ಪುಸ್ತಕ ವಿಮರ್ಶೆ

ಎಂ . ಅಶೀರುದ್ದೀನ್ ಮಂಜನಾಡಿ

“ಜೈ ಭಾರತ ಜನನಿಯ ತನುಜಾತೆ” ಎಂಬ ವಿಶ್ವ ವಿಖ್ಯಾತ ಕನ್ನಡ ನಾಡಗೀತೆಯ ಮೂಲಕ ಪ್ರತಿಯೊಬ್ಬ ಕನ್ನಡಿಗನಿಗೂ ರಾಷ್ಟ್ರ ಕವಿ ಜ್ಞಾನಪೀಠ ಪುರಸ್ಕೃತ “ಕುವೆಂಪು” ಎಂಬ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ನವರು ಸ್ಥಿರ ಪರಿಚಿತರು.ಆದರೆ ಅವರ ಸಾಹಿತ್ಯದ ಕಡಲನ್ನು ಈಜಿದವರು ಕೆಲವರು ಮಾತ್ರ ಅವರದು ಈಜಿ ದಾಟಲು ಸಾಧ್ಯವಿಲ್ಲದ ಸಾಹಿತ್ಯದ ಸಾಗರ. ಕನ್ನಡ ಸಾಹಿತ್ಯ ರಂಗದಲ್ಲಿ ಅವರೊಬ್ಬರು ಮುಗಿಯದ ಅಧ್ಯಯ.ಕನ್ನಡದ ಅಗ್ರಮಾನ್ಯ ಕವಿ, ನಾಟಕಕಾರ, ಕಾದಂಬರಿಗಾರ, ಕಥೆಗಾರ,ಮತ್ತು ವಿಮರ್ಶಕ, ಶ್ರೇಷ್ಠ ಚಿಂತಕ.

ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಹೀರೆಕೂಡಿಕೆ ಎಂಬಲ್ಲಿ 1904 ಡಿಸೆಂಬರ್ 29ರಂದು ಜನಿಸಿ.ತೀರ್ಥಹಳ್ಳಿ,ಶಿವಮೊಗ್ಗ,ಮತ್ತು ಮೈಸೂರಿನಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿ ಪ್ರಾಧ್ಯಾಪಕರಾಗಿಯೂ,ಪ್ರಾಂಶುಪಾಲರಾಗಿಯೂ,ಕುಲಪತಿಗಳಾಗಿಯೂ ಸೇವೆ ಸಲ್ಲಿಸಿದರು. ಕುವೆಂಪು ಎಂಬ ಕಾವ್ಯನಾಮದಲ್ಲಿ ಪ್ರಸಿದ್ಧರಾದ ಇವರು ವರಕವಿ ಡಾ.ದಾ.ರಾ. ಬೇಂದ್ರೆಯವರಿಂದ ‘ಯುಗದ ಕವಿ ಜಗದ ಕವಿ ಎಂಬ ಮನ್ನಣೆಯನ್ನು ಪಡೆದರಲ್ಲದೆ ರಾಷ್ಟ್ರ ಕವಿ, ಕರ್ನಾಟಕ ರತ್ನ, ಮೊದಲಾದ ಪ್ರಶಸ್ತಿಗಳನ್ನು ಪಡೆದು ಕೊಂಡಿರುವರು

ಅವರು ಬರೆದ ಕಾನೂರ ಹೆಗ್ಗಡತಿ ಮತ್ತು ಮಲೆಗಳಲ್ಲಿ ಮದುಮಗಳು ಎಂಬ ಎರಡು ಬ್ರಹತ್ ಕಾದಂಬರಿಗಳನ್ನು ಇತ್ತೀಚೆಗಷ್ಟೆ ಓದಿ ಮುಗಿಸಿದೆ.ಮಲೆನಾಡಿನ ವಿಸ್ತೃತ ವೈವಿಧ್ಯಮಯ ಬದುಕನ್ನು ಮನಸ್ಸು ತಟ್ಟುವಂತೆ ಬರೆದು ಸಾಹಿತ್ಯದ ಆಸಕ್ತಿಯನ್ನು ಕೆರಳಿಸುವ ಮತ್ತು ಪರಿಸರದ ನಿತ್ಯ ಚಲನಗಳನ್ನು ಜನರ ನಿತ್ಯ ಬದುಕನ್ನು ಭಾವನಾತ್ಮಕವಾಗಿ ಹಣಿದ ಎಲ್ಲರೂ ಓದಲೇ ಬೇಕಾದ ಎರಡು ಪ್ರಮುಖ ಪುಸ್ತಕಗಳಾಗಿವೆ.

ಮಲೆನಾಡಿನ ಸೌಂದರ್ಯದ ವರ್ಣನೆಯೊಂದಿಗೆ ಎರಡು ಕಾದಂಬರಿಗಳು ಪ್ರಾರಂಭವಾಗುತ್ತದೆ. ಪ್ರಕೃತಿಗೆ ಮತ್ತು ಜನರ ದೈನಂದಿನ ಚಟುವಟಿಕೆಯಲ್ಲಾಗುವ ರಸಮಯ ವಿಷಯಗಳಿಗೆ ಹೆಚ್ಚು ಒತ್ತು ಕೊಟ್ಟು ಕಾದಂಬರಿಗಳು ಸಂಚಾರ ಆರಂಭಿಸುತ್ತದೆ.
ಗಂಡು ಹೆಣ್ಣಿನ ಲೈಂಗಿಕತೆ, ಸಾಮಾಜಿಕ ಕಟ್ಟಳೆ, ರೀತಿ-ನೀತಿ, ಸಂಪ್ರದಾಯ, ಹೇರಳವಾಗಿರುವ ಮೂಢನಂಬಿಕೆಗಳು ಅವುಗಳ ವಿರುದ್ಧವಿರುವ ಜನಪರ ಹೋರಾಟಗಳು ಇತ್ಯಾದಿ ವಿಷಯಗಳು ನೈಜತೆಗೆ ತೀರಾ ಹತ್ತಿರವಾದಂತವುಗಳಾಗಿವೆ.ತನ್ನ ಕಾದಂಬರಿಗಳಲ್ಲಿ ಮೇಳು ಕೀಳು ಇಲ್ಲದ ಸಾಮರಸ್ಯದ ಸಮಾಜ ಮುಖಿ ಚಿಂತನೆಗಳನ್ನು ಬಿತ್ತಿ ನವ ಸಮಾಜದ ನಿರ್ಮಾಣಕ್ಕೆ ಕರೆಕೊಟ್ಟ ಧೀಮಂತ ಕವಿ ಕುವೆಂಪು.

ಎರಡೂ ಕಾದಂಬರಿಗಳು ಕಥೆಗಳಿಗೆ ಮಾತ್ರ ಸೀಮತವಾಗದೆ ಸಾಹಿತ್ಯ ಮತ್ತು ಸಾಮಾಜಿಕ ಸಂದೇಶವನ್ನು ಸಾರುವ ಜ್ಞಾನದ ಬಂಡಾರ ವಾಗಿದೆ. ಕಾದಂಬರಿಗಳು ಎಲ್ಲೂ ಬೋರು ಹಿಡಿಸುವುದಿಲ್ಲ ಪ್ರಾರಂಭದಿಂದ ಮುಕ್ತಾಯದ ವರೆಗೆ ಓದುಗರನ್ನು ವಶೀಕರಿಸುತ್ತದೆ ಕದಲದಂತೆ ಹಿಡಿದು ನಿಲ್ಲಿಸುತ್ತದೆ. ಒಂದೇ ಪ್ರದೇಶಕ್ಕೆ ಒಳಪಟ್ಟ ಎರಡೂ ಕಾದಂಬರಿಗಳು ಎಲ್ಲೂ ಸಮಿಪ್ಯತೆ ಕಾಣಲು ಸಾಧ್ಯವಿಲ್ಲ ವಿಭಿನ್ನವಾದ ಮತ್ತು ವಿಶಿಷ್ಟ ವಾದವುಗಳಾಗಿದೆ ಜನರ ಸಂಭಾಷಣೆಗಳು ರೀತಿ ರೀವಾಜು ನಡವಳಿಕೆಗಳು ಹೇಗಿವೆಯೋ ಹಾಗೇ ಕಾದಂಬರಿಗಳಲ್ಲಿ ಬಣ್ಣಿಸಲಾಗಿದೆ

ಕಾನೂರು ಹಗ್ಗಡತಿ: ಕುವೆಂಪು ರವರ ಮೊದಲ ಕಾದಂಬರಿ 1936 ಪ್ರಕಟ ವಾಯಿತು. 19 ನೇ ಶತಮಾನದ ಮಲೆನಾಡಿನ ಜನಜೀನದ ರಸ ನಿಮಿಷಗಳನ್ನು ವಿವರಿಸಲಾಗಿದೆ.
ಚಂದ್ರೇಗೌಡ ರ ಮೂರನೇ ಹೆಂಡತಿಯಾಗಿ ಸಿರೂಡಿಕೆಯಾದ ಸುಬ್ಬಮ್ಮ ಎಂಬ ಬಡ ಕುಟುಂಬದ ಎಳೆಯ ಪ್ರಾಯದ ಹೆಣ್ಣು ಕಾನೂರು ಗೌಡರ ಮನೆ ಸೇರಿ ಹೆಗ್ಗಡಿತಿಯಾಗಿ ಬದಲಾಗುವ ವಿಷಯವೇ ಕಥೆಯಲ್ಲಿ ಪ್ರಮುಖವಾದದ್ದು. ಇದರಲ್ಲಿ ಹೆಣ್ಣೇ ಪ್ರಮುಖ ಪಾತ್ರಧಾರಿ ಕಾನೂರು ಸುಬ್ಬಮ್ಮ ಕುಸಂಸ್ಕೃತಿ ಯ ಹೆಣ್ಣಾಗಿ ಎಲ್ಲರ ಬದುಕಿನಲ್ಲಿ ವಿಷವಾಗಿ ಬದಲಾಗುತ್ತಾಳೆ.ಹೆಣ್ಣು ಅನುಭವಿಸುವ ಕಷ್ಟಗಳ ಜೊತೆಗೆ ಹೆಣ್ಣಿನಲ್ಲಿರಬಹುದಾದ ಎಲ್ಲಾ ದುರ್ಗುಣಗಳನ್ನು ಇದು ವಿವರಿಸುತ್ತದೆ
ತೀರ್ಥಹಳ್ಳಿ, ಕಾನೂರು, ಮುತ್ತಳ್ಳಿ, ಕೆಳ ಕಾನೂರು, ಸೀತೆಮನೆ, ಅಗ್ರಹಾರ,ಇತ್ಯಾದಿ ಪ್ರದೇಶಗಳು ಚಂದ್ರಯ್ಯ ಗೌಡರ ಅಹಂ ಮತ್ತು ಕೋಪ, ಹೂವಯ್ಯ ಮತ್ತು ಸೀತೆಯ ಪ್ರೀತಿ, ರಾಮಯ್ಯನ ಸ್ವಾರ್ಥ ಹಾಗೂ ಇತರ ಪಾತ್ರ ದಾರಿಗಳಾದ ರಂಗಪ್ಪ ಶೆಟ್ಟಿ,ಪುಟ್ಟಣ್ಣ, ಸೇಸಿ,ಬೈರ,ಗಂಗೆ, ಹಲೆಪೈಕದ ತಿಮ್ಮ ಇತ್ಯಾದಿ ಪಾತ್ರಗಳು ನಮ್ಮ ನಿತ್ಯ ಜೀವದಲ್ಲಿ ಹತ್ತಿರವಿದ್ದಂತೆ ಅನಿಸುತ್ತದೆ .
1999 ರಲ್ಲಿ ಗಿರೀಶ್ ಕಾರ್ನಾಡ್ ರವರು ಕಾನೂರು ಹೆಗ್ಗಡತಿ ಸಿನಿಮವಾಗಿ ನಟಿಸಿ ನಿರ್ದೇಶಿಸಿದ್ದರು

ಮಲೆಗಳಲ್ಲಿ ಮದಮಗಳು: “ಮುಪ್ಪಿಗೆ ಇರುಳೆಂದರೆ ಅನಿವಾರ್ಯವಾದ ಒಂದು ಮಹಾ ಇತಿ ಬಾದೆ.ಸಾವಿನ ಅನಂತ ನಿದ್ರೆ ಬಳಿ ಸಾರುವುದರಿಂದಲೋ ಏನೂ ಬಾಳೆಲ್ಲಾ ದುಸ್ವಪ್ನ ವೆಂಬಂತೆ ಆಯಾಸವಾಗಿ ಪರಿಣಮಿಸುತ್ತದೆ ಇಷ್ಟವಿರಲಿ ಬಿಡಲಿ ಮರಣಕ್ಕೆ ಮುಳುಗಳೇ ಬೇಕಾಗುತ್ತದೆ ಎಂಬ ಅರಿವಿನ ಮೈದೂರುವ ಆತ್ಮದ ಅಶಾಂತಿ ನಿರಾಕಾರವಾಗಿದ್ದರೂ ಸಂಸ್ಕಾರಿಕವಾದ ನೂರಾರು ಕೋಟಲೆಗಳ ಆಕಾರ ತಾಳಿ ನಿದ್ದೆಯೇನೆಲ್ಲಾ ಕದಡಿ ಬಿಡುತ್ತದೆ ”
ಇದು ಕಾದಂಬರಿಯಲ್ಲಿ ಅವರು ಮುದಿತನದ ಬಗ್ಗೆ ನೀಡಿದ ವಿವರಣೆ,ಹೀಗೆ ಎಷ್ಟೋ ವಿಷಯಗಳ ಬಗ್ಗೆ ಸುಂದರವಾಗಿ ಸ್ಪಷ್ಟವಾದ ವಿವರಣೆಗಳು ಕಾದಂಬರಿಯುದ್ದಕ್ಕೂ ಕಾಣ ಸಿಗುತ್ತದೆ. ಮಲೆಗಳಲ್ಲಿ ಮದಮಗಳು ಮಲೆನಾಡಿನ ಮಣ್ಣಿನ ಕಥೆ ನಾಗರಿಕತೆಗೆ ದೂರವಾದ ಅನಾಗರಿಕತೆಯ ಅರಣ್ಯಕ ಜೀವನದ ಕಥೆ. ಇದು 1967 ರಲ್ಲಿ ಪ್ರಕಾಶ ಕಂಡಿತು ಕಾದಂಬರಿಯು ಸಂಪೂರ್ಣವಾಗಿ ಅರಣ್ಯವನ್ನು ಪ್ರವೇಶಿಸುತ್ತದೆ. ತೀರ್ಥಹಳ್ಳಿ ಶಿವಮೊಗ್ಗ ಸುತ್ತಮುತ್ತಲ ಗ್ರಾಮವಾಸಿಗಳ ಕಥೆ.ಆ ಕಾಲ ದಲ್ಲಿ ಹಳ್ಳಿಗಳಲ್ಲಿ ಹೆಚ್ಚಾಗಿ ನಡೆಯುವ ಜಾತಿ ವ್ಯವಸ್ಥೆ ಜೀತ ಪದ್ಧತಿ ಮೂಡನಂಬಿಕೆ ಪೌರೋಹಿತ್ಯ ಧಾರ್ಮಿಕ ನಂಬಿಕೆಗಳು ಪೂಜೆ ಪುರಸ್ಕಾರಗಳ ಹೆಸರಲ್ಲಿ ನಡೆಯುವ ಶೋಷಣೆಗಳನ್ನು ಚರ್ಚಿಸುತ್ತದೆ ಸಿಂಬಾವಿ, ಸಿತೂರು, ಲಕ್ಕುಂದ, ಮೇಗರವಳ್ಳಿ ಹೂವಲ್ಲಿ ಕೊಣುರು, ಭಾವಿಕೊಪ್ಪ, ಬೆಟ್ಟಲ್ಲಿ, ಇತ್ಯಾದಿ ಪ್ರದೇಶಗಳಂತೆ . ಭರಮೈ ಹೆಗಡೆ ಗುತ್ತಿ (ನಾಯಿ ಗುತ್ತಿ) ಅವನ ನಾಯಿ ಹುಲಿಯ, ಸೇಸನಯಕ,ಸುಬ್ಬಣ್ಣ ಹೆಗ್ಡೆ, ತಿಮಪ್ಪ ಹೆಗ್ಡೆ,ವೆಂಕಟಪ್ಪ ಅವನ ಮಗಳು ಚಿನ್ನಮ್ಮ ರಂಗಪ್ಪ ಗೌಡ ನಗಕ್ಕ ನಗತ್ತೆ, ಸಣ್ಣ ಗೌಡ ದೇವಯ್ಯ,ಪಾದ್ರಿ ಜೀವರತ್ನಯ್ಯ ಐದು ಪ್ರಸಿದ್ದ ಸಾಬರುಗಳು ಕಣ್ಣ ಪಂಡಿತರು ಐಗಳು
ಕಾವೇರಿ ಚೀಂಕ್ರ ಪೀಜಿನ ಪಿಂಚಲು ಐತ ಎಂಬ ಹೆಸರುಗಳು ನಮ್ಮನ್ನು ಆಕರ್ಷಿಸುತ್ತದೆ
19 ನೆ ಶತಮಾನದ ಕೆಳವರ್ಗದವರ ಮೇಲೆ ನಡೆಯುತಿದ್ದ ಶೋಷಣೆ ಜೀತ ದಾಳು ಪದ್ಧತಿ ಮೇಲ್ವರ್ಗದವರ ದಬ್ಬಾಳಿಕೆ ದೊಡ್ಡ ಸಿರಿವಂತ ಮನೆತನದವರಿಗೆ ಇರುವ ಅನೈತಿಕ ಸಂಬಂಧ, ಇತ್ಯಾದಿಗಳು ಈ ಕಾದಂಬರಿ ಚರ್ಚಿಸುವ ಪ್ರಮುಖ ವಿಷಯಗಳಾಗಿವೆ ನಾಡಿನ ಪರಿಷ್ಕರಣೆಯ ಸಂಕೇತವಾಗಿ ಬಿಸೇಕಲ್ಲು (ಬೈಸಿಕಲ್)ನ,ಗಡಿಯಾರ, ಕಾಫಿ ಪುಡಿ ಹಳ್ಳಿಯ ಜನರ ಸಾಂಪ್ರದಾಯಿಕ ತಲೆಯ ಜುಟ್ಟಿಗೆ ಬದಲಾಗಿ ಕ್ರಾಪು ಮುಂತಾದವುಗಳ ಆಗಮನವನ್ನು ಹಳ್ಳಿಯ ಮುಗ್ದ ಜನರು ಹೇಗೆ ಸ್ವಾಗತಿಸುತ್ತಿದ್ದರೆಂದು ವಿವರಿಸುತ್ತದೆ ಅದೂ ಅಲ್ಲದೆ ಕ್ರೈಸ್ತರ ಸಮಾಜಿಕ ಶೈಕ್ಷಣಿಕ ಸೇವೆಯಲ್ಲಿ ಮತಾಂತರವನ್ನು ಬಯಸುವ ಕೆಲವು ಪಾದ್ರಿಗಳ ದರ್ನಡೆತವನ್ನು ಪ್ರಶ್ನಿಸುತ್ತದೆ
ಮಲೆಗಳಲ್ಲಿ ಮದುಮಗಳು ನಾಟಕವಾಗಿಯೂ ಧಾರಾವಾಹಿಗಳಾಗಿಯೂ ಪ್ರಸಾರವಾಗಿದೆ
ಆಧ್ಯಾತಮಿಕತೆ, ಸುಶೀಕ್ತತೆ ಕ್ರಿಯಾಶೀಲತೆಯಿಂದ ಜನರ ಬದುಕನ್ನು ಉತ್ತಮ ಗಳಿಸಲು ಪ್ರಯತ್ನಿಸುತ್ತದೆ.

ಮಲೆನಾಡಿನ ವೈಭವ ಕುವೆಂಪುರವರ ವಿವರಣಾ ಶೈಲಿ ಬಹಳಾ ಸುಂದರವಾಗಿದೆ ಒಂದು ವಿವರಣೆ ಹೀಗಿದೆ “ಯಾರು ಬದುಕಲಿ,ಯಾರು ಸಾಯಲಿ,ಯಾರು ಹುಟ್ಟಲಿ ಹುಟ್ಟಿದೆ ಹೋಗಲಿ ಮಳೆಗಾಲ ನಿಲ್ಲುತ್ತದೆಯೆ ? ಮಳೆ ಹಿಡಿದು ಕೂತಿತ್ತು ನಾಲ್ಕು ಪಾದಗಳನ್ನು ಬಲವಾಗಿ ಊರಿ! ಮೋಡ ಸದಾ ಕವಿದು ಸೂರ್ಯ ದರ್ಶನವೇ ಅಪೂರ್ವವಾಯಿತು ತನ್ನ ದುರ್ದಮ್ಯ ವ್ಯಾಪಾರಗಳನ್ನು ನಿರ್ಲಕ್ಷ್ಯವಾಗಿ ನಿರ್ದಾಕ್ಷೀಣ್ಯವಾಗಿ ಸಾಗಿಸಿತು ಬ್ರಹತ್ ಪ್ರಕೃತಿ. ಆ ಪ್ರಕೃತಿಯ ಪ್ರತಿರೂಪದ ಸಹ್ಯಾದ್ರಿ ಪರ್ವತ ದ ಕಾನನ ಶ್ರೇಣಿ ಮನುಷ್ಯರ ಅಲ್ಪ ಸುಖ ದುಃಖಗಳಿಗೆ ಸಂಪೂರ್ಣ ನಿಸ್ಸಂಗಿಯಾಗಿ ಭೀಷಣ ವರ್ಷ ಧಾರೆಯಲ್ಲಿ ತೊಪ್ಪನೆ ತೊಯ್ಯುತ್ತ ಹಬ್ಬಿ ಕೊಬ್ಬಿ ನಿತಿತ್ತು

ಮಲೆನಾಡಿನ ಬದುಕಿನ ಸಹಜ ಚಟುವಟಿಕೆಗಳಾದ ಮೀನು ಹಿಡಿಯುವುದು ಹಂದಿ ಶಿಕಾರಿ ಮಾಡುವುದು ಕಳ್ಳು ಕಟ್ಟುವುದು,ಮರ ಕಡಿಯುವುದು ದಾಯ್ಯದ ಮದುವೆ ಬಲಿಪೂಜೆ, ಜಾತ್ರೆ ಹರಕೆ ಹೊಯ್ಯುವುದು ಕೃಷಿ ತೋಟಗಾರಿಕೆ ಇತ್ಯಾದಿಗಳ ವಿವರಣೆಯು ಆಸ್ವಾದಿಸುವಂತಿದೆ ಸಾಹಿತ್ಯದಲ್ಲಿ ಬೆಳೆಯಲು ಬಯಸುವವರು ಎರಡೂ ಕಾದಂಬರಿಗಳನ್ನು ಓದಿ ಜ್ಞಾನ ಸಂಪಾದಿಸಬೇಕದದ್ದು ಅತ್ಯಗತ್ಯ ಇದು ಕೇವಲ ಕಥೆಯಾಗಿ ಉಳಿಯದೆ ಪ್ರತಿಯೊಬ್ಬನ ಬದುಕಿಗೆ ನೀಡುವ ವಿಸ್ಮಯ ಅನುಭವ
( 1994 ರಲ್ಲಿ ಕುವೆಂಪುರವರು ಮೈಸೂರಿನಲ್ಲಿ ತಮ್ಮ ಬರಹ ಮುಗಿಸಿದರು. ಶಿವಮೊಗ್ಗದ ಕುಪ್ಪಳ್ಳಿಯಲ್ಲಿ ಅಂತ್ಯ ಸಂಸ್ಕರಿಸಲಾಯಿತು)

LEAVE A REPLY

Please enter your comment!
Please enter your name here