ಕುರಾನಿನಲ್ಲಿ ನೀವು ಹೀಗೆ ಕಾಣಬಹುದು ”ಅಲ್ಲಾಹನು ಆಕಾಶ ಮತ್ತು ಭೂಲೋಕದ ಪ್ರಕಾಶವಾಗಿದ್ದಾನೆ ” ಈ ವಾಕ್ಯದ ನಿಜವಾದ ತಿರುಳು, ಈ ಲೋಕದ ಎಲ್ಲಾ ವಸ್ತುಗಳು ಅವನ ಇರುವಿಕೆಯನ್ನು ಪ್ರತೀಕ್ಷಗೊಳಿಸುತ್ತವೆ. ಸಂವೇದನಾ ಶೀಲ ಮಾನವನಿಗೆ ಇಲ್ಲಿನ ಎಲ್ಲಾ ವಸ್ತುಗಳಲ್ಲಿ ಅಲ್ಲಾಹನ ಮಿಂಚುನೋಟವನ್ನು ದರ್ಶಿಸಬಹುದು . ಈ ಲೋಕವು ಸಂಪೂರ್ಣವಾಗಿ ಅಲ್ಲಾಹನಿಂದ ನೀಡಲ್ಪಟ್ಟ ಹಾಸು ಎನ್ನುದರಲ್ಲಿ ಎರಡು ಮಾತಿಲ್ಲ. ಒಬ್ಬ ವ್ಯಕ್ತಿಗೆ ಸ್ವಇಚ್ಚೆಯಿಯೊಂದಿಗೆ ಅಲ್ಲಾಹನಲ್ಲಿ ವಿಶ್ವಾಸವಿಡಲು ಸಾಧ್ಯವಾಗುದದರೆ ಅವನಿಗೆ ಎಲ್ಲಕಡೆಗಲ್ಲೂ ಅಲ್ಲಾಹನ ಪ್ರಕಾಶವೇ ಕಾಣಬಹುದು ತಂಗಾಳಿಯು ಅವನಶರೀರವನ್ನು ಸ್ಪರ್ಶಿಸಿದಾಗ ದೇವನ ಯಾವುದೇ ಅನುಗ್ರಹವು ಅವನಿಗೆ ಕಾರಗತವಾದಂತೆ ಭಾಸವಾಗುತ್ತದೆ .

ಕೆರೆಗಳ ಹರಿವಿಕೆಯಲ್ಲಿ ಅಲ್ಲಹನ ಅನುಗ್ರಹಗಳು ಹರಿದುಬಂದಂತೆ ಭಾಸವಾಗುತ್ತದೆ, ಹಕ್ಕಿಗಳ ಕಲರವ ಕಿವಿಗಳಿಗೆ ಅಪ್ಪಳಿಸಿದಾಗ ಅವು ಅಲ್ಲಾಹನ ಉಪಾಸನಾಗೀತೆ ಹಾಡಿದಂತೆ ತೋರುತ್ತದೆ, ಹೂವುಗಳ ಅರಳುವಿಕೆಯೊಂದಿಗೆ ಅವುಗಳಿಂದ ಹೊರಸೂಸುವ ಸುಮದುರ ಕಂಪು ಮಿಂದಂತೆ ಭಾಸವಾಗುತದೆ. ಒಬ್ಬ ಸತ್ಯವಿಶ್ವಾಸಿಗೆ ಈ ಲೋಕವು ಆಧ್ಯಾತ್ಮಿಕ ಆಹಾರದ ಹಸು ಎಂಬುದರಲ್ಲಿ ಎರಡುಮಾತಿಲ್ಲ, ಅಂತೆಯೇ ಸ್ವರ್ಗೀಯ ಸುಖವು ಹಸಾಗಿರುತ್ತದೆ. ಇಂದು ಪ್ರಪಂಚದಲ್ಲಿರುವ ಎಲ್ಲಾ ವಸ್ತುಗಳ ವಿನ್ಯಾಸವು ಪಾಠಕಲಿಸಿಕೊಡುತ್ತದೆ , ಆತನನ್ನು ಭಯಪಡುವವರು ಮಾತ್ರ ಅದರೊಳಗಿರುವ ದೇವತ್ವದ ವಾಸ್ತವಿಕತೆಗಳನ್ನು ಅರಿಯುವರು.

ಢಾಕ್ (ಕೆಂಪು ಹೂವು ಬಿಡುವ ಒಂದು ವಿಧದ ಮರ ) ಢಾಕ್ ಎಂಬ ಸಾಮಾನ್ಯ ಮರ ಅದು ಬಹಳಾ ಸುಂದರವಾದ ಕೆಂಪು ಹೂವು ಬಿಡುತ್ತದೆ. ಆದರೆ ಎಲೆಯುದುರುವ ಕಾಲದ ನಂತರ ವಣಕೋಲಿನಂತಾಗಿ ಅದಕ್ಕಿಂತಲೂ ವಣ ಭೂಮಿಯ ಮೇಲೆ ನಿಂತಿರುತ್ತದೆ . ತದನಂತರ ಒಂದು ಮೌನಕ್ರಾಂತಿಯುಂಟಾಗುತ್ತದೆ ಬಹಳ ಅಚ್ಚರಿಯೆಂಬಂತೆ ಅತೀ ಸುಂದರವಾದ ಹೂವುಗಳು ಅದರ ರೆಂಬೆಗಳಲ್ಲಿ ಬಿಡಲಾರಂಬಿಸುತದೆ . ಅದರಿಂದಾಗಿ ಒಣಗಿದ ಕೋಲಿನ ಅಸ್ಥಿಪಂಜರವು ಸುಂದರವಾದ ಹೂವಿನಿಂದ ಆವರಿಸಿಬಿಡುತ್ತದೆ. ಅದರಿಂದಾಗಿ ಅದು ನಿರಾಶೆ ಹೊಂದಿದ ಅಥವಾ ಯಾವುದೇ ಬೆಲೆ ಇಲ್ಲದ ವಸುವಿಗೆ ದೇವಾನು, ತನ್ನ ಅಪಾರ ಅನುಗ್ರಹ ಎಂಬಂತೆ ಒಂದು ಸುಂದರವಾದ ಕೊಡೆಯನ್ನು ನೀಡಿದಂತಾಗುತ್ತದೆ .

ಅದನ್ನು ನೋಡಿದ ಯಾವುದೇ ವ್ಯಕ್ತಿಯು ತನ್ನಷ್ಟಕ್ಕೆ ಹೇಳುವಂತೆ ತೋರುತ್ತದೆ, ನಾನು ಕೋಡಒಂದು ಢಾಕ್ ಆಗಿದ್ದೇನೆ, ನಿನಗೆ ಇಷ್ಟವಿದ್ದರೆ ನನ್ನ ಮೇಲೆ ಸುಂದರವಾದ ಮುಗ್ಗೆಯನ್ನು ಅರಳಿಸು, ನಾನೊಂದು ಒಣಗಿದ ಮರವಾಗಿದ್ದೇನೆ ನಿನಗೆ ಇಷ್ಟವಿದ್ದರೆ ನೀನು ಅದನ್ನು ಹಚ್ಚಹಸಿರಾಗಿಸು, ನಾನೊಂದು ಅಸ್ತಿತ್ವವಾಗಿದ್ದೇನೆ, ಜೀವನವನ್ನು ವಾಸ್ತವಿಕತೆಗಳಿಂದ ತುಂಬು. ನಾನು ನರಕಾಗ್ನಿಯ ಬದಿಯಲ್ಲಿ ನಿಂತಿದ್ದೇನೆ, ನೀನು ನನ್ನನ್ನು ಸ್ವರ್ಗದೊಳಗೆ ಪ್ರವೇಶಿಸು ವಂತೆ .

ಲೇಖಕರು: ಮೌ.ವಹಿದುದ್ದೀನ್ ಖಾನ್

ಅನುವಾದ: ತಲ್ಹಾ ಕೆ.ಪಿ

LEAVE A REPLY

Please enter your comment!
Please enter your name here