ಲೇಖಕರು : ಟಿ.ಐ. ಬೆಂಗ್ರೆ, ವಕೀಲರು ದೆಹಲಿ

ದೆಹಲಿಯಲ್ಲಿ ಮೊನ್ನೆ ನಡೆದದ್ದು ದಂಗೆಯೋ, ಅಥವ ಮುಸ್ಲಿಮರ ನರಹತ್ಯೆಯೋ ಎಂಬ ವಿಚಾರವು ನಿರಂತರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗಲು ಹಲವಾರು ಕಾರಣಗಳಿವೆ. ಉತ್ತರ ಈಶಾನ್ಯ ದೆಹಲಿಯಲ್ಲಿ ನಿರಂತರವಾಗಿ ದಂಗೆ ನಡೆದ ವಿಚಾರವು ಮುಂದೆ ಬಂದಾಗ ತನ್ನನ್ನು ತಾನು ದೇಶದ ಪ್ರಧಾನ ಸೇವಕರೆನ್ನುವ ನಮ್ಮ ದೇಶದ ಪ್ರಧಾನಿಯವರು ಅಂದಿನ ದಿನ ದೇಶದ ಇತರ ಪ್ರಮುಖ ವ್ಯಕ್ತಿಗಳು ಮತ್ತು ಅಮೇರಿಕಾ ಅಧ್ಯಕ್ಷರೊಂದಿಗೆ ಅದೇ ದೆಹಲಿಯಲ್ಲಿ, ಅಂದರೆ ಗಲಭೆ ಪೀಡಿತ ಪ್ರದೇಶಕ್ಕಿಂತ ಕೇವಲ 20 ಕಿಲೋಮೀಟರ್ ದೂರದಲ್ಲಿ ಕೊಳೀತು ಭೋಜನ ಮಾಡುತ್ತಿದ್ದರು. ದೇಶ ಹೊತ್ತಿ ಉರಿದಾಗಲೂ ಏನೂ ಗೊತ್ತಿಲ್ಲದವರಾಗೇ ವರ್ತಿಸುವುದು ಎಷ್ಟು ದೊಡ್ಡ ವಿಪರ್ಯಾಸ.
ದೇಶದಲ್ಲಿ ಅಮೆರಿಕಾದ ಅಧ್ಯಕ್ಷರಿದ್ದಾರೆ ತಕ್ಷಣ ಗಲಭೆ ಪೀಡಿತ ಪ್ರದೇಶದ ಸಂದರ್ಶನ ಮಾಡುವುದು, ತಕ್ಷಣ ಅದನ್ನು ತಡೆಯುವುದು ಕಷ್ಟಕರವಾಗಬಹುದು. ಆದರೆ, ಅದೇ ಪ್ರದೇಶದಲ್ಲಿದ್ದುಕೊಂಡು ಸುಮಾರು 69 ಘಂಟೆಗಳ ಕಾಲ ಸುಮ್ಮನಿದ್ದರು , ಎಂದರೆ ಇದೊಂದು ಉದ್ದೇಶ ಪೂರಿತ ಗಲಭೆ ಎನ್ನದೆ ವಿಧಿಯಿಲ್ಲ. ಆವರಿಗೆ ಸುಮಾರು ಮೂರೂ ದಿನ ಬೇಕಾಯಿತು ಗಲಭೆಯ ಕುರಿತು ಒಂದು ಟ್ವಿಟ್ ಮಾಡಲು. ಇನ್ನೂ ದೇಶದ ಗ್ರಹ ಸಚಿವರು ಈ ಕುರಿತು ಇಷ್ಟರವರವರೆಗೆ ತುಟಿ ಬಿಚ್ಚಲೇ ಇಲ್ಲ. ದೆಹಲಿ ದಂಗೆಯ ಜವಾಬ್ದಾರಿಕೆ ಹೊತ್ತು ರಾಜೀನಾಮೆ ಕೊಡಬೇಕಾಗಿದ್ದವರು ತನಗೂ ದೆಹಲಿಗೂ ಏನೂ ಸಂಬಂಧವೇ ಇಲ್ಲ ಎಂಬಂತೆ ವ್ಯವಹರಿಸುತಿದ್ದಾರೆ.
ಇನ್ನೂ ದೆಹಲಿ ಪೊಲೀಸ್ ಇಲಾಖೆಯು, ಪೊಲೀಸ್ CCTV ಹೊಡೆಯುವ, ದಂಗಾಕೋರರೊಂದಿಗೆ ಸೇರಿಕೊಂಡು ಮುಸಲ್ಮಾನರ ಮೇಲೆ ಹಲ್ಲೆ ಮಾಡುವ, ದಂಗೆ ಕೋರರು ಹಲ್ಲೆ ಮಾಡುವುದನ್ನು ನೋಡಿ ಏನೂ ಆಗಾದರಂತೆ ಸುಮ್ಮನಿರುವ, ದಂಗೆ ಕೋರರು ಸಾರ್ವಜನಿಕ ಸೊತ್ತುಗಳನ್ನು ಹಾನಿ ಮಾಡುವಾಗ, ಮಸೀದಿಗೆ ಬೆಂಕಿ ಹಚ್ಚುವಾಗ ಏನು ಪ್ರತಿಕ್ರಿಯಿಸದೆ ಸುಮ್ಮನೆ ನಿಂತು ಬಿಡುವ ಮತ್ತು ಅಷ್ಟೇ ಅಲ್ಲದೆ ಸುಮಾರು ಐದಾರು ಮುಸ್ಲಿಂ ಯುವಕರನ್ನು ಹೊಡೆದು ಹಾಕಿ ಅವರು, ಜೀವನ ಮತ್ತು ಮರಣದ ಸ್ಥಿತಿಯಲ್ಲಿದ್ದಾಗಲೂ ಅವರಿಂದ ಬಲವಂತವಾಗಿ ರಾಷ್ಟ್ರಗೀತೆ ಹಾಡಿಸುವ ವಿಡಿಯೋ ಮುಂದೆ ಬಂದರೂ ಪೊಲೀಸ್ ಇಲಾಖೆಯು ಇದುವರೆಗೆ ಯಾವುದೇ ಪೋಲಿಸಿಸರ ಮೇಲೆ ಯಾವುದೇ ಪ್ರಕರಣ ದಾಖಲಿಸದೆ ಇದ್ದಾಗಲೂ, ಗ್ರಹ ಸಚಿವರು ಏನೂ ಆಗದವರಂತೆ ಸುಮ್ಮನಿದ್ದಾರೆ.
ಹಾಗಾದರೆ 53 ಜನರ ಮರಣ, ಸುಮಾರು 300 ಗಾಯಗೊಂಡ ಮತ್ತು ಸಾವಿರಾರು ಕೋಟಿಯಷ್ಟು ನಷ್ಟ ಅನುಭವಿಸಿದ ಈ ಗಲಭೆಯ ಹೊಣೆ ಯಾರದು?. ದೆಹಲಿಯ ಪೊಲೀಸ್ ಇಲಾಖೆಯು ನೇರ ಕೇಂದ್ರ ಸರಕಾರದ ಕೈಯಲ್ಲಿರುವಾಗ, ಈ ದಂಗೆಯ ಹೊಣೆ ಹೊರ ಬೇಕಾದವರು ಗ್ರಹ ಸಚಿವರದಲ್ಲವೇ?. ಒಂದು ವೇಳೆ ಹೊಣೆ ಅವರದ್ದೇ ಆದಲ್ಲಿ ಅವರು ಸುಮ್ಮನಿರುವುದು ಏಕೆ?. ದೆಹಲಿಯಲ್ಲಿಯೇ ಇದ್ದು ದೆಹಲಿಯಲ್ಲಿ ಸುಮಾರು ನಾಲೈದು ದಿನಗಳ ಕಾಲ ಬಂದೂಕು ಮತ್ತು ಇತರ ಮಾರಕ ವಸ್ತ್ರವನ್ನು ಹಿಡಿದುಕೊಂಡು ದೆಹಲಿಯಲ್ಲಿ ದಂಗೆ ಕೋರರು ಮುಕ್ತವಾಗಿ ಸುತ್ತುವಾಗ ಈ ಚಾಣಾಕ್ಷ ಎಲ್ಲಿದ್ದರು?.
ಇನ್ನೂ ಎಷ್ಟರವರೆಗೆ ಈ ಮೀಡಿಯಾಗಳು ಈ ಮಹಾ ಗಲಭೆಯನ್ನು aap’ನ ಕರ್ಪುರೇಟರ್ ತಾಹಿರ್ ಮತ್ತು ಮುಸ್ಲಿಂ ಬಂದೂಕುಧಾರಿ ಶಾರುಖ್’ Vs. IB ಆಫೀಸರ್ ಅಂಕಿತ್ ಶರ್ಮರ ಮಧ್ಯೆ ನಡೆದ ಜಗಳಾದಂತೆ ಬಿಂಬಿಸಬಹುದು?. ಏಕೆ ಈ ಸಮಾಜ ಅಲ್ಲಿ ನಡೆದ ವಾಸ್ತವದ ಕುರಿತು ಮಾತನಾಡುತ್ತಿಲ್ಲ? ಮಾಧ್ಯಮಗಳೇಕೆ ಸರಕಾರದ ಕೈಗೊಂಬೆಯಂತೆ ವರ್ತಿಸುತ್ತಿದೆ?. ಕೇವಲ ಇಪ್ಪತ್ತು ಮನೆಗಳಿರುವ ಕೇರಿಯಲ್ಲಿ ಮುಸ್ಲಿಮರ ಮನೆಗಳನ್ನೇ ಹುಡುಕಿ ಧ್ವಂಸ ಮಾಡಿದಾಗಲೂ, ಪೊಲೀಸ್ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯ ಮುಸ್ಲಿಂ ಯುವಕರನ್ನೇ ಅಪರಾಧಿ ಎಂದು ಬಂಧಿಸುವಾಗ, ಅಲ್ಪ ವಿವೇಕವಿರುವವನಿಗೂ ವೆಲ್ ಪ್ಲಾನ್ಡ್ ಗಲಭೆ ಎಂದು ಅರ್ಥವಾಗ ಬಹುದಲ್ಲವೇ? ಈಗ ಸಮಾಜವು ಚರ್ಚಿಸಬೇಕಾಗಿರುವ ವಿಚಾರ ಈ ಗಲಭೆಯ ಹೊಣೆಗಾರರಿಗೆ ಈ ಸಮಾಜವು ಯಾವ ಶಿಕ್ಷೆಯನ್ನು ವಿಧಿಸಬೇಕು?.

LEAVE A REPLY

Please enter your comment!
Please enter your name here