ಎರಡು ನೀಲಿಗೆ ಪ್ರೇಮವಂತೆ

ದ್ವೀಪವೊಂದು ಚಿಗುರಿತಂತೆ

ಒಂದನೇ ನೀಲಿಗೆ ಎರಡನೇ ನೀಲಿ ಮೇಲೆ ಮೋಹವಂತೆ

ಮೋಹವಿದ್ದರೂ ಏನೂ ಹೇಳದೆ ಸುಮ್ಮನಿತ್ತಂತೆ

ಎರಡನೇ ನೀಲಿಗೆ ತಿಳಿಯಿತಂತೆ ಅತ್ತ ತಿರುಗಿ ನಕ್ಕಿತಂತೆ

ನಕ್ಕ ನೀಲಿಯ ಕಂಡ ದ್ವೀಪ ಸಾರಿತಂತೆ

ಎರಡು ನೀಲಿಗೆ ಪ್ರೇಮವಂತೆ

ಎರಡನೇ ನೀಲಿ ಒಂದನೇ ನೀಲಿಗೆ ಹೊದಿಕೆಯೊಂದ ನೀಡಿತಂತೆ

ಶೀತಲ ರಾತ್ರಿಯ ಬೆಚ್ಚಗೆ ಕಳೆಯಲು ಉಡುಗೊರೆ ಇದಾಗಿತ್ತಂತೆ

ಹೊದಿಕೆಯ ಹೊದ್ದ ನೀಲಿಯ

ಗದ್ದ ಕೆಂಪನು ಕೆರೆಯಿತಂತೆ

ಕೆಂಪಾದ ಗದ್ದವ ಕಂಡ ದ್ವೀಪ ಸಾರಿತಂತೆ

ಎರಡು ನೀಲೆಗೆ ಪ್ರೇಮವೆಂತೆ

ಎರಡು ನೀಲಿ ಒಂದು ದಿನ ಭೇಟಿಯಾಗಲು ಹೊರಟಿತ್ತಂತೆ

ಭೇಟಿಯ ಜಾಗ ದ್ವೀಪವಲ್ಲದೆ ಉದ್ದನೆಯ ಒಂದು ಗೆರೆಯಾಗಿತ್ತಂತೆ

ಗೆರೆಯ ದಾಟಿದರೆ ಮಾತ್ರ

ಎರಡು ನೀಲಿಯ ಭೇಟಿಯಂತೆ

ಎರಡು ನೀಲಿಗೆ ಪ್ರೇಮವಂತೆ ಪ್ರೇಮಿಸಲಾಗದ ಪ್ರೇಮವಂತೆ

ಗೆರೆಯ ದಾಟದ ನೀಲಿಗಳ ಕಂಡು ದ್ವೀಪ ಸಾರಿತಂತೆ

ಎರಡು ನೀಲೆಗೆ ಪ್ರೇಮವೆಂತೆ

ಪ್ರೇಮಿಸಲಾಗದ ಪ್ರೇವವಂತೆ

ಪ್ರೀತಿಸಲಾಗದ ಗೆರೆಯಿತ್ತಂತೆ

ಅಳಿಸಲಾಗದ ನೀಲಿಗಳೆಂತೆ

ಸಾರಿತಂತೆ

ಪ್ರೇಮವಿತ್ತಂತೆ..

Previous articleಕೃತಕ ಬುದ್ಧಿಮತ್ತೆ (AI): ಒಂದು ಸಂಕ್ಷಿಪ್ತ ಅಧ್ಯಯನ!
Next articleOntdek de Spannende Wereld van Online Casino’s in Nederland
ಪಲ್ಲವಿ ಕೊಡಗು
ಪಲ್ಲವಿ ಕೊಡಗು ಅವರು ಪ್ರಸ್ತುತ ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂಗ್ಲಿಷ್‌ನಲ್ಲಿ ಎಂ.ಎ. ಅಭ್ಯಾಸ ಮಾಡುತ್ತಿದ್ದಾರೆ. ಸಾಹಿತ್ಯದ ಮೇಲೆ ವಿಶೇಷ ಆಸಕ್ತಿ ಹೊಂದಿರುವ ಅವರು ಕವನರಚನೆಗೆ ಆಕರ್ಷಿತರಾಗಿದ್ದಾರೆ. ಯಕ್ಷಗಾನ ಹಾಗೂ ಜನಪದ ಕಲೆಗಳ ಬಗ್ಗೆ ಆಳವಾದ ಅಭಿರುಚಿ ಹೊಂದಿರುವ ಪಲ್ಲವಿ, ಹವ್ಯಾಸಿ ರಂಗಭೂಮಿ ಕಲಾವಿದೆಯಾಗಿ ಸಹ ತೊಡಗಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here