ಝೈಬುನ್ನೀಸ ಹೆಸರಿನ ಎಂಟನೇ ತರಗತಿ ವಿದ್ಯಾರ್ಥಿನಿ (ಅಲ್ಪಸಂಖ್ಯಾತರ ವಸತಿ ಶಾಲೆ, ಕೆ.ಆರ್ ಪೇಟೆ, ಮಂಡ್ಯ) 2018 ಜನವರಿ 24ರಂದು ತನ್ನ ಹಾಸ್ಟೆಲ್ ಕೊಠಡಿಯಲ್ಲಿ ನೇಣು ಹಾಕಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಅನೇಕ ಕನಸುಗಳೊಂದಿಗೆ ಶಾಲೆಗೆ ಬಂದಿದ್ದ ಹುಡುಗಿ. ಆಕೆಯನ್ನು ಮುಂದೆ ಸಮಾಜವು ಡಾಕ್ಟರ್ ಆಗಿ ಕಾಣಬಹುದಿತ್ತೇನೊ.
ಆಕೆಯ ಹೆತ್ತವರೊಂದಿಗೆ, ಗೆಳತಿಯರೊಂದಿಗೆ, ಕೊಠಡಿಯ ಸಹವಾಸಿಗಳೊಂದಿಗೆ ಮತ್ತು ಆಕೆಯ ಗೆಳತಿಯರ ಹೆತ್ತವರೊಂದಿಗೆ ವಿಚಾರಿಸಿದಾಗ ಅನೇಕ ಪ್ರಶ್ನೆಗಳು ಉತ್ತರವಿಲ್ಲದೆ ಎದುರಾಗುತ್ತದೆ. ಕಲಿಕೆಯಲ್ಲಿ ಉತ್ತಮವಾಗಿದ್ದು, ಉತ್ತಮ ಗುಣ-ನಡತೆಯನ್ನು ಹೊಂದಿದ್ದ ಝೈಬುನ್ನೀಸಳು ಅನೇಕರಿಗೆ ದುಖಃ ತರಿಸಿದ ಇಷ್ಟೊಂದು ಕಠೋರವಾದ ತೀರ್ಮಾನವನ್ನು ತೆಗೆಯುವಂತೆ ಮಾಡಿದ ಅಂಶವಾದರು ಏನು?
ಝೈಬುನ್ನೀಸ ತರಗತಿಯಲ್ಲಿ ತುಂಬಾ ಮುಗ್ಧ ಹುಡುಗಿಯಾಗಿದ್ದು ತನ್ನ ತರಗತಿಯ ಎಲ್ಲಾ ಸಹಪಾಠಿಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದಳು ಎಂಬುವುದು ತಿಳಿದು ಬಂದಿದೆ. ಆಕೆಯ ಸಾಂಗತ್ಯದಲ್ಲಿ ಎಲ್ಲಾ ಗೆಳತಿಯರು ಸಂತೋಷ ಹೊಂದುತ್ತಿದ್ದರು ಮತ್ತು ಆಕೆಯನ್ನು ಅಮೂಲ್ಯವೆಂದೆ ಭಾವಿಸುತ್ತಿದ್ದರು. ಒಟ್ಟಿನಲ್ಲಿ ಆಕೆ ಮಮತೆಯುಳ್ಳ ಮತ್ತು ಕಾಳಜಿಯುಳ್ಳ ವ್ಯಕ್ತಿಯಾಗಿದ್ದಳು. ಆಕೆ ಶಿಕ್ಷಕರನ್ನು ಆದರಿಸುತ್ತಿದ್ದಳು ಮತ್ತು ಗೌರವಿಸುತ್ತಿದ್ದಳು. ಆದರೆ, ವಿದ್ಯಾರ್ಥಿಗಳ ಪ್ರವಾಸದ ನಂತರದಲ್ಲಿ ಪರಿಸ್ಥಿತಿಯಲ್ಲಿ ಬದಲಾವಣೆಯುಂಟಾಯಿತು. ಆದೇ ಶಾಲೆಯಲ್ಲಿ ಇಂಗ್ಲೀಷ್ ವಿಷಯದ ಅಧ್ಯಾಪಕನಾಗಿದ್ದ ರವಿ ಎಂಬವನ ಕುರಿತು ಆಕೆ ಏಕ ವಚನದಲ್ಲಿ ಪ್ರಸ್ತಾಪಿಸಲು ಶುರು ಮಾಡಿದ್ದಳು.
ಪ್ರವಾಸದ ನಂತರದಲ್ಲಿ ರವಿಯು ಝೈಬುನ್ನೀಸಳಿಗೆ ಆಕೆಯು ಉಡುಪುಗಳು ಕ್ರಮಬದ್ಧವಾಗಿ ಇರಿಸದ ಕಾರಣಕ್ಕಾಗಿ ಬೈದಿದ್ದು, ಬೈಗುಳದಲ್ಲಿ ಬಳಸಿದ್ದ ಪದಗಳಿಂದ ಆಕೆಯು ತೀವ್ರವಾಗಿ ನೊಂದುಕೊಂಡಿದ್ದಳು. ಆದರೆ, “ವಸತಿ ಶಾಲೆಯ ಓರ್ವ ತಾತ್ಕಾಲಿಕ ಪುರುಷ ಶಿಕ್ಷಕ ಹುಡುಗಿಯರು ವಾಸಿಸುವ ಹಾಸ್ಟೆಲ್ ಕೊಠಡಿಯನ್ನು ಪರಿಶೀಲಿಸುವುದು ಎಷ್ಟು ಸರಿ?” “ಹಾಗೆ ಮಾಡಲು ರವಿಗೆ ಸೂಚಿಸಿದವರು ಯಾರು?”
ತಾನು ನಿರಾಕರಿಸಿದ್ದರೂ ರವಿ ಮಾರ್ಚ್ ಫಾಸ್ಟ್ ಮಾಡಲು ಒತ್ತಾಯಿಸಿದ್ದನು ಎಂಬುವುದಾಗಿ ಝೈಬುನ್ನೀಸ ತನ್ನ ತಾಯಿಯೊಂದಿಗೆ ನಡೆಸಿದ ಫೋನ್ ಸಂಭಾಷಣೆಯಲ್ಲಿ ತಿಳಿಸುತ್ತಾಳೆ. ಆಕೆ ಮಾರ್ಚ್ ಫಾಸ್ಟ್ ಮಾಡಲು ಪ್ರಯತ್ನಿಸಿದ್ದು, ಆಕೆಯಿಂದ ಮಾಡಲು ಆಗದೇ ಇದ್ದುದನ್ನು ಆಕೆಯ ಗೆಳತಿಯರು ದೃಢ ಪಡಿಸಿದ್ದಾರೆ. ಆ ಕಾರಣಕ್ಕಾಗಿ ಆಕೆ ಮಾಡಲು ನಿರಾಕರಿಸಿದ್ದಾದಿರಬಹುದು. ರವಿ ಆಕೆಯ ಮನವೊಲಿಸುವ ಬದಲಾಗಿ, ಆಕೆಯನ್ನು ಜರೆದು, ಆಕೆಗೆ ಎರಡು ಭಾರಿ ಹೊಡೆದಿದ್ದಾನೆ. ‘ವಿದ್ಯಾರ್ಥಿಗಳಿಗೆ ಹೊಡೆಯುವುದು ಅಪರಾಧವಾಗಿದೆ’. ಆದರೆ ಪ್ರಶ್ನೆ ಏನೆಂದರೆ, ಇಂಗ್ಲೀಷ್ ಶಿಕ್ಷಕ ಯಾಕೆ ಮಾರ್ಚ್ ಫಾಸ್ಟ್ ಕಲಿಸುತ್ತಿದ್ದ?
ಝೈಬುನ್ನೀಸ ಅಲ್ಲಿಂದ ತನ್ನ ಕೊಠಡಿಗೆ ತೆರಳುತ್ತಾಳೆ ಮತ್ತು ರವಿ ಆಕೆಯನ್ನು ಹಿಂಬಾಲಿಸುತ್ತಾನೆ ಎಂದು ಶಾಲೆಯ ಶಿಕ್ಷಕರು ಹೇಳುತ್ತಾರೆ. “ರವಿ ಯಾಕೆ ಆಕೆಯನ್ನು ಹಿಂಬಾಲಿಸುತ್ತಾನೆ?”, “ಆ ನಂತರದಲ್ಲಿ ಏನಾಯಿತು?” ಹೀಗೆ ಅನೇಕ ಪ್ರಶ್ನೆಗಳು ಎದುರಾಗುತ್ತದೆ.
ಅದೇ ದಿನ ಆ ಕಟ್ಟಡದ ಟೆರೇಸ್ ಮೇಲೆ ನಡೆಯುವ ಅರೇಬಿಕ್ ತರಗತಿಗೆ ಝೈಬುನ್ನೀಸ ತಲೆ ನೋವು ಇರುವುದರಿಂದ ಬರುವುದಿಲ್ಲ ಎಂದು ತಿಳಿಸಿ ಮಲಗಿದ್ದಳು. ನಂತರದಲ್ಲಿ ಆಕೆಯ ಕೊಠಡಿಯ ಎರಡು ಸಹನಿವಾಸಿಗಳು ಮನೆಗೆ ಕರೆಮಾಡಲು ಕೆಳಗೆ ತೆರಳಿದ್ದರು. ಅವರು ಆಕೆಯನ್ನು ಜೊತೆಯಾಗಳು ಕರೆದಾಗ ಆಕೆ ಯಾವುದೇ ಉತ್ತರ ನೀಡಿರಲಿಲ್ಲ. ಬಹುಶಃ ಆಕೆ ಗಾಢ ನಿದ್ರೆಯಲ್ಲಿದ್ದಳು. ಆಕೆಯ ಗೆಳತಿಯರು ಕರೆಮಾಡಿ ತಿರುಗಿ ಬರುವಾಗ ಕೊಠಡಿಯ ಕಿಟಕಿ, ಬಾಗಿಲುಗಳು ಮುಚ್ಚಿಕೊಂಡಿದ್ದವು. ಆದರೆ, ಅವರು ತೆರಳುವಾಗು ಅವುಗಳು ತೆರೆದುಕೊಂಡಿದ್ದವು. ನಿರಂತರವಾಗಿ ಅವರು ಬಾಗಿಲು ತಟ್ಟದರೂ ಪ್ರಯೋಜನವಾಗಲಿಲ್ಲ. “ಬಾಗಿಲಿನ ಮೇಲಿನ ಚಿಲಕ ಮಾತ್ರ ಹಾಕಿದಿದ್ದು ಕೇವಲ ಅಕಸ್ಮಿಕವೇ?”
ಯಾವಾಗ ವಿದ್ಯಾರ್ಥಿಗಳು ಬಾಗಿಲನ್ನು ಒಳಕ್ಕೆ ತುಸುತಳ್ಳಿ ಇಣುಕಿ ನೋಡಿದಾಗ ಝೈಬುನ್ನೀಸ ನೇಣು ಹಾಕಿರುವುದನ್ನು ಕಂಡು ಸಹಾಯಕ್ಕಾಗಿ ಕಿರುಚಾಡಿದರು. ರವಿ ಓಡಿ ಬಂದು ಬಾಗಿಲನ್ನು ತಳ್ಳಿ ತೆರೆದನು. “ಯಾಕೆ ರವಿ ಹಾಸ್ಟೆಲ್‍ನಲ್ಲಿ ಉಳಿದಿದ್ದನು?” ಅವರು ಹೇಳಿದಂತೆ ಘಟನೆ ಜರುಗಿತ್ತೇ? ಅಥವಾ ನಿರ್ಲಕ್ಷಿಸಲ್ಪಟ್ಟ ಬೇರೆ ವಿಷಯ ಇದೆಯೋ?
ಕಡೆಯದಾಗಿ ನಾವು ಇವುಗಳನ್ನು ಗಮನಿಸಬೇಕಿದೆ:
“ಅನುಚಿತವಾಗಿ ವರ್ತಿಸಿದ ದೂರುಗಳಿರುವ ಶಿಕ್ಷಕನನ್ನು ಯಾಕೆ ಕೆಲಸ ಮುಂದುವರಿಸಲು ಅವಕಾಶ ನೀಡಲಾಗಿದೆ?”
“ಶಾಲಾ ಸಮಯದ ನಂತರದಲ್ಲಿಯೂ ರವಿ ಯಾಕೆ ಶಾಲೆಯ ಆವರಣದೊಳಗಿದ್ದನು?” “ಪ್ರವಾಸದ ಸಂಧರ್ಭದಲ್ಲಿ ಏನಾಗಿತ್ತು?” “ಝೈಬುನ್ನೀಸಳಿಗೆ ರವಿಯ ಬಗ್ಗೆ ತಿಳಿದಿದ್ದ ವಿಷಯ ಅಥವಾ ರವಿಗೆ ಸಂಬಂಧಿಸಿದ್ದ ವಿಷಯವೇನು? “ಮಹಿಳಾ ಶಿಕ್ಷಕಿಯೋರ್ವಳಿಂದ ವಿದ್ಯಾರ್ಥಿಗಳ ನಡುವೆ ಯಾಕಾಗಿ ಕೋಮುದ್ವೇಷವನ್ನು ಭಿತ್ತಲಾಗುತ್ತದೆ?”
(ಝೈಬುನ್ನೀಸಳಿಗೆ ಉರುಳು ಕಟ್ಟಲು ತಿಳಿದಿರಲಿಲ್ಲ ಎಂಬುವುದು ಮರೆಯಬಾರದು)
“ಇದು ಆತ್ಮಹತ್ಯೆಯೋ ಅಥವಾ ಸುಸಜ್ಜಿತವಾದ ಕೊಲೆಯೋ?”

 

-ಆಸಿಮ್ ಜವಾದ್

LEAVE A REPLY

Please enter your comment!
Please enter your name here