ಕವನ

ಶಿಕ್ರಾನ್ ಶರ್ಫುದ್ದೀನ್ ಮನೆಗಾರ್
ಪಾಂಡೇಶ್ವರ್, ಮಂಗಳೂರು

ಯತ್ರ ನರಯಸ್ತು ಪೂಜ್ಯಂತೇ ರಮಂತೇ ದೇವತಃ |
ಯತ್ರೈತಸ್ತು ನಾ ಪೂಜ್ಯಂತೇ ಸರ್ವಸ್ತ್ರ ಫಲಃ ಕ್ರಿಯಃ ||೫೬||

ಸಮಯದ ಚಕ್ರವು ತಿರುಗುವುದು…
ಮೊಂಬತ್ತಿಗಳು ಬೆಳಗುವುದು!
ಪಂಜಿ ಮೆರವಣಿಗೆಗಳು, ಪ್ರತಿಭಟನೆಗಳು,
ಫಲಕಗಳು ಪ್ರದರ್ಶಿಸಲಾಗುವುದು!
ಬಾಧ್ಯನಲ್ಲದವರಿಂದ
ಸಂತ್ರಸ್ತೆಗಾಗಿ… ಅವಳ ಆತ್ಮಕ್ಕಾಗಿ…!
ಶ್ರದ್ಧಾಂಜಲಿಗಾಗಿ ಬೆಳಗಿಸಿದ
ಪುಟ್ಟ ಹಣತೆಗಳು ಆರಿ ಹೋಗುವುದು!
ಮತ್ತೆ ಗರ್ಭದಲಿ ಬೆಳಗಿಸಿದ ಪ್ರಾಂಜಲ ಹಣತೆಯು
ಬೆಳಗುವ ಮುಂಚೆಯೇ ಆರಿ ಹೋಗುವುದು,
ಕಾಮ ಪಿಶಾಚಿಗಳಿಗಾಗಿ… ಲಜ್ಜೆಗೆಟ್ಟವರಿಗಾಗಿ…!

ಹೆತ್ತವರ ಚಕ್ಷುಪ್ಯರು-ಕಣ್ಮಣಿಗಳು;
ಮನೆತನದ ಆಶಾಕಿರಣಗಳು,
ಶರಣಿಸುವವರು ತಮ್ಮ ಉಸಿರುಗಳನ್ನು
ಕಾಡುಗಳಲ್ಲಿ… ಗದ್ದೆಗಳಲ್ಲಿ…
ಅಮಾವಾಸ್ಯೆಯ ಕಗ್ಗತ್ತಲಿನ ರಾತ್ರಿಗಳಲ್ಲಿ…
ತುಂಡರಿಸಲ್ಪಟ್ಟ-ಅರೆನಗ್ನ ಅವಸ್ಥೆಯಲ್ಲಿ

ಸಂತ್ರಸ್ತರ ಗೋರಿಗಳಿಗೆ ಅರ್ಪಿಸಿದ ಪುಷ್ಪಗಳು
ಬಾಡಿ ಹೋಗುವುದು ಹೊತ್ತು ಕಳೆದಂತೆ!!!

ಸಮಯದ ಚಕ್ರವು ತಿರುಗುವುದು…
ಮೊಂಬತ್ತಿಗಳು ಬೆಳಗುವುದು!
ನಾಮ ವಿದ್ದವನಿಗೆ ಕಾಮ ಕಡಿಮೆಯೇ?
ಮಾತೆಯೊಬ್ಬಳ ಕಣ್ಣೀರು ಒಣಗಿಸುತ್ತಿದ್ದಂತೆ
ಇನ್ನೊಬ್ಬಳ ಕಣ್ಮಣಿ ಬಲಿಪಶುವಾಗುವಳು!
ಸಮಯದ ಚಕ್ರವು ತಿರುಗುವುದು…
ಮೊಂಬತ್ತಿಗಳು ಬೆಳಗುವುದು!

ತಸ್ಮಾದೇತಃ ಸದಾ ಪೂಜ್ಯ ಭೂಷಣಾಚ್ಚಾದನಾಶನ್ಯಃ |
ಭೂತಿಕಮೈನರೈ ನಿತ್ಯಂ ಸತ್ಕರಿಸುತಸವೆಸು ಚ: ||೫೯||

LEAVE A REPLY

Please enter your comment!
Please enter your name here