ಇನ್ನಮಲ್ ಆಮಾಲು ಬಿನ್ನಿಯತ್ ಅಂದರೆ, ಉದ್ದೇಶದ ಶುದ್ಧತೆ,ಇಸ್ಲಾಂ ಭೋದಿಸುವ ಜೀವನದ ಮೌಲ್ಯ*ಇನ್ನಮಲ್ ಆಮಲು ಬಿನ್ನಿಯತ್ ಯಂಬುದು ಅತ್ಯoತ ಪ್ರಸಿದ್ಧವಾದ ಹದೀಸ್ ಆಗಿದೆ.ಇಧರ ಅರ್ಥ ಕರ್ಮಗಳು ನಿಯತ್ತಿನಮೇಲೆ, ಅವಲಂಬಿತವಾಗಿದೆ.
“ಒಳ್ಳೆಯ ನಿಯ್ಯತ್ತಿನೊಂದಿಗೆ ಮಾಡಿದ ಕೆಲಸವನ್ನು ಅಲ್ಲಾಹನು ಮೆಚ್ಚುತ್ತಾನೆ. ಈಗ ಸ್ವಲ್ಪ ನಿಯ್ಯತ್ತಿನ ಬಗ್ಗೆ ಈ ಕೆಳಕಂಡ ವಿಷಯಗಳ ಮೂಲಕ ತಿಳಿಯೋಣ.”
ಉದಾಹರಣೆಗೆ ಹೇಳುವುದಾದರೆ, ಒಂದು ಇಸ್ಲಾಮಿನ ಸಂಘದಲ್ಲಿ ಒಬ್ಬ ವ್ಯಕ್ತಿಯನ್ನು ನಾಯಕನಾಗಿ ನೇಮಿಸಲಾಗಿದೆ. ಆದರೆ ಅವನ ಮನಸ್ಸಿನಲ್ಲಿ ‘ಇತರರು ನನ್ನನ್ನು ಒಳ್ಳೆಯ ಮನುಷ್ಯ ಎಂದು ಹೇಳಬೇಕು ಮತ್ತು ನನಗೆ ಹೆಚ್ಚಿನ ಗೌರವ ನೀಡಬೇಕು’ ಎಂಬ ಅಹಂಕಾರವಿದ್ದರೆ, ಅದು ಸರಿಯಾದ ನಿಯ್ಯತ್ ಆಗುವುದಿಲ್ಲ. ಏಕೆಂದರೆ ಅಹಂಕಾರವೆಂಬುದು ಅಲ್ಲಾಹನಿಗೆ ಇಷ್ಟವಿಲ್ಲದ ಗುಣವಾಗಿದೆ.
ಈ ಅಹಂಕಾರದ ಬಗ್ಗೆ ಒಂದು ಚಿಕ್ಕ ಕಥೆ ನೆನಪಿಗೆ ಬರುತ್ತದೆ. ಒಮ್ಮೆ ಅಲ್ಲಾಹನು ಶೈತಾನನಿಗೆ ಆದಮ್ (ಅ.ಸ.) ಅವರಿಗೆ ಸಾಷ್ಟಾಂಗ ನಮಸ್ಕಾರ ಮಾಡಲು ಆಜ್ಞಾಪಿಸಿದನು. ಆದರೆ ಶೈತಾನನು ಅಹಂಕಾರದಿಂದ, ‘ನಾನೇಕೆ ಅವನಿಗೆ ತಲೆ ಬಾಗಬೇಕು? ಅವನಿಗಿಂತ ನಾನು ಶ್ರೇಷ್ಠನು’ ಎಂದು ಹೇಳಿ ಅಲ್ಲಾಹನ ಆದೇಶವನ್ನು ಪಾಲಿಸಲಿಲ್ಲ. ಇದರಿಂದ ಕೋಪಗೊಂಡ ಅಲ್ಲಾಹನು ಅವನನ್ನು ಸ್ವರ್ಗದಿಂದ ಹೊರಹಾಕಿದನು. ಈ ಘಟನೆಯಿಂದ ಅಹಂಕಾರವು ಎಷ್ಟು ಕೆಟ್ಟ ಗುಣ ಎಂಬುದನ್ನು ನಾವು ಅರಿತುಕೊಳ್ಳಬೇಕು.
ಆದ್ದರಿಂದ ನಾವು ಅಹಂಕಾರವನ್ನು ತೊರೆದು ಅಲ್ಲಾಹನ ಆದೇಶಗಳನ್ನು ಪಾಲಿಸಬೇಕು ಮತ್ತು ಆತನ ಕೋಪಕ್ಕೆ ಒಳಗಾಗದಂತೆ ಬದುಕಬೇಕು.””ಆದರೆ ಕೆಲವರು ಜನರ ಮುಂದೆ ಒಳ್ಳೆಯ ಬಟ್ಟೆ ಧರಿಸಿ, ಒಳ್ಳೆಯ ನಡೆನುಡಿಗಳಿಂದ ಶಿಷ್ಟವಾಗಿ ವರ್ತಿಸುತ್ತಾರೆ. ಆದರೆ ಅವರ ನಿಯ್ಯತ್ತಿನಲ್ಲಿ ಕೇವಲ ಜನರಿಗೆ ತೋರಿಸಿಕೊಳ್ಳುವ ಉದ್ದೇಶ ಮಾತ್ರ ಇರುತ್ತದೆ. ಮನಸ್ಸಿನಲ್ಲಿ ಅಹಂಕಾರ ಮತ್ತು ಪ್ರದರ್ಶನದ ಭಾವನೆ ಇರುತ್ತದೆ. ಇದು ಸರಿಯಾದ ವರ್ತನೆ ಅಲ್ಲ.
ಯಾರು ಜನರ ಮುಂದೆ ಮಾತ್ರ ಒಳ್ಳೆಯವರಂತೆ ಕಾಣಿಸಿಕೊಂಡು, ಹೃದಯದಲ್ಲಿ ಮತ್ತು ನಿಯ್ಯತ್ತಿನಲ್ಲಿ ಕೆಟ್ಟವರಾಗಿರುತ್ತಾರೋ ಅವರು ಅಲ್ಲಾಹನ ದೃಷ್ಟಿಯಲ್ಲಿ ಒಳ್ಳೆಯವರಲ್ಲ.
ಆದರೆ ಯಾರು ಜನರ ಮುಂದೆಯೂ ಹಾಗೂ ತಮ್ಮ ನಿಯ್ಯತ್ತಿನಲ್ಲಿಯೂ ಸತ್ಯತೆ, ವಿನಯ ಮತ್ತು ಒಳ್ಳೆಯತನವನ್ನು ಪಾಲಿಸುತ್ತಾರೋ, ಅವರು ನಿಜವಾದ ಒಳ್ಳೆಯ ಮನುಷ್ಯರು. ಅಲ್ಲಾಹನು ಅವರಿಗೆ ಸಮಾಜದಲ್ಲಿಯೂ ಗೌರವ ನೀಡುತ್ತಾನೆ ಮತ್ತು ಪರಲೋಕದಲ್ಲಿಯೂ ಉತ್ತಮ ಸ್ಥಾನವನ್ನು ನೀಡುತ್ತಾನೆ.””ಆದ್ದರಿಂದ ನಾವು ಸಮಾಜದಲ್ಲಿ ಮಾತ್ರವಲ್ಲ, ಅಲ್ಲಾಹನ ದೃಷ್ಟಿಯಲ್ಲಿಯೂ ಒಳ್ಳೆಯವರಾಗಿರಬೇಕು. ನಾವು ಯಾವ ಉದ್ದೇಶದಿಂದ ಕೆಲಸ ಮಾಡುತ್ತೇವೆ ಎಂಬುದೇ ನಮ್ಮ ಒಳ್ಳೆಯ ಕರ್ಮವನ್ನು ನಿರ್ಧರಿಸುತ್ತದೆ. ಅಲ್ಲಾಹನು ನಮ್ಮ ನಿಯ್ಯತ್ತನ್ನು ನೋಡುತ್ತಾನೆ. ನಮ್ಮ ನಿಯ್ಯತ್ತಿನಲ್ಲಿ ಕೆಟ್ಟ ಭಾವನೆ ಅಥವಾ ಕಲ್ಮಶ ಇದ್ದರೆ, ಯಾರಿಗೂ ಅದು ತಿಳಿಯದಿದ್ದರೂ ಅಲ್ಲಾಹನಿಗೆ ಅದು ಸ್ಪಷ್ಟವಾಗಿರುತ್ತದೆ.
ಈ ನಿಟ್ಟಿನಲ್ಲಿ ನಾವು ಸದಾ ಒಳ್ಳೆಯ ನಿಯ್ಯತ್ತಿಗಾಗಿ ಪ್ರಾರ್ಥಿಸಬೇಕು. ನಮ್ಮ ಮನಸ್ಸಿನಲ್ಲಿ ಶುದ್ಧತೆ ಮತ್ತು ಒಳ್ಳೆಯ ಉದ್ದೇಶ ಇರಲೆಂದು ಅಲ್ಲಾಹನಲ್ಲಿ ಬೇಡಿಕೊಳ್ಳಬೇಕು.”



















































