ಎಂ.ಅಶೀರುದ್ದಿನ್ ಆಲಿಯಾ, ಮಂಜನಾಡಿ


ದಕ್ಷಿಣ ಭಾರತದ ಇತರ ರಾಜ್ಯದ ಚಿತ್ರ ರಂಗದಂತೆ ಕನ್ನಡವೂ ವಿಭಿನ್ನ ಶೈಲಿಯ ಸಿನಿಮಾ ಪ್ರಯೋಗದಿಂದಾಗಿ ವಿಶ್ವದಾದ್ಯಂತ ತನ್ನ ಛಾಪನ್ನು ಮೂಡಿಸಿದೆ. ಕೆ.ಜಿ.ಎಫ್, ಫೈಲ್ ವಾನ್ ನ ನಂತರ ಹಲವು ಕನ್ನಡ ಸಿನಿಮಗಳು ವಿವಿಧ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಅಂತಹ ಒಂದು ವಿಭಿನ್ನ ಕೊಡುಗೆಯನ್ನು  “ಅವನೇ ಶ್ರಿಮನ್ನಾರಾಯಣ” ಸಿನಿಮದ ಮೂಲಕ ಸಿಂಪಲ್ ಹುಡುಗ ರಕ್ಷಿತ್ ಶೆಟ್ಟಿಯವರು ನೀಡಿದ್ದಾರೆ.
“ಅವನೇ ಶ್ರಿಮನ್ನಾರಾಯಣ” ವಿಭಿನ್ನ ಶೈಲಿಯ ಫ್ಯಾಂಟಸಿ ಸಿನಿಮ. ಕನ್ನಡ, ಮಲಯಾಳಂ, ತಮಿಳು, ತೆಲುಗು, ಹಿಂದಿ ಭಾಷೆಯಲ್ಲಿ ಇಂಗ್ಲಿಷ್ ಸಬ್ ಟೈಟಲ್ ನೊಂದಿಗೆ ದೇಶಾದ್ಯಂತ 400 ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದೀಗಾಗಲೇ ಕರ್ನಾಟಕದಲ್ಲಿ ಬಿಡುಗಡೆಯಾಗಿ ಅಪಾರ ಮೆಚ್ಚುಗೆಯನ್ನು ಗಳಿಸಿದೆ. 
ನಾಟಕ ಕಂಪೆನಿಯೊಂದು ಅಮರಾವತಿ ಬಳಿ ಕೊಳ್ಳೆ ಹೊಡೆದಿರುವ ಸಂಪತ್ತನ್ನು ದೋಚುವ ವೇಳೆ ಸಿಕ್ಕಿ ಬೀಳುತ್ತದೆ. ಅದನ್ನು ಹುಡುಕುವ ದೃಶ್ಯದೊಂದಿಗೆ ಸಿನಿಮ ಆರಂಭವಾಗುತ್ತದೆ.

ದರೋಡೆಗೆ ಹೆಸರಾದ ಅಮರಾವತಿ ಎಂಬ ಊರಿನ “ಅಭೀರ” ಸಂಸ್ಥಾನದ ರಾಮಚಂದ್ರನ ಇಬ್ಬರು ಮಕ್ಕಳು ಜಯರಾಮ ಮತ್ತು ತುಕಾರಾಮ ತಂದೆಯ ಅಂತ್ಯಗಳಿಗೆಯಲ್ಲಿ ಅಧಿಕಾರಕ್ಕಾಗಿ ತುದಿಗಾಲಲ್ಲಿ ನಿಂತಿರುವಾಗ ‘ಯಾರು ಲೂಟಿಯನ್ನು ಹಿಡಿದು ತರುತ್ತಾರೋ ಅವರು ಈ ಸಂಸ್ಥಾನದ ಅಧಿಪತಿಯಾಗಿ ಅಧಿಕಾರ ಗಾದಿಗೆಯನ್ನು ಏರಬಹುದು’ ಎನ್ನುತ್ತಾ ಕೊನೆಯುಸಿರೆಳೆದ. ಜಯರಾಮ ತುಕರಾಮನನ್ನು ಕೊಲ್ಲುವುದಿಲ್ಲ ಎಂಬ ಮಾತು ತಂದೆಗೆ ಕೊಟ್ಟ ಕಾರಣಕ್ಕೆ ಅವನನ್ನು ಕೊಲ್ಲದೆ ಕೋಟೆಯಿಂದ ಹೊರಕಟ್ಟಿದ ಜಯರಾಮ, ಲೂಟಿ ಕಂಡು ಹಿಡಿದ ಮೇಲೆ ಅಧಿಕಾರದ ಗಾದಿಗೆಯನ್ನು ಏರುವೆನೆಂದು ಶಪಥ ಮಾಡಿದ. ತುಕಾರಾಮ ಮತ್ತು ಜಯರಾಮನಿಗೆ ವೈಷಮ್ಯ ಹುಟ್ಟಿ ಲೂಟಿಗಾಗಿ ಪರಸ್ಪರ ಹುಡುಕಾಟ ಆರಂಭವಾಗುತ್ತದೆ.
ಅಮರಾವತಿಗೆ ಹೊಸದಾಗಿ ಆಯ್ಕೆ ಯಾದ ಪೊಲೀಸ್ ಅಧಿಕಾರಿ ನಾರಾಯಣ ಆಗಮನದೊಂದಿಗೆ ಕಥೆಯಲ್ಲಿ ಹೊಸ ಕಹಳೆ ಶುರುವಾಗುತ್ತದೆ. ‘ಹಾಯ್ ಅಮರಾವತಿ’ ಪತ್ರಿಕೆಯ  ಲಕ್ಷ್ಮಿಯ ಪ್ರವೇಶ ಕಥೆಗೆ ಹೊಸ ತಿರುವನ್ನು ನೀಡುತ್ತದೆ. 


ಆಸೆ, ಹಗೆತನ, ದ್ವೇಷ, ಪ್ರೀತಿ ಹಾಸ್ಯ,ಬದುಕುಗಳ ಜೊತೆಗೆ ಸಿನಿಮ ಸಂಚರಿಸುತ್ತದೆ. ಪತ್ತೇದಾರಿ ರೂಪದ ಚಿತ್ರವಾದರೂ ದರೋಡೆ ಮಾಡಿದ ಬಗ್ಗೆ ದೃಶ್ಯಾವಿಷ್ಕಾರ ಮಾಡದ್ದು ಪ್ರೆಕ್ಷಕರಿಕೆ ಬೇಸರ ತರಿಸಿದೆ. ಪತ್ತೆದಾರಿಕೆಯನ್ನು ಪೌರಾಣಿಕ ಕಥೆಯಾದರಿತ ಸನ್ನಿವೇಶದ ಜೊತೆ ಜೊಡಿಸಿದ್ದು ಒಂದು ವಿಶೇಷಎನಿಸುತ್ತದೆ.ಇಂತಹ ಒಂದು ಸಿನಿಮ ಇದುವರೆಗೆ ಕನ್ನಡದಲ್ಲಿ ಬಂದಿಲ್ಲ ಎನ್ನಬಹುದು.  ನಟ ರಕ್ಷಿತ್ ಶೆಟ್ಟಿಯ ಉತ್ತಮ ನಿರೂಪಣೆ ಶೈಲಿ ಸಿನಿಮದಲ್ಲಿ ಆಕರ್ಷಣೀಯವಾಗಿದೆ. ಶಾನ್ವಿ ಶ್ರೀವಾಸ್ತವ್ ನಟನೆಯಲ್ಲಿ ಮುಗ್ದತೆ ತೋರಿಸಿದ್ದಾರೆ.  ಪ್ರಮೋದ್ ಶೆಟ್ಟಿ(ತುಕಾರಾಮ) ಅಚ್ಚುತ್ ಕುಮಾರ್ (ಅಚ್ಚುತನ್ನ) ಬಾಲಾಜಿ ಮನೋಹರ್ ರವರ ಜಯರಾಮ ಪತ್ರ ಸಿನಿಮಾದ ನಾಯಕನನ್ನು ಮೀರಿಸುವಂತೆ ಅತ್ಯುತ್ತಮವಾಗಿದೆ. ಕಥೆಯ ತಿರುಳು ಸಿಗುವುದು ಬ್ಯಾಂಡ್ ಮಾಸ್ಟರ್ ಮೂಲಕ ಆ ಪಾತ್ರವನ್ನು ಗೋಪಾಲ ಕೃಷ್ಣ ದೇಶ ಪಾಂಡೆಯವರು ಉತ್ತಮವಾಗಿ ನಿಭಾಯಿಸಿದ್ದಾರೆ. ಗುಪ್ತ ಸ್ವಾಮೀಜಿಯ ಪಾತ್ರದಲ್ಲಿ ಯೋಗರಾಜ್ ಭಟ್, ಕೌಬಾಯಿ ಕೃಷ್ಣನಾಗಿ ಅತಿಥಿ ಪಾತ್ರದಲ್ಲಿ ರಿಷಭ್ ಶೆಟ್ಟಿ, ಪ್ರಕಾಶ್ ತುಮಿನಾಡ್, ತುಕಾರಾಮ ನ ನಿಷ್ಠಾವಂತ ಸೇವಕನಾಗಿ ರಘು ರಾಮನ ಪಾತ್ರದಲ್ಲಿ ಎಂ.ಕೆ ಮಠರ ಅಭಿನಯವು ಜಬರ್ದಸ್ತಾಗಿ ಮೂಡಿ ಬಂದಿದೆ. ಸಿನಿಮಾದುದ್ದಕ್ಕೂ ರಕ್ಷಿತ್ ಶೆಟ್ಟಿ ಆವರಿಸಿ ಕೊಂಡಿದ್ದಾರೆ. ಮೂರು ವರ್ಷಗಳ ಹಿಂದೆ ಕಿರಿಕ್ ಪಾರ್ಟಿ ಯಲ್ಲಿ ನೋಡಿದ ಕರ್ಣನ ತುಂಟುತನ ನಾರಾಯಣ ನಲ್ಲಿಯೂ ಅನುಭವವಾಗುತ್ತದೆ. ಒಟ್ಟಾರೆಯಾಗಿ ಸಿನಿಮಕ್ಕೆ ಹಾಲಿವುಡ್ ಟಚ್ ಇದೆಯಾದರೂ ಕನ್ನಡ ಸಿನಿ ಪ್ರೀಯರು ಎಷ್ಟು ಇಷ್ಟ ಪಡುವರು ಎಂಬುವುದು ನೋಡಬೇಕು


ಸುಮಾರು ಎಂಬತ್ತು ದಶಕದ ಕಥೆಗೆ ಹೊಂದಿಕೊಂಡಂತೆ ಸಿನಿಮ ನ್ಯಾಚುರಲ್ ಸೆಟ್ವರ್ಕ್ ಮತ್ತು ಮೇಕಿಂಗ್, ಛಾಯಾಗ್ರಹಣ, ಉತ್ತಮವಾಗಿದೆ. ಚರಣ್ ರಾಜ್ ಸಂಗೀತ ಸಂಯೋಜನೆ, ಅಜನಿಷ್ ಲೋಕನಾಥ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಮೂರು ಘಂಟೆ ಆರು ನಿಮಿಷದ ಸಿನಿಮಾ ಧೀರ್ಘ ಅನಿಸುತ್ತದೆ ಕತ್ತರಿ ಪ್ರಯೋಗ ಮಾಡಿದ್ದಿದ್ದರೆ ಸಿನಿಮಾ ಇನ್ನಷ್ಟು ಚೊಕ್ಕವಾಗುತಿತ್ತು ನನ್ನ ಅನಿಸಿಕೆ “ಹ್ಯಾಂಡ್ಸಪ್” ಹಾಡು ತರಂಗ ಮೂಡಿಸಿದೆ. ಪುಷ್ಕರ್ ಮಲ್ಲಿಕಾರ್ಜುನಯ್ಯ, ಎಚ್.ಕೆ. ಪ್ರಕಾಶ್ ಚಿತ್ರ ನಿರ್ಮಿಸಿದ್ದಾರೆ ಪರಭಾಷಾ ಸಿನಿಮಗಳಿಂದ ಕನ್ನಡಕ್ಕೆ ಬಟ್ಟಿಳಿಸುವುದಕ್ಕಿಂತ ಇಂತಹ ಕ್ರಿಯಾತ್ಮಕ ಮತ್ತು ಕಲಾತ್ಮಕ ಸಿನಿಮಾ ಇನ್ನಷ್ಟು ಮೂಡಿ ಬರಲಿ.

LEAVE A REPLY

Please enter your comment!
Please enter your name here