ಸಂಗೀತ: R. D. Burman
ಸಾಹಿತ್ಯ: ಶಿಕ್ರಾನ್ ಶರ್ಫುದ್ದೀನ್ ಎಂ

ಎದ್ದೇಳಿ, ಎದ್ದೇಳಿ… ಕನ್ನಡ ವೀರರು ಎದ್ದೇಳಿ…
ಮೈಸೂರು ಹುಲಿಯಂತೆ, ಹೋರಾಟ ಮಾಡಿರಿ…
ಆಂಗ್ಲರ ಹಿಂಸೆಗೆ ಕಡಿವಾಣ ಹಾಕಿದ!
ಅನ್ಯಾಯ ಎದುರಿಸಿ ನಾಡನ್ನು ಉಳಿಸಿದ!
ಎದ್ದೇಳಿ, ಎದ್ದೇಳಿ…

ಕೋಮು ಬಿರುಕು ಹಾಕಿದರು, ಭ್ರಾತತ್ವ ಕೆಡಿಸಿದರು
ಮುಗ್ಧ ಜನರ ಕೊಂದರು, ಆ ದುಷ್ಟ ಫಿರಂಗಿಗಳು
ನಮ್ಮ ದೇಶದ ಒಳಿತಿಗೆ, ಪುತ್ರರನ್ನು ಒತ್ತೆಯಿಟ್ಟು
ದೇಶದ ನುಸುಳಿಗರನ್ನು ಖಡ್ಗದೊಳುತ್ತರ ನೀಡಿದ
ಎದ್ದೇಳಿ, ಎದ್ದೇಳಿ…

ಭೂ ಸುಧಾರಣೆಯ ಹರಿಕಾರ- ಪರಧರ್ಮ ಸಹಿಸಿದ
ವ್ಯಾಪಾರ ಮಾಡಿಸಿ… ನಾಡನ್ನು ಉಳಿಸಿದ!
ವೀರ ಸೇನಾನಿ ಎಂದುಕೊಂಡ -ರೈತರ ಪ್ರತಿಪಾದಕ
ಜನಪರ ಆಳ್ವಿಕೆ ನಡೆಸಿದ ಅರಸ
ಎದ್ದೇಳಿ, ಎದ್ದೇಳಿ…

ಹಿಂದಿ ಚಲನಚಿತ್ರ ‘ಪಡೋಸನ್’ನ ಹಾಡು ‘ಮೈಂ ಚಲಿ ಮೈಂ ಚಲಿ’ಯ ರಾಗದಿಂದ ಪ್ರೇರಿತನಾಗಿ ಬರೆದ ಕವನ

LEAVE A REPLY

Please enter your comment!
Please enter your name here