ಸುಮಮಿ ಸೊಹೈಲ್, ತೀರ್ಥಹಳ್ಳಿ.
ಬೆಚ್ಚನಾಗುತಿದೆ ಪೇಯ
ಹಂಡೆಯಲಿ,
ಮೂಗಿಗೆ ಬಡ ಬಡಿದ್ಹೋಗುತ್ತಿದೆ
ಸುಗಂಧೂದುಬತ್ತಿ.
ನಿನ್ನ ಕಂಡು ಮುಖ ಸಿಂಡಿಸಿದವರು,
ನೀನಾರೆಂದು ಅರಿಯದವರು
ಕಂಡು ಹೋದರು ನಿನ್ನ.
ಮನೆಯಂಗಳದಿ ಗುಂಪುಗಟ್ಟಿದ
ಮಂದಿಯ ಮನದಂಗಳದಿಂದ ಬರುತ್ತಿದೆ
ಮೌನದ ಮಾತು.
ನೀನಿದ್ದ ಗುಡಿಯಿಂದ ನಿನ್ನ
ಬೀಳ್ಕೊಡಲು ಕಾಯುತಿಹರು
ನಿನ್ನಾಪ್ತರು.
ಮತ್ತೆಂದು ತಿರುಗಿ ಬಾರದ ಪಯಣಕೆ
ನೀನರಿಯದಷ್ಟು ಚಕ್ರದ
ಬಂಡಿಯೇರಿದೆ.
ಮುಗಿಲು ಮುಟ್ಟಿದ ಆಕ್ರಂದನದಲ್ಲಿ
ಬೀಳ್ಕೋಟ್ಟರು,
ಗುರಿ ತಲುಪಿ ಪಯಣದಂತ್ಯಕೆ
ಸಮಾಧಿಯಾದದೆ.
ಶಬ್ದಾರ್ಥ್ಥ =
ಪೇಯ – ನೀರು
ಹಂಡೆ – ನೀರು ಕಾಯಿಸುವ ದೊಡ್ಡ ಪಾತ್ರೆ.