ಎಂ . ಅಶೀರುದ್ದೀನ್ ಮಂಜನಾಡಿ

ಕರ್ನಾಟಕದಲ್ಲಿ ಒಟ್ಟು ಎರಡು ಹಂತದಲ್ಲಿ ಚುನಾವಣೆ ನಡೆಯಲಿದ್ದು ಒಂದು ಹಂತದ ಚುನಾವಣೆಯು 14 ಕ್ಷೇತ್ರಗಳಲ್ಲಿ ಎಪ್ರಿಲ್ 18 ಮುಗಿದಿದೆ ಎಪ್ರಿಲ್ 23 ಕ್ಕೆ ಇನ್ನು ಬಾಕಿಯಿರುವ 14 ಕ್ಷೇತ್ರಗಳ ಚುನಾವಣೆ ನಡೆಯಲಿದೆ ಚೆಕ್ಕೋಡಿ, ಬಾಗಲಕೋಟೆ,ವಿಜಯಪುರ,ಬೀದರ್, ರಾಯಚೂರು, ಬೆಳಗಾವಿ, ಕಲ್ಬುರ್ಗಿ, ಶಿವಮೊಗ್ಗ ಉತ್ತರಕನ್ನಡ, ಮುಂತಾದ ಜಿಲ್ಲೆಗಳಾಗಿವೆ

ರಾಷ್ಟ್ರದಾದ್ಯಂತ ಚುನಾವಣೆಯ ಪ್ರಚಾರ ಪ್ರಕ್ರಿಯೆಗಳು ಬಿರುಸಿನಿಂದ ಸಾಗುತ್ತಿದೆ. ಚುನಾವಣಾ ಆಯೋಗವೂ ಭಾರತದ ಸಾರ್ವತ್ರಿಕ ಚುನಾವಣೆ (Indian General Election)ಯ ಮತದಾನದ ದಿನಾಂಕವನ್ನು ಘೋಷಣೆ ಮಾಡಿದ ಬೆನ್ನಿಗೆ ರಾಜಕಾರಣಿಗಳೂ ಚುನಾವಣಾ ಅಭ್ಯರ್ಥಿಗಳು ಕಣಕ್ಕಿಳಿದರು. ರಾಷ್ಟ್ರ ಪಕ್ಷಗಳು, ನಾಡ ಪಕ್ಷಗಳು, ಪಕ್ಷೇತರರು ಕಾಲಿಗೆ ಚಕ್ರ ಕಟ್ಟಿಕೊಂಡು ಊರಿಂದೂರಿಗೆ ಅಲೆದು ಹೊಗಳಿ,ತೊಗಳಿ ಕಾಡಿ ಬೇಡಿ ಹೀಯಾಳಿಸಿ, ಅಭಿನಂದಿಸಿ ಮತಯಾಚಿಸುವ ಕೊನೇಯ ಗಡುವು ಮುಗಿದು ಅಭ್ಯರ್ಥಿಗಳು ಪ್ರಜೆಗಳ ಆಶೀರ್ವಾದಕ್ಕೆ ಕೈ ಮುಗಿದು ಕೂತಿದ್ದಾರೆ. ಇನ್ನು ಎಲ್ಲವೂ ಮತದಾರರಾದ ಪ್ರಜೆಗಳ ಕೈಯಲ್ಲಿ ಕಳೆದ ಐದು ವರ್ಷಗಳ ಆಡಳಿತ ಅವಧಿಯ ಏರು ಪೇರು, ಅಭಿವೃದ್ಧಿ, ದಬ್ಬಾಳಿಕೆ, ದುರ್ಬಲಕೆ ಬ್ರಷ್ಟಾಚಾರ ಕಳಪೆ ಪ್ರದರ್ಶನವನ್ನೆಲ್ಲ ತೂಗಿ ಅಳೆದು ಆಲೋಚಿಸಿ ಮತಚಲಾಯಿಸಿ ಸೂಕ್ತರನ್ನು ಆರಿಸಿ ಲೋಕಸಭೆಗೆ ನಮ್ಮ ಪ್ರತಿನಿಧಿಯಾಗಿ ಕಲುಹಿಸುವ ದೊಡ್ಡ ಜವಾಬ್ದಾರಿಯುತ ಹೊಣೆಗಾರಿಕೆ ಭಾರತದ ಪ್ರತಿಯೊಬ್ಬ ಪ್ರಜೆಯ ಮೇಲಿದೆ

ಚುನಾವಣೆಯೆಂಬುವುದು ಒಂದು ಔಪಚಾರಿಕ ವ್ಯವಸ್ಥೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರಜೆಗಳು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ. ‘ಚುನಾಯಿಸು’ ಅಂದರೆ ನಿರ್ಧಾರಿಸುವುದು ಆಯ್ಕೆಮಾಡುವುದು. 1952 ರ ಎಪ್ರಿಲ್ ನಲ್ಲಿ ನಡೆದ ಮೊದಲ ಚುನಾವಣೆಯ ನಂತರ ಭಾರತದ ಚುನಾವಣೆಗಳು ಒಂದು ಗಮನಾರ್ಹ ಸಾಂಸ್ಕೃತಿಕ ಅಂಶವೆನಿಸಿಕೊಂಡಿವೆ.

1982ರಿಂದ 18 ವರ್ಷದ ಪ್ರತಿಯೊಬ್ಬ ಪ್ರಜೆಗಳಿಗೊ ಮತದಾನ ಮಾಡುವ ಹಕ್ಕು ಇದೆ. ಜಾತಿ, ಧರ್ಮ, ಬಡವ ಬಲ್ಲಿದ, ಲಿಂಗ ಭೇದಗಳ ತಾರತಮ್ಯಗಳಿಲ್ಲದ ಮತದನವು ಪ್ರಜೆಗಳ ಪರಮಾಧಿಕಾರದ ಸಂಕೇತವಾಗಿರುತ್ತದೆ. ಇಲ್ಲಿ ಪ್ರಜೆಗಳೇ ಪ್ರಭುಗಳು “ಪ್ರಜೆಗಳು ಪ್ರಜೆಗಳಿಗಾಗಿ ಪ್ರಜೆಗಳಿಂದ ಪ್ರಜೆಗಳಿಗೋಸ್ಕರ ನಡೆಸುವ ಪ್ರಜಾಸತ್ತಾತ್ಮಕವಾದ ದೇಶ ನಮ್ಮದು. ಪ್ರಜೆಗಳಿಂದ ಆರಿಸಿ ಬಂದ ಪ್ರತಿನಿಧಿಗಳು ಜನಸಾಮಾನ್ಯರ ಬೆಳವಣಿಗೆಗೆ ಪೂರಕವಾದ ಸರಕಾರ ನಡೆಸಬೇಕೆಂಬುವುದೇ ಪ್ರಜಾತಂತ್ರದ ಆಶಯ. ಜನರಿಗೆ ಬೇಕಾದ ಆಹಾರ, ವಸತಿ, ಉದ್ಯೋಗ, ಶಿಕ್ಷಣ ನೀರಿನ ಸೌಲಭ್ಯ, ಬೆಳಕು, ಆರೋಗ್ಯದ ವ್ಯವಸ್ಥೆಗಳು ಇತ್ಯಾದಿಗಳ ಹಂಚಿಕೆಯೂ ಸಮರ್ಪಕವಾಗಿ ಸರಕಾರದಿಂದಲೇ ನಡೆಯಬೇಕಾಗಿದೆ

ನಾಡಿನ ಕ್ಷೇತ್ರಗಳ ವ್ಯಾಪ್ತಿಗೊಳಪಟ್ಚವರ ಅಹವಾಲುಗಳನ್ನು ಜನರ ನಿತ್ಯ ಬೇಡಿಕೆಗಳನ್ನು ಲೋಕಸಭೆಯಲ್ಲಿ ಮಂಡಿಸಲು ವಿದ್ಯಾವಂತ ಪ್ರತಿನಿಧಿಗಳನ್ನು ಆರಿಸುವುದು ಅಗತ್ಯವೆನಿಸಿತ್ತದೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿದ ಸಂವಿಧಾನದ ಮೂಲಕ ಮತದಾನದ ಹಕ್ಕನ್ನು ಪಡೆದ ಮತದಾನ ಪ್ರಭು ಮತ ಹಾಕುವಾಗ ಪ್ರಜ್ಞಾವಂತಿಕೆ ತೋರಿಸಬೇಕು. ಪ್ರಚೋದನೆಗೆ, ಆಮಿಷಗಳಿಗೆ, ದಬ್ಬಾಳಿಕೆಗಳಿಗೆ, ಹೆದರಿಕೆ ಬೆದರಿಕೆಗಳಿಗೆ ಒಳಗಾಗದೆ ತನ್ನ ಕರ್ತವ್ಯವನ್ನು ಎಚ್ಚರದಿಂದ ನಿರ್ವಹಿಸಬೇಕು

ಒಂದು ಸಮೀಕ್ಷೆಯ ಪ್ರಕಾರ ಭಾರತವೂ 129 ಕೋಟಿಯೆಷ್ಟು ಜನಸಂಖ್ಯೆ ಹೊಂದಿದೆಯಾದರೂ ಮತದಾನದ ಹಕ್ಕನ್ನು ಪಡೆದವರು ಕೇವಲ 75-80 ಕೋಟಿಯಷ್ಟು ಮಾತ್ರ. ಕರ್ನಾಟಕದಲ್ಲಿ 6.30 ಕೋಟಿ ಜನಸಖೆಯಲ್ಲಿ 4.75ರಷ್ಟು ಜನ ಮತದಾನ ಹಕ್ಕನ್ನು ಪಡೆದಿರುತ್ತಾರೆ. ಆದರೆ ಪ್ರತೀ ಸಮಯವೂ ಪೂರ್ಣವಾಗಿ ಮತದಾನವಾಗುವುದಿಲ್ಲ. ಇದೆಂದು ದುರಂತವಾಗಿದೆ. ಖೇದಕರವಾದ ವಿಷಯವೇನೆಂದರೆ ಕ್ಷುಲ್ಲಕ ಕಾರಣಗಳನ್ನು ಹುಡುಕಿ ಮತದಾನ ಮಾಡದಿರುವುದು. ವಿದ್ಯಾವಂತರಾದವರೂ ಇಂತಹ ಅವಿವೇಕಿತನ ತೋರುವುದು ಇದೆ. ಮುಂದುವರಿದ ದೇಶಗಳಲ್ಲಿ ಮತದಾನ ಮಾಡದಿರುವುದು ಒಂದು ದೊಡ್ಡ ಅಪರಾದವಾಗಿರುತ್ತದೆ ಈ ನಿಟ್ಟಿನಲ್ಲಿ ಮತದಾನದ ಪಾವಿತ್ರ್ಯ ತಿಳಿಯಬೇಕು ಮತದಾನ ಪ್ರಜಾಪ್ರಭುತ್ವವದ ‘ಆಧಾರ ಸ್ತಂಭ’ ಅಧಿಕಾರ ಉಳಿಸುವ ಮತ್ತು ಉರುಳಿಸುವ ಶಕ್ತಿ ಜನರಿಗಿದೆ ಜನತಾಧಿಕಾರವೆನ್ನುತ್ತೇವೆ. ಮತ ನೀಡುವವರು ತಮ್ಮ ಹೆಸರಲ್ಲಿ ಮತನೀಡಬೇಕೆ ಹೊರತು ಇನ್ನೊಬ್ಬರ ಹೆಸರಲ್ಲಿ ಚಲಾಯಿಸುವುದು ಪ್ರಜಾಪ್ರಭುತ್ವ ನಿಯಮಕ್ಕೆ ದ್ರೋಹ ಬಗೆದಂತೆ ನ್ಯಾಯೋಚಿತ ರೀತಿಯಲ್ಲಿ ಸಂಪೂರ್ಣ ಮತದಾನವಾಗುವಂತೆ ಆಯಾ ವಾರ್ಡಿನ ಪ್ರಜ್ಞಾವಂತ ಜನರು ಎಚ್ಚೆತ್ತುಕೊಳ್ಳಬೇಕು

ಭಾರತದಲ್ಲಿ ಮೊದಲು ಚೌಕವಾದ ಮೇಲುಗಡೆ ಮಚ್ಚಳವಿರುವ ಮತಪತ್ರವನ್ನು ಪೆಟ್ಟಿಗೆಯೊಳಗೆ ಹಾಕಲು ಸಾಧ್ಯವಾಗುವಂತೆ ಮಧ್ಯದಲ್ಲಿ ಸೀಳುಗುಂಡಿಯಿರುವ ಪೆಟ್ಟಿಗೆಯನ್ನು ಬಳಸಲಾಗುತ್ತಿತ್ತು. ಇಂದಿನ ಚುನಾವಣಾ ವ್ಯವಸ್ಥೆಯು ವೈಜ್ಞಾನಿಕವಾಗಿ ಬದಲಾವಣೆ ಕಂಡಿದೆ ಅತ್ಯಾಧುನಿಕ ತಂತ್ರಜ್ಞಾನದಂತೆ ವಿದ್ಯುನ್ಮಾನ ಮತಯಂತ್ರ “EVM” (Electronic voting Machine ) ಗಳ ಮೂಲಕ ಚುನಾವಣೆ ನಡೆಸಲಾಗುತ್ತದೆ. ವ್ಯಕ್ತಿಯ ಪೂರ್ಣ ಹೆಸರು ಮತ್ತು ಚಿನ್ಹೆ ಕ್ರಮ ಬದ್ದವಾಗಿರುವುದು ಬಟನ್ ಒತ್ತುವ ಮೂಲಕ ಓಟು ದಾಖಲಾಗುತ್ತದೆ.ಜೊತೆಗೆ ತನ್ನ ಆಯ್ಕೆಯ ಅಭ್ಯರ್ಥಿಗೆ ನನ್ನ ಮತ ಚಲಾವಣೆ ಆಗಿದೆಯಾ ಎಂದು ಖಚಿತ ಪಡಿಸಲು ಭಾರತದಲ್ಲಿ ಮೊದಲ ಬಾರಿಗೆ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ದೇಶಾದ್ಯಂತ V.V.P.A.T (Voter Verifiable Paper Audit Trial ) ಬಳಸಲಾಗುತ್ತದೆ. ಆಯ್ಕೆ ಮಾಡಿದ ಪಕ್ಷದ ಚಿನ್ಹೆಯ ಚೀಟಿ ಏಳು ಸೆಕೆಂಡ್ ಗಳ ಒಳಗೆ ಆ ಯಂತ್ರದೊಳಗೆ ತುಂಡಾಗಿ ಬೀಳುತ್ತದೆ

ಮತದಾನವೆಂಬುವುದು ‘ಜನಾಧಿಕಾರ’ ಈ ಅಧಿಕಾರವೂ ದುರುಪಯೋಗವಾದರೆ ದೇಶದ ಪ್ರಗತಿಯೂ ದುರ್ಬಲವಾಗುತ್ತದೆ ಪ್ರಜಾಪ್ರಭುತ್ವದಲ್ಲಿ ಸಮಾನತೆ, ಸ್ವಾತಂತ್ರ್ಯ, ಕಾನೂನು, ನ್ಯಾಯ ಸಾಮರಸ್ಯ ಮುಂತಾದ ಮೌಲ್ಯಗಳೇ ಮುಖ್ಯವಾದದ್ದು. ಜಾತಿ ಧರ್ಮದಲ್ಲಿನ ಭೇದಗಳು ಕೋಮುವಾದ ಚಿಂತನೆಗಳು ಆಸ್ತಿ ಅಂತಸ್ತು ಉಡುಗೊರೆಗಳು ಮುಖ್ಯವಾಗಬಾರದು. ಉತ್ತಮ ದಕ್ಷವ್ಯಕ್ತಿಯನ್ನು ಆಯ್ಕೆಮಾಡಿಕೊಳ್ಳುವುದು ಎಲ್ಲರ ಕರ್ತವ್ಯವಾಗಿದೆ ಅದರಿಂದ ಸ್ವಚ್ಛ ಸುಂದರ ರಾಷ್ಟ್ರ ನಿರ್ಮಾಣಕ್ಕೆ ಸಹಕಾರವಾಗುವುದು

LEAVE A REPLY

Please enter your comment!
Please enter your name here