ತಲ್ಹ ಇಸ್ಮಾಯಿಲ್ ಬೆಂಗ್ರೆ 
ರಿಸರ್ಚ್ ಸೆಂಟರ್ ಫಾರ್ ಎಜುಕೇಷನಲ್ ರಿಸರ್ಚ್ ಅಂಡ್ ಟ್ರೈನಿಂಗ್, ನವ ದೆಹಲಿ

ಒಂದು ವೇಳೆ ದೇಶದಲ್ಲಿ  ಅತೀ ಹೆಚ್ಚು ಕಾನೂನು ದುರುಪಯೋಗ ಮಾಡುತ್ತಿರುವ ಪೊಲೀಸ್ ಇಲಾಖೆಯೆಂದರೆ ಅದು ನಮ್ಮ ರಾಜ್ಯ ಪೊಲೀಸ್ ಇಲಾಖೆ ಇರಬಹುದು ಎಂದರೆ ತಪ್ಪಾಗಲಾರದು, ಏಕೆಂದರೆ ಸಣ್ಣ ಸಣ್ಣ ವಿಚಾರಗಳನ್ನು ಹುಡುಕಿಕೊಂಡು, ಒಂಬತ್ತು ವಯಸ್ಸಿನ ಮಕ್ಕಳ ಬೀದಿ ನಾಟಕಕ್ಕೂ ದೇಶ ದ್ರೋಹ ಕೇಸು ದಾಖಲಿಸುವ ಮತ್ತು ಯಾವುದೇ ಸಾಮಾನ್ಯ ಕಾನೂನು ಪಾಲಿಸದೇ, ಪೊಲೀಸ್ ಸಮ ವಸ್ತ್ರ ಧರಿಸದೆಯೇ ತಮ್ಮೊಂದಿಗೆ ಯಾವುದೇ ಮಕ್ಕಳ ಕಲ್ಯಾಣ ಅಧಿಕಾರಿಯನ್ನು ಸೇರಿಸದೆ ಪದೇ ಪದೇ ಅವರ ವಿಚಾರಣೆ ನಡೆಸಿದ ಮತ್ತು ಅವರ ಅಧ್ಯಾಪಕರು ಮತ್ತು ಪೋಷಕರನ್ನು ಜೈಲಿಗಟ್ಟಿದ ಅಮಾನವೀಯ ಘಟನೆಯು ವಿಶ್ವದಲ್ಲೇ ನಮ್ಮ ರಾಜ್ಯ ತಲೆತಗ್ಗಿಸುವಂತೆ ಮಾಡಿದೆ.
ರಾಜ್ಯ ಪೊಲೀಸ್ ಇಲಾಖೆಯ ವಿರುದ್ಧ ಯಾರೂ ಧ್ವನಿಯೆತ್ತುತ್ತಿಲ್ಲ ಎನ್ನುವುದೇ ಕನ್ನಡಿಗರಿಗೆ ಅತ್ಯಂತ ನಾಚಿಕೆಯ ಸಂಗತಿ. ಇನ್ನು ಕವಿ  ಸಿರಾಜ್ ಬಿಸರಳ್ಳಿಯವರ ”ನಿನ್ನ ದಾಖಲೆ ಯಾವಾಗ ನೀಡುತ್ತಿ?” ಎಂಬ ಕವನ ಇಂದು ದೇಶದಾದ್ಯಂತ ಅತಿ ಹೆಚ್ಚು ಚರ್ಚೆಯಲ್ಲಿದೆ. ಏಕೆಂದರೆ, ಪ್ರಾಥಮಿಕ ಶಾಲೆಗೆ ಹೋಗುವ ಮಕ್ಕಳ ಮೇಲೆ ರಾಜ್ಯ ದ್ರೋಹ ಕೇಸು ಹಾಕಿದ ಅದೇ ಪೊಲೀಸ್ ಇಲಾಖೆಯು ಮತ್ತೊಮ್ಮೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 505 ಎಂದರೆ Statements conducing to public mischief.(”ಸಾರ್ವಜನಿಕ ತೊದರೆಗೆ  ಕಾರಣವಾಗುವ ಹೇಳಿಕೆಗಳು”) ಸೆಕ್ಷನ್ 505 (1)”Whoever makes, publishes or circulates any statement, rumor or report” (ಯಾವುದೇ ಹೇಳಿಕೆ, ವದಂತಿ ಅಥವಾ ವರದಿಯನ್ನು ಮಾಡುತ್ತಾರೆ, ಪ್ರಕಟಿಸುತ್ತಾರೆ ಅಥವಾ ಪ್ರಸಾರ ಮಾಡುತ್ತಾರೆ), ಇನ್ನು ನೀವೊಮ್ಮೆ ಸಿರಾಜ್ ಬೇಸರಹಳ್ಳಿಯವರ ಕವನವನ್ನು ಓದಿ,

ಆಧಾರು, ರೇಷನ್ ಕಾರ್ಡಗಳ ಕ್ಯೂನಲ್ಲಿ
ಥಂಬಿನ, ಸರ್ವರಿನ ಮಂಗನಾಟದಲ್ಲಿ
ಬದುಕ ಕಳೆದುಕೊಳ್ಳು ತ್ತಿರುವವರ ದಾಖಲೆ
ಕೇಳುವವನೇ ನಿನ್ನ ದಾಖಲೆ ಯಾವಾಗ ನೀಡುತ್ತಿ?

ನಾಡಿನ ಸ್ವಾತಂತ್ರ್ಯಕ್ಕಾಗಿ ನಗುನಗುತ್ತಲೇ ನೇಣಿಗೇರಿದವರ ,
ಹೆಸರೂ ಬೇಡವೆಂದು ಹುತಾತ್ಮರಾದವರ
ಇತಿಹಾಸದ ಹಾಳೆಗಳ ಹರಿಯುತ್ತಿರುವವನೇ
ನಿನ್ನ ದಾಖಲೆ ಯಾವಾಗ ನೀಡುತ್ತಿ ?

ತಾಜ್ ಮಹಲ್, ಚಾರ್ ಮಿನಾರು ಗುಂಬಜಗಳಿಗೆ
ಕೆಂಪು ಕೋಟೆ ಕುತುಬ್ ಮಿನಾರುಗಳಿಗೆ ಸಾಕ್ಷಿ ಕೇಳುತ್ತಿರುವವನೇ
ನಿನ್ನ ದಾಖಲೆ ಯಾವಾಗ ನೀಡುತ್ತಿ?

ಬ್ರಿಟಿಷರ ಬೂಟು ನೆಕ್ಕಿದ ತಲೆಹಿಡುಕರ
ಧರ್ಮ ದ್ವೇಷದ ಅಮಲಿನಲ್ಲಿ ರಕ್ತ ಕುಡಿಯುತ್ತಿರುವ
ಗೊಬೆಲ್ ಸಂತತಿಯವನೇ
ನಿನ್ನ ದಾಖಲೆ ಯಾವಾಗ ನೀಡುತ್ತಿ?

ಪಕೋಡ ಮಾರಿ ಬದುಕಿದವನು
ಚಾ ಮಾರಿ ಬದುಕಿದವನು ನನ್ನೂರಿನಲ್ಲಿ
ಮನುಷ್ಯತ್ವ ಮಾರಿಕೊಂಡಿಲ್ಲ
ಸ್ವಾಭಿಮಾನ ಮಾರಿಕೊಂಡಿಲ್ಲ, ಸುಳ್ಳಿನ ಕಂತೆಗಳ ಕತೆ ಕಟ್ಟಿಲ್ಲ
ಹೇಳು ನಿನ್ನ ದಾಖಲೆಗಳ ಯಾವಾಗ ನೀಡುತ್ತಿ ?

ಮುಳ್ಳು ಚುಚ್ಚಿ, ಹರಿದು, ಸಿಡಿದು ಹೋದ
ಟ್ಯೂಬುಗಳ, ಟೈಯರುಗಳ ತಿದ್ದಿ ತೀಡಿ ಗಾಳಿ ತುಂಬಿದ
ಪಂಚರ್ ನವನು ತನ್ನತನವನ್ನು ಮಾರಿಕೊಳ್ಳಲಿಲ್ಲ
ನೀನು ದೇಶವನ್ನೇ ಮಾರಿಬಿಟ್ಟೆಯಲ್ಲ
ಹೇಳು ನಿನ್ನ ದಾಖಲೆಗಳ ಯಾವಾಗ ನೀಡುತ್ತಿ ?

ದೇಶವನ್ನೇ ಯಾಮಾರಿಸಿದ ನಿನಗೆ
ನಕಲಿ ದಾಖಲೆಗಳು ದೊಡ್ಡದಲ್ಲ ಬಿಡು
ಕನಿಷ್ಠ ಮನುಷ್ಯತ್ವವೂ ನಿನಗಿದೆ
ಎನ್ನುವ ದಾಖಲೆ ಯಾವಾಗ ನೀಡುತ್ತಿ ?

ಈ ಇಡೀ ಕವನದಲ್ಲಿ ಎಲ್ಲಿಯೂ ಯಾವುದೇ ಸರಕಾರ ಅಥವಾ ರಾಜ್ಯಕೀಯ ನಾಯಕರ ಹೆಸರಿಲ್ಲ ಎನ್ನುವುದು ಸತ್ಯ ಮತ್ತು ಯಾವುದೇ ವಿಚಾರದ ಕುರಿತು ಸಾರ್ವಜನಿಕರಿಗೆ ತೊಂದರೆ ನೀಡುವ ಉದ್ದೇಶವು ಕಾಣಲು ಸಾಧ್ಯವಿಲ್ಲ. ಎಂದು ಒಬ್ಬ ಕಾನೂನು ಕಲಿತ ನನ್ನ ಅನಿಸಿಕೆ. ಈ ರೀತಿ ಕೇಸುಗಳಾದರೆ, ದಾಖಲೆಯ ಬಗ್ಗೆ ನೀವು ಯಾರನ್ನಾದರೂ  ”ನಿನ್ನ ದಾಖಲೆ ಯಾವಾಗ ನೀಡುತ್ತಿ?’‘ ಎಂದು ನಮ್ಮನ್ನು  ಯಾರಾದರೂ ಕೇಳಿದರೆ ಈ ಕರ್ನಾಟಕ ಪೊಲೀಸ್ ಅವರ ಮೇಲೂ ಕೇಸು ದಾಖಲಿಸಬವುದೇ? ಏನೇ ಇರಲಿ CAA,NRC,NPR ವಿರುದ್ಧದ ಈ ಜನ ಚಳುವಳಿಯನ್ನು ಈ ರೀತಿ ಕೇಸುಗಳು, ಪೊಲೀಸ್ ಗೋಲಿಬಾರ್ ಮತ್ತು ಮಕ್ಕಳ ಮೇಲೆ ಅಮಾನವೀಯ ವರ್ತನೆಯಿಂದ  ಹತ್ತಿಕ್ಕ ಬಹುದೆಂದು ಈ ಸರ್ಕಾರ ಪೊಲೀಸ್ ಇಲಾಖೆಯು  ಭಾವಿಸುವುದಾದರೆ ಅವರ ಈ ಭಾವನೆಯು ತಪ್ಪೆಂದು ಅವರು ಅರ್ಥಮಾಡಿಕೊಳ್ಳಬೇಕು ಏಕೆಂದರೆ, ಈ ರೀತಿಯ ಘಟನೆಗಳೇ ಈ ಚಳುವಳಿಯನ್ನು ಇನ್ನಷ್ಟು ಶಕ್ತಿ ಪಡಿಸಿದೆ ಎನ್ನುವುದು ವಾತ್ಸವ ಮತ್ತು ಅದು ಈ ಕಾನೂನು ಹಿಪಡಿಯುವುವರೆಗೂ ಮುದುವರಿಯಲಿದೆ ಎನ್ನುವುದು ಚಳುವಳೀರ್ಗರರ ಮೊಂಡು ಹಠ.

1 COMMENT

Leave a Reply to Abdussalam Cancel reply

Please enter your comment!
Please enter your name here