ಬಶೀರ್ ಅಹ್ಮದ್ ಕಿನ್ಯಾ

ಯೌವ್ವನ ! ಅದೊಂದು ತರಹದ ರೋಮಾಂಚನ. ನಮ್ಮ ಬೇಕು ಬೇಡಗಳ ಬೆನ್ನು ಹತ್ತಿ ಅದನ್ನು ಪಸರಿಸುವ ಬರದಲ್ಲಿ ನಮ್ಮ ಸರಿಯನ್ನು ನಾವೇ ಆಯ್ದುಕೊಳ್ಳುವ ಕಾಲ. ಅದು ಕೆಲವೊಮ್ಮೆ ತಪ್ಪಾಗಿ ಕಂಡಾಗ, ಯಾರಾದರೂ ತಿದ್ದಿದಾಗ ಸರಿಪಡಿಸುವ ಪ್ರಯತ್ನವನ್ನೂ ಮಾಡುವ ಕಾಲ.

ನಮ್ಮ ತನವನ್ನು ಗರುತಿಸಿ, ಅದನ್ನು ಪರಿಶೋಧನೆಗೊಡ್ಡಿ ಪರಿಪಾಲಿಸಲು ಪ್ರಯತ್ನ ಪಡುವ ಸಲುವಾಗಿ ಸಮಾನ ಮನಸ್ಕರನ್ನು ಒಗ್ಗೂಡಿಸುವ ಅಮೋಘ ಕಾಲ. ನೆನಪಿರಲಿ ನಮ್ಮ ಸರಿಗಾಗಿ ಆ ಕಾಲದಲ್ಲಿ ತ್ಯಾಗ ಮಾಡುವವರು ನಾವಲ್ಲ. ಕಾರಣ ನಾವು ನಮ್ಮ ಅಸ್ಮಿತೆಯ ಉಳಿವಿಗಾಗಿ ಹೋರಾಡುವ ಬರದಲ್ಲಿ ಇರುತ್ತೇವೆ. ಹಾಗಾದರೆ ನಷ್ಟ ಯಾರಿಗೆ?. ನಮ್ಮನ್ನೇ ನಂಬಿ ಜೀವಿಸುವ ಅಪ್ಪ-ಅಮ್ಮಂದಿರು, ಒಡಹುಟ್ಟಿದವರು, ಹೆಂಡತಿ-ಮಕ್ಕಳು ತಮ್ಮ ಪಾಲು ಕಳೆದುಕೊಂಡಿರುತ್ತಾರೆ. ಅವರೊಂದಿಗೆ ಕಳೆಯಬೇಕಾದ ಕಾಲವನ್ನು ಹರಣ ಮಾಡಿ ನಮ್ಮತನವನ್ನು ಉಳಿಸಿ ಕೊಂಡಿರುವುದಾಗಿ ಅನುಭವಕ್ಕೆ ಬರುವಾಗ, ನೆಟ್ಟಗೆ ನಡೆಯುವ ಪರಿಸ್ಥಿತಿಯಲ್ಲಿ ನಾವಿರುವುದಿಲ್ಲ. ನಮ್ಮ ಹೋರಾಟದ ಫಲವಾಗಿ ಲಭಿಸುವ ಸ್ಥಾನಮಾನಗಳು ನಮ್ಮನ್ನು ಹುಡುಕಿ ಬರುವುದೂ ಇಲ್ಲ. ಆಗ ತಾನೆ ಎಂಟ್ರಿ ಕೊಟ್ಟ ಹೂಗಳು ನಟರು ಆ ಸ್ಥಾನವನ್ನು ಅಲಂಕರಿಸಿ ಬಿಟ್ಟಿರುತ್ತಾರೆ. ಅವರ ಕೃಪೆಯಿಂದ ಲಭಿಸುವ ನೆನಪಿನ ಕಾಣಿಕೆಗಳು, ಫಲಕಗಳು, ಅಭಿನಂದನಾ ಪತ್ರಗಳು ಮನೆತುಂಬಾ ಎಲ್ಲೆಂದರಲ್ಲಿ ಬಿದ್ದುಕೊಂಡಿರುತ್ತದೆ. ಅದನ್ನು ಅಚ್ಚುಕಟ್ಟಾಗಿ ಜೋಡಿಸಿಡುವ ವ್ಯವಸ್ಥೆ ನಮ್ಮ ಮನೆಗೆ ಇರುವುದಿಲ್ಲ. ಸಾಹಿತ್ಯ ಗೋಷ್ಠಿಗಳಲ್ಲಿ, ಸಮ್ಮೇಳನಗಳಲ್ಲಿ ಮಿಂಚುವ ನಮಗೆ ವೇದಿಕೆ ಇಳಿದ ನಂತರ ಕೇಳುವವರು ಯಾರೂ ಇರುವುದಿಲ್ಲ.

ಇಷ್ಟು ಉದ್ದ ಎಳೆಯಬೇಕಾ ಅಗತ್ಯ ಏನಿದೆ ಎನ್ನುವ ಭಾವನೆ ನಿಮಗಾಗಿದ್ದರೆ ಕ್ಷಮಿಸಿ. ಇಲ್ಲಿ ನಾನು ಉಲ್ಲೇಖಿಸಿದ ಘಟನೆಗಳು ಕಾಲ್ಪನಿಕವಲ್ಲ. ಹಲವಾರು ಜೀವಗಳು ಅನುಭವಿಸಿದ ಯಾತನೆಯ ಕರಾಳ ಮುಖವಿದು. ಎಲ್ಲವೂ ಒಂದು ಪರಿಮಿತಿಯೊಳಗೆ ಅಚ್ಚುಕಟ್ಟಾಗಿ ಇರಬೇಕು. ಸಮಾಜವೇನೋ ನಮ್ಮನ್ನು ಗುರುತಿಸಿರ ಬಹುದು. ಒಂದಾನೊಂದು ಕಾಲದಲ್ಲಿ ಹೀಗಿದ್ದ ಎನ್ನಬಹುದು. ಅದರಿಂದ ನಮ್ಮ ಹೊಟ್ಟೆ ತುಂಬಲಾರದು. ನೆನಪಿರಲಿ ಮಾಡರ್ನ್ ಯುಗದಲ್ಲಿ ಲಭಿಸುವ ಸ್ಮರಣಿಕೆಗಳನ್ನು ಗುಜರಿಯವನೂ ಖರೀದಿಸುವುದಿಲ್ಲ.

ನಾನು ಹೇಳ ಬಯಸುವುದೇನೆಂದರೆ ಇಷ್ಟೇ. ಸಾಹಿತ್ಯ, ಕಲಾ ವಾಸನೆ ಇದೆಲ್ಲವೂ ಬೇಕು. ಅದೇನೋ ಅಪಘಾತಕಾರಿ ಪ್ರಕಾರವೇನೂ ಅಲ್ಲ. ಆದರೆ, ಉಪಜೀವನ ಮಾರ್ಗವಾಗಿ ಯಾರು ಕಲಾ ಕ್ಷೇತ್ರವನ್ನು ಆಯ್ಕೆ ಮಾಡುತ್ತಾರೋ, ಅವರು ಕಂಡು ಕೇಳರಿಯದ ಮಟ್ಟಕ್ಕೆ ತಲುಪಿ ಬಿಡುತ್ತಾರೆ. ಕೊನೆಗೊಮ್ಮೆ ಗೊಟಕ್ ಎಂದಾಗ ಅಯ್ಯೋ ಪಾಪ ಎಂದು ಬಿಡುವವರು ಕೆಲವರು ಇರಬಹುದು. ಆದರೆ, ಮರು ಕ್ಷಣ ನಿಮ್ಮನ್ನು ಮರೆತು ಬಿಡುತ್ತಾರೆ. ನೆನಪಿರಲಿ ಅದನ್ನೇ ವೃತ್ತಿಯನ್ನಾಗಿ ಮಾಡಿಕೊಂಡವರು ಇಲ್ಲವೇ ಎಂಬುವುದು ನಿಮ್ಮ ಪ್ರಶ್ನೆಯಾಗಿದ್ದರೆ, ಅಂತವರೆಲ್ಲ ಬಹುತೇಕ ನಿಮ್ಮ ಬೆರಳ ತುದಿಯಲ್ಲಿ ಇದ್ದಾರೆ ಯಾಕೆ ?. 130 ಕೋಟಿಗಿಂತಲೂ ಹೆಚ್ಚು ಭಾರತೀಯರ ಮಧ್ಯೆ ಕಲಾವಿದರ ಸಂಖ್ಯೆ ಎಷ್ಟಿರಬಹುದು. ಅಲ್ಲಿ ಉಳಿದು ಕೊಂಡವರು ಎಷ್ಟು? . ಅರ್ಹತೆ ಇದ್ದರೂ ತಿರಸ್ಕರಿಸಲ್ಪಟ್ಟವರೆಷ್ಟು?. ನಾನು ಹಲವಾರು ವರ್ಷಗಳಿಂದ ಅದೇ ಕಾಯಕವನ್ನು ವೃತ್ತಿಯನ್ನಾಗಿ ಕಂಡುಕೊಂಡವನಾಗಿದ್ದೆ. ಈಗಲೂ ಹಾಡುವುದಿಲ್ಲ, ಬರೆಯುವುದಿಲ್ಲ ಎಂದಿಲ್ಲ. ನಮ್ಮದೇಯಾದ ಒಂದು ಜೀವನ ಮಾರ್ಗವಿಲ್ಲದೆ ಕಲಯನ್ನೇ ನೆಚ್ಚಿಕೊಳ್ಳಬೇಡಿ. ಕಣ್ಣೆದುರೇ ಘಟಿಸಿದ ಹಲವಾರು ನೈಜ ಘಟನೆಗಳ ಬಗ್ಗೆ ನೀವೂ ಬಲ್ಲವರೇ

LEAVE A REPLY

Please enter your comment!
Please enter your name here