ಮುಹಮ್ಮದ್ ರಫೀಕ್ ವಿದ್ಯಾರ್ಥಿ, ಎಂ.ಎ(ಶಿಕ್ಷಣ) ಕುವೆಂಪು ವಿಶ್ವವಿದ್ಯಾನಿಲಯ, ಶಿವಮೊಗ್ಗ

ಆರ್.ಟಿ.ಇ(ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ-ರೈಟ್ ಟು ಎಜುಕೇಶನ್) ಋತು ಆರಂಭಗೊಂಡಿದೆ. ಫೆಬ್ರವರಿಯಿಂದ ಮಾರ್ಚ್‍ವರೆಗೆ ಅರ್ಜಿ ತುಂಬಲಾಗುವುದು, ಈಗ ಆನ್ಲೈನ್ ಅರ್ಜಿ, ಹೆತ್ತವರು-ಪೋಷಕರು ಮತ್ತು ಖಾಸಗಿ ಶಾಲೆಯಲ್ಲಿ 25% ದಾಖಲಾತಿ ಎಂಬುವುದೆಲ್ಲಾ ಕೇಳುತ್ತದೆ ಮತ್ತು ಮಾರ್ಚ್ ದ್ವಿತೀಯ ಭಾಗದಲ್ಲಿ ಕೊನೆಗೊಳ್ಳುತ್ತದೆ. ಆರ್.ಟಿ.ಇ ಯನ್ನು, ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ 2009(2009ರ ಕೇಂದ್ರ ಕಾಯ್ದೆ 35) ಎಂದು ವ್ಯಾಖ್ಯಾನಿಸಲಾಗುತ್ತದೆ.

ಪ್ರತಿ ವರ್ಷದ ವಸಂತ ಕಾಲದಲ್ಲಿ ಆರ್.ಟಿ.ಇ, ಆನ್ಲೈನ್ ಅಪ್ಲಿಕೇಶನ್, ಕೊನೆಯ ದಿನಾಂಕ, ಆಧಾರ್ ಜೋಡಣೆ, ದಿನಾಂಕ ಮುಂದೂಡಿಕೆ, ಗೊಂದಲಗಳು, ದೂರುಗಳು, ಅಗತ್ಯ ಡಾಕ್ಯುಮೆಂಟ್‍ಗಳು, ದಾಖಲಾತಿಗಾಗಿ ಬಡ ಹೆತ್ತವರ ಓಡಾಟ ಎಂದೆಲ್ಲಾ ನಾವು ಕೇಳುತ್ತೇವೆ. ಆದರೆ ಮಾರ್ಚ್‍ನಿಂದ ಡಿಸೆಂಬರ್ ವೆರೆಗೆ ಯಾವ ಶಬ್ಧವೂ ಇರುವುದಿಲ್ಲ.

ಆರ್.ಟಿ.ಇ ಎಂದರೆ ಇದೇನಾ? ಆರ್.ಟಿ.ಇ ಎಂದರೆ ಅನನುಕೂಲತೆಯಿರುವ ಹಿಂದುಳಿದವರಿಗೆ ಖಾಸಗಿ ಶಾಲೆಯಲ್ಲಿ 25% ದಾಖಲಾತಿ ಮಾತ್ರವೇ? ಅಥವಾ ಇದರಾಚೆ ಏನಾದರೂ ಇದೆಯೇ? ಕರ್ನಾಟಕದಲ್ಲಿ 2012ರಿಂದ ಆರ್.ಟಿ.ಇ ಸರಿಯಾಗಿ ಜಾರಿಯಾಗಿದೆಯೇ? ಜಾರಿಯಾಗಿ ಆರು ವರ್ಷಗಳ ನಂತರದಲ್ಲಿ ನಾವು ಈಗ ಯಾವ ಹಂತವನ್ನು ತಲುಪಿದ್ದೇವೆ? ಆರ್.ಟಿ.ಇ ಜಾರಿಯಾದ ನಂತರದಲ್ಲಿ ಸಾರ್ವಜನಿಕ ಮತ್ತು ಸರಕಾರಿ ಶಾಲೆಗಳ ಸ್ಥಿತಿ ಏನು?

ಈ ಎಲ್ಲಾ ಪ್ರಶ್ನೆಗಳು ನಮ್ಮ ಮುಂದೆ ಬರುತ್ತವೆ. ಈ ಪ್ರಶ್ನೆಗಳನ್ನು ನಾವು ನಮ್ಮ ಸಮಾಜದಲ್ಲಿ ಚರ್ಚಿಸುತ್ತೇವೆಯೇ? ನಾವು ಕರ್ನಾಟಕದ ಬಗ್ಗೆ ಮಾತನಾಡೋಣ, 1983ರ ಕರ್ನಾಟಕ ಕಾಯ್ದೆಯ ಅಧ್ಯಾಯ Iಘಿ, ಪ್ರತಿಷ್ಟಿತ ಸಂಸ್ಥೆಗಳಿಗೆ ಅನುದಾನದ ಕುರಿತು ಮಾತನಾಡುತ್ತದೆ.

ಈ ರೀತಿಯ ಸಂದರ್ಭಗಳಲ್ಲಿ ರಾಜ್ಯ ಸರಕಾರವು ಕಾಯ್ದೆಯ ಪ್ರಕಾರ ಒಳಗೊಳ್ಳುತ್ತಾರೆ ಎಂದು ಭಾವಿಸಿದ ಯಾವುದೇ ಸ್ಥಳೀಯ ಆಡಳಿತದ ಶಿಕ್ಷಣ ಸಂಸ್ಥೆ ಅಥವಾ ಖಾಸಗಿ ಸಂಸ್ಥೆಗಳಿಗೆ ಅನುದಾನವನ್ನು ಒದಗಿಸಿಕೊಡಬಹುದು. ಯಾಕೆಂದರೆ ಅನುದಾನವನ್ನು ತಡೆಯುವ, ಕಡಿತಗೊಳಿಸುವ, ಹಿಂಪಡೆಯುವ ಅಧಿಕಾರವನ್ನು ಅವರು ಹೊಂದಿರುತ್ತಾರೆ.

ಆರ್.ಟಿ.ಇ ಜಾರಿಯಾದ ಆರು ವರ್ಷದ ನಂತರದಲ್ಲಿ ಸರಕಾರಿ ಶಾಲೆಗಳನ್ನು ಬಲಪಡಿಸಲು, ಸರಕಾರವು ತನ್ನ ಅನುದಾನವನ್ನು ಹಿಂಪಡೆಯುತ್ತದೆಯೇ? ಕರ್ನಾಟಕದ ಶಿಕ್ಷಣ ಇಲಾಖೆಯು 2019ರಿಂದ ಆರ್.ಟಿ.ಇ ದಾಖಲಾತಿಯನ್ನು ತಿರುಚಬಹುದೆಂದು ತೀರ್ಮಾನಿಸಿದೆ.

ಆರ್.ಟಿ.ಇ ಅಡಿಯಲ್ಲಿ ದಾಖಲಾತಿಯ ಮಾನದಂಡವನ್ನು ಸರಕಾರವು ಬದಲಾಯಿಸುತ್ತದೆಯೇ ಅಥವಾ ಅದು ಮೂಲ ಮಾನದಂಡಗಳಿಗೆ ಅಂಟಿಕೊಳ್ಳುತ್ತದೆಯೇ? ಆರ್.ಟಿ.ಇ ಕೋಟಾದಡಿಯಲ್ಲಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳನ್ನು ಪ್ರಥಮತಃವಾಗಿ ಸರಕಾರಿ ಶಾಲೆಯಲ್ಲಿ ದಾಖಲುಗೊಳಿಸಬೇಕು. ನಂತರದಲ್ಲಿ ಅನುದಾನಿತ ಶಾಲೆ ಮತ್ತು ನಂತರದಲ್ಲಿ ನೆರೆಹೊರೆಯ ಖಾಸಗಿ ಶಾಲೆಗಳಲ್ಲಿ ಮಾಡಿಸಬೇಕು. ಸಮೀಪದಲ್ಲಿ ಎಲ್ಲಿಯೂ ಸರಕಾರಿ ಅಥವಾ ಅನುದಾನಿತ ಶಾಲೆಗಳಿಲ್ಲದಿದ್ದಲ್ಲಿ ಮಾತ್ರ ಅವರನ್ನು ಖಾಸಗಿ ಶಾಲೆಗಳಿಗೆ ದಾಖಲು ಮಾಡಿಸಬೇಕೆಂದು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಶಾಲಿನಿ ರಜನೀಶ್ ಪ್ರಸ್ತಾಪವನ್ನು ಸಲ್ಲಿಸಿದ್ದಾರೆ. ಆದರೆ, ಮಗುವನ್ನು ಸರಕಾರಿ ಅಥವಾ ಅನುದಾನಿತ ಶಾಲೆಗಳಿಗೆ ಸೇರಿಸಬೇಕಾದರೆ ಅವರು(ಸರಕಾರಿ ಮತ್ತು ಅನುದಾನಿತ ಶಾಲೆ) ಖಾಸಗಿ ಶಾಲೆಯಲ್ಲಿ ದೊರೆಯುವ ಶಿಕ್ಷಣದ ಬಹುತೇಕ ಗುಣಮಟ್ಟವಾದರೂ ದೊರೆಕಿಸಬೇಕೆಂಬುವುದು ಹೆತ್ತವರ ಕಾಳಜಿ.

ಉತ್ತಮ “ಖಾಸಗಿ ಶಾಲೆಯ” ಗುಣಮಟ್ಟಕ್ಕೆ ಸರಕಾರಿ ಮತ್ತು ಅನುದಾನಿತ ಶಾಲೆಗಳನ್ನು ಬೆಳೆಸಲು ಸರಕಾರಕ್ಕೆ ಸಾಧ್ಯವೇ? “ಖಾಸಗಿ ಶಾಲೆಗಳು”- ಖಾಸಗಿ ಶಾಲೆಗಳು ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತದೆಯೇ ಅಥವಾ ಅದು ಇಂಗ್ಲಿಷ್ ಮಾತನಾಡುವ(ಸ್ಪೋಕನ್ ಇಂಗ್ಲಿಷ್) ಶಿಕ್ಷಣವೇ? ಖಾಸಗಿ ಶಾಲೆಗಳಲ್ಲಿ ಗುಣಮಟ್ಟವು ಒಂದು ಕಟ್ಟುಕತೆಯೇ ಅಥವಾ ವಾಸ್ತವವೇ?

ಸಂವಿಧಾನವು ತನ್ನ ಮಗನ ಶಿಕ್ಷಣವನ್ನು ಆಯ್ಕೆ ಮಾಡುವ ಹಕ್ಕನ್ನು ನೀಡಿರುವಾಗ, ಯಾಕೆ ಒಬ್ಬ ಹೆತ್ತವನನ್ನು ಸರಕಾರಿ ಅಥವಾ ಅನುದಾನಿತ ಅಥವಾ ಖಾಸಗಿ ಶಾಲೆಗಳನ್ನು ಆಯ್ಕೆ ಮಾಡಲು ನಿರ್ಬಂಧಿಸಲಾಗುತ್ತದೆ. ಎಲ್ಲರಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಆದೇಶ ಎಂದರೆ ಇದೇ? ಖಾಸಗಿ ಶಾಲೆಗಳಿಗೆ ದಾಖಲಾತಿ ನೀಡುವುದರ ಮೂಲಕ ಸರಕಾರಿ ಶಾಲೆಗಳಲ್ಲಿ ಕುಂಠಿತವಾಗುತ್ತಿರುವ ದಾಖಲಾತಿ ಸಂಖ್ಯೆಯು ಏರಿಕೆಯಾಗಬಲ್ಲುದೇ?

ಆರ್.ಟಿ.ಇ ತಪ್ಪಾಗಿ ಜಾರಿಯಾಗುತ್ತಿದೆಯೇ? ನಾವು ಅದನ್ನು ಸರಿಪಡಿಸುತ್ತಿದ್ದೇವೆಯೇ? ಅಥವಾ ಇನ್ನೊಂದು ತಪ್ಪನ್ನು ಮಾಡುತ್ತಿದ್ದೇವೆಯೇ? ಖಾಸಗಿ ಶಾಲೆಗಳ ಜವಾಬ್ದಾರಿಯಲ್ಲಿ 25% ಸೀಟು ನೀಡುವ ಹೊಣೆಗಾರಿಕೆಯು ಬರುತ್ತದೆ. ಅದೊಂದು ಸಮಾಜ ಸೇವೆಯಾಗಿ ಪರಿಗಣಿಸಲ್ಪಡುತ್ತದೆಯೇ? ಆರ್.ಟಿ.ಇ ಅನ್ನು ನಾವು ಸಾಮಾಜಿಕ ಪರಿಶೀಲನೆಗೆ ಒಳಪಡಿಸಬೇಡವೇ?

ನಮ್ಮ ಸಮಾಜದ ಎಲ್ಲರಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ದೊರಕಿಸಿಕೊಡಲು, ಈ ಪ್ರಶ್ನೆಗಳನ್ನೆಲ್ಲಾ ಒಬ್ಬ ತಂದೆ-ತಾಯಿಯಾಗಿ, ಶಿಕ್ಷಕನಾಗಿ, ಎಸ್.ಡಿ.ಎಂ.ಸಿ ಸದಸ್ಯನಾಗಿ, ಅಧಿಕಾರಿಯಾಗಿ, ಸಮಾಜದ ಜವಾಬ್ದಾರಿಯುತ ವ್ಯಕ್ತಿಯಾಗಿ ನಾವು ಹೇಗೆ ಎದುರಿಸುತ್ತೇವೆ?

 

 

1 COMMENT

LEAVE A REPLY

Please enter your comment!
Please enter your name here