✍️ಮನ್ಸೂರ್ ಅಹ್ಮದ್ ಬಿನ್ ಅಬ್ದುಲ್ಲಾ ಸಾಮಣಿಗೆ

ಒಂದು ಅರ್ಥಪೂರ್ಣವಾದ ಮಾತು ಸಾಧಾರಣವಾಗಿ ಚಾಲ್ತಿಯಲ್ಲಿದೆ ರೋಗ ಬಂದರೆ ಮಾತ್ರ ಸಾವು ಸಂಭವಿಸಲು ಸಾಧ್ಯವಿಲ್ಲ, ಹಾಗೆಯೇ ಸಾವು ಬರಲು ರೋಗವೇ ಕಾರಣವಾಗಬೇಕಂತಿಲ್ಲ. ಕಳೆದ ಕೆಲವು ತಿಂಗಳಿನಿಂದ ಇಡೀ ಲೋಕದ ಜನರು ಭಯಭೀತರಾಗಿದ್ದಾರೆ.ಹೆದರಿಕೆಯಿಂದ ಸ್ವಂತ ಶರೀರಕ್ಕೆ ರೋಗವನ್ನು ಹೌವಾನಿಸುವಂತಾಗಿದೆ. ಕಾರಣ ಇವತ್ತು ದಿನಬೆಳಗಾದರೆ ವಯಸ್ಸಾದ ಮುದುಕರಿಂದ ಇಡಿದು ಸಣ್ಣ ಮಕ್ಕಳ ಬಾಯಲ್ಲೂ ಒಂದೇ ರೋಗದ ಮಾತು ಕೊರೋನ ಕೊರೋನ ಕೊರೋನ….

ಈ ಕೊರೋನ ರೋಗ ಜನರು ತಿಳಿದುಕೊಂಡಿರುವ ಹಾಗೆ ಅಷ್ಟೊಂದು ಭಯಾನಕ ರೋಗ ಆಗಿದೆಯಾ ? ಕೊರೋನ ಹೆಸರು ಕೇಳಿದಾಗಲೆಲ್ಲಾ ಜನರೇಕೆ ಅಷ್ಟೊಂದು ಭಯಬೀತರಾಗುತ್ತಾರೆ ? ಈ ಮೊದಲು ಅದೆಷ್ಟೊ ಭಯಾನಕ ರೋಗಗಳು ಬಂದು ಹೋಗಿವೆ. 2002 ರಲ್ಲಿ ಸಾರ್ಸ್ ಎನ್ನುವ ಸಾಂಕ್ರಾಮಿಕ ರೋಗ ಬಂದಿತ್ತು, 2012 ರಲ್ಲಿ ಮಾರ್ಸ್ ಎಂಬ ರೋಗ ಕೂಡ ಬಂದಿತ್ತು.ಇದು ಶೀತ, ಜ್ವರ ಉಸಿರಾಟದ ತೊಂದರೆ, ಕೆಮ್ಮು ಮೊದಲಾದ ಕೊರೋನ ಮಾದರಿಯ ರೋಗ ಲಕ್ಷಣಗಳಿಂದ ಕೊಡಿತ್ತು. ಅದೇ ರೀತಿ ನೀಫಾ, ಎಬೋಲಾ ಹಲವಾರು ಸಾಂಕ್ರಾಮಿಕ ರೋಗಗಳು ದೇಶದಲ್ಲಿ ಬಂದು ಹೋಗಿವೆ.

ಕೊರೋನ ರೋಗ ಬಂದಾಗಿನಿಂದ ಈ ರೋಗ ಸೋಶಿಯಲ್ ಮೀಡಿಯಾಗಳಲ್ಲಿ, ಟಿ ವಿ ಚಾನೆಲ್ಗಳಲ್ಲಿ ಈ ರೋಗದ ಬಗ್ಗೆ ಜನರಲ್ಲಿ ಅರಿಯು ಮೂಡಿಸುವುದರ ಬದಲಾಗಿ ಜನರಲ್ಲಿ ಭಯವನ್ನು ಹುಟ್ಟಿಸಿದೆ. ಜನಸಾಮಾನ್ಯರು ಕೊರೋನ ರೋಗದ ಹೆಸರು ಕೇಳಿದಾಗಲೆಲ್ಲ ನೆಗೆದು ಬೀಳುವಂತಾಗಿದೆ.
ಇಂದು ಕೊರೋನ ರಣ ಕೇಕೆ.. ಕಿಲ್ಲರ್… ಹೆಮ್ಮಾರಿ ಕೊರೋನ… ಅಂತ ಹೇಳಿ ನ್ಯೂಸ್ ಚಾನೆಲ್ ಗಳು ಟಿಆರ್ಪಿ ಏರಿಸುವ ಭರದಲ್ಲಿ ದಿನಬೆಳಗಾದರೆ ಅಲ್ಲಿ ಇಷ್ಟು ಜನರ ಸಾವು ಇಲ್ಲಿ ಇಷ್ಟು ಜನರ ಸಾವು, ಲಾಕ್ ಡೌನ್,ಸೀಲ್ ಡೌನ್ , ಕಂಟೊನ್ಮೆಂಟ್ ಝೋನ್ ಅದು ಇದು ಅಂತ ಹೇಳಿ ಜನರ ಮನಸ್ಸಿನಲ್ಲಿ ಇಲ್ಲಸಲ್ಲದ ಭಯವನ್ನು ತುಂಬಿದೆ. ದೊಡ್ಡದಾಗಿ. ವಿಚಿತ್ರವಾಗಿ ಕೂಗಿ. ಹೇಳಿದ್ದೇ ಹೇಳುವ ನ್ಯೂಸ್ ಚಾನಲ್ ಗಳಿಂದ ಸ್ವಲ್ಪ ದೂರ ಇರಿ…ನಿಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ನಿರತರಾಗಿ.ಆದಷ್ಟು ಮನಸ್ಸಿನಲ್ಲಿರುವ ಆತಂಕಗಳಿಂದ ಹೊರ ಬನ್ನಿ.

ಕೊರೋನ ರೋಗದ ಬಗ್ಗೆ ಹೆದರುವುದಕ್ಕಿಂತ ಹೆಚ್ಚಾಗಿ ಜನರು ಈ ರೋಗ ಯಾವ ರೀತಿಯಾಗಿ ಹರಡುತ್ತದೆ. ಈ ರೋಗ ಬಂದರೆ ರೀತಿಯ ಮುಂಜಾಗ್ರತೆ ಕ್ರಮ ಅನುಸರಿಸಬೇಕು ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು .ಕೊರೋನ ಒಂದು ವೈರಸ್. ಇದು ಗಾಳಿಯಲ್ಲಿ ಹರಡುವ ಸೋಂಕು ಅಲ್ಲ. ಬದಲಾಗಿ ಮನುಷ್ಯರಿಂದ ಮನುಷ್ಯರಿಗೆ ಹರಡಿತ್ತದೆ.
ಒಬ್ಬ ವ್ಯಕಿಯ ದೇಹದಲ್ಲಿ ಕೊರೋನ ವೈರಸ್ ಇದೆ ಎಂದಾದರೆ ಹೆದರಬೇಕಾಗಿಲ್ಲ. ಅದು ಸಾಧಾರಣ ಜ್ವರದ ಹಾಗೆ, ಜ್ವರ, ಶೀತ, ಕೆಮ್ಮ, ಗಂಟಲು ನೋವು, ಮೊದಲಾದ ಲಕ್ಷಣಗಳಿರುತ್ತದೆ. ಇದು ವನ ಕೆಮ್ಮ , ತೀವ್ರವಾದ ತಲೆನೋವು, ವಾಂತಿ ಭೇದಿ, ಮುಂತಾದ ಲಕ್ಷಣಗಳು ಕಂಡು ಬಂದರೆ ಡಾಕ್ಟರು ಗಳ ಸಲಹೆ ಪಡೆಕೊಳ್ಳುವುದು ಉತ್ತಮ. ಶ್ವಾಸಕೋಸದ ತೊಂದರೆ, ಹೃದಯಕ್ಕೆ ಸಂಭದಿಸಿದ ಖಾಯಿಲೆಗಳು, ಕಿಡ್ನಿ ರೋಗ , ಮಧುಮೇಹ, ನ್ಯೂಮೋನಿಯ, ಮುಂತಾದ ರೋಗ ಇರುವವರು, 60 ವರ್ಷಕ್ಕಿಂತ ಹೆಚ್ಚಿನ ವಯಸ್ಸಾದವರು, ಸಣ್ಣ ಮಕ್ಕಳು ಅವರ ಆರೋಗ್ಯದ ಕಡೆ ಹೆಚ್ಚಿನ ಗಮನವಿಡ ಬೇಕಾಗಿದೆ.

ಪ್ರತಿ ವರ್ಷ ಅದೆಷ್ಟೊ ಜನರು ಬೇರೆ ಬೇರೆ ರೋಗದ ಕಾರಣಗಳಿಂದ ಪ್ರಾಣ ಕಳೆದುಕೊಂಡಿದ್ದಾರೆ. ಅದು ಅಲ್ಲದೆ ಪ್ರತೀ ಮಳೆಗಾಲದಲ್ಲಿ ಸಾಧಾರಣವಾಗಿ ವೈರಲ್ ಜ್ವರ , ಶೀತ, ನೆಗಡಿ, ಕೆಮ್ಮು, ತಲೆನೋವು ಬಂದು ಮೂರು ನಾಲ್ಕು ದಿನಗಳಲ್ಲಿ ಕಡಿಮೆಯಾಗುತ್ತದೆ. ಮಳೆಗಾಲದ ನೀರು ನಿಂತು ಡೆಂಗ್ಯೂ , ಚಿಕನ್ ಗೊನ್ಯಾ ದಂತಹ ಸಾಂಕ್ರಾಮಿಕ ರೋಗ ಕೊಡ ಇದೆ ಸಮಯದಲ್ಲಿ ಸಾಧಾರಣವಾಗಿ ಹರಡುತ್ತವೆ. ಕಳೆದ ವರ್ಷ ಅದೆಷ್ಟೊ ಜನರು ಡೆಂಗ್ಯೂ ಜ್ವರಕ್ಕೆ ತುತ್ತಾಗಿದ್ದು,ಹಲವರು ಪ್ರಾಣವನ್ನು ಕಳೆದುಕೊಂಡದ್ದಾರೆ . ಈ ಕೊರೋನ ಕೂಡಾ ಇದೇ ರೀತಿಯಾದ ಒಂದು ವೈರಸ್. ವೈಜ್ಙಾನಿಕವಾಗಿ ಒಂದು ಮಾತು ಇದೆ “prevention is better than cure””ಎಚ್ಚರ ವಹಿಸುವುದು ಚಿಕಿತ್ಸೆಗಿಂತ ಉತ್ತಮವಾಗಿದೆ” ರೋಗ ಬಂದ ಮೇಲೆ ಬೆಚ್ಚಿಬೀಳುದಕ್ಕಿಂತ ರೋಗ ಬರುವ ಮೊದಲೆ ನಾವು ಎಚ್ಚರ ವಹಿಸುವುದು ಉತ್ತಮ.ಕೊರೋನ ರೋಗ ಬರದ ಹಾಗೆ ಹೆಚ್ಚರವಿರಲು ನಾವು ಕೈಗಳನ್ನು ಆವಾಗ ಆವಾಗ ತೊಳೆದುಕೊಳ್ಳುವುದು,ಮಾಸ್ಕ್ ಉಪಯೋಗಿಸುವುದು, ಸಾಮಾಜಿಕ ಸಂಪರ್ಕದ ಅಂತರವನ್ನು ಕಾಪಾಡಿಕೊಳ್ಳುವುದು, ಕಣ್ಣು, ಮೂಗು ಮತ್ತು ಬಾಯಿಯನ್ನುಮುಟ್ಟುವುದನ್ನು ತಪ್ಪಿಸುವುದು, ಸೀನುವಾಗ ಅಥವಾ ಕೆಮ್ಮುವಾಗ ಟಿಶ್ಯೂನಿಂದ ಬಾಯಿಯನ್ನು ಮುಚ್ಚುವುದು. ಗುಂಪು ಜನರು ಇರುವ ಕಡೆ ಹೋಗದೆ ಇರುವುದು.ಜ್ವರ, ಕಫ ಮತ್ತು ಉಸಿರಾಡಲು ತೊಂದರೆ ಎದುರಾದಾಗ ಶೀಘ್ರವಾಗಿ ಅಗತ್ಯ ವೈದ್ಯಕೀಯ ಕ್ರಮ ಕೈಗೊಳ್ಳುವುದು.

ಧೈರ್ಯ ಒಂದಿದ್ದರೆ ಕೊರೋನದಿಂದ ನಾವು ಗೆಲುವು ಸಾಧಿಸಬಹುದು. ಕೊರೋನ ಬಗ್ಗೆ ಭಯ ಬೇಡ, ಅದಕ್ಕೆ ಬೇಕಾಗಿರುವುದು ಧೈರ್ಯ ಮಾತ್ರ. ವೈರಸ್​ ತುಂಬಾ ವೀಕ್​, ಮನುಷ್ಯರ ದೇಹವೇ ತುಂಬಾ ಸ್ಟ್ರಾಂಗ್. ಆತ್ಮವಿಶ್ವಾಸವನ್ನು ಬೆಳೆಸಿ ಸಾಮಾಜಿಕ ಅಂತರ ಕಾಪಾಡಿ. ವಾಟ್ಸಾಫ್, ಸೋಶಿಯಲ್ ಮೀಡಿಯಾಗಳಲ್ಲಿ ಬರುವ ವಿಷಯಗಳಿಗೆ ತಲೆಕೆಡಿಸಿಕೊಳ್ಳದೆ ಆರೋಗ್ಯದ ಕಡೆ ಗಮನ ಹರಿಸಿ. ಆದಷ್ಟು ಬೇಗ ಈ ಕೊರೋನವೆಂಬ ಮಹಾಮಾರಿ ರೋಗದಿಂದ ಮುಕ್ತವಾಗಲು ದೇವರಲ್ಲಿ ಸದಾ ಪ್ರಾರ್ಥಿಸಿರಿ. ಕೊರೋನ ಭಯ ಬೇಡ ಎಚ್ಚರ ವಿರಲಿ…

LEAVE A REPLY

Please enter your comment!
Please enter your name here