ಲೇಖಕರು: ನೂರಾ ಸಲೀಂ

ನಜೀಬ್ ಕಣ್ಮರೆಯಾಗುವುದಕ್ಕಿಂತ ಒಂದು ದಿನ ಮುಂಚಿತವಾಗಿ ಜಗಳವಾದುದಕ್ಕೆ ಪ್ರತ್ಯಕ್ಷ ಸಾಕ್ಷಿಯಾದ ಶಾಹಿದ್ ರಾಜ ಇದನ್ನು ಹೇಳುತ್ತಾರೆ.#Bring Back Najeeb ಎಂಬ ಬ್ಯಾನರ್ ನ ಅಡಿಯಲ್ಲಿ ಅನೇಕ ಪ್ರತಿಭಟನೆಗಳನ್ನು ಚಳುವಳಿಗಳನ್ನು ಆಯೋಜಿಸಲಾಯಿತು

ಅನೇಕ ಶಿಕ್ಷಕರು,ಯುವ ಮುಖಂಡರು,ಮತ್ತು ರಾಜಕಾರಣಿಗಳು ಪ್ರತಿಭಟನೆಯಲ್ಲಿ ತಮ್ಮ ಒಗ್ಗಟ್ಟನ್ನು ತೋರಿಸಿದರು. ಅವರಲ್ಲಿ ಕಾಂಗ್ರೆಸ್ ಮುಖಂಡ ಶಶಿ ತರೂರ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಕಮ್ಯುನಿಸ್ಟ್ ಪೊಲಿಟಿಕಲ್ ಪಾರ್ಟಿ (ಸಿ.ಪಿ.ಸಿ) ನಾಯಕ ಅನ್ನಿ ರಾಜ ಮುಂತಾದವರು ಇದ್ದರು. ನಜೀಬ್ ನಪತ್ತೆಯಾದ್ದರಿಂದ ಕ್ಯಾಂಪಸ್ ಪ್ರಕರಣದಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ತೋರಿಸಬೆಕೆಂಬ ಹೇಳಿಕೆಯೊಂದಿಗೆ ಎಲ್ಲರು ನಿಂತಿದ್ದರು. “ಎಬಿವಿಪಿ ಪ್ರಕರಣದಲ್ಲಿ ಭಾಗಿಯಾಗಿದೆ ಎಂದು, ಸ್ಪಷ್ಟವಾಗಿ ದೆಹಲಿ ಪೊಲೀಸರು ತನಿಖೆ ನಡೆಸಲು ಧೈರ್ಯ ಮಾಡುವುದಿಲ್ಲ” ಎಂದರು ಮತ್ತು ಈಗ ದೇಶದಲ್ಲಿ ಎಬಿವಿಪಿ, ಆರೆಸಸ್ ಮತ್ತು ಬಿಜೆಪಿ ಗುಂಡಾಗಿರಿ ಇದೆ ಎಂದು ಸ್ಪಷ್ಟ ಪಡಿಸಿದರು.

ಕಾಂಗ್ರೆಸ್ ಮುಖಂಡ ಶಶಿ ತರೂರ್ ” ಕಣ್ಮರೆಯಾದ ವರದಿಗಳು ಬಂದ ಕೂಡಲೇ ಉಪ ಕುಲಪತಿಗಳು ಅಥವಾ ಪೊಲೀಸರು ಏಕೆ ಕ್ಯಾಂಪಸ್ ನಲ್ಲಿ ಹುಡುಕಲಿಲ್ಲ ಎಂದು ಪ್ರಶ್ನಿಸಿದ್ದಾರೆ. “ನಜೀಬ್ ನ ಕಣ್ಮರೆ ಸಂಭಂದಿಸಿದಂತೆ ನಜೀಬ್ ನ ಮೇಲೆ ಹಲ್ಲೆ ನಡೆಸಿದ ಎಬಿವಿಪಿ ಸದಸ್ಯರನ್ನು ಏಕೆ ಪ್ರಶ್ನಿಸಲಾಗಲಿಲ್ಲ ಅಥವಾ ನಜೀಬ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಕುಟುಂಬ ಮತ್ತು ಸ್ನೇಹಿತರ ಬಲವಾದ ಹೇಳಿಕೆಯ ಬಳಿಕವೂ ಅವರ ಕರೆಗಳನ್ನು ಮತ್ತು ಸಂದೇಶಗಳನ್ನು ಪರಿಶೀಲಿಸಲಾಗಲಿಲ್ಲ.? ಇದರ ಅರ್ಥ ನೀವು ಏನನ್ನೋ ಮುಚ್ಚಿಡಲು ಪ್ರಯತ್ನಿಸುತಿದ್ದಿರಿ ಮತ್ತು ನಜೀಬ್ ರವರಿಗೆ ಹಲ್ಲೆ ಮಾಡಿದವರಿಗೆ ರಾಜಕೀಯ ಪ್ರೋತ್ಸಾಹ ನೀಡುತಿದ್ದಿರಿ ಎಂದು CPIM ಪೋಲಿಬರೋ ಸದಸ್ಯೆ ಕವಿತಾ ಕ್ರಷ್ಣನ್ ಪ್ರಶ್ನಿಸುತ್ತಾರೆ.

Cpc ನಾಯಕ ಅಲ್ಲಿ ರಾಜ ಕೊಡ ಇದು ವಿದ್ಯಾರ್ಥಿಯ ಕಣ್ಮರೆಯ ಸಂಭಂದಿಸಿದ ವಿಷಯವಾಗಿದೆ ಬದಲಾಗಿ ಸಮುದಾಯವನ್ನು ಗುರಿಯಾಗಿಸಲಾಗಿದೆ ಎಂದು ಸ್ಪಷ್ಟ ಪಡಿಸುತ್ತಾರೆ. ನಜೀಬ್ ಪಿತೂರಿಯಲ್ಲಿ ನಾಪತ್ತೆಯಾಗಿದ್ದಾರೆ.

ಯುವ ವಿದ್ಯಾರ್ಥಿಗಳು ಹಕ್ಕಿಗಾಗಿ ಹೋರಾಟ ನಡೆಯುತ್ತದೆ “ಅವನನ್ನು ಬಲವಂತವಾಗಿ ಕಣ್ಮರೆ ಗೊಳಿಸುವುದು ಬಿಜೆಪಿಯ ಅಜೇಂಡವಾಗಿತ್ತು” ಎಂದು ರೋಹಿತ್ ವೆಮೂಲ ರ ತಾಯಿ ರಾಧಿಕಾ ವೆಮೂಲ ರವರು ಹೇಳುತ್ತಾರೆ. ವಿದ್ಯಾರ್ಥಿಗಳ ಇಸ್ಲಾಮಿಕ್ ಸಂಘಟನೆಯು(sio) ಮಾಜಿ ರಾಷ್ಟ್ರಾಧ್ಯಕ್ಷ ಇಕ್ಬಾಲ್ ಹುಸೇನ್ ರವರು ನಜೀಬ್ ರನ್ನು ಮರಳಿ ಕರೆತಂದು ಕ್ರಮ ಕೈಗೊಳ್ಳ ಬೇಕೆಂದು ಭಾರತ ಸರಕಾರವನ್ನು ಒತ್ತಾಯಿಸಿದರು. ನಜೀಬ್ ನನ್ನು ಹಸ್ತಾಂತರಿಸುವಲ್ಲಿ ತೊಡಗಿರುವ ವಿದ್ಯಾರ್ಥಿಗಳ ವಿರುದ್ದ ಅವರನ್ನು ವಿಚಾರಣೆಗೆ ಒಳಪಡಿಸಬೇಕೆಂದು ಒತ್ತಾಯಿಸಿದರು ಮತ್ತು ಈ ವಿಷಯದಲ್ಲಿ ಪಾರ್ಲಿಮೆಂಟಿನಲ್ಲಿ ಗಂಭೀರ ಚರ್ಚೆ ನಡೆಯಬೇಕೆಂದು ಕಟು ನಿಟ್ಟಿನ ಹೇಳಿಕೆ ನೀಡಿದರು .

ತದನಂತರ JNU ಯುವಿನ ವಿದ್ಯಾರ್ಥಿ ಸಂಘಟನೆ ರಾಷ್ಟ್ರಪತಿ ಪ್ರಾಣಾವ್ ಮುಖರ್ಜಿಯವರಿಗೆ ಸಹಾಯಕ್ಕಾಗಿ ಮೊರೆ ಹೂಡುತ್ತಾರೆ ರಾಷ್ಟ್ರಪತಿಗಳು ಈ ವಿಷಯದಲ್ಲಿ ಮಧ್ಯಪ್ರವೇಷಿಶಿ ಕಾಣೆಯಾದ ವಿದ್ಯಾರ್ಥಿಯ ಬಗ್ಗೆ ಗೃಹ ಸಚಿವಾಲಯದಲ್ಲಿ ವರದಿಯನ್ನು ಕೇಳುತ್ತಾರೆ ಇದರ ಮಧ್ಯೆ JNU ಆಡಳಿತವೂ ಪ್ರತಿಭಟನೆಕಾರರ ವಿರುದ್ಧ FIR ದಾಖಲಿಸುತ್ತದೆ. ಪ್ರತಿಭಟನೆ ನಡೆಯುವ ವೇಳೆ ನಜೀಬ್ ನ ತಾಯಿಯನ್ನು ದೆಹಲಿ ಪೊಲೀಸರು ಸಂಸತ್ತಿನ ಬಳಿ ಎಳೆದೊಯ್ದು ಬಂಧಿಸಿದರು ಹಲವಾರು ವಿದ್ಯಾರ್ಥಿಗಳನ್ನು ವಶಕ್ಕೆ ತೆಗೆದುಕೊಂಡರು. ಲಾಠಿ ಚಾರ್ಜ್ ಮಾಡಲಾಯಿತು. ಈ ನಡುವೆ ದೆಹಲಿ ಪೋಲೀಸರ ವಿರುದ್ಧವೂ ಪ್ರತಿಭಟನೆ ನಡೆಯಿತು. ಕಾಣೆಯಾದ ಮಗನ ತಾಯಿ ನ್ಯಾಯಕ್ಕಾಗಿ ಹೊರಾಡುವಾಗ ಎಳೆದೊಯ್ಯುವುದು ದೇಶದ ನ್ಯಾಯದ ವ್ಯವಸ್ಥೆಯ ಅವಸ್ಥೆಯನ್ನು ಎತ್ತಿ ತೋರಿಸುತ್ತದೆ. ನಜೀಬ್ ನ ತಾಯಿ ರಾಜನಾಥ್ ಸಿಂಗ್, ರಾಹುಲ್ ಗಾಂಧಿ, UP ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಹೈದರಾಬಾದ್ ಸಂಸದ ಅಸಾದುದ್ದೀನ್ ಉವೈಸಿ, ಮೊದಲಾದ ಅನೇಕ ರಾಜಕಾರಣಿಗಳನ್ನು ಸಂಪರ್ಕಿಸಿದರು.

ಟೈಮ್ಸ್ ಆಫ್ ಇಂಡಿಯಾ ದೆಹಲಿ, ಆಜ್ ತಕ್ , ಇಂಡಿಯಾ ಟುಡೇ , ಸೇರಿದಂತೆ ಮೊದಲಾದ ಹೆಸರಾಂತ ಮಾಧ್ಯಮಗಳು ನಜೀಬ್ ನನ್ನು ಭಯೋತ್ಪಾದನೆ ಗುಂಪಿನೊಂದಿಗೆ ಸಂಪರ್ಕವಿದೆಯೆಂದು ನಜೀಬ್ ರವರ ಸಾಮಾಜಿಕ ಜಾಲತಾಣ ಪರಿಶೀಲಿಸಿದಾಗ ಮಾಹಿತಿ ಸಿಕ್ಕಿತೆಂದು ಪೊಲೀಸರು ಆರೋಪಿಸಿದರು ಮಾಧ್ಯಮಗಳು ಈ ಆರೋಪವನ್ನು ಪ್ರಸಾರ ಮಾಡಿದರು ಆದರೆ ನಜೀಬ್ ರವರ ಕುಟುಂಬವು ಇದು ಸುಳ್ಳಾರೋಪವೆಂದು ಇದರ ವಿರುದ್ಧ ಕ್ರಮ ಕೈಗೊಳ್ಳ ಬೇಕೆಂದು ಮಾಧ್ಯಮಗಳು ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಲಾಯಿತು.

ಪತ್ರಿಕಾ ಗೋಷ್ಠಿಯಲ್ಲಿ ನಜೀಬ್ ರವರ ತಾಯಿ ” ಟೈಮ್ಸ್ ಆಫ್ ಇಂಡಿಯಾ ದಂತಹ ಪತ್ರಿಕೆಗಳು ಇಂತಹ ಕೀಳು ಮಟ್ಟದ ವರದಿಯನ್ನು ಪ್ರಕಟಿಸಿದರೆ ಇದರಿಂದ ನಾನು ಏನೆನ್ನು ನಿರೀಕ್ಷಿಸಬಹುದು ಮಾಧ್ಯಮಗಳು ನಮ್ಮ ಶಕ್ತಿ ಮತ್ತು ದ್ವನಿಯಾಗಿರುತ್ತೀರಿ ದಯವಿಟ್ಟು ನನ್ನ ಮಗನನ್ನು ಹುಡುಕಲು ಸಹಾಯ ಮಾಡಿ ಎಂದು ಅಳುತ್ತಾರೆ. ಮಾಧ್ಯಮಗಳು ಮಾಡಿದ ಆರೋಪವನ್ನು ಪೊಲೀಸರು ನಿರಾಕರಿಸಿದ್ದಾರೆ ಎಂದು ತಾಯಿ ದೇವರಿಗೆ ಕೃತಜ್ಞತೆ ಸಲ್ಲಿಸುತ್ತಾರೆ. ಯಾವುದೇ ಸಂಭಂದಿಸಿದ ದಾಖಲೆಗಳಿಲ್ಲದೆ ಮಾಧ್ಯಮ ವರದಿ ಮಾಡಿರುವ ಬಗ್ಗೆ ಪ್ರಶ್ನೆಗಳು ಏಳುತ್ತದೆ ಈ ರೀತಿಯ ಮುಸ್ಲಿಮರ ಬೇಟೆಗೆ ಶೂನ್ಯ ಸಹಿಷ್ಣುತೆ ಇರಬೇಕು ಎಂದು JNU ಮಾಜಿ ಉಪಾಧ್ಯಕ್ಷೆ ಶೆಹ್ಲಾ ರಶೀದ್ ಹೇಳಿದ್ದರು.

ವಿದ್ಯಾರ್ಥಿ ಸಂಘಟನೆಗಳಿಂದ ರಾಷ್ಟ್ರಾಧ್ಯಂತ ಪ್ರತಿಭಟನೆಗಳು ನಡೆದವು. ಪ್ರಕರಣವನ್ನು ಅಪರಾಧಿ ಶಾಖೆಗೆ ವರ್ಗಾಯಿಸಲಾಯಿತು.ವಿದ್ಯಾರ್ಥಿ ಕಾಣೆಯಾದ 55 ದಿನಗಳ ನಂತರವೂ ಪತ್ತೆ ಮಾಡಲಾಗಲಿಲ್ಲ ಎಂದು ದೆಹಲಿ ಪೊಲೀಸರನ್ನು ಟೀಕಿಸುತ್ತಾರೆ.

CBI, JNU ನ ಒಂಬತ್ತು ವಿದ್ಯಾರ್ಥಿಗಳ ಮೇಲೆ ಸುಳ್ಳು ಪತ್ತೆ ಸಮೀಕ್ಷೆ ನಡೆಸಲು ಮತ್ತು ಅವರ ನಿವಾಸದಲ್ಲಿ ಶೋಧ ಕಾರ್ಯ ನಡೆಸಲು ಬಯಸಿತು ಆದರೆ ಈ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತು. JNU ನ ಹಳೆ ವಿದ್ಯಾರ್ಥಿಗಳಿಗೆ ನಜೀಬ್ ನ ಕಣ್ಮರೆಯ ಸುದ್ಧಿ ಬಹಳ ಕಾಲದ ನಂತರ ತಿಳಿದಿತ್ತು. ಆದರೆ ಅವರನ್ನು CBI ತನಿಖೆಗೆ ಕರೆಸಿದೆ ಆದರೆ ಆತನ ಮೇಲೆ ಹಲ್ಲೆ ನಡೆಸಿದ ABVP ಕಾರ್ಯಕರ್ತರ ತನಿಖೆ ನಡೆಸಲಿಲ್ಲ. ಒಂದು ವರ್ಷ ಕಳೆದರೂ ನಜೀಬ್ ನನ್ನು ಪತ್ತೆ ಮಾಡದ ಕಾರಣದಿಂದಾಗಿ ಉನ್ನತ ತನಿಖೆಗಾಗಿ ಒತ್ತಾಯಿಸಿ ಸಿಬಿಐ ಕಚೇರಿಯ ಹೊರಗೆ ಬೃಹತ್ ಪ್ರತಿಭಟನೆ ಮಾಡಲಾಯಿತು. ರಾತ್ರಿಯಿಡಿ ಪ್ರತಿಭಟನೆ ಮುಂದು ವರಿಯಿತು. ನಜೀಬ್ ನ್ನು ಪತ್ತೆ ಹಚ್ಚುವಲ್ಲಿ ಅವರ ಆಸಕ್ತಿ ಕೊರತೆಯಿಂದಾಗಿ High Court ಮತ್ತು CBI ವಾಗ್ವಾದ ನಡೆಯಿತು.

ನಜೀಬ್ ನನ್ನು ಅಪಹರಿಸಿ ಕೊಂಡವರು ಯಾರು ಎಂದು ಕಂಡು ಹಿಡಿಯುವಷ್ಟು ದೂರ ನ್ಯಾಯಾಲಯ ಹೋಗಲಿಲ್ಲ. ನ್ಯಾಯಾಲಯ ತೆಗೆದು ಕೊಲ್ಲಬೇಕಾದ ಪ್ರಯತ್ನವನ್ನು ತೆಗೆದುಕೊಳ್ಳಲಿಲ್ಲ. ಮೂಲಭೂತವಾಗಿ ನ್ಯಾಯಾಲವು ದೆಹಲಿ ಪೊಲೀಸರೊಂದಿಗೆ ಸಾಕಷ್ಟು ಕಟ್ಟು ನಿಟ್ಟಾಗಿರಲಿಲ್ಲ. ನ್ಯಾಯಲಾದ ಮೇಲ್ವಿಚಾರಣೆಯ ತನಿಖೆ ಮಾಡಲು ನಿರಾಕರಿಸಿದ್ದು ವಿಶೇಷವಾಗಿ ಬೇಸರ ತಂದಿದೆ. ನ್ಯಾಯಾಲದ ಈ ಮನೂಭವದಿಂದಾಗಿ ನ್ಯಾಯಕ್ಕಾಗಿ ಪ್ರಾರ್ಥಿಸುವ ಜನರು ಅತ್ಯಂತ ಸಮರ್ಥನೀಯ ನ್ಯಾಯಾಲಯವನ್ನು ಕಳಂಕವೆಂದು ಪರಿಗಣಿಸಬೇಕೆ!?

ಗೌರವಾನಿತ ನ್ಯಾಯಲಯವೇ ನ್ಯಾಯವನ್ನು ನಿರಾಕರಿಸಿದೆ ಎಂಬುವುದನ್ನು ಉಲ್ಲೆಖಿಸುವುದಂತು ಅತ್ಯಂತ ದುರಾದೃಷ್ಟಕರ ಜನರು ತಮ್ಮ ಒಪ್ಪಿಸುವ ಹಾಗೂ ನ್ಯಾಯ ಮತ್ತು ಭದ್ರತೆಯನ್ನು ಬಯಸುವ ವೇದಿಕೆಗಳು ದೇಶದ ರಣಹದ್ದುಗಳಿಗೆ ಹುಲ್ಲುಗಾವಳಾದಾಗ ಸಾಮಾನ್ಯ ಮನುಷ್ಯನು ಸುವ್ಯವಸ್ಥೆಯನ್ನು ನಂಬದೆ ಅನುಮಾನ ಪಡುತ್ತಾನೆ.

ಕಾನೂನು ಮತ್ತು ಸುವ್ಯವಸ್ಥೆಯನ್ನು ಗೌರವಿಸುವ ಮತ್ತು ನಂಬುವ ಯಾವುದೇ ವ್ಯಕ್ತಿಯೂ ನ್ಯಾಯಾಲಯವು ಹಣ ಅಧಿಕಾರ ಹೊಂದಿದವನಿಗೆ ಮಾತ್ರ ನ್ಯಾಯ ಒದಗಿಸುವ ಸ್ಥಳವಾಗಬೆಕೆಂದು ಬಯಸುವುದಿಲ್ಲ ಅತ್ಯಂತ ಅನರ್ಹನಿಗೂ ನ್ಯಾಯವನ್ನು ಎತ್ತಿ ಹಿಡಿಯುವ ನ್ಯಾಯಾಲಯವು ನ್ಯಾಯದ ಯೋಗ್ಯತೆ ಇರುವವನಿಗೆ ಅನ್ಯಾಯದ ಸ್ಥಳವಾಗಿ ಬದಲಾಗಬಾರದು

ನಜೀಬ್ ಪ್ರಕರಣವು ನಮ್ಮ ಭದ್ರತೆ ಮತ್ತು ದೇಶದ ಸ್ವಾತಂತ್ರ್ಯದ ಬಗೆಗೆ ನಮ್ಮೆಲ್ಲರಿಗೂ ಒಂದು ಪ್ರಶ್ನೆಯಾಗಿದೆ. ಇದು ಉನ್ನತ ಶಿಕ್ಷಣವನ್ನು ಪಡೆಯುವಂತಹ ವಿದ್ಯಾರ್ಥಿಗಳಿಗೆ ತಾರತಮ್ಯದ ಸಂಕೇತವಾಗಿದೆ. ನಜೀಬ್ ನ ವಿಷಯ ನ್ಯಾಯ ಸಿಗುವ ವರೆಗೂ ಮುಗಿಯುವಂತದಲ್ಲ ಹಾಗೂ ಅವನು ನಮ್ಮ ಕಡೆಗೆ ಮರಳುವವ ವರೆಗೆ ಇದು ಮುಂದು ವರಿಯುತ್ತದೆ.

ಮುಗಿಯಿತು.

ಅನು: ಸುಹಾನ ಸಫರ್
ಕೃಪೆ: ದಿ ಕ್ಯಾಂಪಾನಿಯನ್

LEAVE A REPLY

Please enter your comment!
Please enter your name here