ಸಂತೋಷ ಎನ್. ಸಾಹೇಬ್
(ಸಂಶೋಧನಾ ವಿದ್ಯಾರ್ಥಿ ಮಂಗಳೂರು ವಿಶ್ವವಿದ್ಯಾಲಯ)

ನಮ್ಮ ದೇಶದ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಥಮ ಸಾಲಿನಲ್ಲಿ ನಿಲ್ಲುವ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ಪ್ರಸ್ತುತ ಸ್ಥಿತಿಗತಿಗಳನ್ನು ಅವಲೋಕಿಸಿದರೆ, ಭಾರತಿಯರಲ್ಲಿ ಆತಂಕ ಮನೆ ಮಾಡಿದೆ. ಪರಂಪರಾಗತವಾಗಿ ಸಾಮಾನ್ಯ ವಿದ್ಯಾರ್ಥಿಗಳನ್ನು ಪ್ರಬುದ್ದರನ್ನಾಗಿ ತಯಾರು ಮಾಡುವ ಹಿರಿಮೆ ವಿಶ್ದವಿದ್ಯಾಲಯದ್ದಾಗಿದೆ, ಜೆಎನಯುನಲ್ಲಿ ಕಲಿತು ಶಿಕ್ಷಿತರಾಗುವ ವಿದ್ಯಾರ್ಥಿಗಳು ಪ್ರಸ್ತುತವಾಗಿ ಪ್ರಪಂಚದಾದ್ಯಂತ ವಿವಿಧ ದೇಶಗಳಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸಿ, ನ್ಯಾಯ ಸಮ್ಮತವಾಗಿ ಸಮಾನತೆಯನ್ನೇ ದ್ಯೇಯವಾಗಿಟ್ಟುಕೊಂಡು ಅಧಿಕಾರ ನಡೆಸುತ್ತಿರುವ ಸಾವಿರಾರು ನಿದರ್ಶನಗಳು ನಮ್ಮ ಕಣ್ಣು ಮುಂದಿವೆ. ಇವರು ಕೇವಲ ಓದಿಗೆ ಸಿಮಿತವಾಗದೆ ದೇಶದ ಮತ್ತು ಸಮಾಜದ ಬಗೆಗೆ, ಅದರ ಆಗು ಹೋಗುಗಳ ಬಗ್ಗೆ ಅಪಾರ ಕಾಳಜಿಯುಳ್ಳವರಾಗಿರುತ್ತಾರೆ. ಈ ಹಿನ್ನಲೆಯಲ್ಲಿ ತಮ್ಮ ವಿಸ್ತಾರವಾದ ಅಧ್ಯಯನದ ಜೊತೆಗೆ ದೇಶದಲ್ಲಿ ಸಂಭವಿಸುತ್ತಿರುವ ಭೀಕರ ವಿದ್ಯಮಾನಗಳ ಬಗ್ಗೆ ಪ್ರಶ್ನಿಸುತ್ತಾ, ತಮ್ಮ ದೇಶದ ಬಗೆಗೆ ಅವರು ವಹಿಸುತ್ತಿರುವ ಮುತುವರ್ಜಿ ಶ್ಲಾಘನೀಯ. ಬಾಬಾ ಸಾಹೇಬ ಅಂಬೇಡ್ಕರ ಅವರ ಸಂವಿಧಾನದ ಆಶಯಗಳ ಬಗೆಗೆ ಸಮಗ್ರವಾಗಿ ಅರಿತುಕೊಂಡಿರುವ ಇಲ್ಲಿನ ವಿದ್ಯಾರ್ಥಿಗಳು ಅದರ ಮೂಲ ಆಶಯಗಳಾದ ಸ್ವಾತಂತ್ರ್ಯ, ಸಮಾನತೆ, ಮತ್ತು ಭ್ರಾತೃತ್ವ, ತತ್ವಗಳ ಸಾಕಾರಕ್ಕಾಗಿ ಇಂದು ವಿವಿಧ ಹೋರಾಟಗಳಲ್ಲಿ ತೂಡಗಿಸಿಕೂಂಡಿರುವ ಹೆಮ್ಮೆಯ ಸಂಗತಿಯೆ ಸರಿ. ಇಂತಹ ಬಹುತ್ವದ ಬೆಳವಣಿಗೆಯನ್ನು ಕಂಡು ಕೆಂಗ್ಗಟ್ಟಿರುವ ಪಟ್ಟಭದ್ರ ಹಿತಾಸಕ್ತಿಗಳು. ಜಾತಿ, ಧರ್ಮ, ಪ್ರಾಂತ್ಯ, ಭಾಷೆಗಳ ಹೆಸರಿನ್ನಲ್ಲಿ ಕೊಳಕನ್ನು ಅಂಟ್ಟಿಸುತ್ತಾ ಜನಸಾಮಾನ್ಯರ ಮನಸ್ಸಿನಲ್ಲಿ ಗೊಂದಲವನ್ನು ಸೃಷ್ಟಿಸಿ ಸಮಾಜವನ್ನು ಕಲುಸಿತಗೊಳಿಸುವುದರ ಜೊತೆಗೆ ಶಾಂತಿ, ಸಹಬಾಳ್ವೆ ಮತ್ತು ಸುವ್ಯವಸ್ಥೆ ಇಲ್ಲವಾಗಿಸುತ್ತಿದ್ದಾರೆ.
ಧರ್ಮ, ಕೋಮು, ಗೋವು, ದೇಶಭಕ್ತಿಯ ನೆಪವೊಡ್ಡಿ ಅಮಾಯಕರ ಬದುಕನ್ನು ಛೀದ್ರಗೊಳಿಸುತ್ತಿರುವ ನಯವಂಚಕರ ಸಿದ್ದಾಂತವು ಒಂದೆಡೆಯಾದರೆ, ದೇಶದಲ್ಲಿ ಕುಗ್ಗುತ್ತಿರುವ ಆರ್ಥಿಕತೆ, ನಿರುದ್ಯೋಗ ಸಮಸ್ಯೆ ಹಾಗೂ ಹದಗೆಟ್ಟರುವ ಶಿಕ್ಷಣ ವ್ಯವಸ್ಥೆ ಇವೇ ಮೊದಲಾದ ಭಿಕರ ವಿದ್ಯಮಾನಗಳ ಬಗ್ಗೆ ಪ್ರಶ್ನಿಸುತ್ತಾ ನಮ್ಮನ್ನಾಳುತ್ತಿರುವ ಸರ್ಕಾರಗಳನ್ನು ಆಗ್ರಹಿಸುತ್ತಾ ಭವ್ಯಭಾರತದ ನಿರ್ಮಾಣಕ್ಕಾಗಿ ಹಪಹಪಿಸುತ್ತಿರುವ ಸಿದ್ದಾಂವು ಮತ್ತೋಂದೆಡೆ. ಈ ಎರಡು ಸಿದ್ದಾಂತಗಳ ಹಿಂದಿನ ಮರ್ಮವನ್ನು ಅರಿಯುವುದು ಸಾಮಾನ್ಯ ಜನರಿಗೆ ಅವಶ್ಯಕವಾಗಿದೆ. ದೇಶದ ಏಳಿಗೆಗಾಗಿ ಹೋರಾಡುವ ಮನಸ್ಥಿತಿಯುಳ್ಳ ವಿದ್ಯಾರ್ಥಿಗಳು ಹಾಗೂ ವಿಚಾರವಂತರ ಮೇಲೆ ಲಜ್ಜೆಗೆಟ್ಟ ನೀಚ ಸಂಸ್ಕøತಿಯುಳ್ಳ ರಾಕ್ಷಸೀ ಪ್ರವೃತ್ತಿಯ ಗುಂಪುಗಳು ಅಗಾಗ ದಾಳಿ ನಡೆಸಿ ಮಾರಣಾಂತಿಕ ಹಲ್ಲೆಗಳು ಮರುಕಳಿಸುತ್ತಿರುವುದನ್ನು ನೋಡಿದರೆ. ನಾವು ಬಾಬಾ ಸಾಹೇಬರ ಕನಸಿನ ಕೂಸಾದ ಆಧುನಿಕ ಭಾರತದಲ್ಲಿದ್ದೇವೋ, ಅಥವಾ ಪ್ರಾಚೀನ ಕಾಲದ ಮನುವಾದಿ ವರ್ಣಾಶ್ರಮ ಧರ್ಮದ ಭಾರತದಲ್ಲಿದ್ದೇವೋ ಎಂಬ ದಿಗಿಲು ಆವರಿಸುತ್ತಿದೆ.
ಇದಕ್ಕೆ ಸಾಕ್ಷ್ಯವೆಂಬಂತೆ 2020 ರ ಜನವರಿ 05 ರಂದು ಜೆಎನಯು ಆವರಣದಲ್ಲಿರುವ ಮಹಿಳಾ ವಸತಿನಿಲಯಕ್ಕೆ ಮಾರಕಾಸ್ತ್ರಗಳೊಂದಿಗೆ ಸುಮಾರು 50 ಕ್ಕೊ ಹೆಚ್ಚು ಜನರಿದ್ದ ಗೂಂಡಾಗಳ ಗುಂಪೂಂದು ದಾಳಿ ನಡೆಸಿರುವುದು ಅಕ್ಷಮ್ಯ ಮತ್ತು ಖಂಡನೀಯ. ವಸತಿನಿಲಯ ಮತ್ತು ಆವರಣದಲ್ಲಿ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರನೋಳಗೊಂಡಂತೆ ಸುಮಾರು 35 ಕ್ಕೂ ಹೆಚ್ಚು ಜನರ ಮೇಲೆ ದಾಳಿ ನಡೆಸಿ, ಮನಸೋ ಇಚ್ಚೇ ಥಳಿಸಿ ಹಲವರಿಗೆ ಮಾರಣಾಂತಿಕ ಹಲ್ಲೆ ನಡೆಸಿರುವುದು ಇಡೀ ದೇಶವೇ ಬೆಚ್ಚಿ ಬಿಳಿಸುವಂತೆ ಮಾಡಿದೆ. ಅಚ್ಚರಿ ಎಂದರೆ ಪೋಲಿಸರ ಕಣ್ಗಾವಲಿನಲ್ಲಿಯೇ ಈ ಘಟನೆ ನಡೆದಿರುವುದನ್ನು ಗಮನಿಸಿದರೆ ಇದು ಪೂರ್ವಯೋಜಿತ ದಾಳಿಯಾಗಿದ್ದು. ಈ ಕೃತ್ಯದ ಹಿಂದೆ ಹಲವಾರು ಕಾಣದ ಕೈಗಳು ಕೆಲಸ ಮಾಡಿರುವುದು ಖಚಿತವೆನಿಸುತ್ತದೆ. ಈ ಘಟನೆಯಲ್ಲಿ ಜೆಎನ್‍ಯು ನ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಆಯಿಷಿ ಘೋಷ ಅವರ ತಲೆಗೆ ದೊಡ್ಡಮಟ್ಟದಲ್ಲಿ ಹಲ್ಲೆ ಮಾಡಿರುವುದನ್ನು ಗಮನಿಸಿದರೆ ಈ ನೀಚ ಕೃತ್ಯದ ಹಿಂದೆ ಕೆಲವು ಕಚಡ ಮನಸ್ಥಿತಿಯುಳ್ಳ ಸಂಘಟನೆಗಳು ಮತ್ತು ರಾಜಕಾರಣಿಗಳ ಕೈವಾಡವಿರುವುದರ ಶಂಕೆ ಮೂಡುತ್ತದೆ. ಭವಿಷ್ಯದಲ್ಲಿ ದೇಶವನ್ನು ಕಟ್ಟುವ ಇಂತಹ ವಿದ್ಯಾರ್ಥಿಗಳ ಮೇಲೆ ವ್ಯವಸ್ಥತವಾಗಿ ದಾಳಿ ಮಾಡುವುದು ಯುವ ಶಕ್ತಿಯ ರಕ್ಷಣೆ ಎಂಬ ಆಶಯಕ್ಕೆ ತಿಲಾಂಜಲಿ ಇಟ್ಟಂತಾಗುತ್ತಿದೆ. ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯದಲ್ಲಿ ತಮಗಾಗುತ್ತಿರುವ ದೌರ್ಜನ್ಯದ ವಿರುದ್ದ ದ್ವನಿ ಎತ್ತುವುದನ್ನು ಸಮಾಜದಲ್ಲಿ ನಡೆಯುವ ಅನ್ಯಾಯಗಳನ್ನು ವಿರೋದಿಸುತ್ತಿರುವುದನ್ನು ಮಟ್ಟಹಾಕಲು ಯತ್ನಿಸುವ ಪಟ್ಟಪಭದ್ರ ಹಿತಾಸಕ್ತಿಗಳ ನಡೆ ಸಂವಿದಾನದ ಮೂಲಭೂತ ಹಕ್ಕುಗಳಿಗೆ ಚ್ಯುತಿ ತರುತ್ತಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಲ್ಲದೇ ಮತ್ತೇನು..?
ಈ ಘಟನೆಯ ಹಿಂದಿನ ಷಡ್ಯಂತ್ರವನ್ನು ತಿಳಿಯದ ಅಮಾಯಕ ಜನರಿಗೆ ಮಾದ್ಯಮಗಳು ಇದು ಕೇವಲ ಎರಡು ಗುಂಪುಗಳ ಘರ್ಷಣೆ ಎಂಬಂತೆ ನಂಬಿಸುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಈ ಘಟನೆ ಭಿನ್ನಾಭಿಪ್ರಾಯವಿರುವ ಎರಡು ಗುಂಪುಗಳ ಘರ್ಷಣೆಯಂತೆ ಕಂಡರು ಅದರ ನಿಜರೂಪದಲ್ಲಿ ಇದು ಎರಡು ಸಿದ್ದಾಂತಗಳ ನಡುವಿನ ತಾರ್ಕಿಕ ಯುದ್ದವೆಂಬಂತೆ ನಗ್ನಸತ್ಯವಾಗಿದೆ. ಜೊತೆಗೆ ಇದು ಹಿಂಸೆ ಅನ್ಯಾಯ, ಜಾತಿ ಧರ್ಮವನ್ನು ಪೋಷಿಸುವ ಮನುಕುಲದ ಕುಡಿಗಳು ಹಾಗೂ ಅವರ ಚಡ್ಡಿಗಳು ಮನುವಾದವೆಂಬ ಗಬ್ಬುನಾರುವ ಕೊಚ್ಚೆಯಲ್ಲಿ ಬಿದ್ದಿರುವ ಸಮೂಹಕ್ಕೂ ಮತ್ತು ಸಮಾನತೆ, ಸಹಬಾಳ್ವೆ,ಮಾನವೀಯ ಮೌಲ್ಯಗಳನ್ನೇ ಸಾರುವ ಭೀಮವಾದವೆಂಬ ಹಾಲಿನ ಕಡಲಲ್ಲಿ ಈಜುತ್ತಿರುವ ನಿಜವಾದ ದೇಶಭಕ್ತರಿಗೂ ನಡೆಯುತ್ತಿರುವ ವೈಚಾರಿಕ ಯುದ್ದಕ್ಕೆ ಮುನ್ನುಡಿಯಂತಿದೆ. ಅದೇನೇ ಇರಲಿ ಈ ಘಟನೆಯ ಹಿಂದೆ ಎಂತಹ ಶಕ್ತಿಯೇ ಅಡಗಿರಲಿ ತಪ್ಪಿತಸ್ಥರಿಗೆ ಉಗ್ರವಾದ ಶಿಕ್ಷೆಯಾಗಬೇಕೆಂಬುದು ಸರ್ವಸಮ್ಮತವಾದ ಅಭಿಪ್ರಾಯವಾಗಿದೆ. ಈ ಘಟನೆಯ ಅಪರಾದಿಗಳಿಗೆ ಶಿಕ್ಷೆಯಾಗಬೇಕು, ಸಂವಿಧಾನ ಬದ್ದವಾದ ಕ್ರಮವನ್ನು ಜರುಗಿಸಬೇಕೆಂಬುದು ದೇಶದ ಸಮಸ್ತ ವಿದ್ಯಾರ್ಥಿಗಳ ಒಕ್ಕೂರಲ ದ್ವನಿಯಾಗಿದೆ. ಅಲ್ಲದೇ ಅನ್ಯಾಯದ ವಿರುದ್ದ ಹೋರಾಡುವ ವಿದ್ಯಾರ್ಥಿಗಳಿಗೆ ಅಭದ್ರತೆ ಎದ್ದು ಕಾಣುತ್ತಿರುವುದರ ಜೊತೆಗೆ ದೇಶದ್ರೋಹಿಗಳೆಂಬ ಹಣೆಪಟ್ಟಿಯನ್ನು ಸಹ ವ್ಯವಸ್ಥಿತವಾಗಿ ಕಟ್ಟುತ್ತಿರುವುದು ದೇಶದ ದುರಂತವೇ ಸರಿ.
ನಮ್ಮ ದೇಶದ ವಿದ್ಯಾರ್ಥಿಗಳು ಭವಿಷ್ಯ ಭಾರತದ ಶಕ್ತಿಗಳೆಂಬುಹುದನ್ನು ನೆನಪಿನಲ್ಲಿಟ್ಟುಕೂಂಡು ಇನ್ನೂ ಮುಂದೆ ಯಾವುದೇ ಕಾರಣಕ್ಕೂ ಯಾವ ಸಂಘಟನೆಗಳಿಂದಾಗಲಿ, ರಾಜಕೀಯ ಪಕ್ಷಗಳಿಂದಾಗಲಿ, ರಾಜಕಾರಣಿಗಳಿಂದಾಗಲಿ ತೋಂದರೆಗಳು, ಹಲ್ಲೆಗಳು ಆಗದೇ ಇರುವಂತೆ ನಮ್ಮನ್ನಾಳುವ ಸರ್ಕಾರಗಳು ಎಚ್ಚರವಹಿಸಬೇಕು. ಇಲ್ಲವಾದ್ದಲ್ಲಿ ಸರ್ಕಾರಗಳು ನೇರ ಹೊಣೆಯಾಗಬೇಕಾಗುತ್ತದೆ. ಅಲ್ಲದೇ ಮುಂದೆ ನಡೆಯುವ ಎಲ್ಲಾ ದುರ್ಘಟನೆಯನ್ನು ಒಪ್ಪಿಕೂಳ್ಳಬೇಕಾದ ಸಂದರ್ಭ ಬಂದೋದಗಬಹುದು.

ಲೇಖಕರು : ಅಧ್ಯಕ್ಷರು, ಅಂಬೇಡ್ಕರ್ ಫುಲೆ ವಿದ್ಯಾರ್ಥಿ ಸಂಘ ಮಂಗಳೂರು ವಿಶ್ವವಿದ್ಯಾಲಯ ರಾಜ್ಯ ಅಧ್ಯಕ್ಷ, ಕರ್ನಾಟಕ ರಾಜ್ಯ ಸಂಶೋಧನಾ ವಿದ್ವಾಂಸರ ಸಂಘ.

LEAVE A REPLY

Please enter your comment!
Please enter your name here