ಅಬುಲೈಸ್ ಗುಲ್ಬರ್ಗಾ

ಅಮ್ಮ, ನನಗೆ ಹಸಿವಾಗುತ್ತಿದೆ ಎಂದಳು ಪುಟ್ಟ ಹುಡುಗಿ ಫಾತಿಮಾ.

ಒಂಭತ್ತು ವರ್ಷ ಪ್ರಾಯದ ತನ್ನ ಮಗು ಸಲ್ಮಾಳ ಆರೈಕೆಯಲ್ಲಿದ್ದ ಹಫ್ಸ ಉತ್ತರಿಸುತ್ತಾಳೆ,

“ಮುದ್ದು ಫಾತಿಮಾ, ತುಸು ತಾಳ್ಮೆಯಿಂದಿರಮ್ಮ. ನಾನು ತಿನ್ನಲು ಏನಾದರೂ ಬೇಗನೇ ತರುತ್ತೇನೆ”. ದೀರ್ಘ ಸಮಯದಿಂದ ನಡೆಯುತ್ತಿರುವ ನಾಗರಿಕ ಯುದ್ಧದ ಕಾರಣದಿಂದಾಗಿ ತಿನ್ನಲೂ ಏನೂ ಇಲ್ಲದಿರುವುದರಿಂದ ಹಫ್ಸ ಗಾಬರಿಗೊಂಡಿದ್ದಳು.

ಹಫ್ಸ, ಪುಟಾಣಿ ಮಗು ಸಲ್ಮಾಳನ್ನು ಫಾತಿಮಾಳ ಕೈಗಿತ್ತು, “ನಿನ್ನ ಪುಟ್ಟ ತಂಗಿಯನ್ನು ಚೆನ್ನಾಗಿ ನೋಡಿಕೋ…ಒಂದು ದಿನ ನೀನು ಡಾಕ್ಟರ್ ಆಗುವಿ… ಅಲ್ವಾ ಆಗುತ್ತಿಯಲ್ಲಾ?” ಎಂದು ತನ್ನ ಆಯಾಸದ ಮುಖದಲ್ಲಿ ನಗು ಬೀರಿ ಕೇಳಿದಳು. ಆಹಾರಕ್ಕಾಗಿ ಹಫ್ಸ ಮನೆಯಿಂದ ಹೊರ ನಡೆದಳು. ಆಕೆಯ ಮನಸ್ಸು ಚಂಚಲವಾಗಿತ್ತು. ಆಕೆಯ ಪುಟ್ಟ ಕುಟುಂಬವನ್ನು ಮನೆಯಲ್ಲಿ ಒಂಟಿಯಾಗಿ ಬಿಟ್ಟು ಬಂದಿರುವುದರ ಭಯ ಆಕೆಯನ್ನು ಕಾಡಿತು. ಆದರೆ, ಬಲವಂತವಾಗಿ ಆಕೆ ತನ್ನನ್ನು ಮುಂದೂಡಿದಳು. ಯಾಕೆಂದರೆ, ಒಳ್ಳೆಯ ಆಹಾರ ಸೇವಿಸಿ ದಿನಗಳು ಎಷ್ಟು ಉರುಳಿದವು ಎಂಬುವುದು ಆಕೆಗೆ ನೆನಪೇ ಇರಲಿಲ್ಲ.

ತನ್ನ ತಾಯಿ ಯುದ್ಧದ ಭಗ್ನಾವಶೇಷಗಳೆಡೆಯಲ್ಲಿ ದಾರಿಯನ್ನು ಮಾಡಿಕೊಂಡು ಮುಂದ್ಹೋಗುತ್ತಿರುವುದನ್ನು ಪುಟಾಣಿ ಫಾತಿಮಾ ಕಿಟಕಿಯ ಪರದೆಯ ಹಿಂದಿನಿಂದ ನೋಡುತ್ತಿದ್ದಳು.

ಫಾತಿಮಾ ತನ್ನ ಪುಟ್ಟ ತಂಗಿ ಸಲ್ಮಾಳನ್ನು ಮಡಿಲಿನಲ್ಲಿ ಕೂರಿಸಿ, ತಾಯಿಯು ಆಹಾರದೊಂದಿಗೆ ಹಿಂದಿರುಗಿ ಬರುವುದನ್ನು ಕಾಯುತ್ತಾ ಕುಳಿತಿದ್ದಳು. ಭಾರಿ ಸದ್ದೊಂದು ಕೇಳಿಸಿತು. ಅದು ಆಕೆಯ ಮನೆಯ ಮೇಲಿನಿಂದ ಹಾರಿ ಹೋದ ವಿಮಾನದ ಸದ್ದೆಂದು ಆಕೆ ಗುರುತಿಸಿದಳು ಮತ್ತು ಅದು ನೆರವು ಧಾವಿಸಿರುವುದು ಎಂದು ಭಾವಿಸಿದಳು. ತನ್ನ ದಾರಿಯಲ್ಲಿ ಬರುತ್ತಿರುವುದೇನು ಎಂಬುವುದರ ಯಾವ ಪರಿವೆಯೂ ಆಕೆಗೆ ಇರಲಿಲ್ಲ.

ವಿಮಾನದ ಸದ್ದಿಗೆ ವಿಚಲಿತಳಾದ ಸಲ್ಮಾ ಅಳತೊಡಗಿದಳು. ತಂಗಿಯನ್ನು ಸಮಾಧಾನ ಪಡಿಸಲು ಫಾತಿಮಾ ಹಳೇಯದಾದ ಸಿರಿಯಾನ್ ಲಾಲಿ ಹಾಡೊಂದನ್ನು ಹಾಡತೊಡಗಿದಳು. ಮತ್ತೊಮ್ಮೆ ಕಿವಿ ಕಿವುಡಾಗುವಂತಹ ಭೀಕರ ಸದ್ದು, ಭಯದಿಂದ ಫಾತಿಮಾ ಪುಟ್ಟ ತಂಗಿಯೊಂದಗೆ ಮನೆಯಲ್ಲಿ ಓಡತೊಡಗಿದಳು. ಸಲ್ಮಾ ಆಕೆಗೆ ನೇತುಕೊಂಡಿದ್ದಳು.

ಸಮಯ ಕಳೆದಂತೆ ಸದ್ದಿನ ಪುನಾರಾವರ್ತನೆ ವೃದ್ಧಿಯಾಗುತ್ತಲೇ ಇತ್ತು. ಹೊರಗಡೆ ಯುದ್ಧ ಆರಂಭಗೊಂಡಿದೆ. ಬಂದೂಕುಗಳು ತಡೆರಹಿತವಾಗಿ ಚಲಾಯಿಸಲಾಗುತ್ತಿದೆ ಮತ್ತು ನಿರಂತರವಾಗಿ ಮೇಲಿನಿಂದ ಬಾಂಬುಗಳನ್ನು ಸುರಿಯಲಾಗುತ್ತಿದೆ.

ಭಯಬೀತಳಾದ ಫಾತಿಮಾ ಒಂದು ಕಂಬಳಿಯನ್ನು ತೆಗೆದು, ತನ್ನನ್ನು ಮತ್ತು ಸಲ್ಮಾಳನ್ನು ಅದರಲ್ಲಿ ಆವರಿಸಿ, ಟೇಬಲೊಂದರ ಅಡಿಯಲ್ಲಿ ಕುಳಿತಳು. ಇಬ್ಬರೂ ಹಸಿವಿನಲ್ಲಿ ಮತ್ತು ಭಯದಲ್ಲಿದ್ದರು. ತಂಗಿಯನ್ನು ಮಡಿಲಿನಲ್ಲಿ ಕೂರಿಸಿ ಫಾತಿಮಾ ಕಣ್ಣು ಮುಚ್ಚಿದಳು. ಕಂಬನಿಯು ಆಕೆಯ ಕೆನ್ನೆಯಿಂದ ಉರುಳಿತು… ತನ್ನ ತಾಯಿ ಒಮ್ಮೆ ಮರಳಿ ಬಂದರೆ ಸಾಕೆಂದು ಆಕೆ ತಾಳ್ಮೆಗೆಟ್ಟು ಕಾದಳು.

ಸಮಯ ಕಳೆಯುತ್ತಿತ್ತು. ಹಫ್ಸ ಹಿಂತಿರುಗಿ ಬರಲೇ ಇಲ್ಲ. ಪುಟಾಣಿ ಫಾತಿಮಾ ಗಾಬರಿಗೊಂಡಳು. ತಾನು ತನ್ನ ತಾಯಿಯಲ್ಲಿ ಆಹಾರ ಕೇಳಿರದಿದ್ದರೆ, ತಾಯಿ ನಮ್ಮೊಂದಿಗೆ ಇರುತ್ತಿದ್ದಳು ಎಂದು ಭಾವಿಸಿ ಚಿಂತಿತಳಾದಳು. ಭಯವು ಹಸಿವೆಯನ್ನು ಸೋಲಿಸಿತು. ತನಗೆ ಹಸಿವಾಗುತಿತ್ತು ಎಂಬುವುದನ್ನೇ ಆಕೆ ಮರೆತಳು…!

ಸ್ವಲ್ಪ ಹೊತ್ತಿನ ಬಳಿಕ, ಸುತ್ತಮುತ್ತ ಎಲ್ಲೂ ಭೀಕರ ಸದ್ದು ಕೇಳಿಸಲಿಲ್ಲ. ಭಯ ತರಿಸುವ ಮೌನವು ಎಲ್ಲೆಡೆ ಆವರಿಸಿತು. ಫಾತಿಮಾ ಹೊರಗೆ ಹೋಗಿ ತನ್ನ ತಾಯಿಯನ್ನು ಹುಡುಕುವುದಾಗಿ ತೀರ್ಮಾನಿಸಿದಳು.

ಪುಟ್ಟ ತಂಗಿ ಸಲ್ಮಾಳನ್ನು ತನ್ನ ಬೆನ್ನಿಗೆ ಕಟ್ಟಿ, ಆಕೆಗೆ ಚಿಪುವುದನ್ನು ನೀಡಿದಳು. ಹೃದಯದಲ್ಲಿ ಭಯ ಮತ್ತು ನಡುಗುವ ಕಾಲುಗಳೊಂಗೆ ಹೊರಗಡಿಯಿಟ್ಟಳು. ಆಕೆಯ ಭರವಸೆಯು ಸ್ವಲ್ಪವೂ ಕುಸಿದಿರಲಿಲ್ಲ.

ಯಾವುದೋ ಒಂದು ವಸ್ತುವನ್ನು ಕಂಡಾಗ ತನ್ನ ಪಾದವನ್ನು ಹಿಂತೆಗೆದಳು.  ಧೂಳಿನ ಮೋಡವನ್ನು ಸೀಳಿಕೊಂಡು ಬೃಹತ್ತಾದ ಉಪಕರಣವೊಂದು ಧಾವಿಸಿ ಬರುತಿತ್ತು. ಅದು ಅಮಾನವೀಯತೆಯನ್ನು ಸಂಪೂರ್ಣವಾಗಿ ತುಂಬಿಕೊಂಡಿರುವ ಕ್ಷಿಪಣಿಯಾಗಿತ್ತು. ಅದು ಪರಿಶುದ್ಧವಾದ ಮಾನವ ಭಾವನೆಗಳಿಂದ ನಿರ್ಮಿಸಿದ್ದ ಅವರ ಮನೆಯ ಗೋಡೆಗೆ ಬಂದು ಬಡಿಯಿತು.

ಮನೆಯು ಪುಡಿಗಟ್ಟಿ ನೆಲಕ್ಕುರುಳಿತು. ಫಾತಿಮಾ ಮತ್ತು ಸಲ್ಮಾರನ್ನು ಅದು ಸಿಲುಕಿಸಿತು ಮತ್ತು ಸುತ್ತೆಲ್ಲೆಡೆಯು ಕತ್ತಲೆ ಆವರಿಸಿತು. ಫಾತಿಮಾ ಸಲ್ಮಾಳನ್ನು ಎಷ್ಟು ಸಾಧ್ಯವೋ ಅಷ್ಟು ಬಿಗಿಯಾಗಿ ಅಪ್ಪಿದಳು. ತನ್ನ ತಾಯಿ ಬಿಟ್ಟು ಹೋಗಬಾರದಿತ್ತೆಂದು ಆಶಿಸಿದಳು ಮತ್ತು ಆಕೆಗೆ ಬೇರಾವ ದಾರಿಯೂ ಇಲ್ಲದೆ ಪ್ರಾರ್ಥನೆಯನ್ನು ಮಾಡಿದಳು.

ಸ್ವಲ್ಪ ಸಮಯ ಕಳೆದ ಬಳಿಕ ಸುತ್ತಮುತ್ತ ಕೆಲವು ಮನುಷ್ಯ ಧ್ವನಿಗಳು ಕೇಳಿಸ ತೊಡಗಿತು. ಆಕೆ ತನ್ನಲ್ಲಿದ್ದ ಎಲ್ಲಾ ಶಕ್ತಿಯನ್ನು ಕೂಡಿಸಿ ಸಹಾಯಕ್ಕಾಗಿ ಕೂಗಿದಳು. ಜನರು ಅವಶೇಷಗಳನ್ನು ನೀಗಿಸುತ್ತಿರುವಾಗ, ಭರವಸೆಯ ಬೆಳಕು ಅಂಧಕಾರವನ್ನು ಸೀಳುತ್ತಿರುವುದನ್ನು ಆಕೆ ಕಂಡಳು. ತಕ್ಷಣವೇ ಸಹಾಯ ಹಸ್ತಗಳು ಬಂದು ಅವರನ್ನು ಪಾರು ಮಾಡಿ ಆಸ್ಪತ್ರೆಗೆ ದಾಖಲಿಸಿದರು. ಸುಸಜ್ಜಿತವಲ್ಲದ ಆಸ್ಪತ್ರೆ!

ಫಾತಿಮಾ ಮತ್ತು ಸಲ್ಮಾ ಇಬ್ಬರಿಗೂ ಆಮ್ಲಜನಕದ ಕೊರತೆಯಾಗಿತ್ತು. ತಾನು ಯಾವ ತಪ್ಪು ಮಾಡಿದ್ದೇನೆ? ಎಂದು ಫಾತಿಮಾ ಆಶ್ಚರ್ಯಚಕಿತಳಾದಳು. ಯಾರಿಗೆ ಯಾವ ಹಾನಿಯನ್ನು ಅವರು ಮಾಡಿದ್ದರು? ಇದೇ ಪ್ರಶ್ನೆಯನ್ನು ದೇವನು ಪುನರುತ್ಥಾನ ದಿನದಂದು ಹೆಣ್ಣು ಮಕ್ಕಳನ್ನು ಜೀವಂತ ಹೂತವರೊಂದಿಗೆ ಕೇಳುತ್ತಾನೆ….

ತನ್ನ ಮಡಿಲಿನಲ್ಲಿ ದಣಿದು ಮಲಗಿಕೊಂಡಿದ್ದ ಸಲ್ಮಾಳಿಗೆ ಆಮ್ಲಜನಕ ಮಾಸ್ಕ್‍ನ್ನು ತೊಡಿಸಿ, ಕಣ್ಣಿನಲ್ಲಿ ತುಂಬು ಪ್ರಾರ್ಥನೆಯೊಂದಿಗೆ ಆಕೆಯ ಕಡೆಗೆ ನೋಡಿಳು. ತನ್ನ ಕನಸುಗಳನ್ನು ಅಮಾನವೀಯ ಕ್ಷಿಪಣಿಗಳು ನಾಶ ಮಾಡಿದ್ದರೂ ಪುಟಾಣಿ ತಂಗಿಯನ್ನು ಉಳಿಸುವಲ್ಲಿ ಆಕೆ ಯಶಸ್ಸಾಗಿದ್ದಳು. ಆಕೆಗೆ ತಂಗಿಯನ್ನು ಎತ್ತಿ ಮುತ್ತಿಟ್ಟು ವಿದಾಯ ಹೇಳಲಾಗಲಿಲ್ಲ. ಆದ್ದರಿಂದ ಆಕೆಯ ತುಟಿಗಳು ಕಂಪಿಸಿದವು ಮತ್ತು ಆಕೆಯ ದೃಷ್ಟಿಯು ಕಣ್ಣೀರಿನಿಂದ ಚಾಚಿಕೊಂಡಿತು.

ಸಾಹಸಿಯಾದ ಫಾತಿಮಾಳ ಆತ್ಮವು ಆಕೆಯ ದೇಹದಿಂದ ಆಕೆಯ ಪ್ರೀತಿಯ ದೇಶವಾದ ಸಿರಿಯಾವು ಕುರೂಪಿಯಾದ ಯುದ್ಧದಿಂದ ಸ್ವತಂತ್ರವಾಗಲೆಂಬ ಹಾರೈಕೆ ಮತ್ತು ಪ್ರಾರ್ಥನೆಯೊಂದಿಗೆ ಬೀಳ್ಕೊಟ್ಟಿತು.

LEAVE A REPLY

Please enter your comment!
Please enter your name here