಿಸುವಂತೆ ಆರ್ಯುವೇದ, ಯೋಗ ಮತ್ತು ನ್ಯಾಚುರೋಪತಿ, ಯುನಾನಿ ಸಿದ್ಧ ಮತ್ತು ಹೋಮಿಯೋಪತಿ (ಆಯುಷ್) ನಿರ್ದೇಶನಾಲಯದ ನಿರ್ದೇಶಕರು ದಿನಾಂಕ 09-10-2020 ರಂದು ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಂ.ಸಿ.ಎ. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರದ ಮೂಲಕ ಕೋರಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಧಾನಮಂತ್ರಿಗಳ ಜನ ವಿಕಾಸ ಕಾರ್ಯಕ್ರಮ (ಪಿಎಂಜಿವಿಕೆ) ಅಡಿಯಲ್ಲಿ ಬೀದರ ಜಿಲ್ಲೆಯ ಬಸವಕಲ್ಯಾಣ ಮತ್ತು ಬೀದರ ನಗರ 3 ಸೇರಿದಂತೆ ರಾಜ್ಯದಲ್ಲಿ ಒಟ್ಟು 34 ಸ್ಥಳಗಳನ್ನು ಗುರುತಿಸಿದೆ. ಆದ್ದರಿಂದ ಎಂಸಿಎ ಸ್ಥಳ ಗುರುತಿಸಿದ ಬಸವಕಲ್ಯಾಣ ನಗರದಲ್ಲಿ ಸರ್ಕಾರಿ ಯುನಾನಿ ಕಾಲೇಜು ಹಾಗೂ ಆಸ್ಪತ್ರೆ ಸ್ಥಾಪನೆ ಮಾಡವುದು ಸೂಕ್ತವೆಂದು ತಿಳಿಸಿದ್ದಾರೆ.
ಬೀದರ ಜಿಲ್ಲೆಯ ಬಸವಕಲ್ಯಾಣ ನಗರದಲ್ಲಿ ಸರ್ಕಾರಿ ಯುನಾನಿ ವೈದ್ಯಕೀಯ ಮಹಾವಿದ್ಯಾಲಯ ಪ್ರಾರಂಭಿಸುವಂತೆ ಕಳೆದ ಮೂರುವರೆ ವರ್ಷಗಳಿಂದ ಹೋರಾಟ ನಡೆಸುತ್ತಿರುವ ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಜೆಸನ್ (ಎಸ್.ಐ.ಓ.) ಬೀದರ ಜಿಲ್ಲಾ ಘಟಕದ ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸುವುದೇ? ಎಂದು ಪ್ರಶ್ನಿಸಿದ್ದಾರೆ.
ಈ ಸಂಬಂಧ ಜಿಲ್ಲೆಯ ಶಾಸಕರು, ವಿವಿಧ ಇಲಾಖೆಯ ಅಧಿಕಾರಿಗಳು ಸಹ ಸರ್ಕಾರದ ಮಟ್ಟದಲ್ಲಿ ಬೀದರ ಜಿಲ್ಲೆಯ ಬಸವಕಲ್ಯಾಣ ನಗರದಲ್ಲಿ ಸರ್ಕಾರಿ ಯುನಾನಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡುವಂತೆ ಸಂಬಂಧಪಟ್ಟ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳಿಗೆ ಪತ್ರಗಳ ಮೇಲೆ ಪತ್ರಗಳು ಬರೆಯುತಿದ್ದರೂ ರಾಜ್ಯ ಸರ್ಕಾರ ಜಾಣ ಕಿವುಡುತನ ಪ್ರದರ್ಶನ ಮಾಡುವುದು ಸರಿಯೇ? ಎಂದು ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಜೆಸನ್ (ಎಸ್.ಐ.ಓ.) ಬೀದರ್ ಜಿಲ್ಲಾ ಘಟಕದ ಅಧ್ಯಕ್ಷರಾದ ಅಸದುಲ್ಲಾ ಖಾನ್ ಅವರು ಪ್ರಶ್ನಿಸಿದ್ದಾರೆ.