ಕವನ

  • ಉರೂಜ್ ಸುಲ್ತಾನ

ಓ ಮಹಿಳೆಯರೇ !
ನೀವು ಪುರುಷರಿಗೆ ಸಮಾನರು
ಎಂದು ನಂಬುತ್ತಾ ನಿಮಗೆ ಆಯಾಸವಾಗುವುದಿಲ್ಲವೇ?
ಯಾವಾಗ ಅದು ವಾಸ್ತವ ಅಲ್ಲದಿದ್ದಾಗ!
ಹೌದು ನೀವು ಪುರುಷರಿಗೆ ಸಮಾನರಲ್ಲ
ಅವರು ಪುರುಷರಿಗಿಂತ ಉತ್ತಮ ಮತ್ತು ಬಲ ಶಾಲಿಗಳು
ಆದರೆ, ನೀವು ತಪ್ಪು ದಾರಿಗೆಳೆಯಲ್ಪಟ್ಟಿದ್ದೀರಿ
ನೀವು ಬೆಂಕಿ ಎಂದು ನಂಬಿಕೊಳ್ಳುವ ಮೂಲಕ
ವಾಸ್ತವದಲ್ಲಿ ನೀವು ಜ್ವಾಲೆಯಾಗಿದ್ದೀರಿ!
ಅಂತಹ ತೀವೃತೆಯಿಂದ ಉರಿಯುತಿದ್ದು
ನಿಮ್ಮ ಹತ್ತಿರ ಸುಳಿಯುತ್ತಿದ್ದ ಯಾವುದೇ
ಕೊಳಕು ಪತಂಗ ಕೂಡಾ ನಾಶವಾಗಬೇಕು
ಸುಟ್ಟು ಹೋಗಿ ಮೊಳೆಗಳಾಗಿ

ಓ ಮಹಿಳೆಯರೇ
ನೀವು ಪ್ರೀತಿ ತುಂಬಿದ ನಿಷ್ಠೆಯ ಪ್ರತಿಮೆ
ಆದ್ದರಿಂದಲೇ ದೌರ್ಬಲ್ಯೇ !
ಒಬ್ಬರು ನಿಮ್ಮನ್ನು ಬಗ್ಗಿಸಲು ಪ್ರಯತ್ನಿಸಿದರೆ
ನೀವು ಕುಸಿಯುವಿರಿ
ತುಂಡುಗಳಾಗುವಿರಿ !
ಮತ್ತು ಅದನ್ನು ಸರಿಪಡಿಸಲು ಸಾದ್ಯವಿಲ್ಲ
ಒಟ್ಟಾಗಿ ಸೇರಿದರೂ
ಯಾವಾಗಳೂ ಬಿರುಕುಗಳು ಶಾಶ್ವತ!
ಆದರೆ, ಹೌದು ನಿಮ್ಮನ್ನು ಆಕಾರ ಗೊಳಿಸಬಹುದು!
ಅತ್ಯತ್ತಮ ರೂಪಗಳಾಗಿ!
ಖದೀಜ(ರ), ಫಾತಿಮಾ(ರ) ಆಯಿಷಾ(ರ)
ಮತ್ತು ಸುಮಯ್ಯಾ (ರ) ರಾಗಿ
ರಜಿಯಾ ಲದೀದಾ ಮತ್ತು ಆಯಿಷಾ ರನ್ನಾಳಾಗಿ
ಈ ಜಗತ್ತಿನಲ್ಲಿ ಒಂದು ಗುರುತನ್ನಿಟ್ಟು!
ಅತ್ಯಂತ ಆಳವಾಗಿ!
ಇತಿಹಾಸವು ನಿಮ್ಮ ಹೆಸರನ್ನು ಹೆಮ್ಮೆಯಿಂದ ನೆನಪಿಸುತ್ತದೆ.
ಇಸ್ಲಾಂ ಪಾದಗಳ ಅಡಿಯಲ್ಲಿ ಸ್ವರ್ಗವನ್ನು ಕಲ್ಪಿಸುತ್ತದೆ!
ನೀವು ಇಲ್ಲದ ಮನೆ ಸ್ಮಶಾನವೇ ಸರಿ
ನಿಮ್ಮ ಮಡಿಲೇ ಮಾನವ ಕುಲದ ಮೊದಲ ಪಾಠ ಶಾಲೆ

ಹೀಗಾಗಿ,
ಓ ಮಹಿಳೆಯರೇ…
ನನಪಿಡಿ
ಎಂದೆಂದಿಗೂ ನೆನಪಿಡಿ
ನೀವು ಗಂಡನೊಂದಿಗೆ ಸಮಾನರಲ
ನೀವು ಪುರುಷರಿಗಿಂತ ಉತ್ತಮ ಮತ್ತು ಬಲ ಶಾಲಿಗಳಾಗಿರುವಿರಿ

LEAVE A REPLY

Please enter your comment!
Please enter your name here