- ಸಲಾಂ ಸಮ್ಮಿ
ಕೆಲವೊಂದು ಸಿನಿಮಾಗಳು ಮನುಷ್ಯನ ಬದುಕಿಗೆ ಬಹಳ ಹತ್ತಿರವಾಗಿರುತ್ತದೆ. ನಾವೇನು ಜೀವನದಲ್ಲಿ ಮಾಡುತ್ತಿದ್ದೇವೆ, ಮಾಡಲು ಹೊರಟ್ಟಿದ್ದೇವೆ ಮತ್ತು ನಮ್ಮ ಸುತ್ತಲೂ ಆಗುತ್ತಿರುವುದೇನು ಎಂಬುದನ್ನು ಕೆಲವೊಂದು ಸಿನಿಮಾಗಳು ತೋರಿಸುತ್ತವೆ. ಬಡವರು ವಾಸವಾಗಿರುವ ಪ್ರದೇಶದಿಂದ ಜನರನ್ನು ಒಕ್ಕಲೆಬ್ಬಿಸಿ ಅಲ್ಲಿ ಫೈವ್ ಸ್ಟಾರ್ ಹೋಟೆಲ್, ಸ್ವಿಮ್ಮಿಂಗ್ ಪೂಲ್ ನಿರ್ಮಿಸುವುದು ಇತ್ಯಾದಿ. ಆದ್ರೆ ಅಲ್ಲಿ ಜನರ ಪ್ರತಿಭಟನೆಯ ಜೊತೆಗೆ ನಾಯಕನ ಸಾಥ್ ಹಲವಾರು ಕಷ್ಟಗಳನ್ನು ಎದುರಿಸಿ ಕಡೆಗೂ ನಾಯಕ ಗೆಲ್ಲುತ್ತಾನೆ. ಅದೇ ನಿಜ ಜೀವನದಲ್ಲಿ ಬಂದಾಗ ಅದಕ್ಕೆ ಧರ್ಮದ ಬಣ್ಣ, ಭಯೋತ್ಪಾದನೆ, ಹಕ್ಕು ಉಲ್ಲಂಘನೆ, ಕಾನೂನು ಕೈಗೆತ್ತಿಕೊಳ್ಳುವುದು, ಹಲ್ಲೆ, ಕೊಲೆ ಇತ್ಯಾದಿಗಳನ್ನು ಸೇರಿಸಿ ಬೆರೆಸಿ ಜನರ ಗಮನವನ್ನು ಬೇರೆಡೆ ಸೆಳೆದು ಉದ್ಯಮಿಗಳು, ರಾಜಕಾರಣಿಗಳು ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುತ್ತಾರೆ ಜೊತೆಗೆ ಇಲ್ಲಿ ವಿಲಾನ್ ಹೀರೋ ಮತ್ತು ಹೀರೋಗಳು ವಿಲಾನ್ ಇದುವೆ ಜೀವನ ಮತ್ತು ಸಿನಿಮಾ ಮಧ್ಯೆಯಿರುವ ವ್ಯತ್ಯಾಸ…
ಅಂದ ಹಾಗೆ ನಾನು ಹೇಳಲು ಹೊರಟ್ಟಿದ್ದು ಇಂತಹದ್ದೇ ಘಟನೆಗಳ ಬಗ್ಗೆ. ಅದು ಬೇರೆ ಯಾರು ಅಲ್ಲ ಮೋದಿ ಆಪ್ತ ಪ್ರಫುಲ್ ಖೋಡ ಪಟೇಲ್ ಬಗ್ಗೆ. ಆದಾಗ್ಯೂ, ಈ ಪ್ರಫುಲ್ ಪಟೇಲನ ಹಿನ್ನೆಲೆ ಏನು? ಆತ ಯಾರು ಐಏಎಸ್, ಐಪಿಎಸ್ ಅಧಿಕಾರಿಯೇ? ಅಥವಾ ದ್ವೀಪಗಳನ್ನು ಆಳಲು ಸಮರ್ಥವಾಗಿರುವ ಓರ್ವ ಆಡಳಿತಾಧಿಕಾರಿಯೇ? ಇಲ್ಲ! ನೀವು ಕೇಳುವ ಪ್ರಶ್ನೆಗಳಿಗೆ ಇಲ್ಲಿರುವ ಉತ್ತರ ಒಂದೇ “ಇಲ್ಲ, ಆತ ಅಸಮರ್ಥ ವ್ಯಕ್ತಿ” ಯಾಕೆ ಗೊತ್ತಾ? ಅದನ್ನು ಹೇಳ್ತಿನಿ ನೋಡಿ. 2010ರಲ್ಲಿ ಸೊರಾಬುದ್ಧೀನ್ ಶೇಖ್ ಅವರನ್ನು ನಕಲಿ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿಸಿದ ಆರೋಪದ ಮೇಲೆ ಅಂದಿನ ಗುಜರಾತ್ ಗೃಹ ಸಚಿವ ಹಾಗೂ ಪ್ರಸ್ತುತ ಭಾರತದ ಗೃಹ ಸಚಿವರಾದ ಅಮಿತ್ ಶಾರನ್ನು ಸಿಬಿಐ ಬಂಧಿಸಿದಾಗ ಮೋದಿ ತನ್ನ ಮತ್ತೊರ್ವ ಆಪ್ತ ಪ್ರಫುಲ್ ಖೋಡ ಪಟೇಲ್ ಗೃಹ ಸಚಿವರನ್ನಾಗಿ ನೇಮಕ ಮಾಡ್ತಾರೆ. ಪ್ರಫುಲ್ ಕೆ ಪಟೇಲ್ 2007ರಲ್ಲಿ ಮೊದಲ ಬಾರಿಗೆ ಗುಜರಾತ್‌ನಲ್ಲಿ ಶಾಸಕರಾಗಿ ಆಯ್ಕೆಯಾದರು.
2014ರಲ್ಲಿ ಮೋದಿ ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ಪ್ರಫುಲ್ ಕೆ ಪಟೇಲ್ ದಮನ್ ಮತ್ತು ಡಿಯೊ ಪ್ರದೇಶದ ಆಡಳಿತಾಧಿಕಾರಿಯಾಗಿ ನೇಮಕವಾಗುತ್ತಾರೆ. ಅಲ್ಲಿಯವರೆಗೆ ಸುಖವಾಗಿ ಬಾಳುತ್ತಿದ್ದ ದಮನ್ ಮತ್ತು ಡಿಯೋ ಜನರು ಎಲ್ಲಾ ರೀತಿಯಲ್ಲೂ ಸಮಸ್ಯೆಗಳನ್ನು ಎದುರಿಸಲು ಶುರು ಮಾಡಿಕೊಂಡರು. ಇದಕ್ಕಿಂತ ಮುಂಚೆ ಅಲ್ಲಿ ಐಎಎಸ್, ಐಪಿಎಸ್ ಅಧಿಕಾರಿಗಳೇ ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು ಮೋದಿ ಅಧಿಕಾರಿಕ್ಕೆ ಬರುತ್ತಂತೆ ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಇಂತಹ ಒಂದು ಘಟನೆ ಅಲ್ಲಿ ನಡೆದು ಹೋಯ್ತು.
2019ರಲ್ಲಿ ಪ್ರಫುಲ್ ಕೆ ಪಟೇಲ್ ಕಣ್ಣು ಬಿದ್ದಿದ್ದು ಸುಂದರ ಪ್ರದೇಶವಾದ ದಾದ್ರ ಮತ್ತು ಹವೇಲಿ ಮೇಲೆ. ಪ್ರಫುಲ್ ಪಟೇಲ್ ಅಧಿಕಾರಕ್ಕೆ ಬರುತ್ತಿದ್ದಂತೆ ಹಾಲಿ ಆಡಳಿತಾಧಿಕಾರಿಯಾಗಿದ್ದ ಕಣ್ಣನ್ ಗೋಪೀನಾಥ್ ಮೇಲೆ ಭಾರೀ ಒತ್ತಡ ಬರಲು ಶುರುವಾಯಿತು. ಪರಿಣಾಮ ಐಪಿಎಸ್ ಅಧಿಕಾರಿ ಕಣ್ಣನ್ ಗೋಪಿನಾಥ್ ರಾಜಿನಾಮೆ ನೀಡಿದರು. ಇದು ದೇಶದಲ್ಲಿ ಕೆಲವು ದಿನಗಳ ಕಾಲ ವಿವಾದವನ್ನು ಸೃಷ್ಟಿ ಮಾಡಿತ್ತು. ಇದಾದ ಬಳಿಕ 2019ರ ಚುನಾವಣೆ ನಡೆದ ಸಂದರ್ಭದಲ್ಲಿ ಚುನಾವಣಾ ಆಯೋಗವೂ ಪ್ರಫುಲ್ ಪಟೇಲ್‌ಗೆ ನೋಟಿಸ್ ನೀಡಿತ್ತು. ಪ್ರಫುಲ್ ಪಟೇಲ್ ಕೈಗೆ ಅಧಿಕಾರ ಸಿಕ್ಕ ಬಳಿಕ ಆ ಪ್ರದೇಶದಲ್ಲಿ ವಾಸವಾಗಿದ್ದ 90 ಮನೆಗಳನ್ನು ಧ್ವಂಸ ಮಾಡಲಾಯಿತು. ಏಳು ಬಾರಿ ಆಯ್ಕೆಯಾದ ಆ ಪ್ರದೇಶದ ಏಕೈಕ ಸಂಸದ ಮೋಹನ್ ದೇಲ್ಕರ್ ಈ ಬಗ್ಗೆ ದನಿಯೆತ್ತಿದಾಗ ಪ್ರಧಾನ ಮಂತ್ರಿ ಆವಾಜ್ ಯೋಜನೆಯಡಿಯಲ್ಲಿ ಹೊಸ ಮನೆಯನ್ನು ಪುನರ್ನಿರ್ಮಾಣ ಮಾಡುವ ಭರವಸೆಯನ್ನು ನೀಡಿ ಜನರನ್ನು ವಂಚಿಸುತ್ತಾರೆ.
ದಾದ್ರ ಹಾಗೂ ಹವೇಲಿಯಿಂದ ಏಳು ಬಾರಿ ಸಂಸದರಾಗಿ ಆಯ್ಕೆಗೊಂಡ ಮೋಹನ್ ಫೆಬ್ರುವರಿ 21 2021ರಂದು ಮುಂಬಯಿ ಹೋಟೆಲ್‌ವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬರುತ್ತಾರೆ. ಅವರು ಸಾವಿಗು ಮುನ್ನ ಬರೆದ 15 ಪುಟಗಳ ಡೆತ್ ನೋಟಿನಲ್ಲಿ ಪ್ರಫುಲ್ ಪಟೇಲ್ ನೀಡಿದ ಹಿಂಸೆಯ ಬಗ್ಗೆ ಬರೆದಿದ್ದಾರೆ. ಬಳಿಕ ಮೋಹನ್ ದೇಲ್ಕರ್ ಮಗ ಇದರ ವಿರುದ್ಧ ಹೋರಾಡುತ್ತಾರೆ. ಅವರ ತಂದೆಗೆ 25 ಕೋಟಿ ಆಮಿಷ ಒಡ್ಡಿ ದಾದ್ರ ಹವೇಲಿ ಜನರ ಪರ ನಿಲ್ಲಬಾರದೆಂದು ಒತ್ತಡ ಹಾಕಲಾಗಿತ್ತು. ಇದನ್ನು ನಿರಾಕರಿಸಿದರೆ ಯಾವುದಾದರೂ ಪ್ರಕರಣಗಳಲ್ಲಿ ಸಿಲುಕಿಸುವುದಾಗಿ ಪದೇ ಪದೇ ಪೀಡಿಸುತ್ತಿದ್ದರು ಎಂಬುದು ಅವರ ಮಗನ ಆರೋಪ. ಇದು ಇಲ್ಲಿಗೆ ನಿಲ್ಲುವುದಿಲ್ಲ 2019ರಲ್ಲಿ ವಿರೋಧ ಪಕ್ಷಗಳ ವಿರೋಧಗಳ ನಡುವೆಯೂ ಸಂಸತ್ತಿನಲ್ಲಿ ಒಂದು ಬಿಲ್ ಪಾಸ್ ಮಾಡಲಾಯಿತು. ದಾದ್ರ ಹವೇಲಿ, ಡಿಯೊ, ದಮಾನ್ ಇವೆಲ್ಲವನ್ನೂ ವಿಲೀನಗೊಳಿಸಿ ಒಂದೇ ಮಾಡಲಾಗಿದೆ. ಅಂದರೆ ಒಬ್ಬನ ಹಿಡಿತಕ್ಕೆ ಒಂದೇ ಬಾರಿಯಾಗಿ ಹಿಡಿದಿರಲು ಈ ತಂತ್ರಗಾರಿಕೆ ಎಂಬ ಆರೋಪ ಈಗಲೂ ಇದೆ..
ಪ್ರಫುಲ್ ಕೆ ಪಟೇಲ್ ಓರ್ವ ರಾಜಕೀಯ ಹಿನ್ನೆಲೆಯಲ್ಲೋ ವ್ಯಕ್ತಿ ಮತ್ತು ಯಾವ ರೀತಿ ಅಮಾಯಕರ ಬದುಕಿನ ಜೊತೆ ಕಿಂಚಿತ್ತೂ ಮಾನವೀಯತೆ ತೋರದೆ ರಾಜಕೀಯ ಮಾಡಿದ್ದಾರೆ ಎಂಬುದು ಬಹುಶಃ ಈಗ ಮನದಟ್ಟಾಗಿರಬಹುದು. ಪ್ರಫುಲ್ ಕೆ ಪಟೇಲ್ ಓಟ ಇಲ್ಲಿಗೆ ನಿಲ್ಲದೆ ಇದೀಗ ಲಕ್ಷದ್ವೀಪದಲ್ಲಿ ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೇರೆ ದ್ವೀಪ ಪ್ರದೇಶಕ್ಕೆ ಹೋಲಿಕೆ ಮಾಡುವುದಾದರೆ ಅತೀ ಹೆಚ್ಚು ಸಾಕ್ಷರತೆಯನ್ನು ಹೊಂದಿರುವ ಜನ ಮತ್ತು ಝಿರೋ ಕ್ರೈಂ ರಿಪೋರ್ಟ್ ಜೊತೆಗೆ ಅತ್ಯಂತ ಸ್ವಚ್ಛ ಸುಂದರ ದ್ವೀಪವೆಂದರೆ ಭಾರತದ “ಲಕ್ಷದ್ವೀಪ” ಜೊತೆಗೆ ಶೇಕಡಾ 95ಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿ ಇಲ್ಲಿ ಮುಸ್ಲಿಮರೇ ಇರೋದು ಇನ್ನೊಂದು ರೀತಿಯ ವಿಶೇಷತೆ. ಇಲ್ಲಿನ ಜನ ಬಹುಮುಖ್ಯ ಕಸುಬು ಮೀನುಗಾರಿಕೆ. ಆಹಾರದ ವಿಚಾರಕ್ಕೆ ಬಂದರೆ ಮಾಂಸಾಹಾರದಲ್ಲಿ ಬೀಫ್, ಮೀನು ಪ್ರಮುಖವಾದದ್ದು. ಆದರೆ ಪ್ರಫುಲ್ ಕೆ ಪಟೇಲ್ ಯಾವಾಗ ಲಕ್ಷದ್ವೀಪಕ್ಕೆ ಕಾಲಿಟ್ಟರೂ ಅಲ್ಲಿನ ಜನರ ಬದುಕು ಅಲ್ಲೋಲ ಕಲ್ಲೋಲವಾಗಿದೆ..
ಡಿಸೆಂಬರ್ 4ರಂದು ಹಿಂದಿನ ಆಡಳಿತಾಧಿಕಾರಿ ದಿನೇಶ್ವರ್ ಶರ್ಮಾ ಅವರ ಮರಣದ ನಂತರ ಲಕ್ಷದ್ವೀಪಕ್ಕೆ ಕಾಲಿಟ್ಟವರೇ ಗುಜರಾತ್ ಮೂಲದ ಈ ಪ್ರಫುಲ್ ಪಟೇಲ್. 2020ರಲ್ಲಿ ಪ್ರಥಮ ಕೊರೊನಾ ಅಲೆಗೆ ತತ್ತರಿಸಿ ಇಡೀ ಜಗತ್ತಿನೊಂದಿಗೆ ಭಾರತವು ನಲುಗಿತ್ತು. ಆದರೆ ಲಕ್ಷದ್ವೀಪದಲ್ಲಿ ಒಂದೇ ಒಂದು ಪ್ರಕರಣ ದಾಖಲಾಗದೆ ವಿಶ್ವಕ್ಕೆ ಮಾದರಿಯಾಗಿತ್ತು. ಪ್ರಫುಲ್ ಪಟೇಲ್ ಕೈಗೆ ಆಡಳಿತ ಸಿಕ್ಕಿದಾಗ ಅವರು ಮಾಡಿದ ಮೊದಲ ಕೆಲಸವೇನೆಂದರೆ ಲಕ್ಷದ್ವೀಪಕ್ಕೆ ಬರುವವರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯವಲ್ಲ. ಹಿಂದಿನ ನಿಯಮಾವಳಿಗಳು ಬದಲಾವಣೆ ಆಗುತ್ತಿದ್ದಂತೆ ನಿಧಾನವಾಗಿ ಕೊರೊನಾ ಲಕ್ಷದ್ವೀಪಕ್ಕೆ ವಕ್ಕರಿಸಿತ್ತು. ಎಪ್ಪತ್ತು ಸಾವಿರ ಜನ ಸಂಖ್ಯೆ ಹೊಂದಿರುವ ಲಕ್ಷದ್ವೀಪದಲ್ಲಿ ಹತ್ತು ಸಾವಿರ ಮಂದಿಗೆ ಕೊರೊನಾ ಬಂದಿದೆ. ಅದರಲ್ಲಿ ಆರು ಸಾವಿರದಷ್ಟು ಪ್ರಕರಣಗಳು ಸಕ್ರಿಯವಾಗಿದೆ. ನಾಲ್ಕು ಸಾವಿರದಷ್ಟು ಮಂದಿ ಗುಣಮುಖರಾಗಿದ್ದಾರೆ 24 ಮಂದಿ ಅನ್ಯಾಯವಾಗಿ ಮೃತಪಟ್ಟರು.
ಇದು ಇಷ್ಟಕ್ಕೆ ನಿಲ್ಲುವುದಿಲ್ಲ. ಕೇವಲ ಒಂದು ಸಣ್ಣ ಗುಡಿಸಲಿನಲ್ಲಿದ್ದ ಮದ್ಯಪಾನದ ಅಂಗಡಿಯನ್ನು ಇದೀಗ ಬಾರ್, ವೈನ್ ಶಾಪ್‌ಗಳಿಗೆ ಪರಿವರ್ತನೆ ಮಾಡಲಾಗಿದೆ. ಶಾಲೆಯಲ್ಲಿ ಮಧ್ಯಾಹ್ನದೂಟಕ್ಕೆ ನೀಡುತ್ತಿದ್ದ ಮಾಂಸಹಾರವನ್ನು ನಿಷೇಧಿಸಲಾಗಿದೆ. ಬೀಫ್ ಮಾಂಸ ಭಕ್ಷಣೆ ಮಾಡುವಂತಿಲ್ಲ. ಮೀನುಗಾರಿಕೆ ಕೃಷಿಗೂ ತಡೆಗಟ್ಟಲಾಗಿದೆ. ಅಷ್ಟು ಮಾತ್ರವಲ್ಲ ಒಂದು ಮನೆಯನ್ನು ಕೂಡ ಇಲ್ಲಿ ಧ್ವಂಸ ಮಾಡಲಾಗಿದೆ. ಈ ಬಗ್ಗೆ ಪ್ರಫುಲ್ ಪಟೇಲ್‌ನನ್ನು ಮಾಧ್ಯಮಗಳು ಪ್ರಶ್ನಿಸಿದಾಗ ಸ್ಮಾರ್ಟ್ ಸಿಟಿ ಮಾಡುವ ಉದ್ದೇಶದಿಂದ ಅವುಗಳನ್ನು ಮಾಡಲಾಗಿದೆ ಎಂಬ ಉಡಾಫೆಯ ಉತ್ತರವನ್ನು ನೀಡುತ್ತಾರೆ. ಈಗಾಗಲೇ ಗಬ್ಬೆದ್ದು ನಾರುತ್ತಿರುವ ಉತ್ತರ ಪ್ರದೇಶ, ಗುಜರಾತ್ ಅಕ್ಷರಶಃ ದನದ ತೊಟ್ಟಿಯಾಗಿವೆ ಅವುಗಳನ್ನು ಬಿಟ್ಟು ಈಗಾಗಲೇ ಸ್ಮಾರ್ಟ್ ಆಗಿ ಸ್ವರ್ಗದಂತಿದ್ದ ಲಕ್ಷದ್ವೀಪವನ್ನು ಸ್ಮಾರ್ಟ್ ಮಾಡುತ್ತಾರೆ ಎಂದರೆ ಇವರೆಷ್ಟು ಕ್ರೂರಿಗಳ ಇರಬೇಡ ನೀವೆ ಯೋಚಿಸಿ…
ಸ್ಮಾರ್ಟ್ ಸಿಟಿಯ ಹೆಸರಿನಲ್ಲಿ ಲಕ್ಷದ್ವೀಪದ ಜನರನ್ನು ಒಕ್ಕೆಲೆಬ್ಬಿಸುವ ಪ್ರಕ್ರಿಯೆಯ ಈಗಾಗಲೇ ಶುರುವಾಗಿದ್ದು, ಲಾಕ್ ಡೌನ್ ಹೆಸರಿನಲ್ಲಿ ಜನರನ್ನು ಮನೆಯಿಂದ ಹೊರ ಬರದಂತೆ ನೋಡಿಕೊಳ್ಳಲಾಗಿದೆ. ಅಷ್ಟು ಮಾತ್ರವಲ್ಲದೆ ಈ ಬಗ್ಗೆ ಪ್ರತಿಭಟಿಸುವ ಮತ್ತು ವಿಮರ್ಶೆ ಮಾಡುವ ಜನರನ್ನು ಗೂಂಡಾ ಕಾಯ್ದೆ ಹೆಸರಿನಲ್ಲಿ ಬಂಧಿಸುವಂತೆ ಆದೇಶ ಹೊರಡಿಸಲಾಗಿದೆ. ಅಂದ ಹಾಗೆ ಈ ಗೂಂಡಾ ಕಾಯ್ದೆಯನ್ನು ಭಾರತದಲ್ಲಿ ಮೊಟ್ಟಮೊದಲು ಜಾರಿಗೆ ತಂದವರು ಬ್ರಿಟಿಷರು. 1919ರಲ್ಲಿ ಬ್ರಿಟಿಷರು ಇದೇ ಕಾನೂನನ್ನು ಜಾರಿಗೆ ತಂದು ಸ್ವಾತಂತ್ರ್ಯ ಹೋರಾಟದ ಚಳುವಳಿಯಲ್ಲಿ ಭಾಗವಹಿಸುವವರನ್ನು ಗೂಂಡಾ ಕಾಯ್ದೆಯ ಹೆಸರಿನಲ್ಲಿ ಬಂಧಿಸಿ ಹಿಂಸಿಸಲಾಗುತ್ತಿತ್ತು. ಲಕ್ಷದ್ವೀಪದ ಜನರಿಗೂ ಇದೇ ಬೀತಿ. ಗೂಂಡಾ ಕಾಯ್ದೆಯ ಹೆಸರಿನಲ್ಲಿ ವರ್ಷಗಳ ಕಾಲ ಜೈಲಿನಲ್ಲಿ ಕೂರಬೇಕು. ನ್ಯಾಯಾಲಯ ಈ ವಿಷಯದಲ್ಲಿ ಮೂಗು ತೋರಿಸುವಂತಿಲ್ಲ. ಪೋಲಿಸರಿಗೆ ಜನರನ್ನು ಶಿಕ್ಷಿಸುವ ಹಕ್ಕನ್ನು ನೀಡಿದಾಗ ಅದು ಯಾವ ರೀತಿಯಲ್ಲಿ ಬೇಕಾದರೂ ದುರುಪಯೋಗ ಆಗಬಹುದು. ಪೋಲಿಸರೇ ಈ ಕೆಲಸವನ್ನು ಮಾಡುತ್ತಾರೋ ಅಥವಾ ವಿಶೇಷ ತರಭೇತಿಯನ್ನು ಪಡೆದು ಪೋಲೀಸ್ ಖಾಕಿಯಲ್ಲಿ ಕಾಣಿಸಿಕೊಳ್ಳುವವರು ಮಾಡುತ್ತಾರೋ ಎಂಬುದು ಬಹುದೊಡ್ಡ ಪ್ರಶ್ನೆಯಾಗಿಯೇ ಉಳಿಯಲಿದೆ.
ಕೊಲೆಯ ಮೇಲೆ ಕೊಲೆಯ ಸರಣಿಗಳನ್ನು ನಡೆಸುತ್ತಾ, ಅಮಾಯಕರ ಮಧ್ಯೆ ವಿಷವನ್ನು ಬಿತ್ತಿ ಗುಜರಾತಿಗಳು ಇಡೀ ದೇಶದ ಸಂಪತ್ತನ್ನು ದೋಚಿ ನೀರು ಕುಡಿಯುತ್ತಿದ್ದಾರೆ. ಧರ್ಮಾಂಧದ ನಶೆಯಲ್ಲಿ ತೇಲಾಡುವ ಜನರಿಗೆ ಇವುಗಳ ಬಗ್ಗೆ ಅರಿವಿಲ್ಲ. ಲಕ್ಷದ್ವೀಪದ ಜನರ ಬದುಕಿನಲ್ಲಿ ಸುನಾಮಿ ಎದ್ದಿದೆ. ಸರ್ಕಾರ ಪ್ರಫುಲ್ ಖೋಡ ಪಟೇಲ್ ಎಂಬ ರಾಜಕೀಯ ಹಿನ್ನೆಲೆಯಿರುವ ವ್ಯಕ್ತಿಯನ್ನು ನೇಮಕ ಮಾಡಿ ಜನರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದೆ. ದಾದ್ರ, ನಗರ ಹವೇಲಿ, ಡಿಯೋ, ದಾಮನ್, ಕಾಶ್ಮೀರ, ಇದೀಗ ಲಕ್ಷದ್ವೀಪ.. ಮುಂದೆ ಇಡೀ ಭಾರತವನ್ನು ಇದೇ ರೀತಿ ನುಂಗಿ ನೀರು ಕುಡಿಯದೆ ಈ ಗುಜರಾತಿಗಳು ಬಿಡಲಾರರು. ದೇಶದ ನಾಲ್ಕು ಬದಿಯಿಂದಲೇ ನಿಧಾನವಾಗಿ ಜನರನ್ನು ಕಟ್ಟಿ ಹಾಕುತ್ತಾ ಬರುತ್ತಿದ್ದಾರೆ. ಭವಿಷ್ಯದಲ್ಲಿ ಭಾರತ ಭಾರತವಾಗಿ ಉಳಿಯಬೇಕಾದರೆ ಜನರು ಅಂಧ ಭಕ್ತಿಯಿಂದ ಎದ್ದು ಬರಬೇಕಾಗಿದೆ. ತಮಗೆ ಅರಿವಿಲ್ಲದೆ ತಮ್ಮದೇ ಬಂಧುಬಳಗವನ್ನು ಬಲಿ ನೀಡುತ್ತಿದ್ದಾರೆ. ಇದು ಯೋಚಿಸುವ ಸಮಯವಲ್ಲ ಎದ್ದು ನಿಲ್ಲಬೇಕಾದ ಸಮಯ ನೆನಪಿರಲಿ….