– ಶಾರೂಕ್ ತೀರ್ಥಹಳ್ಳಿ

ಕಳೆದ ಮೂರು ತಿಂಗಳಿಂದ ಈ ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದಿಯ ಪರ ಮತ್ತು ವಿರುದ್ದದ ಪ್ರತಿಭಟನೆಗಳು ನಿರಂತರವಾಗಿ ನಡೆಯುತ್ತಲೇ ಬರುತ್ತಿದೆ. ಸಿಎಎ, ಎನ್ ಆರ್ ಸಿ, ಎನ್ ಪಿ ಆರ್ ಗಳಂತಹ ಸಂವಿಧಾನ ವಿರೋಧಿ ಕರಾಳ ಕಾನೂನುಗಳನ್ನು ಈ ದೇಶದ ಪ್ರಜೆಗಳು ವಿರೋಧಿಸುತ್ತಲೇ ಬರುತ್ತಲಿದ್ದಾರೆ. ಯಾವುದೇ ಕಾನೂನು ಪ್ರಜೆಗಳ ಹಿತಕ್ಕಾಗಿ ಮತ್ತು ಸಂವಿಧಾನದ ಆಶಯಕ್ಕೆ ಬದ್ದವಾಗಿರಬೇಕೆ ಹೊರತು ಆ ಕಾಯ್ದೆಯಿಂದ ಪ್ರಜೆಗಳ ಅಸ್ಥಿತ್ವವನ್ನೆ ಪ್ರಶ್ನಿಸುವಂತಾಗಬಾರದು. ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಿದ ನಂತರದಲ್ಲಿ ಈ ದೇಶದಲ್ಲಿ ನಡೆಯಬಾರದಂತಹ ಹಲವು ಘಟನೆಗಳು ನಡೆಯುತ್ತಲಿದೆ.  ಕರ್ನಾಟಕದ ಕರಾವಳಿಯಲ್ಲೂ ಕಳೆದ ಡಿಸೆಂಬರ್ ನಲ್ಲಿ ಗೊಲೀಬಾರ್ ಗೆ ಇಬ್ಬರು ಬಲಿ ಕೂಡ ಆಗಿದ್ದಾರೆ, ಉತ್ತರ ಪ್ರದೇಶದಲ್ಲೂ 19 ಮಂದಿ ಸಾವನ್ನು ಅನುಭವಿಸಿದ್ದಾರೆ. ಒಟ್ಟಾರೆಯಾಗಿ ಈ ದೇಶಾದ್ಯಂತ ಶಾಂತಿಯುತವಾಗಿ ನಡೆಯುತ್ತಿರುವ ಪ್ರತಿಭಟನೆಗಳನ್ನು ಹಿಂಸಾತ್ಮಾಕವಾಗಿ ಮಾಡುವುದರ ಹಿಂದೆ ಕೆಲವೊಂದು ಶಕ್ತಿಗಳು ಪರೋಕ್ಷವಾಗಿ ಕಾರ್ಯನಿರ್ವಹಿಸುತ್ತಿದೆ. ದೆಹಲಿಯಲ್ಲೂ ಪೌರತ್ವದ ಕಿಚ್ಚು ಮುಂದುವರೆದಿದೆ ಶಾಂತಿಯುವಾದ ಪ್ರತಿಭಟನೆಯನ್ನು ಅಶಾಂತಿಯಡೆಗೆ ಕೊಂಡೊಯ್ಯಲು ಕೆಲವೊಂದು ಕೋಮು ಶಕ್ತಿಗಳು ಪ್ರಯತ್ನಿಸುತ್ತಿದೆ. ರಾಷ್ಟ್ರ ರಾಜಧಾನಿಯಲ್ಲಿ ಸಂವಿಧಾನ ಬದ್ದವಾಗಿ ಹೋರಾಟ ಮಾಡುತ್ತಿರುವವರ ಮೇಲೆ ಕ್ರೂರ ಹಿಂಸಾಚಾರ ನಡೆಸಿದ್ದಾರೆ, ಅಮಾಯಕ ಜನರ ಸಾವು ನೂವು ಸಂಭವಿಸಿದೆ, ಸಾರ್ವಜನಿಕರ ಆಸ್ತಿ ಪಾಸ್ತಿಗೆ ಹಾನಿಯಾಗಿದೆ, ಮಸೀದಿ, ಮನೆಗಳನ್ನು ದ್ವಂಸ ಮಾಡಿದ್ದಾರೆ. ಮನೆ ಒಳಗೆ ನುಗ್ಗಿ ಕೆಲವರನ್ನು ಜೀವಂತ ಧಹಿಸಿದಂತಹ ಘಟನೆಗಳು ನಡೆದಿದೆ. ಇಷ್ಟೆಲ್ಲ ನಡೆಯುತ್ತಲಿದ್ದರೂ ಸಹ ಸರ್ಕಾರ ಮಾತ್ರ ತುಟಿ ಬಿಚ್ಚದೆ ಮೌನವಾಗಿ ಪ್ರತ್ಯಕ್ಷವಾಗಿ ಸಹಕರ ನೀಡುತ್ತಿರುವಂತೆ ಭಾಸವಾಗುತ್ತಿದೆ. ಕೇಂದ್ರ ಸರ್ಕಾರ ಮೌನ ವಹಿಸಿದ್ದೆ ಈ ಹಿಂಸಾತ್ಮಕ ಕೃತ್ಯಗಳಿಗೆ ಕಾರಣವಾಗಿದೆ ಎಂದು ವಿರೋಧ ಪಕ್ಷಗಳು ಈಗಾಗಲೇ ದೂರಿದ್ದಾರೆ. ನೂತನವಾಗಿ ಅಧಿಕಾರಕ್ಕೆ ಏರಿದ ದೆಹಲಿಯ ಮುಖ್ಯಮಂತ್ರಿ  ಅರವಿಂದ್ ಕೇಜ್ರೀವಾಲ್ ಪೊಲೀಸರಿಂದ ಹಿಂಸೆಯನ್ನು ನಿಲ್ಲಿಸಲು ಸಾಧ್ಯವಿಲ್ಲ ಸೇನೆಯನ್ನು ಕಳುಹಿಸಿ ಎಂದು ವಿನಂತಿಸಿಕೊಂಡಿದ್ದರು. ಗಲಭೆಗೆ ಪ್ರಚೋದಿಸಿದ ಕಪಿಲ್ ಮಿಶ್ರಾ, ಅನುರಾಗ್ ಠಾಕುರ್ ಸೇರಿ ಒಟ್ಟು ನಾಲ್ವರ ಮೇಲೆ ಕೇಸು ದಾಖಲಿಸುವಂತೆ ಹೈಕೋರ್ಟ್ ಪೊಲೀಸರಿಗೆ ಆದೇಶ ನೀಡಿದ್ದ ವರದಿಗಳು ಸಹ ಬಂದಿತ್ತು. ವಿಪರ್ಯಾಸವೇನೆಂದರೆ ಕೇಸು ದಾಖಲಿಸಲು ಹೇಳಿದ್ದ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಮುರಳೀಧರ್ ರವರನ್ನು ರಾತ್ರೋ ರಾತ್ರಿ ವರ್ಗಾವಣೆ ಮಾಡಲಾಗಿದೆ. ಯಾಕೆ ಈ ರೀತಿ ನಡೆಯುತ್ತಲಿದೆ ಎಂದು ನಮ್ಮಲ್ಲಿ ನಾವೇ ಪ್ರಶ್ನೆ ಮಾಡಿಕೊಳ್ಳುವಂತಹ ಸನ್ನಿವೇಶ ಎದುರಾಗಿದೆ. ಪ್ರತಿಯೊಬ್ಬ ಪ್ರಜೆಗೂ ಭಾರತದ ಸಂವಿಧಾನ ನ್ಯಾಯಕ್ಕಾಗಿ   ಪ್ರತಿಭಟಿಸುವ ಹಕ್ಕನ್ನು ನೀಡಿದೆ ಆದರೆ ಇಂದು ಸಂವಿಧಾನ ಬದ್ದವಾಗಿ ಪ್ರತಿಭಟಿಸುತ್ತಿರುವಂತಹ ಪ್ರಜೆಗಳ ಹಕ್ಕನ್ನು ಧಮನಿಸಲಾಗುತ್ತಿದೆ. ಸತ್ಯವನ್ನು ಮರೆಮಾಚಲಾಗುತ್ತಿದೆ, ಸುಳ್ಳಿನ ಮುಖವಾಡವನ್ನು ಹಾಕಿ ಸರ್ಕಾರಗಳು ಸರ್ವಾಧಿಕಾರಿ ಧೋರಣೆಯನ್ನು ನಡೆಸುತ್ತಿದ್ದಾರೆ. ಆಡಳಿತ ವರ್ಗಗಳ ತಾಳಕ್ಕೆ ತಕ್ಕಂತ ಅಲ್ಲಿನ ಪೊಲೀಸ್ ವ್ಯವಸ್ಥೆಯು ಕುಣಿಯುತ್ತಿದ್ದಾರೆ. ಇದರ ನಡುವೆ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಪ್ರವಾಸವನ್ನು ಸಹ ಮುಗಿಸಿ ಹೋಗಿದ್ದಾರೆ. ಟ್ರಂಪ್ ಪ್ರವಾಸದಲ್ಲಿರುವಾಗಲೇ ಇಷ್ಟೆಲ್ಲ ಕೋಮುಗಲಭೆ ನಡೆಯುತ್ತಿದ್ದರು ಸಹ ಪ್ರಧಾನಿ ಮೋದಿ ಟ್ರಂಪ್ ಗೆ ಪೌರತ್ವದ ಕಿಚ್ಚು ಗೋಚರಿಸಲದಂತೆ ಗೋಡೆಯನ್ನು ಸಹ ಅದಾಗಲೇ ಕಟ್ಟಿ ಆಗಿತ್ತು. ಸೌಹಾರ್ದತೆ ಪರಂಪರೆ ಇರುವ ಭಾರತದಲ್ಲಿ ಕೋಮು ಗಲಭೆ ನಿರಂತವಾಗಿ ನಡೆಯುತ್ತಲಿದೆ ಎಂದಾದರೆ ಇದಕ್ಕೆ ಕುಮ್ಮಕ್ಕು ನೀಡುತ್ತಿರುವ ಕೋಮು ಶಕ್ತಿಗಳನ್ನು ಮಟ್ಟಹಾಕುವಲ್ಲಿ ಇಲ್ಲಿನ ಸರ್ಕಾರಗಳು ವಿಫಲವಾಗಿದೆ. ಸರ್ಕಾರಗಳು ಯಾವುದೇ ಬಂದರು ಸಹ ಈ ದೇಶದ ಜನರಿಗೆ ಬೇಕಾಗಿರುವುದು ಶಾಂತಿ, ಸೌಹಾರ್ದತೆ. ಅಂತಹ ಶಾಂತಿ ಸೌಹಾರ್ದತೆ ಇಲ್ಲದ ಮೇಲೆ ಸರ್ಕಾರಗಳು ಆಡಳಿತ ನಡೆಸಿಯೂ ಯಾವುದೇ ಪ್ರಯೋಜನವಿಲ್ಲ, ಪ್ರಜಾಪ್ರಭುತ್ವದ ದೇಶದಲ್ಲೆ ಇಷ್ಟೊಂದು ಹಿಂಸೆಗಳು ನಡೆಯುತ್ತಿದೆ ಎಂದಾದರೆ, ಇನ್ನು ಸರ್ವಾಧಿಕಾರಿ ದೇಶಗಳಲ್ಲಿ ಏನೆಲ್ಲ ನಡೆಯಬಹುದು ಎಂಬುದನ್ನು ಪ್ರತಿಯೊಬ್ಬ ಪ್ರಜೆಯು ಊಹಿಸಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರಗಳು ಎಷ್ಟೇ ಮೌನ ವಹಿಸಿದರು ಸಂವಿಧಾನ ಬದ್ದವಾಗಿ ಹೋರಾಟ ನಡೆಸಿ, ಸಂವಿಧಾನಕ್ಕೆ ವಿರೋಧವಾದ ಕಾಯ್ದೆ ಕಾನೂನುಗಳನ್ನು ಯಾವುದೇ ಮುಲಾಜಿಲ್ಲದೆ ವಿರೋಧಿಸಬೇಕು, ಪ್ರತಿಭಟನೆಗಳು ಸಹ ನಿರಂತವಾಗಿ ನಡೆಯುತ್ತಲೇ ಇರಬೇಕು. ಪ್ರತಿಭಟನೆಗೆ ಬರುವ ಅತಿಥಿಗಳ ಬಗ್ಗೆ ಸಹ ಗಮನವಿರಬೇಕು ದೇಶ ವಿರೋಧಿ ಹೇಳಿಕೆಗಳನ್ನು ಹೇಳುವಂತಹ ಯಾರಿಗೂ ಸಹ ವೇದಿಕೆ ನೀಡಬಾರದು, ಅಂತವರ ಮೇಲೆ ಬಹಳ ಜಾಗೂರೂಕರಾಗಿರಬೇಕು ಇಲ್ಲದಿದ್ದೆ ಪ್ರತಿಭಟನೆಯ ದಿಕ್ಕನ್ನೆ ತಪ್ಪಿಸಲು ಅವರ ಒಂದೊಂದು ಮಾತಗಳು ಸಹ ಕಾರಣವಾಗಬಹುದು. ಪೌರತ್ವ ತಿದ್ದುಪಡಿ ವಿರೋಧಿಸಿ ಯಾರೆಲ್ಲ ಪ್ರತಿಭಟನೆಗಳು ನಡೆಸುತ್ತಾರೋ ಅವರನ್ನೆಲ್ಲ ಧಮನಿಸುವ ಕೆಲಸಗಳು ನಿರಂತರವಾಗಿ ನಡೆಯುತ್ತಲೇ ಇದೆ. ಪೌರತ್ವ ಕಾಯ್ದೆ ವಿರೋಧಿಸಿ ಕವನ ಬರೆದವನನ್ನು ಜೈಲಿಗೆ ಹಾಕಲಾಯಿತು, ಪೌರತ್ವ ಕಾಯ್ದೆಯನ್ನು ವಿರೋಧಿಸಿ ಮಕ್ಕಳಿಂದ ನಾಟಕ ಮಾಡಿಸಿದ್ದಕ್ಕಾಗಿ ಬೀದರ್ ನ ಶಾಹಿನ್ ಶಾಲೆಯ ಶಿಕ್ಷಕಿಯರ ಮೇಲೆ ಕೇಸು ದಾಖಲಿಸಿ ಜೈಲಿಗೆ ತಳ್ಳಿದರು. ಹತ್ತು ಇಪ್ಪತ್ತು ಕೇಸುಗಳು ತಮ್ಮ ಮೇಲೆ ಹೊತ್ತುಕೊಂಡಿರುವ ಶಾಸಕರೊಬ್ಬರು, ಸ್ವಾತಂತ್ರ ಹೋರಾಟಗಾರ ದೊರೆ ಸ್ವಾಮಿಯನ್ನು ಪಾಕಿಸ್ತಾನದ ಏಜೆಂಟ್ ಎಂದು ಯಾವುದೇ ಆಧಾರವಿಲ್ಲದೆ ಆರೋಪವನ್ನು ಸಹ ಹೊರೆಸಿದರು. ಉಡುಪಿಯಲ್ಲಿ ಶಾಹಿನ್ ಬಾಗ್ ಮಾದರಿಯಲ್ಲಿ ಜನಜಾಗೃತಿ ಧರಣಿಯನ್ನು ನಡೆಸಲು ಸಹ ಪೊಲೀಸರು ಅನುಮತಿ ನಿರಾಕರಿಸಿದರು. ಒಟ್ಟಿನಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಪ್ರತಿಭಟನೆಗಳನ್ನು ಹತ್ತಿಕ್ಕುವ ಕೆಲಸಗಳು ನಡೆಯುತ್ತಲಿದೆ. ಶಾಂತಿಯಿಂದ ನಡೆಯುವ ಪ್ರತಿಭಟನೆಯನ್ನು ಕೊನೆಗಾಣಿಸಲು ಅಶಾಂತಿ ಎಂಬ ಆಯುಧ ಬಳಸುತ್ತಿರುವ ಕೋಮು ಶಕ್ತಿಗಳನ್ನು ಇಲ್ಲಿನ ಸರ್ಕಾರಗಳು ಮಟ್ಟಹಾಕಿಬೇಕಿ, ಸರ್ಕಾರ ಪ್ರಜೆಗಳ ಶಾಂತಿಯುತ ಪ್ರತಿಭಟನೆಗೆ ಸ್ಪಂದಿಸಬೇಕಾಗಿದೆ.

LEAVE A REPLY

Please enter your comment!
Please enter your name here