ಕವನ

ಅರಳಿದ ಕನಸು
ಮಿಡಿದ ಮನಸು
ನಾಳೆಯ ಕಾಣದಾಯಿತು

ಹಳಸಿದ ಅನ್ನವು
ಹಸಿಯಾದ ನೋವು
ಹೃದಯಕೆ ಭಾರವಾಯಿತು

ಕೆದರಿದ ಭಾವ
ಮುದುಡಿದ ಜೀವ
ಕತ್ತಲಲಿ ಕಳೆದುಹೋಯಿತು

ಸಂತಸದಿ ಆಗಮನ
ತಿಳಿಸದೆ ನಿರ್ಗಮನ
ನೈಜ ಪಾಠವ ಕಳಿಸಿಕೊಟ್ಟಿತು

ಮರಳಿ ಬಾರದ
ಊರಿಗೆ ಹೊರಟಿದ
ಪಯಣ ನೋವ ತುಂಬಿತು

ಬಡಪಾಯಿ ಜೀವಗಳು
ನೆನೆಸಿ ಆಕೆಯ ಮಾತುಗಳು
ಅಳುತಳೇ ದಿನವ ದೂಡಿತು

  • ಸುಹಾನ ಸಯ್ಯದ್

LEAVE A REPLY

Please enter your comment!
Please enter your name here