ಕರ್ನಾಟಕದ ಕರಾವಳಿಯ ಭಾಗವಾದ ಅವಿಭಜಿತ ದಕ್ಷಿಣ ಕನ್ನಡ ಅರ್ಥಾತ್ ತುಳುನಾಡು ಅನನ್ಯವಾದ ಸಂಸ್ಕೃತಿ, ಚರಿತ್ರೆಯನ್ನು ತನ್ನ ಗರ್ಭದಲ್ಲಿ ಹುದುಗಿಸಿಕೊಂಡಿದೆ. ಇಲ್ಲಿರುವಷ್ಟು ಭಾಷಾ ವೈವಿಧ್ಯ, ಜನಾಂಗ ವೈವಿಧ್ಯ, ಆಚಾರ – ವಿಚಾರಗಳು, ಸಂಪ್ರದಾಯಗಳು ಇತರೆಡೆಗಿಂತ ತೀರಾ ಭಿನ್ನ. ನಾನಾಧರ್ಮ ಹಾಗೂ ಜಾತಿಗಳು, ಅವುಗಳಲ್ಲಿನ ಉಪಜಾತಿಗಳು – ಇವೆಲ್ಲವಕ್ಕೂ...