ಮೂಲ ಲೇಖನವು ದಿ ಕಂಪ್ಯಾನಿಯನ್ ವೆಬ್ ಪೋರ್ಟಲ್ನಲ್ಲಿ ಪ್ರಕಟವಾಗಿದೆ. ಇದರ ಕನ್ನಡ ಅನುವಾದ ಶೇಖ್ ಅಯಾನ್ ರವರು ಮಾಡಿದ್ದಾರೆ.
ಜಾತಿ ಆಧಾರಿತ ಭೇದಭಾವಕ್ಕೆ ಒಳಗಾದ ಕೆಳವರ್ಗದ ಸಮುದಾಯದಗಳ ಶಿಕ್ಷಣ, ಮಾನವ ಘನತೆ, ಉದ್ಯೋಗ ಮತ್ತು ಮಾನವನು ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಅಗತ್ಯವಿರುವ ಅನೇಕ ಮೂಲಭೂತ ಅಂಶಗಳಿಂದ ವಂಚಿತಗೊಳ್ಳುತ್ತಾನೆ. ವರ್ಷಗಳ ಜಾತಿ ಆಧಾರಿತ ದಮನದ ನಂತರ, ಬಾಬಾಸಾಹೇಬರು ನೀಡಿರುವ ಮೀಸಲಾತಿಯ ಮೂಲಕ ಅವರು ಶಿಕ್ಷಣದ ಮೆಟ್ಟಿಲುಗಳನ್ನು ಏರಲು ಆರಂಭಿಸಿದರು. ಬಾಬಾಸಾಹೇಬರು ಕೆಳಜಾತಿಯ ಸಮುದಾಯಗಳಿಗೆ ಮೀಸಲಾತಿಯ ಹಕ್ಕನ್ನು ಖಚಿತಪಡಿಸಿದ್ದರೂ, ಇಂದು ಮೀಸಲಾತಿಯೇ ಪ್ರಭುತ್ವ ಹೊಂದಿದ ಜಾತಿಗಳು ದೌರ್ಜನ್ಯಕ್ಕೆ ಕೆಳಜಾತಿ ಜನರ ವಿರುದ್ಧ ತಮ್ಮ ಪೂರ್ವಾಗ್ರಹವನ್ನು ಬಹಿರಂಗವಾಗಿ ವ್ಯಕ್ತಪಡಿಸುವ ಅತ್ಯಂತ ಸ್ಪಷ್ಟವಾದ ಮಾರ್ಗವಾಗಿರುವುದು ಕಂಡುಬರುತ್ತದೆ. ಜಾತಿ ಆಧಾರಿತ ಭೇದಭಾವ ಮತ್ತು ಹಿಂಸಾಚಾರದ ವಿರುದ್ಧ ದೇಶದಾದ್ಯಂತ ಅನೇಕ ಚಳವಳಿಗಳು ಈಗಾಗಲೇ ನಡೆದು ಬಂದಿದೆ. ಇಂತಹ ಚಳವಳಿಗಳಲ್ಲಿ ಪೈಕಿ ಪ್ರಮುಖ ಚಳವಳಿಯೊಂದಾಗಿ ರೋಹಿತ್ ವೇಮುಲ ಚಳವಳಿಯೂ ಒಂದಾಗಿದೆ.
ರೋಹಿತ್ ವೇಮುಲ ಒಬ್ಬ ಕೆಳಜಾತಿಗೆ ಸೇರಿದ ಹೈದರಾಬಾದ್ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಯಾಗಿದ್ದರು. ಅವರು ಅಂಬೇಡ್ಕರ್ ವಿದ್ಯಾರ್ಥಿ ಸಂಘದ ಜೊತೆ ಸೇರಿ ಹಲವಾರು ಜಾತಿ ಆಧಾರಿತ ಸಂಬಂಧಿತ ಅನ್ಯಾಯದ ವಿರುದ್ಧ ವಿಶ್ವವಿದ್ಯಾಲಯದಲ್ಲಿ ಬಹಳ ಧಿಟ್ಟವಾಗಿ ತಮ್ಮ ಧ್ವನಿಯನ್ನು ಎತ್ತುತ್ತಿದರು. ಈ ಹಿನ್ನೆಲೆಯಲ್ಲಿ ಆಧಾರದ ಮೇರೆಗೆ ವಿಶ್ವವಿದ್ಯಾಲಯ ವೆಮುಲರವರ ಆರ್ಥಿಕ ಸ್ಥಂಭವಾಗಿದ್ದ ೨೫೦೦೦ ತರಬೇತಿ ಭತ್ಯೆ ಸ್ಥಗಿತಗೊಳಿಸಿದರು. ರೋಹಿತ್ ವೇಮುಲನ ಸಕ್ರಿಯ ಅಂಬೇಡ್ಕರ್ ವಿದ್ಯಾರ್ಥಿ ಸಂಘದ ಜೊತೆ ಸೇರಿ ನ್ಯಾಯಕ್ಕಾಗಿ ಹೋರಾಟದ ಕಾರಣ ಅವರ ತರಬೇತಿ ಭತ್ಯೆ ಸ್ಥಗಿತವಾಗಲು ಕಾರಣ ಎಂದು ವೆಮುಲ ಅವರ ಮಿತ್ರರು ವಿಶ್ವವಿದ್ಯಾಲಯದ ಮೇಲೆ ಆರೋಪ ಹೊರಿಸಿದರು, ಆದರೆ ಈ ಆರೋಪಗಳನ್ನು ಹೊತ್ತಲು ವಿಶ್ವವಿದ್ಯಾಲಯ ನಿರಾಕರಿಸಿತು ಹಾಗೂ ಪ್ರತಿಕೆಲಸವೂ ತಪ್ಪು ಮಾಹಿತಿ ನೀಡಿದಾಗಿ ಹೊಣಿಗಾರಿಕೆಯಿಂದ ತಪ್ಪಿಸಲು ಪ್ರಯತ್ನಿಸಿತು. ಅಲ್ಲದೆ, ಸ್ಥಳೀಯ ನಾಯಕನ ಮೇಲೆ ದಾಳಿ ಮಾಡಿದನೆಂಬ ಆರೋಪವನ್ನು ಎಬಿವಿಪಿ ಸದಸ್ಯರು ಹೊರಿಸಿದ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯವು ತನಿಖೆಯನ್ನು ಆರಂಭಿಸಿದಾಗ ಅವನ ಜೀವನದಲ್ಲಿನ ಒತ್ತಡಗಳು ಇನ್ನಷ್ಟು ಹೆಚ್ಚಾದವು. ರೋಹಿತ್ ಸೇರಿದಂತೆ ಐದು ವಿದ್ಯಾರ್ಥಿಗಳನ್ನು ಸೆಪ್ಟೆಂಬರ್‌ನಲ್ಲಿ ಅಮಾನತುಗೊಳಿಸಲಾಯಿತು. ದುರದೃಷ್ಟವಶಾತ್, 2016ರ ಜನವರಿ 17ರಂದು ಅವನು ತನ್ನ ಜೀವನಕ್ಕೆ ತೆರೆ ಎಳೆದನು. ಅವನು ಬರೆದ ಆತ್ಮಹತ್ಯೆ ಪತ್ರದಲ್ಲಿ, “ನನ್ನ ಜನನವೇ ನನ್ನ ಪ್ರಾಣಘಾತಕ ಅಪಘಾತ” ಎಂದು ಉಲ್ಲೇಖಿಸಿದ್ದನು.
ರೋಹಿತ್ ವೇಮುಲ ಕೇವಲ ತನ್ನ ಜಾತಿಗೆ ಸೀಮಿತನಾಗಿರಲಿಲ್ಲ; ಅವನು ವಿಜ್ಞಾನವನ್ನು ಅಧ್ಯಯನ ಮಾಡಲು ಕನಸು ಕಂಡ ಶ್ರಮಶೀಲ ಮತ್ತು ಬುದ್ಧಿವಂತ ವಿದ್ಯಾರ್ಥಿಯಾಗಿದ್ದನು. ದಲಿತರು ಎದುರಿಸಬೇಕಾದ ಜಾತಿ ಆಧಾರಿತ ಹಿಂಸೆಗಳ ಬಗ್ಗೆ ಅವನು ವ್ಯಾಪಕವಾಗಿ ಓದುತ್ತಿದ್ದನು. ಅವುಗಳನ್ನು ತನ್ನ ಬಾಲ್ಯದಲ್ಲಿಯೇ ಅನುಭವಿಸಿದ್ದನು. ವಿಜ್ಞಾನ ವಿದ್ಯಾರ್ಥಿಯಾಗಿದ್ದರೂ ಸಹ, ವ್ಯವಸ್ಥೆಯಿಂದ ತನ್ನಂತೆಯೇ ಅನ್ಯಾಯಕ್ಕೆ ಒಳಗಾದ ಯುವ ಬುದ್ಧಿಜೀವಿಗಳು ಎದುರಿಸಿದ ಅನ್ಯಾಯಗಳ ವಿರುದ್ಧ ಹೋರಾಡುವುದನ್ನೇ ಅವನು ಆರಿಸಿಕೊಂಡಿದ್ದನು. ಮನುಷ್ಯನನ್ನು ಅವನ ಬುದ್ಧಿಮತ್ತೆಯಿಂದಲ್ಲ, ಅವನ ಗುರುತಿನಿಂದಲೇ ಗುರುತಿಸಲಾಗುತ್ತದೆ ಎಂಬ ಕಠೋರ ಸತ್ಯವನ್ನು ಜಗತ್ತಿಗೆ ತಿಳಿಸುತ್ತಲೇ ಅವನು ಮರಣ ಹೊಂದಿದನು.
ಯೋಜಿತ ಶೋಷಣೆ ಮತ್ತು ಭೇದಭಾವಕ್ಕೆ ಒಳಗಾಗಿ ತನ್ನ ಜೀವನದ ಒತ್ತಡಕ್ಕೆ ಮಣಿದು ಆತ್ಮಹತ್ಯೆ ಮಾಡಿಕೊಂಡು ಮುಗಸುವಲ್ಲಿ ರೋಹಿತ್ ವೇಮುಲ ಮೊದಲು ಅಲ್ಲ ಅಥವಾ ಕೊನೆಯ ದಲಿತ ವಿದ್ಯಾರ್ಥಿಯು ಅಲ್ಲ. ಆತನ ಆತ್ಮಹತ್ಯೆ ರಾಷ್ಟ್ರಾದ್ಯಂತ ಪ್ರತಿಭಟನೆ ಹಾಗೂ ತೀವ್ರ ಆಕ್ರೋಶಕ್ಕೆ ಒಳಗಾಯಿತು. ಅದರ ಪರಿಣಾಮವಾಗಿ ಭಾರತದಲ್ಲಿ ಜಾತಿ ಪರಿಕಲ್ಪನೆ ಕುರಿತು ರಾಷ್ಟ್ರವ್ಯಾಪಿ ಚರ್ಚೆಗೆ ಗ್ರಾಸವಾಯಿತು. ವೇಮುಲನ ಆತ್ಮಹತ್ಯೆ ಪತ್ರ ನಮಗೆ ತಿಳಿಸುವುದು ಏನೆಂದರೆ ಆತ ಅರ್ಹತಾಧಾರಕ ವಿದ್ಯಾರ್ಥಿವಾಗಿದ್ದು, ದಲಿತ ವಿದ್ಯಾರ್ಥಿಯ ನೆಲೆಯಲ್ಲಿ ಪೂರ್ವಗ್ರಹ ಪೀಡಿತ ಎದುರಿಸಲೇಬೇಕು. ಕ್ಯಾಂಪಸ್ಗಳು ಕೇವಲ ಪ್ರಾಯೋಗಿಕ ಪರೀಕ್ಷೆಗೆ ವಿದ್ಯಾರ್ಥಿಗಳಿಗೆ ತಯಾರಿಸಿ ವೃತ್ತಿಪರ ಉದ್ಯೋಗಕ್ಕೆ ನೀಡುವ ಸ್ಥಳವಾಗಿರಲ್ಲಿಲ್ಲ ಬದಲಾಗಿ ಅವು ತಮ್ಮ ತತ್ತ್ವ ಹಾಗೂ ಆಲೋಚನೆಗಳನ್ನು ಹಂಚಿಕೊಳ್ಳುವ ಒಂದು ಸ್ಥಳವಾಗಿದೆ. ವೆಮುಲ ಅವರ ಮೃತ್ಯು ನಂತರ ಜಾತಿ ಕುರಿತು ವಾದ-ವಿವಾದ ಮೇಲ್ನೋಟಕ್ಕೆ ಬಂತು. ದೇಶದಾದ್ಯಂತ ವಿದ್ಯಾರ್ಥಿಗಳು ತಮ್ಮ ತಮ್ಮ ಸಿದ್ಧಾಂತಗಳನ್ನು ಪರಿಗಣಿಸದೆ ನ್ಯಾಯಕ್ಕಾಗಿ ಹೋರಾಡಲು ಬೀದಿಗಿಳಿದರು. ವೇಮುಲರವರ ಆತ್ಮಹತ್ಯೆ ಪತ್ರದಿಂದ ಪ್ರೇರೇಪಿತರಾದ ರಾಜ್ಯಾಧ್ಯಂತ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಸಂಸ್ಥೆಗಳೊಳಗೆ ಪ್ರವೇಶಿಸುವ ಆಲೋಚನೆಗೆ ಉತ್ತೇಜನ ಪಡೆದರು. ಮಂಡಲ್ ಆಯೋಗದ ವರದಿ ಬಂದ ನಂತರ, ದಲಿತ ವಿದ್ಯಾರ್ಥಿಗಳು ಅಧೀನ ಪಾತ್ರವನ್ನು ಮೀರಿ, ವಿಶ್ವವಿದ್ಯಾಲಯಗಳ ಒಳಗೇ ತಮ್ಮ ಬೇಡಿಕೆಗಳನ್ನು ಆಗ್ರಹಿಸಲು ಆರಂಭಿಸಿದ ಎಲ್ಲಾ ಲಕ್ಷಣಗಳು ಕಂಡುಬಂದಿವು. ಮಂಡಲ್ ಆಯೋಗ ಬಂದ ನಂತರ ದಲಿತ ವಿದ್ಯಾರ್ಥಿಗಳು ಸ್ವತಂತ್ರತೆ ಇಲ್ಲದ, ಇತರರ ಆದೇಶಕ್ಕೆ ಒಳಪಟ್ಟ ಪಾತ್ರವನ್ನು ಮೀರಿ ಸ್ವಾಭಿಮಾನದ ಮನಸ್ಥಿತಿಯೊಂದಿಗೆ ಸಾಂವಿಧಾನಿಕ ಹಕ್ಕು ಮತ್ತು ಸಾಮಾಜಿಕ ನ್ಯಾಯದ ಕೂಗನ್ನು ವಿಶ್ವವಿದ್ಯಾಲಯದ ಚೌಕಟ್ಟಿನಲ್ಲಿ ಕೇಳಲು ಆರಂಭಿಸಿದರು. ವೇಮುಲ ತನ್ನ ಆತ್ಮಹತ್ಯೆ ಪತ್ರದಲ್ಲಿ ಬರೆಯುತ್ತಾನೆ ಅದೇನೆಂದರೆ ಒಬ್ಬ ವ್ಯಕ್ತಿ (ಪ್ರತ್ಯೇಕ ದಲಿತ ವ್ಯಕ್ತಿ) ಯನ್ನು ಯಾವತ್ತೂ ಸಂಪೂರ್ಣ ವ್ಯಕ್ತಿಯಾಗಿ ಪರಿಗಣಿಸಲೇ ಇಲ್ಲ , ಆತ ಅತ್ಯಂತ ಪ್ರತಿಭೆಯುಳ್ಳವನಾಗಿದ್ದರೂ ಆತ ಕೇವಲ ಒಂದು ಮತ ಚಲಾಯಿಸುವ, ಒಂದು ಸಂಖ್ಯೆ ಹಾಗೂ ಬಳಕೆಯ ವಸ್ತು ಎಂದು ಪರಿಗಣಿಸಲಾಗುತ್ತದೆ.ದಲಿತ ವಿದ್ಯಾರ್ಥಿಯ ಬೌದ್ಧಿಕ ಶಕ್ತಿ, ಸಂಶೋಧನೆ ಮತ್ತು ಆಲೋಚನೆಗಳಿಗೆ ಬೆಲೆ ನೀಡಲಾಗುವುದಿಲ್ಲ; ಬದಲಾಗಿ ಸಮಾಜವು ಅವನ ಗುರುತಿನ ಮೇಲೆಯೇ ಗಮನ ಕೇಂದ್ರೀಕರಿಸುತ್ತದೆ. ದಲಿತರು ಬಹುಸಾರ ಅಸ್ಪೃಶ್ಯರು ಎಂದು ಗುರುತಿಸಲ್ಪಡುವ ಸಮಾಜದಲ್ಲಿ, ವೆಮುಲಾ ಮಾನವನಾಗಿರುವ ತನ್ನ ಹಕ್ಕನ್ನು ಪ್ರತಿಪಾದಿಸಲು ವಿಜ್ಞಾನವನ್ನು ಬಳಸಿಕೊಂಡನು. ಅವನಿಗೆ ಸಾಧ್ಯವಿದ್ದ ಅತ್ಯುನ್ನತ ಸ್ಥಾನಮಾನ ಇದ್ದರೂ ಸಹ, ಅವನನ್ನು ಮನುಷ್ಯ ಘನತೆಯ ಮೌಲ್ಯದ ವ್ಯಕ್ತಿಯಂತೆ ನೋಡಲಿಲ್ಲ. ದಲಿತ ವಿದ್ಯಾರ್ಥಿಯೊಬ್ಬನು ಯಾವುದೇ ಎತ್ತರವನ್ನು ತಲುಪಬಹುದು, ಪ್ರಮುಖ ವಿಷಯಗಳನ್ನು ಅಧ್ಯಯನ ಮಾಡಬಹುದು ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಅಮೂಲ್ಯ ಸಂಪತ್ತಾಗಬಹುದು ಎಂಬುದನ್ನು ಅವನು ಪ್ರತಿಪಾದಿಸಿದನು. ವಿಜ್ಞಾನವನ್ನು ಅವನು ತನ್ನ ಪ್ರತಿಭಟನೆಯ ಭಾಷೆಯಾಗಿ ಬಳಸಿಕೊಂಡನು.
ನ್ಯಾಯದ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಸಾಮಾಜಿಕ ಹೋರಾಟಗಾರರು ಹಾಗೂ ನಾಗರಿಕ ಸಮಾಜವು ಅಚಲವಾಗಿ ನಿಂತುಕೊಂಡರು. ಜಾತಿ ಆಧಾರಿತ ದೌರ್ಜನ್ಯದ ವಿರುದ್ಧ ಅಂಬೇಡ್ಕರ್ ವಿದ್ಯಾರ್ಥಿ ಸಂಘಟನೆಗಳು ಸೇರಿದಂತೆ ಇತರ ವಿದ್ಯಾರ್ಥಿ ಸಂಘಟನೆಗಳಿಂದ ಹೈದರಾಬಾದ್ ವಿಶ್ವವಿದ್ಯಾಲಯ ಹಾಗೂ ದೇಶದ ವಿವಿಧಡೆ ನಿರಂತರ ಪ್ರತಿಭಟನೆಗಳು ನಡೆಸಲಾಯಿತು. ತದ್ವಿರುದ್ಧ ಸಿದ್ಧಾಂತಗಳನ್ನು ಹೊಂದಿರುವ ಸಂಘಟನೆಗಳು ಸಹ ಈ ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಸರ್ಕಾರದ ಮೇಲೆ ನ್ಯಾಯ ಒದಗಿಸುವಂತೆ ಕೇಳಿದ್ದಾರೆ. ಎಡಪಂಥೀಯ ಪಕ್ಷಗಳು ರೋಹಿತ್ ರವರ ಆತ್ಮಹತ್ಯೆಯನ್ನು ‘ಸಂಸ್ಥಾತ್ಮಕ ಹತ್ಯೆ’ ಎಂದು ಕರೆದರೆ ಈ ಮಧ್ಯೆ ಅವರ ಜಾತಿ ಗುರುತುಗಳನ್ನು ಪ್ರಶ್ನಿಸುವ ಪ್ರಯತ್ನವು ನಡೆದಿದೆ. ರೋಹಿತ್ ರವರು ವಡ್ಡೇರ ಸಮುದಾಯಕ್ಕೆ ಸೇರಿದವರು ಎಂದು ಹೇಳಿದ ಗುಂಟೂರು ಜಿಲ್ಲೆಯ ಜಿಲ್ಲಾಧಿಕಾರಿಯ ಮಾತುಗಳು ತಪ್ಪಿಸ್ತರನ್ನು ರಕ್ಷಿಸುವ ಪ್ರಯತ್ನ ಎಂದು ಆರೋಪಿಸಲಾಗಿದೆ. ಇಷ್ಟೆಲ್ಲರ ಮಧ್ಯೆ 2024 ರಂದು ತೆಲಂಗಾಣ ಪೋಲೀಸರು ಸಾಕ್ಷಾಧಾರಗಳ ಕೊರತೆಯನ್ನು ಸೂಚಿಸಿ ರೋಹಿತ್ ಆತ್ಮಹತ್ಯೆ ಪ್ರಕರಣವನ್ನು ಮುಚ್ಚಳಿಕೆ ವರದಿಯನ್ನು ಕೂಡ ಸಲ್ಲಿಸಿದೆ.
ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ಭೇದಭಾವ ಅಂತ್ಯಗೊಳ್ಳಬೇಕು ಹಾಗೂ ಕೆಳವರ್ಗದ ಸಮುದಾಯಗಳ ಹಕ್ಕುಗಳನ್ನು ರಕ್ಷಿಸಬೇಕು ಎಂಬ ಉದ್ದೇಶದಿಂದ ತೆಲಂಗಾಣದ ಹೋರಾಟಗಾರರು ‘ರೋಹಿತ್ ಕಾಯ್ದೆ’ ಜಾರಿಯಾಗಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟರು. 2021 ರಲ್ಲಿ, ಆಗಿನ ಕೇಂದ್ರ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ ಅವರು ಲೋಕಸಭೆಯಲ್ಲಿ ಮಂಡಿಸಿದ ವರದಿಯ ಪ್ರಕಾರ 2014 ರಿಂದ 2021ರ ನಡುವೆ IIT, IIM, NIT ಮತ್ತು ಇತರೆ ಕೇಂದ್ರ ವಿಶ್ವವಿದ್ಯಾಲಯಗಳಲ್ಲಿ ಒಟ್ಟು 122 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಇವರಲ್ಲಿ ಸುಮಾರು 68 ಮಂದಿ SC/ST/OBC ಸಮುದಾಯಗಳಿಗೆ ಸೇರಿದವರಾಗಿದ್ದರು. 2006ರಲ್ಲಿ ಸುಖದೇವ್ ಥೋರಾಟ್ ಅವರ ನೇತೃತ್ವದ ಸಮಿತಿ ರಚನೆಯಾಗಿದೆ AIIMSನಲ್ಲಿ ಜಾತಿ ಭೇದಭಾವ ಕುರಿತು ಅಧ್ಯಯನ ನಡೆಸಿ 2007ರಲ್ಲಿ ವರದಿ ಸಲ್ಲಿಸಲಾಯಿತು. ಈ ವರದಿ ಜಾತಿ ಹಿನ್ನೆಲೆಯ ಕಾರಣದಿಂದ ಬೋಧನಾ ಬೆಂಬಲದ ಕೊರತೆ, ಉತ್ತರಪತ್ರಿಕೆ ಮೌಲ್ಯಮಾಪನದಲ್ಲಿ ಭೇದಭಾವ, ಮೇಲ್ಜಾತಿ ವಿದ್ಯಾರ್ಥಿಗಳಿಂದ ಕಿರುಕುಳ, ಸಾಮಾಜಿಕ ಬೇರ್ಪಡೆ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಭೇದಭಾವ ಇರುವುದನ್ನು ವರದಿ ಉಲ್ಲೇಖಿಸಿತು. ಆದ್ದರಿಂದ, ಕೆಳವರ್ಗದ ಸಮುದಾಯಗಳ ಹಕ್ಕುಗಳನ್ನು ರಕ್ಷಿಸಲು ಸ್ಪಷ್ಟ ನೀತಿ ಹಸ್ತಕ್ಷೇಪ ಬಹಳ ಅಗತ್ಯವಾಗಿದೆ.
ಅವನಿಗೆ ತಾನು ಕೇವಲ ಒಂದು ಸಂಖ್ಯೆ ಎಂದು ಹೇಳಲಾಯಿತು; ಆದರೆ ತಾನು ಮಿಂಚುವ ನಕ್ಷತ್ರವೆಂದು ಅವನು ಜಗತ್ತಿಗೆ ನೆನಪಿಸಿದನು. ಅವನು ಬರೆದ ಪತ್ರವು ನಾವು ಚಿಂತನೆ ಮಾಡಲು ಅವನು ಬಿಟ್ಟುಹೋದ ಪ್ರತಿಬಿಂಬದ ಕನ್ನಡಿಯಾಗಿದೆ. ಇಂಖಿಲಾಬ್ ಜಿಂದಾಬಾದ್.



















































