• ಶಮೀಮ ರೈಹಾನ್ ಮಂಗಳೂರು

ಸರಕಾರಿ ಶಾಲೆಗಳಲ್ಲಿ ಕೊರೋನದ ಸಂಕಷ್ಟದ ಸಮಯದಲ್ಲಿ ನಡೆಯುತ್ತಿದ್ದ ವಿಧ್ಯಾಗಮ ಎನ್ನುವುದು ಬಡವರ,ಕೂಲಿ ಕಾರ್ಮಿಕರ ,ರೈತರ,ವಲಸೆ ಕಾರ್ಮಿಕರ ಮಕ್ಕಳ ವಿಧ್ಯಾಭ್ಯಾಸದ ಆಶಾಕಿರಣವಾಗಿತ್ತು.
ಇದನ್ನು ಎರಡು ದಿನದಿಂದ ಖಾಸಗಿ ಶಾಲೆಗಳ ಕುಮ್ಮಕ್ಕು ,ಇಲಾಖೆಯ ಮತ್ತು ಮಕ್ಕಳ ಹೆಸರಿನಲ್ಲಿ ಸಂಬಳ ತಿನ್ನುವ ಕೆಲವು ಶಿಕ್ಷಕರ ಸಹಕಾರದಿಂದ ಚಾನಲ್ ಗಳು ತುಂಬಾ ಚೆನ್ನಾಗಿ ಜನರಿಗೆ ಮಂಕು ಬೂದಿ ಎರಚಿ , ಸರಕಾರ ಹಾಗೂ ಬದ್ಧತೆಯಿಂದ ಕೆಲಸ ಮಾಡುತ್ತಿರುವ ಶಿಕ್ಷಣ ಸಚಿವರ ಮೇಲೆ ಒತ್ತಡ ತಂದು ತಾತ್ಕಾಲಿಕವಾಗಿ ಮುಂದೂಡಲ್ಪಟ್ಟಿತು.

ಇದರಿಂದ ನಮ್ಮಂತ ಬಡ ಪೋಷಕರ ಮಕ್ಕಳಿಗೆ ಸಿಗುತ್ತಿದ್ದ ವಿಧ್ಯಾಭ್ಯಾಸದ ಒಂದು ಕೊಂಡಿ ಕಳಚಿಕೊಂಡು ಹೋಯಿತು. ಶಿಕ್ಷಕರಿಗೆ ಆಗಲಿ ಚಾನಲ್ ನವರಿಗೆ ಆಗಲಿ ಏನೂ ನಷ್ಟವಿಲ್ಲ, ಯಾಕೆಂದರೆ ಅವರ ಮಕ್ಕಳು ಹೆಚ್ಚಾಗಿ ಖಾಸಗಿ ಶಾಲೆಗಳಲ್ಲಿ ಆನ್ಲೈನ್ ಶಿಕ್ಷಣದೊಂದಿಗೆ, ಇಲಾಖೆಯವರ ಮೌನ ಸಮ್ಮತಿಯೊಂದಿಗೆ ಶಾಲೆಗಳ ತರಗತಿಗಳಲ್ಲಿ ಕಲಿಯುತ್ತಿದ್ದಾರೆ.

ಸರಕಾರ ಸರಕಾರಿ ಶಾಲೆಗಳ ಶಿಕ್ಷಕರಿಗೆ ಈ ಸಲ ದಸರಾ ರಜೆಯನ್ನು ಮೊಟಕುಗೊಳಿಸಿ ವಿಧ್ಯಾಗಮಕ್ಕೆ ಹೆಚ್ಚು ಒತ್ತು ಕೊಡುವ ಬಗ್ಗೆ ಆದೇಶವನ್ನು ಹೊರಡಿಸಿತ್ತು, ಆದರೆ, ಈಗ ಮಾದ್ಯಮಗಳ ಅರಚಾಟದ ಪರಿಣಾಮ ಶಾಲೆಗಳ ವಿದ್ಯಾಗಮ ಈಗಾಗಲೇ ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವ ಕಾರಣ ಶಿಕ್ಷಕ ಸಂಘದ ಬೇಡಿಕೆಯಂತೆ ರಜೆಯನ್ನು ಅನುವದಿಸುವುದು ಉತ್ತಮ ಎನ್ನುವುದು ನನ್ನ ಅಭಿಪ್ರಾಯ.

ಅದರೊಂದಿಗೆ ಸರಕಾರವು ಈ ಸಂಕಷ್ಟದ ಸಮಯದಲ್ಲಿ ಕೂಡ ಎಲ್ಲಾ ಶಿಕ್ಷಕರಿಗೂ ಕೂಡ ಸರಿಯಾಗಿ ವೇತನವನ್ನು ನೀಡುತ್ತಿರುವುದು ಅಭಿನಂದನೀಯ ನಡೆಯಾಗಿದೆ . ಆದರೆ, ಸರಕಾರವು ಇನ್ನು ಮುಂದೆ ಶಾಲೆಗಳು ತೆರೆದು ಮಕ್ಕಳಿಗೆ ಪಾಠ ಪ್ರವಚನಗಳನ್ನು ನಡೆಸುವವರೆಗೆ ವೇತನ ಕಡಿತ ಗೊಳಿಸುವ ಬಗ್ಗೆ ಚಿಂತನೆ ಮಾಡಬೇಕಿದೆ. ಮಕ್ಕಳೇ ಇಲ್ಲದ ಶಾಲೆಯಲ್ಲಿ ಶಿಕ್ಷಕರಿಗೆ ಏನು ಕೆಲಸ, ಕೆಲಸ ಮಾಡದೆ ವೇತನ ಪಡೆಯಲು ಅವರಿಗೆ ಮನಸಾಕ್ಷಿ ಕೂಡ ಒಪ್ಪಲಿಕ್ಕಿಲ್ಲ.

ಮನೆಯಿಂದ ಹೊರಗೆ ಬಂದು ಮಕ್ಕಳೊಂದಿಗೆ ಬೆರೆತರೆ ಕೊರೋನದ ಭಯ, ವಾಹನದಲ್ಲಿ ಬರೋದು ಸಮುದಾಯದೊಂದಿಗೆ ಬೆರೆದ ಕಾರಣ ಹಲವು ಸಾವುಗಳು ಸಂಭವಿಸಿದ ಬಗ್ಗೆ ಈಗಾಗಲೇ ಹಲವು ಶಿಕ್ಷಕರು ಚಾನಲ್ ಗಳ ಮುಂದೆ ಬಂದು ಹೇಳಿರುವುದು ನಮಗೆಲ್ಲ ತಿಳಿದ ವಿಷಯ.

ಕೊರೋನವು ನಮ್ಮನ್ನು ಬಿಟ್ಟು ಹೋಗೋವರೆಗೆ ಶಾಲೆಗಳಿಗೆ ಹೇಗೂ ರಜೆ ಇದ್ದು, ಶಿಕ್ಷಕರಿಗೆ ಕೂಡ ಕಡ್ಡಾಯ ರಜೆಯನ್ನು ಕೊಡುವುದರಿಂದ ಶಿಕ್ಷಕರ ಜೀವವನ್ನು ಉಳಿಸುವುದರೊಂದಿಗೆ,ಮಕ್ಕಳಿಗೆ ಕೊರೋನ ಬರುವುದನ್ನು ತಡಗಟ್ಟಬಹುದು ಅದಲ್ಲದೆ ಸರಕಾರಕ್ಕೆ ಹಲವು ಕೋಟಿಗಳ ಹೊರೆಯನ್ನು ಕೂಡ ಕಡಿಮೆ ಮಾಡಬಹುದು.
ಸರಕಾರವು ಯಾವತ್ತೂ ಮಕ್ಕಳ ಹಾಗೂ ಶಿಕ್ಷಕರ ಪರವಾಗಿ ಕಾರ್ಯ ಪ್ರವರ್ತರಾಗಿ ಶಿಕ್ಷಕರ ಜೀವ ಉಳಿಸುವ ನಿಟ್ಟಿನಲ್ಲಿ ದಸರಾ ರಜೆಯೊಂದಿಗೆ ಕಡ್ಡಾಯ ರಜೆಯನ್ನು ಕೂಡ ಅನುವದಿಸಿ ಕೊಡುವ. ಬಗ್ಗೆ ಆದಷ್ಟು ಬೇಗ ಮಾನ್ಯ ಮುಖ್ಯ ಮಂತ್ರಿಗಳು, ಶಿಕ್ಷಣ ಸಚಿವರು. ಶಿಕ್ಷಕರ ಸಂಘ, ಮಾಧ್ಯಮ ಮಿತ್ರರು ಹಾಗೂ ಅವರೊಂದಿಗೆ ಇರೋ ಶಿಕ್ಷಣ ತಜ್ಞರನ್ನು ಕರೆಸಿ ಇದರ ಬಗ್ಗೆ ಕೂಲಂಕಷ ವಾದ ಚರ್ಚೆಯನ್ನು ನಡೆಸಿ ಸಂಬಳ ರಹಿತ ಕಡ್ಡಾಯ ರಜೆಯನ್ನು ಅನುವದಿಸಿ ಕೊಡಲು ಸಹಕರಿಸ ಬೇಕಾಗಿ ವಿನಂತಿಸಿ ಕೊಳ್ಳುತ್ತೇನೆ

LEAVE A REPLY

Please enter your comment!
Please enter your name here