ಅನೀಸ್ ಎಚ್

ನಸುಕಿನ ಅಝಾನ್ ಕರೆಗೆ
ಸುಖ ನಿದಿರೆಯ ತೊರೆದು
ಮೆತ್ತಗಿನ ಹಾಸಿಗೆಯಿಂದೆದ್ದು
ಒಡೆಯನಿಗೆ ಭಕ್ತಿಯಿಂದ
ಸಾಷ್ಟಾಂಗ ಹೋಗುವುದೇ – ಕುರ್ಬಾನಿ

ಸಂಪತ್ತು ಗಳಿಸಿ
ದುನಿಯಾ ಸಂಪಾದಿಸಲು
ನೂರೆಂಟು ದಾರಿಯಿದ್ದರೂ
ಧರ್ಮ ಸಮ್ಮತ ಮಾರ್ಗವನು
ಆಶ್ರಯಿಸುವುದೇ – ಕುರ್ಬಾನಿ

ಸೌಂದರ್ಯ ಪ್ರದರ್ಶಿಸಿ
ವೈಯಾರದಲಿ ನಡೆದಾಡಲು
ಮನಸ್ಸು ಹಾತೊರೆದರೂ
ಅನುವದನೀಯ ಹಾದಿಯಲಿ
ಪರ್ದಾದೊಳಗೆ ತನು-ಮನವನು
ಸಿಂಗರಿಸುವುದೇ – ಕುರ್ಬಾನಿ

ಜಗದೀಶ್ವರನು ಅನುಗ್ರಹಿಸಿದ
ಶ್ರೇಷ್ಠ ಆಹಾರವನು
ಉಳ್ಳವನು ತಾನೊಬ್ಬನೇ
ತಿನ್ನದೇ, ಬಡ-ಬಗ್ಗರಿಗೆ
ಹಂಚಿ ಖುಷಿಪಟ್ಟು
ಸಮಾನತೆಯ ಸಾರುವುದೇ – ಕುರ್ಬಾನಿ

ಜಗತ್ತಿನೆಲ್ಲಾ ಸುಖಗಳನ್ನು
ನಿನಗಾಗಿ ಸೃಷ್ಟಿಸಿದೆನೆಂದು
ಲೋಕದೊಡೆಯ ಹೇಳಿದಾಗ..
ನಿನ್ನ ಪ್ರೀತಿಗಾಗಿ ಎಲ್ಲಾ ಸುಖಗಳನ್ನು
ತ್ಯಜಿಸುವೆನೆನ್ನುವ ವಿಶ್ವಾಸಿ ದಾಸನ
ಆಚಲತೆಯೇ – ಕುರ್ಬಾನಿ.

ಶಬ್ದಾರ್ಥ =
ಕುರ್ಬಾನಿ – ತ್ಯಾಗ
ಆಝಾನ್ – ನಮಾಜ್ ಪ್ರಾರ್ಥನೆಗೆ ಆಹ್ವಾನಿಸುವ ಕರೆ.
ಪರ್ದಾ – ಅನ್ಯ ಪುರುಷರಿಗೆ ದೇಹವು ಪ್ರದರ್ಶನವಾಗದಂತೆ ಮರೆಮಾಚುವ ವಸ್ತ್ರ.

LEAVE A REPLY

Please enter your comment!
Please enter your name here