ಲೇಖಕರು: ಮೌ.ವಹೀದುದ್ದಿನ್ ಖಾನ್

ಅನುವಾದ: ತಲ್ಹಾ ಕೆ.ಪಿ

ನಾನು ನಿರ್ಜನ ಪ್ರದೇಶವಾಗಿರುವ ಒಂದು ಬೆಟ್ಟದ ಮೇಲೆ ನಿಂತಿದ್ದೆ. ನನ್ನ ಮುಂದೆ ಅಚ್ಚಹಸಿರಾದ ಮರಗಳು ಬೆಳೆದು ನಿಂತಿದ್ದುವು. ಹಕ್ಕಿಗಳ ಚಿಲಿಪಿಲಿ ಶಬ್ದವು ಕೇಳುತ್ತಿತ್ತು ವಿವಿಧ ರೀತಿಯ ಪ್ರಾಣಿಗಳು ನಡೆದಾಡುತ್ತಿದ್ದವು. ಇದೆಲ್ಲವೂ ನನ್ನನ್ನು ವಿಚಿತ್ರವಾಗಿ ಪ್ರಭಾವಿಸುತಿತ್ತು.ತನ್ನ ಅಪ್ಪಣೆಯಂತೆ ವಿವಶವಾಗಿ ಮಆರ್ಗದರ್ಶನವನ್ನು ಪಾಲಿಸುತ್ತಾ ನಡೆದಾಡುವಂತೆ ಇರ್ಬಂಧಿಸಿದ ದೇವಾನು ಎಂತಹ ಮಹಾಪ್ರತಾಪಶಾಲಿ ಮತ್ತು ಎಷ್ಟು ಪರಿಪೂರ್ನನ್ನು ಎಂದು ಗೋಚರಿಸಿತು.

ಎಷ್ಟು ಸುಂದರ ಮತ್ತು ಎಷ್ಟು ಮುಗ್ಧವಾಗಿದೆ ಈ ಲೋಕ. ಇಲ್ಲಿ ಹಕ್ಕಿಗಳು ಅದರ ಸೃಷ್ಟಿಕರ್ತ ಕಲ್ಪಿಸಿದಂತೆ ಶಬ್ದಮಾಡುತ್ತದೆ. ಇಲ್ಲಿ ಬೆಕ್ಕು ಮತ್ತು ಆಡು ತನಗೆ ಜನನ ಪರಿಯಂತವಾಗಿ ದೊರೆತ ರೂಪದಲ್ಲಿಯೂ ನಿರಿಬಂದಿಸಿದಂತ ಆಹಾರವನ್ನು ಸೇವಿಸುತ್ತದೆ. ಆದಿ ಕಾಲದಿಂದ ಅದರ ಮಾಲಕನು ನಿರ್ಬಂಧಿಸಿದಂತೆ ಇಲ್ಲಿ ಮರಗಳು ಮೊಳಕೆಯೊಡೆದು ಬೆಳೆಯುತ್ತದೆ, ಇಲ್ಲಿ ದೊಡ್ಡ ಹೊಳೆಗಳು ಅದಕ್ಕಾಗಿಯೇ ಅನಾದಿಕಾಲದಿಂದ ನಿರ್ಮಿತವಾದ ನಿಯಮದಂತೆ ಸದಾಹರಿಯುತ್ತದೆ.

ದೇವನ ಈ ಬ್ರಹ್ಮನಂದವು ಅತ್ಯಂತ ಪರಿಪೂರ್ಣವಾದ ಸಂಗ್ರಹ ಇಲ್ಲಿನ ಪ್ರತಿಯೊಂದು ವಸ್ತುವು ಯಾವುದೇ ಸಣ್ಣ ಅಡಚಣೆ ಇಲ್ಲದೆ ತನ್ನ ದೇವನ ಅಪ್ಪಣೆಯಂತೆ ಕಾರ್ಯವೇಸಾಗುತ್ತವೆ ಆದರೆ ಮಾನವನ ಸಂಗತಿಯು ಇದಕ್ಕಿಂತ ಸಂಪೂರ್ಣ ಭಿನ್ನವಾಗಿದೆ. ಆತ ತನ್ನ ಬಾಯಿಯಿಂದ ದೇವಾನು ಅನುಮತಿಸದಂತಹ ಮಾತುಗಳನ್ನು ಹೊರಡಿಸುತ್ತಾನೆ. ಆತ ದೇವಾನು ಅನುಮತಿಸಿದಂತಹ ವಸ್ತುಗಳನ್ನು ಭಕ್ಷಿಸುತ್ತಾನೆ. ಆತ ತನ್ನ ಜೀವನದಲ್ಲಿ ದೇವನ ಮುಂಚಿತವಾಗಿಯೇ ತಡೆದಂತಹ ಮಾರ್ಗಗಳಲ್ಲಿ ಸಂಚರಿಸುತ್ತಾನೆ. ಮಾನವನು ಈ ಪ್ರಪಂಚದ ಅತ್ಯಂತ ಸಣ್ಣ ಭಾಗವಾಗಿದ್ದಾನೆ. ಆದರೆ ಬಹಳ ದೊಡ್ಡದಾದ ಈ ಪ್ರಪಂಚದ ಸಂಗ್ರಹಿತ ವ್ಯಸ್ಥೆಯ ವಿರುದ್ಧ ದಂಗೆಬ್ಬಿಸುತ್ತಾನೆ. ಆತ ದೇವನ ಸುಧಾರಿತ ಲೋಕವನ್ನು ನಾಶಪಡಿಸುತ್ತಾನೆ. ಇದು ದೇವನ ವೈರುಧ್ಯವಿಲ್ಲದ ಲೋಕದಲ್ಲಿ ವೈರುಧ್ಯವನ್ನು ತರುವುದಾಗಿದೆ, ಇದು ಒಂದು ಸಹಇಂಗಿತವಾದ ಸಂಗ್ರಹದಲ್ಲಿ ಸಹಇಂಗಿತವಲ್ಲದನ್ನು ಜೋಡಿಸುದಾಗಿದೆ. ಇದು ಒಂದು ಸುಂದರ ಚಿತ್ರದಲ್ಲಿ ಕುರುಪದ ಕಾಲೆಯನ್ನು ಮಾಡುವುದಾಗಿದೆ, ಇದು ಒಂದು ಪರಿಪೂರ್ಣವಾದ ಲೋಕದಲ್ಲಿ ದೋಷಪೂರ್ಣ ವಸ್ತುವನ್ನು ಸೇರಿಸುವುದಾಗಿದೆ . ಇದು ದೇವಧೂತರು ಕಾರ್ಯಪ್ರವೃತವಾದ ಪರಿಸರದಲ್ಲಿ ಪಿಶಾಚಗಳನ್ನು ಕಾರ್ಯ ಪ್ರವೃತಗೊಳ್ಳುವ ಅವಕಾಶ ಕೊಡುವುದಾಗಿದೆ.

ದೇವನ ಮಹಿಮೆ ಮತ್ತು ಆತನ ಮನಮೋಹಕ ಆಸಕ್ತಿಯ ಪುರಾವೆಯೂ ಪ್ರಪಂಚದಲ್ಲಿ ಪ್ರತಿಕ್ಷಣವೂ ಗೋಚರಿಸುತ್ತದೆ. ಅದು ಇದೇ ರೀತಿ ಉಳಿಯುವುದಿಲ್ಲವೆಂಬ ಸಂದೇಹವನ್ನು ಅಲ್ಲಗಳೆಯುತ್ತದೆ.

ದೇವಾ ಶಕ್ತಿಯು ಖಂಡಿತವಾಗಿಯೂ ಈ ಅಕ್ರಮಕ್ಕೆ ಅನುಮತಿ ನೀಡುವುದಿಲ್ಲ. ಆತನ ಮನಮೋಹಕ ಆಸಕ್ತಿಯು ಖಂಡಿತವಾಗಿಯೂ ಇದನ್ನು ಸಂಕಿಸುವುದಿಲ್ಲ ನಿಶ್ಚಯವಾಗಿಯೂ ವಿಶ್ವದ ವೈರುಧ್ಯವನ್ನು ಅಂತ್ಯಗೊಳಿಸುವ ದಿನ ಬರಲಿದೆ. ದೈವಿಚ್ಚೆಯು ಮಾನವ ಲೋಕದಲ್ಲಿ ಇತರ ಲೋಕಗಳಲ್ಲಿ ಪಾಲಿಸಿದಂತೆಯೇ ಪಾಲಿಸಲಾಗುವುದು.

LEAVE A REPLY

Please enter your comment!
Please enter your name here