ನಾಯಕತ್ವದ ಗುಣಗಳು – ಭಾಗ 3

ಅಬೂಕುತುಬ್

ನಾಯಕ ವಾದ ವಾಗ್ವಾದದ ಮೋಡ್ ಗೆ ಹೋದರೆ ಆತ ತನ್ನ ಅನುಯಾಯಿಗಳನ್ನು ನಿಂದಿಸಲು ತೊಡಗುತ್ತಾನೆ. ತನ್ನ ವಿಚಾರವನ್ನು ಹೇರಲು ದುರ್ಬಲ ಜನರನ್ನು ನಿಂದನೆ ಮಾಡುವಾಗ ಪರೋಕ್ಷವಾಗಿ ಗೇಲಿ ಮಾಡಲು ತೊಡಗುತ್ತಾನೆ. ಇದರಿಂದ ತಾತ್ಕಾಲಿಕವಾಗಿ ಜನರು ಮೌನವಾಗುತ್ತಾರೆಯೇ ಹೊರತು ಮನಸ್ಸಿನ ಆಳದಲ್ಲಿ ಆ ನಾಯಕ ಅನುಯಾಯಿಗಳ ಹೃದಯದಲ್ಲಿ ಸ್ಥಾನ ಕಳೆದುಕೊಳ್ಳಲು ತೊಡಗುತ್ತಾನೆ.
ಉದಾಹರಣೆಗೆ: ಅನುಯಾಯಿಗಳು ಒಂದು ವಿಷಯ ಹೇಳುತ್ತಾರೆ. ಅದನ್ನು condemn ಅಥವಾ insult ಮಾಡುವವನಿಗೆ ಎಂದೂ ಉತ್ತಮ ನಾಯಕನಾಗಲು ಸಾಧ್ಯವಿಲ್ಲ. ಮಾತ್ರವಲ್ಲದೆ ಉತ್ತಮ ಅನುಯಾಯಿಗಳನ್ನು ಗಳಿಸಲೂ ಸಾಧ್ಯವಿಲ್ಲ. ನಾಯಕ ತನ್ನ ಅನುಯಾಯಿಗಳೊಂದಿಗೆ ವತ್ಸಲನೂ, ಕರುಣಾಳುವೂ ಆಗಿರಬೇಕು. ನಾಯಕನಿಗೆ ಕೋಪ ಬರಬಾರದು ಅಥವಾ ಎಚ್ಚರಿಕೆ ಕೊಡಬಾರದು ಎಂಬುದು ಇದರ ಅರ್ಥ ಅಲ್ಲ. ವಾತ್ಸಲ್ಯವು ಎಷ್ಟು ತೀವ್ರವಾಗಿರುತ್ತದೆ ಅಷ್ಟೇ ನಾಯಕನ ಕೋಪವನ್ನು ಅನುಯಾಯಿಗಳು ಹೂವಿನ ಹಾರದಂತೆ ಅದನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸುತ್ತಾರೆ.

ಅಧ್ಯಾಯ 9: – ಸೂಕ್ತ : 128
ನೋಡಿರಿ, ನಿಮ್ಮ ಬಳಿಗೆ ಓರ್ವ ಸಂದೇಶವಾಹಕರು ಬಂದಿದ್ದಾರೆ. ಅವರು ನಿಮ್ಮವರಿಂದಲೇ ಆಗಿರುತ್ತಾರೆ. ನೀವು ನಷ್ಟಹೊಂದುವುದು ಅವರಿಗೆ ಅಸಹನೀಯವಾಗಿದೆ. ಅವರು ನಿಮ್ಮ ಯಶಸ್ಸಿಗೆ ಹಂಬಲಿಸುವವರಾಗಿದ್ದಾರೆ. ಅವರು ಸತ್ಯವಿಶ್ವಾಸಿಗಳಿಗೆ ವತ್ಸಲರೂ ಕರುಣಾಳುವೂ ಆಗಿದ್ದಾರೆ”

ಅಧ್ಯಾಯ 3: ಆಲಿ ಇಮ್ರಾನ್

ಸೂಕ್ತ : 159
(ಓ ಪೈಗಂಬರರೇ,) ನೀವು ಇವರ ಪಾಲಿಗೆ ಅತ್ಯಂತ ಸೌಮ್ಯ ಸ್ವಭಾವಿಯಾಗಿರುವುದು ಅಲ್ಲಾಹನ ಮಹಾ ಕೃಪೆಯಾಗಿದೆ. ನೀವು ಕಠಿಣ ಸ್ವಭಾವಿ ಮತ್ತು ಕಲ್ಲೆದೆಯವರಾಗಿರುತ್ತಿದ್ದರೆ ಇವರೆಲ್ಲರೂ ನಿಮ್ಮ ಸುತ್ತಮುತ್ತಲಿನಿಂದ ಚದರಿ ಹೋಗುತ್ತಿದ್ದರು. ಇವರ ಪ್ರಮಾದಗಳನ್ನು ಕ್ಷಮಿಸಿರಿ, ಇವರ ಪಾಪ ವಿಮೋಚನೆಗಾಗಿ ಪ್ರಾರ್ಥಿಸಿರಿ ಮತ್ತು ಧರ್ಮದ ಕೆಲಸಗಳಲ್ಲಿ ಇವರೊಡನೆ ಸಮಾಲೋಚಿಸಿರಿ. ಆ ಬಳಿಕ, ಯಾವುದಾದರೊಂದು ಅಭಿಪ್ರಾಯದಲ್ಲಿ ನೀವು ದೃಢ ನಿರ್ಧಾರ ತಾಳಿದರೆ ಅಲ್ಲಾಹನ ಮೇಲೆ ಭರವಸೆಯಿಡಿರಿ. ಅಲ್ಲಾಹನ ಮೇಲೆಯೇ ಭರವಸೆಯಿಟ್ಟು ಕಾರ್ಯವೆಸಗುವವರನ್ನು ಅವನು ಪ್ರೀತಿಸುತ್ತಾನೆ.

ಪ್ರವಾದಿ (ಸ) ರವರು ತನ್ನ ಅನುಯಾಯಿಗಳ ಭಾವನೆಗಳಿಗೆ ತುಂಬಾ ಗೌರವ ಕೊಡುತ್ತಿದ್ದರು ಎಂಬುದಕ್ಕೆ (ಹದೀಸಿನಲ್ಲಿ ಬರುವಂತೆ) ಸಹಾಬಿಗಳು ಪ್ರವಾದಿಯಲ್ಲಿ ಕೇಳಿದ ಸಾವಿರಾರು ಪ್ರಶ್ನೆಗಳೇ ಸಾಕ್ಷಿ.

ಮುಂದುವರಿಯುವುದು……

LEAVE A REPLY

Please enter your comment!
Please enter your name here