ಅನುವಾದಕರು: ಶಶಾಂಕ್ ಎಸ್ ಆರ್, ಸಂಶೋಧನಾರ್ಥಿ

ತಾಯ್ನೆಲ:

ತಾಯ್ನೆಲವೆಂಬ ಈ ನೆಲದಲಿ ಬೇರೂರಲು ಕನಸಿದ್ದೇನೆ

ಪ್ರತಿ ಕ್ಷಣ, ಅನು ದಿನ.

ಅವರೇಳುತ್ತಾರೆ: ಆ ದೇವಲೋಕ ದೊಡ್ಡದು,

ಎಲ್ಲರೂ ಸಲ್ಲುವರಲ್ಲಿ.

ಅವಮಾನ, ನಿಶಕ್ತಿಯ ತಾಳಲಾರದೆ

ಪಕ್ಕೆಲುಬುಗಳು ನಡಗುತ್ತಾ ನುಡಿದವು:

‘ಭ್ರಮೆಯದು! ತಾಯ್ನೆಲವ ಬಿಟ್ಟಂದಿನಿಂದ

ಬೆಚ್ಚನೆಯ ಭಾವವೇ ಬರಡಾಗಿ ಬಂಜರೆನಿಸಿದೆ.’

ಮೂಲ: ಮಹಮೂದ್ ಅಲ್-ನಜ್ಜಾರ್ (1958)

ಅನುವಾದ: ಶಶಾಂಕ್ ಎಸ್ ಆರ್

Homeland

My lifelong dream has been to live in a land called home land. They said: God’s world is spacious, and has ample space for strangers, and they may have a dwelling there. My ribs replied, trembling from humiliation and weakness:” A delusion! Never have I experienced warmth since leaving my homeland.”

-Mahmoud al-Najjar(1958)

ಬಯಕೆಯೊಂದೇ:

ಓ ನನ್ನ ಕಂದಾ,

ದುಃಖ ಸೋಲುಗಳಲ್ಲಿಯೇ

ಸಿಲುಕಿ ನಾ ಸತ್ತಾಗ;

ನನ್ನ ಹೃದಯ ಒಡೆದಾಗ,

ಬೆನ್ನೆಲುಬು ಛಿದ್ರ-ಛಿದ್ರವಾದಾಗ

ಈ ದೇಹದಿಂದ ಬಿಸಿಯುಸಿರು ಬೇರ್ಪಟ್ಟಾಗ,

ಭೂತಾಯಿ ನನ್ನ ಶವವ ಆತುಕೊಂಡಾಗ,

ಕಹಿಗಳನೇ ಉಂಡು

ನನ್ನ ಗುರುತೇ ಸಿಗದೆ ಹೋದಾಗ,

ಎಂದಾದರೊಮ್ಮೆ

ನನ್ನ ಆತ್ಮಕ್ಕೊಂದಷ್ಟು

ರೋಜಾ ಹೂ ಅರ್ಪಿಸಿ

ನನ್ನ ಕಿವಿಯಲ್ಲೂಮೆ

ಜೆರುಸಲೇಮ್ ಸ್ವತಂತ್ರವಾಗಿದೆ ಎಂದು ಪಿಸುಗುಟ್ಟಿಬಿಡು.

ಮೂಲ: ಮಹಮೂದ್ ಅಲ್-ನಜ್ಜಾರ್ (1959)

ಅನುವಾದ: ಶಶಾಂಕ್ ಎಸ್ ಆರ್

A Will:

My son, when I die at last, draped in sorrow and many defeats; when my back appears shattered and my heart broken; when my pitiful self vanishes from life, when the earth consumes my corpseand my features vanish after a bitter end, someday come and scatterroses for my souland utter a brief phrase: Jerusalem is captive no more.

– Mahmoud al-Najjar(1959)

LEAVE A REPLY

Please enter your comment!
Please enter your name here