ಕನ್ನಡಕ್ಕೆ :- ಕಸ್ತೂರಿ ಬಾಯರಿ

ಪುಸ್ತಕ ವಿಮರ್ಶೆ : ರವಿ ಮವಲಹಳ್ಳಿ

ಒಂದು ಪುಸ್ತಕವು, ಮತ್ತೆ ಮತ್ತೆ ಓದಿದಾಗ ಅದರ ರುಚಿಯ ಸ್ವಾಧ ಅಹ್ಲಾದಕರ, ಉಲ್ಲಾಸ, ಉನ್ಮಾದವು ನಮ್ಮೊಳಗೆ ಮೂಡಿಸಿಬಿಡುವ ಶಕ್ತಿಗಳು, ಯಾವುದಾದರಕ್ಕು ಇದ್ದರೆ ಅದು ಪ್ರೇಮಕ್ಕೆ ಮಾತ್ರ, ಅ ಪ್ರೇಮವೆ ಹಾಗೆ ಬೆಳದಿಂಗಳ ಹುಣ್ಣಿಮೆಯ ಹಾಗೆ, ಏಕಾಂತವನ್ನು ಬಯಸುವ, ಏಕಾಂತದಲ್ಲೂ ಸುಖವನ್ನು ಉಂಟು ಮಾಡುವ ಸಮಯ ಪ್ರೇಮ, ಖಲೀಲ್ ಗಿಬ್ರಾನ್ ಅವರ ಈ ಪ್ರೇಮ ಪತ್ರಗಳು ಇವು ಸಾಮಾನ್ಯ ಪ್ರೇಮ ಪತ್ರಗಳಲ್ಲ. ಅವನ ಕವಿತ್ವ, ದಾರ್ಶನಿಕತೆ, ಕಲೆಗಾರಿಕೆ, ಸಾವು ಎಲ್ಲವೂ ಮೇಳೈಸಿದ ಪ್ರೇಮಪತ್ರಗಳು. ಆ ಪತ್ರಗಳು ಮೂಡಿಸುವ ವಿವೇಕ ದೊಡ್ಡದು. ನಿವೇದನೆಗೊಳ್ಳುವ ಪ್ರೇಮವೂ ಸಾಮಾನ್ಯವಾದುದಲ್ಲ.

ಈ ಪುಸ್ತಕ ನಮ್ಮನ್ನು ಓದುಗನನ್ನು ಒಂದು ವಿಶಿಷ್ಟ ಬಗೆಯ ಅನುಭವವನ್ನು ನಮ್ಮೊಳಗೆ ಇನ್ನೊಂದು ಬಗೆಯ ಅಲೋಚನ ಕ್ರಮವನ್ನು ಪ್ರೇಮದ ಉತ್ಕಟತೆಯನ್ನು, ಪ್ರೇಮವು ಪ್ರೀತಿಸುವ ಸುವಾಸನೆಯನ್ನು ಘಮ ಘಮಿಸುತ್ತವೆ, ಗಿಬ್ರಾನ್ ಅವರ ಈ ಪ್ರೇಮ ಪತ್ರಗಳು. ಪುಸ್ತಕದ ಕುರಿತು ಹೇಳಲು ಇಲ್ಲಿ ಬರೆಯಲು ಹೊರಟರೆ ಇಡೀ ಪುಸ್ತಕವೆ ಇಲ್ಲಿ ಟೈಪ್ ಮಾಡಬೇಕಾಗುತ್ತದೆ, ಅಂತಹ ರಸವತ್ತಾದ ಪ್ರೇಮವು ಇಲ್ಲಿ ಇದೆ. ಇಲ್ಲಿ ನನಗೆ ತಕ್ಷಣಕ್ಕೆ ಮನಮುಟ್ಟಿದ ಪದಗಳು ಇಲ್ಲಿ ಪ್ರಕಟಸಿ ಇದನ್ನು ಇನ್ನಷ್ಟು ಜನರು ಓದುವಂತಾಗಿ ಅದರ ಸ್ವಾಧ ಅ ಅನುಭವ ಪಡೆದುಕೊಳ್ಳಲಿ ಎಂಬ ಅಲೋಚನೆಯಲಿ, ಈ ಪುಸ್ತಕದ ಕೆಲವು ಸಾಲುಗಳ ಪ್ರಕಟಿಸಿ ಎಲ್ಲರೂ ಈ ಪುಸ್ತಕವನ್ನು ಓದುವಂತರಾಗಲಿ.

ಗಿಬ್ರಾನ್ ಲೆಬನಾನಿನ ಬಿಶ್ರೋಯಿ ಪಟ್ಟಣದಲ್ಲಿ ಜನವರಿ 6 1883 ರಲ್ಲಿ ಜನನ, ಗಿಬ್ರಾನ್ ಧಾರ್ಮಿಕ ವ್ಯಕ್ತಿಯಾಗಿದ್ದ ಅವನ ಕವಿತೆಗಳಲ್ಲಿ ಜೀವ ಪ್ರೀತಿಯನ್ನು ಅವನು ಕ್ರೈಸ್ತನಿಂದ ಪ್ರಭಾವಿತನಾಗಿ ಪಡೆದಿದ್ದಾನೆ. ಆದರೆ ಅದರ ಜೊತೆಗೆ ಸೂಫಿ, ಇಸ್ಲಾಂ, ಜುದಾಯಿಸಂ, ಬಹಾಯಿ ಹಾಗೂ ಅಮೇರಿಕದ ಥಿಯಾಸಫಿಯ ಪ್ರಭಾವವು ಗಾಢವಾಗಿದೆ. ನಂಬಿಕೆ ಯಾವುದಾದರೂ ಕೊನೆಗೆ ಉಳಿಯುವುದು ಬಾಳಬೇಕಾದ ನೆಲದ ಮೇಲಿನ ಬದುಕೇ ಎಂದು ಪ್ರತಿಪಾದಿಸುತ್ತಾನೆ. ವಿಶ್ವವೇ ನನ್ನ ಮಾತೃಭೂಮಿ ಮತ್ತು ಎಲ್ಲ ಮನುಷ್ಯರು ನನ್ನ ದೇಶವಾಸಿಗಳು ಎನ್ನುತ್ತಾನೆ. ಒಬ್ಬ ಕವಿಗೆ ಅಥವಾ ವ್ಯಕ್ತಿಗೆ ಹಲವು ವ್ಯಕ್ತಿಚಿತ್ರಣಗಳಿರುತ್ತವೆ. ಕವಿತೆ, ಪತ್ರ, ಬರಹಗಳಿಗೆ ಓದುಗ ಕಲಿರುತ್ತವೆ. ಅನುಭವಗಳನ್ನು ಸಾರ್ವತ್ರಿಕಗೊಳಿಸುವುದು ಎಲ್ಲಾ ಜ್ಞಾನಕ್ಕಿಂತ ಹೆಚ್ಚಿನದು. ಸಣ್ಣ ಗುಂಪಿನ ಕಾವ್ಯ ಬರೆಯುವರು ಅವರು ಚೇತನಗಳನ್ನು ಅವರ ಜೀವನದ ಸೂತ್ರಗಳಿಂದ ಪಡೆದಿರುತ್ತಾರೆ. ಅವರ ಅನುಭವಗಳು ಅವರ ಬದುಕಿನಿಂದಲೇ ಹುಟ್ಟಿರುತ್ತದೆ. ಯಾವುದೇ ಒತ್ತಾಯದ ಬೇಡಿಕೆ ಕಲೆಯನ್ನು ಸಮೃದ್ಧಿಗೊಳಿಸುವುದಿಲ್ಲ. ಪ್ರತಿ ಅನುಭವವು ಪ್ರತಿ ಪ್ರೇರಷೆಯೂ ಸ್ವಾಭಾವಿಕವಾಗಿ ಹುಟ್ಟಿ ವಿಷಯಗಳ ಔಚಿತ್ಯವನ್ನು ಪ್ರತಿಪಾದಿಸುತ್ತದೆ.

‘ನಿನ್ನ ಸುಂದರವಾದ ಆತ್ಮ, ಉತ್ತಮವಾದ ಆದರ್ಶದ ಹೃದಯ ಇಟ್ಟುಕೊಂಡು ನೀನು ಸದಾಂತವಾಗಿರು ದೇವರು ನಿನ್ನ ರಕ್ಷಸಲಿ‘. ಎಂಬ ಇಂತಹ ಸಾಲುಗಳು ಇನ್ನೂ ಅನೇಕ ಸಾಲುಗಳು ಈ ಪುಸ್ತಕದ ತುಂಬ ಇವೆ, ಹೇಳಲು ನನಗೆ ಬಹಳ ಉತ್ಸುಹಕನಾಗಿರುವೆ, ಅದರೇ ಎಲ್ಲರೂ ಇ ಪುಸ್ತಕವ ಓಮ್ಮೆ ಓದಿ ಎಂಬ ಮನವಿಯ ಮಾಡುತ್ತ ಗಿಬ್ರಾನ್ ಅವರ ಇ ಒಂದು ಕವಿತೆಯ ಸಾಲುಗಳು ಪ್ರಕಟಿಸಿ ಮುಗಿಸುವೆ.

ನನ್ನ ಚೆಲುವಿನ ತಾರೆಯೇ, ಎಲ್ಲಿರುವೆ? ಕತ್ತಲ ಬದುಕು
ತನ್ನದೆಯ ಮೇಲೆ ನನ್ನ ಎಳಕೊಂಡಿದೆ; ದುಃಖ ನನ್ನ
ಗೆದ್ದುಬಿಟ್ಟಿದೆ.

ನಿನ್ನ ನಗುವ ಗಾಳಿಯಲಿ ತೂರಿಬಿಡು, ನನ್ನ ಜೀವಂತ
ಇಡಬಹುದು!
ನಿನ್ನ ಪರಿಮಳವ ಗಾಳಿಯಲಿ ತೂರಿಬಿಡು, ನನ್ನ ಜೀವಂತ
ಇಡಬಹುದು!

ಎಲ್ಲಿರುವೆ ನನ್ನೊಲವೆ?
ಎಂಥ ಅತಿಶಯ ಈ ಪ್ರೇಮ!
ಓ ನಾನೆಷ್ಟು ಸಣ್ಣವ!

ದೇವರು ನನ್ನ ಸಲುವಾಗಿ ನಿನ್ನ ಕಾಪಾಡಲಿ

LEAVE A REPLY

Please enter your comment!
Please enter your name here