ಲೇಖಕರು: ಮೌ.ವಹಿದುದ್ದೀನ್ ಖಾನ್
ಅನುವಾದಕರು: ತಲ್ಹಾ ಕೆ.ಪಿ.

ದೇವನ ಲೋಕದಲ್ಲಿ ಮಾನವನು ಬಾಹ್ಯ ನೋಟಕ್ಕೆ ಒಂದು ವೈರುಧ್ಯವಾಗಿದ್ದಾನೆ. ಯಾವ ಲೋಕದಲ್ಲಿ ಸೂರ್ಯನು ಸರಿಯಾದ ಸಮಯದಲ್ಲಿ ಉದಯಿಸುತ್ತಾನೋ, ಆ ಲೋಕದಲ್ಲಿ ಮಾನವನು ಇಂದು ಒಂದು ಮಾತು ಹೇಳಿದರೆ ನಾಳೆ ಅದಕ್ಕೆ ತದ್ವಿರುದ್ಧವಾಗಿ ಬೇರೆ ಮಾತನ್ನು ಹೇಳುತ್ತಾನೆ.

ಯಾವ ಲೋಕದಲ್ಲಿ ಗಟ್ಟಿಯಾಗಿರುವ ಬಂಡೆಕಲ್ಲುಗಳಿಂದಲೂ ಶುದ್ಧವಾದ ನೀರು ಹೊರ ಚಿಮ್ಮುತ್ತದೋ, ಅಲ್ಲಿಯೇ ಒಬ್ಬ ಮಾನವನು ಇನ್ನೋರ್ವ ಮಾನವನಿಗೆ ಕಠೋರವಾಗಿ ನೋಯಿಸುವನು. ಯಾವ ಲೋಕದಲ್ಲಿ ಆತನ ಚಂದ್ರನು ವೆತ್ಯಾಸವಿಲ್ಲದೆ ಸಕಲ ಚರಾಚರಗಳ ಮೇಲೆ ಮಿನುಗುವನೋ ಅದೇ ಲೋಕದಲ್ಲಿ ಮಾನವನು ಒಬ್ಬನೊಡನೆ ಒಂದು ರೀತಿಯಲ್ಲಿ ಇನ್ನೊಬ್ಬ ನೊಡನೆ ಬೇರೆ ರೀತಿಯಲ್ಲಿ ವರ್ತಿಸುವನು. ಯಾವ ಲೋಕದ ಅಂತರಾತ್ಮವು ಹೂವಿನ ಮುಖಾಂತರ ಬಹಿರಂಗವಾಗುತ್ತದೆಯೋ, ಅದೇ ಲೋಕದಲ್ಲಿ ಮಾನವನು ಮುಳ್ಳಿಗಿಂತ ಕೆಟ್ಟದಾಗಿ ವರ್ತಿಸುತ್ತಿದ್ದಾನೆ. ಯಾವ ಲೋಕದಲ್ಲಿ ಗಾಳಿಯು ಅತ್ಯಂತ ರಭಸದಿಂದ ನಿಸ್ವಾರ್ಥ ಸೇವಕನಂತೆ ಎಲ್ಲ ಕಡೆ ಬಿಸುತ್ತದೆಯೋ, ಅಲ್ಲಿ ಮಾನವನಿಗೆ ಸ್ವತಃ ತನ್ನ ಸ್ವಾರ್ಥವನ್ನು ಪೂರ್ಣಗೊಳಿಸುದೇ ಹೊರತು ಬೇರೆ ಯಾವ ಗುರಿ ಇರುವುದಿಲ್ಲ. ಎಲ್ಲಿ ಒಂದು ಮರವು ಇನೊಂದು ಮರವನ್ನು ನೋಯಿಸುದಿಲ್ಲವೋ, ಅಲ್ಲಿ ಒಬ್ಬನು ಇನ್ನೊಬ್ಬನನ್ನು ಉಪದ್ರವಿಸುತ್ತಾನೆ. ಅದೇರೀತಿ ಓರ್ವನು ಇನ್ನೋರ್ವನನ್ನು ಸರ್ವ ನಾಶಮಾಡಿ ಸಂತೋಷಪಡುತ್ತಾನೆ. ಇದೆಲ್ಲವೋ ಇಲ್ಲಿ ನಿತ್ಯ ನಡೆಯುತ್ತಿದೆ ಆದರೆ ದೇವಾನು ಮಧ್ಯ ಪ್ರವೇಶಮಾಡಿ ಈ ವೈರುಧ್ಯವನ್ನು ಕೊನೆಗೊಳಿಸುದಿಲ್ಲ.

ಸೃಷ್ಟಿಗಳ ಸಾರ್ವತ್ರಿಕ ಕನ್ನಡಿಯಲ್ಲಿ ದೇವಾನು ತುಂಬಾ ಸುಂದರನಾಗಿ ಕಾಣುತ್ತಾನೆ. ಆದರೆ ಮಾನವನ ನೋವಿನಿಂದ ಕೊಡಿದ ಜೀವನದಲ್ಲಿ ಆತನ ಮುಖದ ರೂಪವು ಬೇರೆ ರೀತಿ ಕಾಣುತ್ತದೆ. ದೇವನ ಮುಂದೆ ಕ್ರೌರಿಯಭರಿತ ಕೃತ್ಯಗಳು ನಡೆಯುತ್ತದೆ ಆದರೆ ಆತನಲ್ಲಿ ಯಾವ ತಳಮಳವು ಉಂಟಾಗುದಿಲ್ಲ, ದೇವಾನು ಮಾನವನು ಮಾನವನನ್ನೇ ಬಳಿಕುಡುವುದನ್ನು ನೋಡುತ್ತಾನೆ ಆದರೆ ಆತನಿಗೆ ಯಾವುದೇ ಚಿಂತೆ ಇಲ್ಲ. ಆತ ಲೋಕದ ಅತ್ಯಂತ ಸಂವೇದನಾಶೀಲ ನಿವಾಸಿಗಳೊಂದಿಗೆ ಮೃಗೀಯ ಸ್ವಭಾವದೊಂದಿಗೆ ವರ್ತಿಸುತ್ತಾನೆ. ಆದರೆ ದೇವನಲ್ಲಿ ಆತನ ವಿರುದ್ಧ ಯಾವದೇ ತಳಮ ಕಾಣುದಿಲ್ಲ.

ಹಾಗಾದರೆ ದೇವಾನು ಕಲ್ಲಿನ ಮೂರ್ತಿಯಾಗಿದ್ದಾನೆಯೇ ?

ಈ ಪ್ರಶ್ನೆಯು ಯಲ್ಲ ಕಾಲದ ಚಿಂತಕರನ್ನು ಕಾಡಿದೆ, ಇದು ಉಧ್ಭವಿತೇಕೆಂದರೆ ನಾವು ಸೃಷ್ಟಿಗಳ ಬಗ್ಗೆ ಸೃಷ್ಟಿಕರ್ತನ ಬುದ್ಧಿವಂತಿಕೆಯನ್ನು ಗಮನಿಸುವುದಿಲ್ಲ. ಆತನ ಯೋಜನೆ ಪ್ರಕಾರ ಲೋಕವು ಒಂದು ಪರೀಕ್ಷಾ ಕೇಂದ್ರವಾಗಿದೆ, ಆದರೆ ನಾವು ಅದನ್ನು ಪ್ರತಿಫಲದ ಕೇಂದ್ರವಾಗಿ ನೋಡಬಯಡುತೇವೆ. ನಾವು ನಾಳೆ ಸಂಭಾವಿಸುವ ಸಂಭವಗಳನ್ನು ಇಂದೇ ನೋಡ ಬಯಸುತ್ತೇವೆ.

ಯಾವ ರೀತಿ ಪ್ರತಿದಿನ ರಾತ್ರಿಯ ಕತ್ತಲೆಯ ನಂತರ ಸೂರ್ಯನ ಬೆಳಕು ಹರಡುತ್ತದೆಯೋ, ಅದೇ ರೀತಿ ಖಂಡಿತವಾಗಿಯೂ ಜೀವನದ ಕತ್ತಲೆಯು ಅಂತ್ಯಗೊಳ್ಳಲಿದೆ.

ಆಕ್ರಮಿ ಮತ್ತು ಮರ್ದಿತರನ್ನು ಪರಸ್ಪರರಿಂದ ಬೇರ್ಪಡಿಸಲಾಗುದು, ಕ್ರೋರಿಗಳ ಕತ್ತು ಮುರಿಯುವುದು ಮತ್ತು ಸತ್ಯವಂತರ ಸತ್ಯತೆಗೆ ಪ್ರತಿಫಲನೀಡುವುದು, ಇದೆಲ್ಲ ಪರಿಪೂರ್ಣ ರೀತಿಯಲ್ಲಿ ನಡೆಯುವುದು, ಅಂದರೆ ಇದೆಲ್ಲವೂ ಮರಣಾ ನಂತರ ಸಂಭವಿಸಲಿದೆ ಮರಣಕ್ಕಿಂತ ಮುಂಚೆಯೆಲ್ಲಾ.

LEAVE A REPLY

Please enter your comment!
Please enter your name here