ಮಹಾಂತೇಶ ದುರ್ಗ. ಹೆಚ್.ಇ. ಪಿ.ಎಚ್.ಡಿ.ಸಂಶೋಧನಾ ವಿದ್ಯಾರ್ಥಿ, ಸಮಾಜಶಾಸ್ತ್ರ ಅಧ್ಯಯನ ವಿಭಾಗ, ಕುವೆಂಪು ವಿಶ್ವವಿದ್ಯಾನಿಲಯ

ಒಂದು ದೇಶದ ಅಭಿವೃದ್ಧಿಗೆ ಅಲ್ಲಿನ ‘ಶಿಕ್ಷಣ’ ಬಹಳ ಮಹತ್ವದ್ದಾಗಿರುತ್ತದೆ. ಒಬ್ಬ ವ್ಯಕ್ತಿಯನ್ನು ವಿಚಾರವಂತನಾಗಿ  ಸುಸಂಸ್ಕøತನಾಗಿ ಮಾಡುವುದು ಮತ್ತು ಈ ಸಮಾಜದ ಕಲ್ಪನೆ, ಸ್ವಾಲಂಬನೆಯನ್ನು ಬೆಳೆಸುವುದು- ‘ಶಿಕ್ಷಣದ ಉದ್ದೇಶ’ವಾಗಿದೆ.

ಇಂದಿನ ಈ ಶಿಕ್ಷಣದ ಸ್ಥಿತಿಯನ್ನು ನೋಡಿದರೆ, ಶಿಕ್ಷಣ ಗೊತ್ತು ಗುರಿ ಯಾವುದೂ ಇಲ್ಲದೆ  ಅದರ ಪಯಣ ಅಂಬಿಗನಿಲ್ಲದ ನೌಕೆಯಂತಾಗಿಬಿಟ್ಟಿದೆ. ಈ ಶಿಕ್ಷಣಕ್ಕೊಂದು ನಿರ್ದಿಷ್ಟ ಗುರಿಯೆ ಇಲ್ಲ.

ಯಾವ ಶಿಕ್ಷಣದಿಂದ ಒಬ್ಬ ವ್ಯಕ್ತಿಯು ತನ್ನ ಕಾಲ ಮೇಲೆ ತಾನು ನಿಂತು ಅಭಿವೃದ್ಧಿಯಾಗಬೇಕಿತ್ತೊ ಅದೇ ಈ ಶಿಕ್ಷಣ ಆ ವ್ಯಕ್ತಿಯನ್ನು ‘ಪರಾವಲಂಬನೆ’ಗೆ ದಾರಿ ಮಾಡಿಕೊಡುತ್ತಿದೆ. ತನ್ನ ತನವನ್ನ ಮರೆಸುತ್ತಿದೆ. ಬಂಡವಾಳಶಾಹಿಗಳಿಗೆ ಬಂದು ದೊಡ್ಡ ಮಾರುಕಟ್ಟೆಯಾಗಿ ಬಿಟ್ಟಿದೆ. ಬಡವರು-ಬಡವರಾಗಿ ಶ್ರೀಮಂತ-ಶ್ರೀಮಂತ ನಾಗಿಯೇ-ಮುಂದುವರಿಯುತ್ತಿದ್ದಾನೆ. ಯಾವ ಶಿಕ್ಷಣ ವರ್ಗ- ಭೇದವನ್ನು ಮರೆಸಬೇಕಿತ್ತೊ ಅದೆ ಶಿಕ್ಷಣ ಈ ಸಮಾಜದಲ್ಲಿ ವರ್ಗಭೇಧವನ್ನು ಸೃಷ್ಟಿಸಿ ಬಿಟ್ಟಿದೆ.

ಇಂದು ಜಾತಿ ವ್ಯವಸ್ಥೆ ಬಲವಾಗಲು-ಈ ಶಿಕ್ಷಣದ ಕೊಡುಗೆಯೇನೂ ಕಡಿಮೆಯಿಲ್ಲ-ಒಂದು ಸಮಾಜದಲ್ಲಿ ಆರೋಗ್ಯಕರ ವಾತಾವರಣ  ಮೂಡಲು ಅಲ್ಲಿನ ಪ್ರಜ್ಞಾವಂತಿಕೆ ಕಾರಣ. ಆದರೆ ಪ್ರಜ್ಞಾವಂತಿಕೆ ಎಲ್ಲಿಂದ ಬರಬೇಕು. ಶಿಕ್ಷಣ ದಿಂದ ತಾನೆ? ಈ ಸಮಾಜದಲ್ಲಿ ಎಲ್ಲ ವರ್ಗದವರಿಗೂ ಶಿಕ್ಷಣ ಸಿಗುತ್ತಿಲ್ಲ. ಬಡವರ ಪಾಲಿಗೆ ಅದೊಂದು ‘ಗಗನ ಕುಸುಮ’ವಾಗಿಬಿಟ್ಟಿದೆ. ನಮ್ಮ ಶಿಕ್ಷಣ ವ್ಯವಸ್ಥೆ ಉಳ್ಳವರ ಆಸ್ತಿಯಾಗಿದೆ. ನಮ್ಮ ಈ ಶಿಕ್ಷಣ ವ್ಯವಸ್ಥೆಯಿಂದಲೆ ನಾವಿಂದು ಬಡತನ ನಿರುದ್ಯೋಗದಂತಹ ಜಟಿಲ ಸಮಸ್ಯೆಗಳನ್ನು ಸೃಷ್ಟಿಸಿಕೊಂಡು ಪರಕೀಯರನ್ನ ಅವಲಂಬಿಸಬೇಕಾಗಿರುವುದು.

ಕೆಲವರು ಹೇಳುತ್ತಾರೆ. ಪುಸ್ತಕದ ಬದನೆಕಾಯಿ ಸಾಂಬಾರಿಗೆ ಬರುವಿದಲ್ಲ.-ಹೌದು ಇದು ನಿಜ.

ಒಬ್ಬ ವಿದ್ಯಾರ್ಥಿ ಒಂದನೇ ತರಗತಿ ಯಿಂದ ಹತ್ತನೇ ತರಗತಿಗೆ ಬರುವ ಹೊತ್ತಿಗೆ ಅವನಲ್ಲಿ ತನ್ನತನ, ಸ್ವಸಾಮಥ್ರ್ಯ ಸ್ವಾವಲಂಬನೆ ಅಂದರೆ ತನ್ನ ದಾರಿಯನ್ನು ತಾನೇ ಸೃಷ್ಟಿಸಿಕೊಳ್ಳುವಂತಹ ಶಿಕ್ಷಣ ನಮ್ಮದಾಗಬೇಕು. ಅವನಿಗೆ ಈ ಸಮಾಜದಲ್ಲಿ ಗೌರವಯುತವಾಗಿ ಬಾಳುವಂತಹ- ಸ್ವಉದ್ಯೋಗ ಮಾಡುವಂತಹ ವ್ಯವಹಾರಿಕ, ಔದ್ಯೋಗಿಕ ಶಿಕ್ಷಣವನ್ನು ಕೊಡಬೇಕು. ಬರೀ ಡಿಗ್ರಿ ಪಡೆದು, ಸರ್ಟಿಫಿಕೆಟ್‍ಗಳನ್ನ ಹಿಡಿದು, ಸರ್ಕಾರಿ ಸೌಕರ್ಯ ಬೇಕು ಎಂದು ಹಂಬಲಿಸುವ ಶೈಕ್ಷಣಿಕ ವ್ಯವಸ್ಥೆ ಬದಲಾಗಲೆಬೇಕಿದೆ.

ವ್ಯಕ್ತಿಯಲ್ಲಿರುವ ನೈಜ ಕೌಶಲತೆಗನುಗುಣವಾಗಿ ಅವನಿಗೆ ವೃತ್ತಿ ತರಬೇತಿ ನೀಡಿದರೆ ಅವನು ಯಾರನ್ನು ಅವಲಂಬಿಸುವುದಿಲ್ಲ. ಒಂದು ಆರೋಗ್ಯಕರ ಸಮಾಜದ ಅಡಿಗಲ್ಲು ಆಗಲು ಸಾಧ್ಯ. ಸರ್ಕಾರದ ವತಿಯಿಂದ ಅದಕ್ಕೆ ಸೂಕ್ತ ಪ್ರೋತ್ಸಾಹ ಲಭಿಸಬೇಕಿದೆ.

‘ನಮ್ಮೂರು ನನಗೆ ಸವಿಬೆಲ್ಲ’ ಅನ್ನುವ ಹಾಗೆ, ಗೊತ್ತಿಲ್ಲದೆ ಇರುವ ತಾಂತ್ರಿಕತೆಗಳನ್ನು ಹೇಳಿಕೊಡುವುದರ ಬದಲು ಆಯಾ ಪ್ರದೇಶಗಳ ನೈಪುಣ್ಯತೆಯನ್ನ ಬಳಸಿಕೊಂಡು ನಾವು ಯಾರಿಗೇನೂ ಕಡಿಮೆಯಲ್ಲ ಅನ್ನುವ ಬದುಕುವ ದಾರಿಯನ್ನ ನಮ್ಮ ಶಿಕ್ಷಣ ನೀಡುವಂತಾಗಬೇಕು.

ನಮ್ಮ ಸರ್ಕಾರದ ರೀತಿ ನೀತಿಗಳು ಹೆಂಗಪ್ಪ ಅಂದ್ರೆ ಪರಕೀಯರಿಗೆ ರತ್ನಗಂಬಳಿ ಹಾಸಿ ಇಲ್ಲಿನವರ ಬಾಳಿಗೆ ವಿಷದ ಮುಳ್ಳುಗಳಾಗಿ ಬಿಟ್ಟಿವೆ. ಉದಾಹರಣೆಗೆ-ಬೆಂಗಳೂರಿನಲ್ಲಿ ‘ಮೆಟ್ರೊ’ ಎನ್ನುವ ‘ಫ್ರೆಂಚ್ ಕಂಪನಿಯೊಂದು ಬಂದು ಬೆಂಗಳೂರಿನಲ್ಲಿ ತನ್ನ ಮಾರಾಟ ಮಳಿಗೆಯನ್ನು ಆರಂಭಿಸಿಬಿಟ್ಟಿತು. ಇದರಿಂದ ಹಲವಾರು ಕುಟುಂಬಗಳು ತಮ್ಮ ಅಂಗಡಿ ಮುಗ್ಗಟ್ಟುಗಳನ್ನೆ ನಂಬಿ ಜೀವನ ಸಾಗಿಸುತ್ತಿದ್ದವರು ಹಲವಾರು ಜನ ಬೀದಿ ಪಾಲಾದರು- ಈ ಮೆಟ್ರೊ ಮಾರಾಟದ ಮಳಿಗೆ’ ಅವಶ್ಯ ಕತೆ ಇಲ್ಲಿ ಬೇಕಾಗುತ್ತಾ?

ನಮ್ಮಲ್ಲಿ ನೈಜ ನೈಪುಣ್ಯ ಹೊಂದಿರುವವರು ಅಧಿಕ ಸಂಖ್ಯೆಯಲ್ಲಿದ್ದಾರೆ. ಆದರೆ ಅವರಿಗೆ ಬಂಡವಾಳದಾರರ ಪೈಪೋಟಿಗೆ ಸ್ಪರ್ಧೆ ನೀಡಲಾಗದೆ, ಸುಮ್ಮನೂ ಇರಲಾರದೆ ಬದುಕುವ ಭರವಸೆಯನ್ನೆ ಕಳೆದುಕೊಂಡಿದ್ದಾರೆ. ಅಂತಹವರಲ್ಲಿ ಬದುಕುವ ಧೈರ್ಯ ತುಂಬಿಸುವ ಕೆಲಸ ನಮ್ಮ ಶಿಕ್ಷಣದ್ದಾಗಬೇಕು.

ನಮ್ಮ ಶಿಕ್ಷಣ ಪಾಶ್ಯಾತ್ಯ ಮಾದರಿ ಶಿಕ್ಷಣವನ್ನು ಸಂಪೂರ್ಣವಾಗಿ ತ್ಯಜಿಸಿ ನಮ್ಮತನವ್ನನ, ಬದುಕುವ ಭರವಸೆ ಮೂಡಿಸುತ್ತ ಇನ್ನೊಬ್ಬರ ಅವಲಂಬನೆ ಬಿಟ್ಟು ಸ್ವಾಲಂಬನೆಯತ್ತ ಜನತೆಯನ್ನ ತರಬೇಕಾಗಿದೆ. ಮತ್ತು ವಿಚಾರವಂತಿಕೆಯನ್ನ ಸಾಮಾಜಿಕ ಪ್ರಜ್ಞೆಯನ್ನು ಮೂಡಿಸಬೇಕಾಗಿದೆ. ಜಾತಿ, ಧರ್ಮ, ಮತಭೇದವನ್ನು ಭೋದಿಸುವ ಈ ಶಿಕ್ಷಣ ಸಮಾಜದಲ್ಲಿ ಯಾವುದೇ ಬದಲಾವಣೆ ತರಲು ಸಾಧ್ಯ ವಿಲ್ಲ. ಶಿಕ್ಷಣದ ಬದಲಾವಣೆಯನ್ನ ತಂದದ್ದೇ ಆದರೆ ಈ ತಾರತಮ್ಯದಿಂದ ದೇಶ ಹೊರಬರಲು ಸಾಧ್ಯವಾಗುತ್ತದೆ. ಇದಕ್ಕೆ ಪ್ರಮುಖವಾಗಿ ಬೇಕಾಗಿರುವುದು ರಾಜಕೀಯ ಇಚ್ಛಾಸಕ್ತಿ ಮುಖ್ಯವಾಗುತ್ತದೆ ಅಲ್ಲವೇ?

 

 

LEAVE A REPLY

Please enter your comment!
Please enter your name here