• ನಸೀಬ ಗಡಿಯಾರ್

ಯಥಾ ರಾಜ ತಥಾ ಪ್ರಜಾ, ಎಂಬ ಮಾತು ಬಹಳ ಹಿಂದಿನದ್ದಾದರೂ ನೂರಕ್ಕೆ ನೂರು ಸತ್ಯ ಏಕೆಂದರೆ,
ಸಮಾಜವು ಒಂದು ಉತ್ತಮ ಸಮಾಜವಾಗಿ ಬದಲಾಗಲು ಒಂದು ಉತ್ತಮ ನಾಯಕನ ಅಗತ್ಯವಿದೆ. ನಾಯಕನ ಆಡಳಿತ ನೀತಿ ಹೇಗಿರಬೇಕೆಂದರೆ, ಜನರಿಗಾಗಿ, ಜನರಿಗೋಸ್ಕರ ಎಂಬಂತಿರಬೇಕು. ಹಾಗಿದ್ದರೆ ಮಾತ್ರ ಸಮಾಜ ತಕ್ಕ ಮಟ್ಟಿಗೆ ಸುಧಾರಿಸಬಹುದು. ಹಾಗಂತ ಪ್ರಜೆಗಳು ಸುಮ್ಮನೆ ಕೂತರೂ ಕೂಡ ಏನು ಬದಲಾವಣೆ ಅಸಾಧ್ಯ. ಏಕೆಂದರೆ ಸಮಾಜಕ್ಕೆ ಯಾವ ರೀತಿ ಒಂದು ಉತ್ತಮ ನಾಯಕನ ಅಗತ್ಯವಿದೆಯೋ ಅದೇ ರೀತಿ ಉತ್ತಮ ನಾಯಕನ ಆಯ್ಕೆಯೂ ಕೂಡ ಪ್ರಜೆಗಳ ಕೈಯಲ್ಲಿದೆ.

ಚುನಾವಣೆ ಆದಷ್ಟು ಗೌಪ್ಯವಾಗಿರಲಿ. ಗೆಳೆಯ ಯಾವುದೋ ಒಂದು ಪಕ್ಷಕ್ಕೆ ಮತವನ್ನು ಹಾಕಿದ ಎಂಬ ಕಾರಣಕ್ಕೆ ನಾನು ಕೂಡ ಅದೇ ಪಕ್ಷಕ್ಕೆ ಮತವನ್ನು ಚಲಾಯಿಸುವೆ ಎಂದು ತೀರ್ಮಾನಿಸದಿರಿ. ಅದು ಉತ್ತಮ ಮತ ವಾಗುವುದಿಲ್ಲ ಬದಲಾಗಿ ಮತ ಶೋಕಿ ಯಾಗುತ್ತದೆ.

ಮೊದಲು ಪ್ರಜೆಗಳು ಗಮನಿಸಬೇಕಾದ ಅಂಶಗಳು:

  • ನಾನಾ ತರಹದ ನಾಯಕರುಗಳು ಚುನಾವಣೆಗೆ ನಿಂತಿರುತ್ತಾರೆ ಎಲ್ಲಾ ನಾಯಕರನ್ನು ಸೂಕ್ಷ್ಮವಾಗಿ ಗಮನಿಸಿ
  • ನಾಯಕ ಮತ್ತು ಜನರ ನಡುವಿನ ಒಡನಾಟ ಹೇಗಿದೆಯೆಂದು ಪರಿಶೀಲಿಸಿ
  • ಜನರೊಂದಿಗೆ ಆತ ನಡೆದುಕೊಳ್ಳುವ ರೀತಿ, ಆತನಿಗಿರುವ ಜ್ಞಾನ, ಮಾತುಗಾರಿಕೆ, ಇವೆಲ್ಲವೂ ಸಣ್ಣಪುಟ್ಟ ವಿಚಾರವೆಂದೆನಿಸಿದರೂ ಆಳವಾಗಿ ಸೂಕ್ಷಿಸಿ.
  • ನಾಯಕನಿಂದ ಜನರಿಗೆ ಯಾವ ರೀತಿ ಸೌಕರ್ಯಗಳು ಇದಕ್ಕೂ ಮುಂಚೆ ಲಭಿಸಿದೆಯೋ, ಇಲ್ಲವೇ ಎಂದು ಆಲೋಚಿಸಿ. ಆತನ ಆಡಳಿತ ಜನಪರ ಇದ್ದರೆ ಮಾತ್ರ ಆತನನ್ನು ನಾಯಕನನ್ನಾಗಿ ಆಯ್ದುಕೊಳ್ಳಿ.
  • ಜವಾಬ್ದಾರಿಯುತ ನಾಯಕನಾಗಿದ್ದಲ್ಲಿ ಉತ್ತಮ ನಾಯಕನನ್ನಾಗಿ ಆರಿಸಿ.

ಇದಿಷ್ಟು ಗಮನಿಸಲೇಬೇಕು ಏಕೆಂದರೆ, ನಮ್ಮ ಶುಭ್ರ ಸಮಾಜವನ್ನು ಇನ್ಯಾವುದೋ ರಾಕ್ಷಸನಂತೆ ವರ್ತಿಸುವ, ಕೊಳಕು ಮನಸ್ಸು ಹೊಂದಿದ, ಕಲ್ಮಶ ತುಂಬಿದ ನೀಚನ ಕೈಗೆ ಆಡಳಿತವನ್ನು ಕೊಟ್ಟರೆ ಸಮಾಜವೇ ಕೊಳಕಾಗಿ ಬಿಡುವುದರಲ್ಲಿ ಯಾವುದೇ ಸಂಶಯವಿಲ್ಲ.
‘ಮತದಾನ ಎಂಬುದು ನಮ್ಮೆಲ್ಲರ ಹಕ್ಕು ಆ ಹಕ್ಕನ್ನು ಅತ್ಯಂತ ಎಚ್ಚರಿಕೆಯಿಂದ ವಹಿಸಬೇಕು. ನಾವು ಹಾಕುವ ಒಂದು ಮತ ಆಡಳಿತದ ಮೇಲೆ ಪರಿಣಾಮ ಬೀಳಬಹುದು. ಯಾವ ಗಾಳಿ ಮಾತಿಗೂ ಅಥವಾ ಇನ್ಯಾವುದೋ ಆಮಿಷಕ್ಕೆ ಒಳಗಾಗದೆ ಸಮಾಜಕ್ಕೆ ಸೂಕ್ತವೆನಿಸಿದ ವ್ಯಕ್ತಿಗೆ ಮತವನ್ನು ಚಲಾಯಿಸಬೇಕು.’
“ಮತ ವೆಂಬುದು ಸರಕಾರ ರಚನೆಯ ಮೊದಲ ಹೆಜ್ಜೆ”
ಒಬ್ಬ ಚುನಾವಣೆಗೆ ನಿಂತರೆ, ಚುನಾವಣೆಯ ಒಂದು ವಾರದ ಮೊದಲು ಮನೆಬಾಗಿಲಿಗೆ ಬಂದು ನಾನಾ ರೀತಿಯ ಮೂಲಭೂತ ಸೌಕರ್ಯವನ್ನು ಕೊಡುತ್ತಾ ನೆ, ಬಡ ಕುಟುಂಬಕ್ಕೆ ನೆರವಾಗುತ್ತಾನೆ, ಶಾಲೆಗಳಿಗೆ ಶೌಚಾಲಯಗಳನ್ನು ಕಟ್ಟಿ ಕೊಡುತ್ತಾನೆ, ಬಡ ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಕೊಡುತ್ತಾನೆ,
ಆದರೆ…
ಆತ ಚುನಾವಣೆ ಗೆದ್ದ ಮೇಲೆ ಎಂದಾದರೂ ನಿಮ್ಮ ಮನೆ ಬಾಗಿಲಿಗೆ ಬಂದು ನಿಮ್ಮ ಕಷ್ಟಕ್ಕೆ ನೆರವಾಗುತ್ತಾನೆಯೇ? ನಾಯಕನಾದ ಮೇಲೆ ಬಡಪಟಕುಟುಂಬಕ್ಕೆ, ಹಸಿದವರ ಪಾಲಿಗೆ ಅನ್ನದಾತನಾದರೆ … ಆತ ನಿಜವಾದ ಉತ್ತಮ ನಾಯಕನೆಂದು ತೀರ್ಮಾನಿಸಬಹುದು.

” ಪ್ರಜಾಪ್ರಭುತ್ವವೆಂದರೆ ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ …..
ಒಬ್ಬ ರಾಷ್ಟ್ರಪತಿಯನ್ನೇ ಆಗಲಿ ಅಥವಾ ಒಬ್ಬ ಮುಖ್ಯಮಂತ್ರಿಯನ್ನೇ ಆಗಲಿ ಅಥವಾ ಒಬ್ಬ ಸಚಿವನನ್ನೇ ಆಗಲಿ ಇನ್ಯಾವುದೋ ನಾಯಕನನ್ನೇ ಆಗಲೇ ಪ್ರತಿಯೊಂದು ಪ್ರಜೆಗಳ ಆಯ್ಕೆ, ಮತ್ತು ಮತಗಳ ಹಾಗೂ ಜನರ ನಿರ್ಧಾರದ ಮೇಲೆ ಆಧಾರವಾಗಿರುತ್ತದೆ.”

ಹಾಗಾಗಿ ನೀವು ಆಯ್ಕೆಮಾಡುವ ನಾಯಕ ಹಾಗೂ ನಮ್ಮೆಲ್ಲರ ಹಕ್ಕು ಮತ್ತು ಕರ್ತವ್ಯ ಕೂಡ ಆದ ನಮ್ಮ ಅಮೂಲ್ಯವಾದ ಮತ ಉತ್ತಮ ನಾಯಕನಿಗಿರಲಿ ಮತ್ತು ಒಂದು ಉತ್ತಮ ಆಡಳಿತಕ್ಕಾಗಿರಲಿ….

ನೆನಪಿರಲಿ….
ನಮ್ಮ ಆಯ್ಕೆ ಉತ್ತಮವಾಗಿದ್ದರೆ ಒಂದು ಉತ್ತಮ ನಾಯಕತ್ವ ಮತ್ತು ಉತ್ತಮ ಆಡಳಿತವನ್ನು ಕಾಣಬಹುದು ಆಗಮಾತ್ರ ನಮ್ಮ ಸಮಾಜ ಉತ್ತಮವಾಗಿ ಬದಲಾಗಬಹುದು ನಮ್ಮ ಸಮಾಜಕ್ಕೆ ಮುಖ್ಯವಾಗಿ ಬೇಕಾದದ್ದು ಬದಲಾವಣೆ ಅಷ್ಟೇ ನಮ್ಮ ಜೀವನಶೈಲಿ ಬದಲಾಗಬೇಕು, ಬಡತನ ದೂರವಾಗಬೇಕು ಹಸಿದವರ ಹೊಟ್ಟೆ ತುಂಬ ಬೇಕು ಕಣ್ಣೀರನ್ನು ಒರೆಸುವ ಕೈಬೆರಳುಗಳು ಬೇಕು ಶ್ರೀಮಂತ ಶ್ರೀಮಂತ ನಾಗಿ ಉಳಿದಿದ್ದಾನೆ, ಬಡವ ಬಡವನಾಗಿ ಬೆಳೆಯುತ್ತಿದ್ದಾನೆ. ಆದರೆ ಭಾರತ ಮುಂದುವರೆದಿದೆ ಎಂಬ ಮಾತಿನ ಪತಾಕೆ ಮಾತ್ರ ಮುಗಿಲುಮುಟ್ಟಿದೆ.

ಇವೆಲ್ಲವನ್ನು ಹೋಗಲಾಡಿಸುವ ಒಬ್ಬ ಉತ್ತಮ ನಾಯಕ ಮತ್ತು ನಾಯಕನಿಗೆ ಜೊತೆ ಸೇರಿ ನಡೆಯುವ ಅತ್ಯುತ್ತಮ ಪ್ರಜೆಗಳು ಬಹುಮುಖ್ಯವಾಗಿ ಈ ಸಮಾಜಕ್ಕೆ ಅತ್ಯಗತ್ಯ….

LEAVE A REPLY

Please enter your comment!
Please enter your name here