- ಸಲಾಂ ಸಮ್ಮಿ
ಭಾರತದಲ್ಲೇ ಅತ್ಯಂತ ಸುಂದರ ಹಾಗೂ ಶಾಂತಿಯುತ, ಅಭಿವೃದ್ಧಿ ಪ್ರದೇಶವೆಂದರೆ ಅದು ಲಕ್ಷದ್ವೀಪ (Lakshadweep). ಬಹುಶಃ ಶಾಲಾ ಪಾಠ ಪುಸ್ತಕದ ಸಮಾಜ ವಿಜ್ಞಾನ ಪುಸ್ತಕದಲ್ಲಿ ಓದಿದ ನೆನಪು ಬಿಟ್ಟರೆ ಹೆಚ್ಚಿನವರಿಗೆ ಈ ಪ್ರದೇಶದ ಜನರ ಬದುಕಿನ ಬಗ್ಗೆ ಹೆಚ್ಚು ತಿಳಿದಿರಲಿಕ್ಕೆ ಎಂದೆನಿಸುತ್ತದೆ. ವಿಶೇಷವಾಗಿ ಈ ಸ್ಥಳ ಭಾರತದ ಯಾವುದೇ ಭಾಗಕ್ಕೆ ಹೋಲಿಕೆ ಮಾಡಿದ್ರೆ ಝೀರೋ ಕ್ರೈಂ ರಿಪೋರ್ಟ್ ಆಗುವ ಸ್ಥಳ ಮತ್ತು ಶೇಕಡ 90ರಷ್ಟು ಇಲ್ಲಿ ಮುಸ್ಲಿಮರು ಮತ್ತು ಉಳಿದ ಹತ್ತು ಶೇಕಡ ಅನ್ಯ ಧರ್ಮದ ಜನರು ಶಾಂತಿ ಸೌಹಾರ್ದತೆಯಿಂದ ಜೀವಿಸುವ ಸ್ಥಳ ಎಂಬ ಖ್ಯಾತಿಯನ್ನು ಹೊಂದಿದೆ. ಕೇರಳ ರಾಜ್ಯಕ್ಕೆ 400 ಕಿಮೀ ದೂರವಿರುವ ಈ ಲಕ್ಷದ್ವೀಪ ಕೇಂದ್ರಾಡಳಿತದಲ್ಲಿದೆ. ಮಲಯಾಳಂ ಹಾಗೂ ಮಾಯಿ ಎನ್ನುವ ಭಾಷೆಯೇ ಇಲ್ಲಿನ ಜನರ ಮಾತ್ರ ಭಾಷೆ.. ಮೀನುಗಾರಿಕೆ ಪ್ರಮುಖ ಉದ್ಯೋಗ.
2020ರ ವರೆಗೆ ಸ್ವರ್ಗದಂತಿದ್ದ ಈ ಲಕ್ಷದ್ವೀಪಕ್ಕೆ ಕಣ್ಣು ಬಿದ್ದಿದ್ದು ಉದ್ಯಮಿಗಳದ್ದು. 2020ರ ವರೆಗೆ ಸ್ವರ್ಗವೇ ಆಗಿದ್ದ ಜನರಿಗೆ ಆಗಿನ ಗವರ್ನರ್ ಎಂದೇ ಕರೆಯಲ್ಪಡುತ್ತಿದ್ದ ಅಡ್ಮಿನಿಸ್ಟ್ರೇಶನ್ ದೀಪಕ್ ಶರ್ಮ ಅವರ ನಿಧನ ಲಕ್ಷದೀಪ ನಾಡಿನ ನೆಮ್ಮದಿಯ ಬದುಕಿಗೆ ಒಂದು ರೀತಿಯ ನಷ್ಟವನ್ನು ಉಂಟುಮಾಡಿದೆ. ರಾಜಕೀಯ ಹಿನ್ನೆಲೆ ಹೊಂದಿರುವ ಬಿಸಿನೆಸ್ ಮೈಂಡೆಡ್ ವ್ಯಕ್ತಿ ಪ್ರಫುಲ್ ಕೆ ಪಟೇಲನನ್ನು ಅಲ್ಲಿನ ಅಡ್ಮಿನಿಸ್ಟ್ರೇಶನಾಗಿ ನೇಮಕ ಮಾಡಲಾಯಿತು… ಭಾರತ ಅಕ್ಷರಶಃ ಕೊರೊನಾಗೆ ನಡುಗಿತ್ತಾದರೂ ಒಂದೇ ಒಂದು ಕೊರೊನಾ ಸೋಂಕಿನ ಪ್ರಕರಣ ಪತ್ತೆಯಾಗದ ಈ ಪ್ರದೇಶದಲ್ಲಿ ಇದ್ದಕ್ಕಿದ್ದಂತೆ ಕೊರೊನಾ ಸೋಂಕು ಕೂಡ ಹಬ್ಬಿಯೇ ಬಿಟ್ಟಿತು. ಜನರು ಮುಖಕ್ಕೆ ಮಾಸ್ಕ್ ಹಾಕೊಂಡು ಮನೆಯಲ್ಲೇ ಕುಳಿತಿರುವಾಗ ಇಲ್ಲಿ ರಾಜಕೀಯ ತಂತ್ರಗಾರಿಕೆ ಕೆಲಸ ಮಾಡಲು ಶುರು ಮಾಡುತ್ತೆ…
ಶಾಲಾ ಮಕ್ಕಳ ಮಧ್ಯಾಹ್ನದೂಟಕ್ಕೆ ನೀಡಲಾಗುತ್ತಿದ್ದ ಮಾಂಸಹಾರಕ್ಕೆ ಅಡ್ಡಗಾಲು ಹಾಕಲಾಯಿತು. ಟೂರಿಸಂನ ಹೆಸರಿನಲ್ಲಿ ಬಾರ್ ವೈನ್ ಶಾಪ್ ಪಬ್‌ಗಳನ್ನು ತೆರೆಯಲಾಯಿತು. ಖಾಲಿ ಖಾಲಿಯಾಗಿದ್ದ ಜೈಲನ್ನು ತುಂಬಲು ಸರ್ಕಾರಿ ಅಧಿಕಾರಿಗಳು ತುದಿಗಾಲಲ್ಲಿ ನಿಂತಿದ್ದಾರೆ… ಅಲ್ಲಿ ವಾಸವಿರುವ ಬಹುಸಂಖ್ಯಾತ ಮುಸ್ಲಿಮರಿಗೆ ಬೀಫ್ ಸೇವನೆ ಮಾಡದಂತೆ ಆದೇಶ ಹೊರಡಿಸಲಾಗಿದೆ. ಕೇರಳದ ಕ್ಯಾಲಿಕಟ್‌ನ ಜಲಮಾರ್ಗವನ್ನು ಮುಚ್ಚಿ ನೇರವಾಗಿ ಮಂಗಳೂರು ಬಂದರ್ ಮೂಲಕ ಸರಕು ಸಾಗಣೆ ಮಾಡಲು ಈ ಹಿಂದೆಯೇ ಆದೇಶ ನೀಡಲಾಗಿದೆ ಮತ್ತು ಚಾಲ್ತಿಯಲ್ಲಿದೆ.
ಸದ್ಯ ಲಕ್ಷ ದ್ವೀಪದ ಜನರ ಬದುಕಿನ ಜೊತೆ ಸರ್ಕಾರದ ಕಪ್ಪು ನೆರಳು ಬಿದ್ದಿದೆ. 70,000ಕ್ಕೂ ಅಧಿಕ ಜನ ಸಂಖ್ಯೆಯನ್ನು ಹೊಂದಿರುವ ಇಲ್ಲಿನ ಜನರ ಬದುಕು ಇದೀಗ ಆತಂಕದಲ್ಲಿದೆ. ಇಲ್ಲಿನ ಜನರ ಮೂಲಭೂತ ಹಕ್ಕುಗಳ ಮೇಲೆ ಕೇಂದ್ರ ಸರ್ಕಾರ ಗದ ಪ್ರಹಾರ ಮಾಡುತ್ತಿವೆ.. ಒಂದು ರೀತಿಯಲ್ಲಿ ಭಾರತದಲ್ಲಿ ಕಾಶ್ಮಿರಿಗಳ ಮೇಲೆ ಹಾಗೂ ಪ್ಯಾಲೆಸ್ತೀನ್ ನಲ್ಲಿ ಗಾಝಾದ ಜನರ ಬದುಕಿನ ಮೇಲೆ ಇಸ್ರೇಲ್ ಚೆಲ್ಲಾಟವಾಡುವಂತೆ ಇಲ್ಲೂ ಲಕ್ಷದ್ವೀಪದ ಜನರ ಮೇಲೆ ಸರ್ಕಾರ ದಬ್ಬಾಳಿಕೆ ನಡೆಸುತ್ತಿದೆ ಎಂಬುದು ಅಲ್ಲಿನ ಜನರ ನೋವು… ದೀಪಕ್ ಶರ್ಮರ ಸಾವು ಹಾಗೂ ಸಾಮಾನ್ಯ ವಿದ್ಯಾಭ್ಯಾಸ ಹೊಂದಿರುವ ಹಾಗೂ ರಾಜಕೀಯ ಹಿನ್ನೆಲೆ ಹೊಂದಿರುವ ಫ್ರಪುಲ್ ಪಟೇಲ್ ಕೈಯಲ್ಲಿ ಅಲ್ಲಿನ ಜನರ ಬದುಕು ಬಂಧಿತವಾಗಿದೆ… ದೇಶಕ್ಕೆ ಫ್ಯಾಸಿಸಮ್ ಎಷ್ಟೊಂದು ಅಪಾಯಕಾರಿ ಎಂಬುದು ಬಹುಶಃ ಕಾಶ್ಮೀರ ಘಟನೆ ಹಾಗೂ ಲಕ್ಷ ದ್ವೀಪದ ಘಟನೆಯನ್ನು ನಾವು ಉದಾಹಾರಣೆಯಾಗಿ ತೆಗೆದುಕೊಳ್ಳಬಹುದು…. ಲಕ್ಷದ್ವೀಪದ ಜನರ ಬದುಕಿನ ಜೊತೆ ಆಟವಾಡುವ ಕೇಂದ್ರ ಸರ್ಕಾರದ ನೀತಿಯನ್ನು ನಾವು ಖಂಡಿಸಬೇಕಾಗಿದೆ. ಭವಿಷ್ಯದಲ್ಲಿ ಲಕ್ಷದ್ವೀಪದ ಜನರಿಗೆ ದಿಗ್ಬಂಧನವಾಗುವುದನ್ನು ಅಲ್ಲಗೆಳೆಯುವಂತಿಲ್ಲ. ಲಕ್ಷದ್ವೀಪವನ್ನು ಮತ್ತೊಂದು ಕಾಶ್ಮೀರ ಮಾಡಲು ಸರ್ಕಾರ ಹಿಂದು ಮುಂದು ನೋಡಲಾರದು ಎಂಬುದನ್ನು ನಾವು ಅರಿತುಕೊಳ್ಳಬೇಕು…
ಉತ್ತಮ ಲೇಖನ