ನಿಹಾಲ್ ಕಿದಿಯೂರು, ಉಡುಪಿ
(ಸಾಮಾಜಿಕ ಚಿಂತಕರು ಮತ್ತು ಹೋರಾಟಗಾರರು)

ದೇಶದ ಜನತೆ, ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳು ಸಂವಿಧಾನವನ್ನು ಓದಬೇಕು ಹಾಗೂ ಅದರ ತತ್ತ್ವಗಳನ್ನು ಎತ್ತಿಹಿಡಿಯಲು ಆತ್ಮಸ್ಥೈರ್ಯದಿಂದ ಹೋರಾಡಬೇಕು. ಬೆಂಗಳೂರಿನ ಐಐಎಂನ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ನಡೆಸುತ್ತಿರುವ ಸತ್ಯಾಗ್ರಹದ ಮುಖ್ಯ ಸಂದೇಶವಿದು.
72 ಗಂಟೆಗಳ ಸತ್ಯಾಗ್ರಹ ಚಳವಳಿಯು ಹೊಸ ವರ್ಷದ ಮೊದಲ ದಿನವಾದ ಇಂದು ಸಂಜೆ ಕೊನೆಯಾಗಲಿದೆ.  ಬೆಂಗಳೂರಿನ ಚಳಿಯ ಹವಾಮಾನದ ನಡುವೆ, ಹೊಸ ತಿರುವು ನೀಡಿ ಹೋರಾಟದ ಜ್ವಾಲೆಯನ್ನು ಜ್ವಲಂತವಾಗಿಟ್ಟಿದೆ ಈ ವಿದ್ಯಾರ್ಥಿ-ಅಧ್ಯಾಪಕರು ತಂಡ. ಈ ವಿಶಿಷ್ಟವಾದ  ಸೃಜನಶೀಲ ಪ್ರತಿಭಟನೆಯ‌ ಮಾದರಿ, ದೇಶದಾದ್ಯಂತ ಸಿಎಎ-ಎನ್ನಾರ್ಸಿ ವಿರುದ್ಧ ನಡೆಯುತ್ತಿರುವ ಹೋರಾಟಗಳಿಗೆ, ಕಂಡು ಕಲಿಯಬಹುದಾದ ಅನೇಕ ಅಂಶಗಳನ್ನು ಒದಗಿಸುತ್ತದೆ. ಅದನ್ನಿಲ್ಲಿ ಹಂಚಿಕೊಳ್ಳುವುದು ಅತ್ಯಗತ್ಯ ಎಂದು ನಾನು ಬಲವಾಗಿ ಭಾವಿಸುತ್ತೇನೆ.
ನಗರದಾದ್ಯಂತ ಸೆಕ್ಷನ್ 144ಜಾರಿಯಲ್ಲಿದ್ದ ಸಂದರ್ಭ ತಮ್ಮ ಚಪ್ಪಲಿ ಮತ್ತು ಖಾಲಿ ಫಲಕಗಳನ್ನು ಬಿಟ್ಟು ವಿಶಿಷ್ಟ ರೀತಿಯ ಪ್ರತಿಭಟನೆಯನ್ನು ನಡೆಸಿದ್ದ ಐಐಎಂನ ಭ್ರಾತೃತ್ವನ್ನು ನಾವಿಲ್ಲಿ ನೆನಪಿಸಬಹುದು. 


ಸಂಪೂರ್ಣ CAA / NRC / NPR ಹೋರಾಟದ ಹಾದಿಗೆ ಕೆಲವು ಅಂಶಗಳು:

1) ನಿಮ್ಮ ಅಭಿವ್ಯಕ್ತಿ ಸೃಜನಶೀಲವಾಗಿರಲಿ: ಸತ್ಯಾಗ್ರಹದ ಕರೆಯೊಂದಿಗೆ ಕೆಲವೇ ಜನರು ಟ್ವಿಟ್ಟರ್ ಪ್ರವೃತ್ತಿಗಳನ್ನೂ ಒಳಗೊಂಡು ಎಲ್ಲಾ ವರ್ಗದ ಜನರನ್ನು ಸಜ್ಜುಗೊಳಿಸಲು ಸಮರ್ಥರಾಗಿದ್ದಾರೆ.

2) ನಿಮ್ಮ ಹಕ್ಕುಗಳನ್ನು ಅರಿಯಿರಿ: ಮುಖ್ಯವಾಗಿ ವಿಶ್ವವಿದ್ಯಾಲಯ ಮತ್ತು ಕಾಲೇಜು ಕ್ಯಾಂಪಸ್‌ಗಳಲ್ಲಿ ಶಾಂತಿಯುತವಾಗಿ ಒಂದುಗೂಡುವ ಹಕ್ಕನ್ನು ನಿರ್ಬಂಧಿಸಲಾಗಿದೆ. ಕಾನೂನು ನಿಬಂಧನೆಗಳನ್ನು ಬಳಸಿ ಮುಂದೆಬರುವಲ್ಲಿ ರೂಪಿಸುವಲ್ಲಿ ಯಶಸ್ವಿಯಾಗಿದೆ. 

3) ಸತ್ಯಾಗ್ರಹಕ್ಕೆ ಮರುಜೀವ: ಇತಿಹಾಸ ಪುಸ್ತಕಗಳ ಅಂಶಗಳನ್ನು ಕಾರ್ಯಗತಗೊಳಿಸಲಾಗಿದೆ. ಈವರೆಗೂ, ಸತ್ಯಾಗ್ರಹದ ಮಾದರಿಯು ಜನತೆಗೆ ಆಳವಾದ ಮನವಿಯನ್ನು ನೀಡುತ್ತದೆ.

4) ಬದ್ಧರಾಗಿರಿ: ಪ್ರಾಧ್ಯಾಪಕರೊಬ್ಬರು ರಜೆಗಾಗಿ ಅರ್ಜಿ ಸಲ್ಲಿಸಿದ್ದಾರೆ ಮತ್ತು ಹೋರಾಟಕ್ಕೆ ದನಿಯಾಗಿದ್ದಾರೆ. ಟ್ವಿಟರ್ ಮತ್ತು ಫೇಸ್‌ಬುಕ್‌ ಗಳಾಚೆ ನಮ್ಮ ಕ್ರಿಯಾಶೀಲತೆಯನ್ನು ತೋರಿಸಬೇಕಾದ ಸಮಯವಿದು.

5) ಪ್ರತಿಭಟನಾ ಹಬ್: ಬಹುಶಃ ಹಬ್ ಮತ್ತು ಬೇಸ್ ಪ್ರತಿಭಟನೆ ಅಥವಾ ರಾಜ್ಯ ಪ್ರಧಾನ ಕಚೇರಿಯಲ್ಲಿ ದರಣಿ ಅಥವಾ ಸತ್ಯಾಗ್ರಹ ಸ್ಥಳ ಮಾಡಿಡುವುದನ್ನು ಈ ಅನುಭವದಿಂದ ಕಲಿಯಬಹುದು. ಜಿಲ್ಲೆಯ ಸ್ಥಳಗಳನ್ನು ಅನ್ವೇಷಿಸಲು ಮಾರ್ಗ ಹುಡುಕುವ ಜನರನ್ನು ಸಜ್ಜುಗೊಳಿಸಲು ಇದು ಸಹಕಾರಿ.

6) ಅಧ್ಯಯನ ಮತ್ತು ಸೇವೆ; ಇದೊಂದು ಬಹುಮುಖ್ಯ ಸಂದರ್ಭ. ದೇಶದಾದ್ಯಂತ ಇರುವ ಉನ್ನತ ಕಲಿಕೆಯನ್ನು ಗಳಿಸಿದ ವಿದ್ಯಾರ್ಥಿಸಮೂಹದ ಹೆಗಲ ಮೇಲೆ ಜನಸಾಮಾನ್ಯರಲ್ಲಿ ಜಾಗೃತಿ ಮತ್ತು ಸೂಕ್ಷ್ಮತೆಯನ್ನು ತರುವ ಬಹುದೊಡ್ಡ ಜವಾಬ್ದಾರಿಯಿದೆ.‌ ವಿದ್ಯಾರ್ಥಿಗಳು ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಲೇ ಕಲಿಕೆಯ ಜತೆ ಜತೆಗೆ ಸಮೂಹದ ಜತೆ ನಿಂತು ದನಿಯೆತ್ತಬೇಕು.

ಕೃಪೆ: ದಿ ಕ್ಯಾಂಪಾನಿಯನ್
ಅನುವಾದ : ಮುಹಮ್ಮದ್ ಶರೀಫ್ ಕಾಡುಮಠ

LEAVE A REPLY

Please enter your comment!
Please enter your name here