ದ್ವೇಷ ತುಂಬಿದ ಕತ್ತಲ ಕೋಣೆಗೆ ಪ್ರೀತಿಯ
ಕಿರಣಗಳಾಗುವ ಆಸೆ
ದ್ವೇಷದ ಸಮುದ್ರದಲಿ ಪ್ರೀತಿಯ ದೋಣಿಹತ್ತಿ ದಡ
ಸೇರುವ ಆಸೆ
ಸೇರುವ ಆಸೆನೆರಳುಕೊಡುವ ಮರವಾಗದಿದ್ದರು ಪುಟ್ಟ
ಎಲೆಯಾಗುವಾಸೆ
ಹಸಿರು ಹಾಸುವ ಸಂತಸ ಹಂಚುವ ಮಳೆಯ
ಹನಿಯಾಗುವಾಸೆ
ಅಹಂಕಾರ ಪಡದೇ ಆಕಾಶದಲಿ ಹಾರಾಡುವ
ಹಕ್ಕಿಯಾಗುವಾಸೆ
ದಣಿಯದೆ ಮಿಥ್ಯದ ಜೊತೆ ರಾಜಿಯಾಗದೆ
ಪಯಣಿಸುವ ಲೇಖನಿಯಾಗುವಾಸೆ
ಅಶಾಂತಿಯ ಕೂಗಿನ ಮದ್ಯ ಪ್ರೀತಿಯ
ಸಹೋದರತೆಯ ಧ್ವನಿಯಾಗುವಾಸೆ
ಬಣ್ಣ ವರ್ಗ ಭಾಷೆ ನೋಡದೆ ಪ್ರೀತಿಸುವ
ಪ್ರಕೃತಿಯಾಗುವಾಸೆ
ನೂರಾರು ಕಡೆ ಅತ್ತಿತ್ತ ಚಂಚಲಿಸದೇ ಸ್ಥಿರವಾಗಿ ನಿಲ್ಲುವ
ಪರ್ವತವಾಗುವ ಆಸೆ
ಬಂಡೆಕಲ್ಲುಗಳು ಎದುರಾದರೂ ನಿಲ್ಲದೇ ಸಾಗುವ ನದಿಯಾಗುವಾಸೆ
ಶುದ್ಧ ಮನಸ್ಸಿನ ಪ್ರಾಮಾಣಿಕ ನಗುವಿನ ಮುಗ್ಧ
ಮಗುವಾಗುವಾಸೆ
ಪುಟ್ಟ ಮಗುವಾಗಿ ಅಮ್ಮನ ಮಡಿಲ ಸ್ವರ್ಗದಲಿ
ಮಲಗುವಾಸೆ


















































