• ನಸೀಬ ಗಡಿಯಾರ್

ಇಂದು ಜಗತ್ತಿನ ಯುವಕರು ಮೊಬೈಲಿನ ದಾಸರಾಗಿ ಬಿಟ್ಟಿದ್ದಾರೆ ಜಗತ್ತಿಗೆ ನಮ್ಮಿಂದಾಗಬೇಕಾದ ಮುಖ್ಯ ಕಾರ್ಯಗಳನ್ನು ಮರೆತುಬಿಟ್ಟಿದ್ದಾರೆ. ಜಗತ್ತಿನ ಹಲವು ಕಡೆಗಳಲ್ಲಿ ಸೇವಾ ಸಂಘ ಸಂಸ್ಥೆಗಳು ಉದ್ಭವಿಸಿದೆ
ಕಷ್ಟದಲ್ಲಿರುವವರಿಗೆ ಸಹಾಯ ಸಂಘ ಸಂಸ್ಥೆಗಳು ತಕ್ಷಣವೇ ಕೈಜೋಡಿಸಿ ಸಹಾಯಕ್ಕೆ ನೆರವಾಗುತ್ತಾರೆ ಸಾಕಷ್ಟು ಸೇವೆಗಳನ್ನು ತಮ್ಮ ಕೈಲಾದಷ್ಟು ನೀಡಿದ್ದಾರೆ ಹಾಗೂ ನೀಡುತ್ತಿದ್ದಾರೆ

ಆದರೆ ಅದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಹಲವು ಜನರು ದೂರದಿಂದಲೇ ಎಲ್ಲವನ್ನು ವೀಕ್ಷಿಸಿ ಸುಮ್ಮನಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯನ್ನು ಜಗತ್ತಿನಿಂದ ಮೊದಲು ಅಳಿಸಬೇಕು. ಕಷ್ಟಕ್ಕೆ ನೆರವಾಗಬೇಕೆಂದು ಸುದ್ದಿ ಪ್ರಚಾರ ಮಾಡಿದಾಗ ಯಾರು ಯಾರನ್ನೂ ಕೂಡ ಬಲವಂತ ಮಾಡುವುದಿಲ್ಲ ಆದರೆ ಸೇವೆಯೆಂಬ ಸಾಮಾನ್ಯ ಜ್ಞಾನ ತಾನಾಗಿಯೇ ನಮ್ಮಲ್ಲಿ ಉದ್ಭವಿಸಿಬೇಕು.
ಸಮಾಜ ಸೇವೆ ಎಂದರೆ ಲಕ್ಷ, ಕೋಟ್ಯಂತರ ದಾನ ಮಾಡಬೇಕೆಂದಿಲ್ಲ ಮನೆಬಾಗಿಲಿಗೆ ಬಂದ ಭಿಕ್ಷುಕನಿಗೆ ಒಂದು ತುತ್ತು ಅನ್ನ ಕೊಟ್ಟರೆ ಅವನ ಪಾಲಿಗೆ ಅದು ನೀನು ಮಾಡಿದ ಬಹುದೊಡ್ಡ ಸೇವೆಯಾಗಿ ಉಳಿದುಬಿಡುತ್ತದೆ.
ಇನ್ನೂ ದುರಂತವೇನೆಂದರೆ, ಸಮಾರಂಭದಲ್ಲಿ ಹಲವು ಗಣ್ಯ ವ್ಯಕ್ತಿಗಳು ಸಮಾಜಸೇವೆ ಹಾಗಿರಬೇಕು, ಹೀಗಿರಬೇಕು ಎಂದು ಗಟ್ಟಿಯಾಗಿ ಭಾಷಣ ಬಿಗಿಯುತ್ತಾರೆ ಆದರೆ ಮನೆಬಾಗಿಲಿಗೆ ಬಂದ ಭಿಕ್ಷುಕನನ್ನು ತಳ್ಳಿ ಬಿಡುತ್ತಾರೆ. ಆದರೆ ಮನೆಬಾಗಿಲಿನ ಮುಂದೆ ಸೇವೆಯೇ ಸಂಪತ್ತು ಎಂಬ ಸಾಲನ್ನು ಅಂಟಿಸಿರುತ್ತಾರೆ.
ಸಮಾಜ ಸೇವೆ ಎಂಬುದು ಕೇವಲ ಭಾಷಣಕ್ಕೆ ಸೀಮಿತವಾಗಿರಬಾರದು ಮಾತಿನಂತೆ ಅಲ್ಪವಾದರೂ ಪಾಲಿಸಬೇಕು. ಗುರುಹಿರಿಯರು ಮಕ್ಕಳೊಂದಿಗೆ ಪ್ರತಿಬಾರಿಯೂ ಒಂದು ನೀತಿ ಮಾತನ್ನು ಹೇಳುತ್ತಾರೆ ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂದು.
ಆ ಮುಂದಿನ ಪ್ರಜೆಗೆ ಸಾಕಷ್ಟು ಜವಾಬ್ದಾರಿಗಳು ಬೇಕಾಗುತ್ತದೆ. ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ಸತ್ಯ, ಶಾಂತಿ, ಸಹಿಷ್ಣತೆ, ಹಿರಿಯರಿಗೆ ನೀಡಬೇಕಾದ ಗೌರವ, ಕಿರಿಯರಿಗೆ ತೋರಬೇಕಾದ ಕರುಣೆ, ಸಮಾಜಕ್ಕೆ ತೋರಬೇಕಾದ ಸೇವೆ… ಇವೆಲ್ಲವೂ ಆ ವಯಸ್ಸಿನಲ್ಲಿಯೇ ಪರಿಚಯಿಸಬೇಕು.

ಮೂರು ವರ್ಷದ ಬುದ್ದಿ ನೂರು ವರ್ಷದ ತನಕ ಎಂಬ ಮಾತಿನಂತೆ ಆ ವಯಸ್ಸಿನಲ್ಲಿ ಕಲಿತ ಅಲ್ಪ ಸಕರಾತ್ಮಕ ಜ್ಞಾನ ಮುಂದೆ ಪೀಳಿಗೆಗೆ ಹೆಮ್ಮರವಾಗಿ ಬೆಳೆದು ಉಳಿದವರಿಗೆ ನೆೆರವಗಬಹುದು. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಎಂಬ ಮಾತು ನೂರಕ್ಕೆ ನೂರು ಸತ್ಯ
ಇಂದಿನ ಮಕ್ಕಳಿಗೆ ಸಹನೆ, ಕರುಣೆ ಇವೆಲ್ಲವೂ ಕಡಿಮೆಯಾಗಿ ಕ್ರೂರ ಹತ್ಯೆಯನ್ನು ಅಪ್ರಾಪ್ತ ವಯಸ್ಸಿನಲ್ಲಿ ಮಾಡುವುದನ್ನು ದಿನಪತ್ರಿಕೆಯಲ್ಲಿ ,ಪ್ರಸಾರ ವಾಹಿನಿಯಲ್ಲಿ ನಾವು ದಿನನಿತ್ಯ ನೋಡುತ್ತೇವೆ ಇದಕ್ಕೆಲ್ಲ ಕಾರಣ ಮಕ್ಕಳಲ್ಲಿ ಸಂಬಂಧಗಳ ಬಗೆಗಿನ ಅರಿವು ಮಾಯವಾಗುತ್ತಿದೆ.
ಮತ್ತು ಸಂಸ್ಕೃತಿಯ ಅರಿವು ಇಲ್ಲ, ಹಾಗೂ ಹಿರಿಯರನ್ನು ಗೌರವಿಸುವ ಗುಣವಿಲ್ಲ, ಭವಿಷ್ಯದ ಚಿಂತೆಯೇ ಇಲ್ಲದೆ ಬರೀ ನಕರಾತ್ಮಕ ಗುಣಗಳೇ ಹೆಚ್ಚುತ್ತಿದೆ.
ಮಕ್ಕಳಿಗೆ ಬೇರೆಯವರ ಕಷ್ಟಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನವನ್ನು ಪೋಷಕರು ಮಾಡಬೇಕು. ಮಕ್ಕಳಿಗೆ ಶಿಕ್ಷಣ ಸಂಸ್ಥೆಯಲ್ಲಿ ನಾಲ್ಕು ಗೋಡೆಗಳ ಮಧ್ಯೆ ಸಿಗುವ ವಿದ್ಯೆಗಿಂತ ನಾಲ್ಕು ಜನರೊಂದಿಗೆ ಬೆರೆತು ಸಿಗುವ ವಿದ್ಯೆ ಸಾಕಷ್ಟು ಫಲಕಾರಿಯಾಗುತ್ತದೆ.
ನೀವು ಅದೆಷ್ಟೇ ಸವಲತ್ತು, ಸಂಪತ್ತು ಹೊಂದಿದ್ದರೂ ಕೂಡ ಜಗತ್ತಿನಲ್ಲಿ ಬಡತನದಲ್ಲಿ ಇರುವಂತಹ ಜನರ ಪರಿಚಯವನ್ನು ಮಕ್ಕಳಿಗೆ ಮಾಡಿಸಬೇಕು ಹಸಿವಿನ ರುಚಿಯನ್ನು ಅಲ್ಪವಾದರೂ ಪರಿಚಯಿಸಬೇಕು
ಹೀಗೆ ಮಾಡಿದಾಗ ಮುಂದೆ ಯುವ ಪೀಳಿಗೆಯು ಶಕ್ತಿಯುತವಾದ ಉತ್ತಮ ಸೇವಾ ಸಂಘ ವಾಗಿ ಬದಲಾಗಬಹುದು. ಇಂದು ಅದೆಷ್ಟೋ ಜಾಲತಾಣಗಳಲ್ಲಿ ಹಲವು ರೀತಿಯ ಸೇವಾ ಸಂಘ ಖಾತೆಗಳು ಚಾಲ್ತಿಯಲ್ಲಿವೆ ಇದರಿಂದ ಬಹಳಷ್ಟು ಬಡ ಹೆಣ್ಣುಮಕ್ಕಳ ಮದುವೆ ಖರ್ಚಿಗೆ ನೆರವಾಗಿದ್ದಾರೆ. ಅದೆಷ್ಟೋ ತಾಯಂದಿರ ಪ್ರಾರ್ಥನೆಗೆ ಸಾಕ್ಷಿಯಾಗಿದ್ದಾರೆ.
ಮಾರಕವಾದ ರೋಗಗಳಿಂದ ನರಳಾಡಿ ಲಕ್ಷಗಟ್ಟಲೆ ಆಸ್ಪತ್ರೆಗೆ ಹಣ ಕಟ್ಟಲಾಗದೆ ತಮ್ಮೆಲ್ಲಾ ಭರವಸೆಯನ್ನು ಕೈಬಿಡುವ ವೇಳೆಯಲ್ಲಿ ಅದೆಷ್ಟೋ ಯುವಪೀಳಿಗೆಯ ಚಾರಿಟಿಗಳು ಕಷ್ಟಕ್ಕೆ ಕೈ ಜೋಡಿಸಿದೆ.

ಇಂದು ಯುವ ಸಮಾಜದ ಎದುರು ಸಹಸ್ರ ಸವಾಲುಗಳಿವೆ ಅದನ್ನೆಲ್ಲವನ್ನೂ ಪೂರೈಸುವುದು ನಮ್ಮ ಹಕ್ಕು ಆಗಿದೆ.
ಇಂದು ಭಾರತ ಆರ್ಥಿಕ ಸಮಸ್ಯೆಯಿಂದ ಹೊರ ಬಂದಿದೆ, ಜಗತ್ತು ಸಾಕಷ್ಟು ಮುಂದುವರೆದಿದೆ ಎಂದು ಹಲವು ಭಾಷಣಗಳಲ್ಲಿ ಮತ್ತು ಹಲವು ಲೇಖನಗಳಲ್ಲಿ ಕೇಳಿದ್ದೇವೆ ಮತ್ತು ನೋಡಿದ್ದೇವೆ ಅದು ಬಿಟ್ಟು ಯಾವುದೇ ರೀತಿಯ ಬದಲಾವಣೆಗಳು ಜಗತ್ತಿನಲ್ಲಿ ಆಗಿಲ್ಲ ಒಂದು ಮಾತಿನಲ್ಲಿ ಹೇಳುವುದಾದರೆ ಬಡವ ಬಡವನಾಗಿಯೇ ಉಳಿದ ಶ್ರೀಮಂತ ಶ್ರೀಮಂತನಾಗಿಯೇ ಬೆಳೆದ

ಬಡವನ ಬದುಕಿಗೆ ನಮ್ಮಂತ ಯುವಪೀಳಿಗೆ ಗಳು ಸೇವೆಗೆಂದು ಮುಂದಾಗಬೇಕು
ಆದರೆ ಇಂದು ಸೇವೆ ಎಂಬುದು ಜಾತಿ, ಮತ ಧರ್ಮ ಎಂಬ ಪರದೆಯಲ್ಲಿ ಅವಿತುಕೊಂಡಿದೆ.
ಸೇವೆ ಮಾಡಬೇಕಾದರೆ ಜಾತಿ-ಧರ್ಮವನ್ನು ನೋಡದಿರಿ. ಕಷ್ಟ ಎಂಬುದು ಇಂದು ನನಗಿದ್ದರೆ ನಾಳೆ ನಿನಗೂ ಬರಬಹುದು. ಸೃಷ್ಟಿಕರ್ತನ ವಿಧಿಯ ಬಲ್ಲವರಾರು?
ಸೇವೆ ಎಂಬುದು ನಾಲ್ಕು ಜನರು ಹೊಗಳಿ ಅಟ್ಟಕ್ಕೇರಿಸುತ್ತಾರೆ ಎಂಬ ಉದ್ದೇಶದಿಂದ ಎಂದೂ ಮಾಡದಿರು .ಮನಸ್ಪೂರಕವಾಗಿ ಒಂದು ರೂಪಾಯಿ ದಾನಮಾಡಿದರೂ ಸಾಕು. ಆದರೆ ತೋರಿಕೆ ಸಹಾಯವನ್ನು ಮಾಡದಿರು.
ನಿನ್ನ ಮನಸ್ಸಿಗೆ ನಾನೇನಾದರೂ ಮಾಡಬೇಕು ಎಂಬ ಯೋಚನೆ ಯಾವಾಗ ಬರುತ್ತದೆಯೋ ಅವಾಗ ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ ನೋಡು ಮನಸ್ಸಿಗೆ ಹೊಸ ರೀತಿಯ ತೃಪ್ತಿಯನ್ನು ಕಂಡುಕೊಳ್ಳುವೆ.

2 COMMENTS

  1. ಸಾಮಾಜಿಕ ಸೇವೆಯಲ್ಲಿ ಯುವಕರು ಲೇಖನ ಪ್ರಸ್ತುತವಾಗಿದೆ
    ಇಂದು ಸಮಾಜಸೇವೆ ಎಂಬುದು ವರ್ಣ ಹುನ್ನಾರಗಳನ್ನು ಇಟ್ಟುಕೊಂಡು ಶ್ರೀಮಂತರು ನಡೆಸುತ್ತಿರುವ ಆಡಂಬರ ಆಗಿದೆ ನಿಜವಾದ ಸಮಾಜ ಸೇವೆ ಯಾವುದು ಎಂಬುದನ್ನು ಲೇಖನ ತಿಳಿಸಿಕೊಡುತ್ತದೆ ಲೇಖಕರಿಗೆ ಧನ್ಯವಾದಗಳು
    ಡಿ ಎಂ ನದಾಫ ಅಫಜಲ್ಪುರ

LEAVE A REPLY

Please enter your comment!
Please enter your name here