ದೂರದೂರಲಿ ನಡೆಯುತಿದೆ ಯುದ್ದ
ಮಾತೃ ಹೃದಯ ಸಹ್ರಸ ಕಂದಮ್ಮಗಳ
ಆರ್ತನಾದ.
ಯುದ್ದ್ಮಾನದ ಅಮಲು
ಆವರಿಸಿದೆ ಮನೆ ಮನಗಳಲಿ
ನಂದಿದ ಅದೆಷ್ಟೋ ಆತ್ಮಗಳ ರೋಧನ
ಅದು ಯುದ್ದ ನಿಲ್ಲಿಸಿ …. ಜಗತ್ತು ಉಳಿಸಿ ಎಂಬ ಘೋಶ.
ನದಿ ತೊರಯಲಿ ವಿಷಾನೀಲ
ಪ್ರಕೃತಿ ತುಂಬಾ ಹರಡಿದೆ ಸತ್ತ ಹೆಣಗಳ ಕಮಟು
ದುಷ್ಟ ಮನುಜರ ಸ್ವಾರ್ಥಕೆ ಬಲಿಯಾದರೂ
ಅಮಾಯಕರು..
ಮಿಸೆಲ್,ಬಾಂಬು ಗದ್ದಲದ ತಳಮಳ
ಜಗತ್ತಿಗೆ ತಲ್ಲಣ ; ಮಾನವೀಯತೆಗೆ ಧಿಕ್ಕಾರ
ಹಸಿವು, ಬಾಯಾರಿಕೆಗೆ ಬಡಿದಾಟ.
ನಿಲ್ಲಿಸಿ ಯುದ್ದ ನಿಲ್ಲಿಸಿ…
ಅಲ್ಲೋಂದು ಪುಟ್ಟ ಜೋಪಡಿಯಲಿ
ಅರಿಯದ ಕಂದಮ್ಮನ ಬೇಡಿಕೆ
ಅದು ಯುದ್ದ ನಿಲ್ಲಿಸಿ…
ಮಮತೆಯ ತಾಯಿ ಶವದ ಮುಂದೆ
ರಣಹದ್ದುಗಳ ಪಯಣ …
ನಿಲ್ಲಿಸಿ ಯುದ್ದ ನಿಲ್ಲಿಸಿ…….
ಮಾನವೀಯತೆಗೆ ಕೈಜೋಡಿಸಿ…



















































